For Quick Alerts
ALLOW NOTIFICATIONS  
For Daily Alerts

  ಶಿಕ್ಷಕರ ದಿನಾಚರಣೆ: ಗುರುವಿನ ಹಿರಿಮೆಯ ಸ್ಮರಿಸುವ ದಿನ

  By Manu
  |

  ಗುರುವಿನ ಗುಲಾಮನಾಗದ ಹೊರತು ದೊರಕದಣ್ಣ ಮುಕುತಿ ಎಂಬುದೊಂದು ಕನ್ನಡ ಉಕ್ತಿಯಾಗಿದೆ. ಜೀವನದಲ್ಲಿ ಏಳ್ಗೆ ಪಡೆಯಲು ಗುರುವಿನ ಮಾರ್ಗದರ್ಶನ ಅಗತ್ಯವಾಗಿದೆ. ನಮ್ಮ ಜೀವನದಲ್ಲಿ ತಾಯಿಯೇ ಪ್ರಥಮ ಗುರುವಾಗಿರುತ್ತಾಳೆ. ಶಿಕ್ಷಕರ ದಿನಾಚರಣೆ ವಿಶೇಷ: ಒಂದು ಸವಿ ನೆನಪು  

  ವಿದ್ಯಾಭ್ಯಾಸದ ಅವಧಿಯಲ್ಲಿ ಹಲವರು ಗುರುಗಳು ನಮ್ಮನ್ನು ತಿದ್ದಿ ತೀಡಿ ಉತ್ತಮ ನಾಗರಿಕರಾಗಲು ಸಹಕರಿಸುತ್ತಾರೆ. ಆದ್ದರಿಂದ ಜೀವನದ ಯಶಸ್ಸಿಗೆ ಗುರುವಿನ ಇರುವಿಕೆ ಅತ್ಯಗತ್ಯವಾಗಿದೆ. ಗುರುವಿನ ಸಮರ್ಥ ಮಾರ್ಗದರ್ಶನವಿಲ್ಲದೇ ಗುರಿಯತ್ತ ಸಾಗಲು ಅಸಾಧ್ಯ. ಗುರುಗಳ ಮಾರ್ಗದರ್ಶನ ನಮ್ಮನ್ನು ಜೀವಮಾನವಿಡೀ ಸರಿಯಾದ ಮಾರ್ಗದಲ್ಲಿ ನಡೆಸಲು ಪ್ರೇರಣೆಯಾಗಿರುತ್ತದೆ.

  Teacher’s Day Spl: Why Is It Celebrated?
    

  ಈ ಪ್ರೇರಣೆಯನ್ನು ಮರೆಯದಿರಲು, ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಶಿಕ್ಷಕರನ್ನು ನೆನೆಸಿಕೊಂಡು ಈ ಪ್ರೇರಣೆಯನ್ನು ಸದಾ ಹಸಿರಾಗಿರಿಸಲು ಶಿಕ್ಷಕರ ದಿನಾಚರಣೆ ಅಗತ್ಯವಾಗಿದೆ. ಶಿಕ್ಷಕರ ದಿನಾಚರಣೆಯ ಮೂಲ, ಇತಿಹಾಸದ ಮಹತ್ವ

  ವರ್ಷದಲ್ಲೊಂದು ದಿನ ನಮ್ಮ ಗುರುಗಳಿಗಾಗಿ ಮೀಸಲಿಡುವ ಮೂಲಕ ಇವರನ್ನು ಸದ್ಗುರುವಿನ ರೂಪದಲ್ಲಿ ಸ್ಮರಿಸಲು ನೆರವಾಗುತ್ತದೆ. ಪ್ರತಿಯೊಬ್ಬ ಸುಶಿಕ್ಷತನೂ ತನ್ನ ಶಿಕ್ಷಣ ಮತ್ತು ತನಗೆ ಶಿಕ್ಷಣ ನೀಡಿದ ಸಂಸ್ಥೆ, ಗುರುಗಳನ್ನು ಮರೆಯದೇ ಇರುವುದು ಮುಂದಿನ ಪೀಳಿಗೆಗೆ ಮಾದರಿಯಾಗಲು ಸಾಧ್ಯ. ಬನ್ನಿ, ಶಿಕ್ಷಕರ ದಿನಾಚರಣೆಯ ಕೆಲವು ಮಹತ್ವದ ಮಾಹಿತಿಗಳನ್ನು ನೋಡೋಣ:

  ಮಾಹಿತಿ #1

  ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ಐದರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ದೇಶದ ಎಲ್ಲಾ ಶಿಕ್ಷಕರಿಗೆ ಗೌರವಪೂರ್ವಕವಾಗಿ ಮುಡಿಪಾಡಿಗಲಾಗಿದೆ.

  Teacher’s Day Spl: Why Is It Celebrated?
   

  ಮಾಹಿತಿ #2

  ಶಿಕ್ಷಕರ ದಿನಾಚರಣೆಯ ಹಿಂದೆ ಅಚ್ಚರಿಯ ಮಾಹಿತಿಯೊಂದಿದೆ. ಇದು ಭಾರತದ ಸರ್ವಶ್ರೇಷ್ಠ ಶಿಕ್ಷಕತಜ್ಞ ಡಾ ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವಾಗಿದೆ.

  ಮಾಹಿತಿ #3

  ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರು ಭಾರತದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿಯ ಹುದ್ದೆಯನ್ನೂ ಅಲಂಕರಿಸಿದ್ದರು.  ರಾಷ್ಟ್ರಪತಿಯಾದ ಬಳಿಕ ಅವರ ಅಭಿಮಾನಿಗಳು ಸೆ. ಐದರಂದು ಅವರ ಜನ್ಮದಿನ ಆಚರಿಸಲು ಉತ್ಸುಕರಾಗಿದ್ದಾಗ ಇವರು ಈ ಮನವಿಯನ್ನು ನಯವಾಗಿಯೇ ತಿರಸ್ಕರಿಸಿ ಈ ದಿನವನ್ನು ತಮ್ಮ ಜನ್ಮದಿನಕ್ಕೂ ಮಿಗಿಲಾಗಿ ಶಿಕ್ಷಕರ ದಿನವಾಗಿ ಆಚರಿಸಿದರೆ ತಮಗೆ ಹೆಚ್ಚು ಗೌರವ ಲಭಿಸಿದಂತಾಗುತ್ತದೆ ಎಂದಿದ್ದರು. ಈ ಮನವಿಯನ್ನು ಮನ್ನಿಸಿದ ಸರ್ಕಾರ 1962ರಿಂದ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿಕೊಳ್ಳುತ್ತಾ ಬಂದಿದೆ.

  Teacher’s Day Spl: Why Is It Celebrated?
   

  ಮಾಹಿತಿ #4

  ಭಾರತದ ಮೇಧಾವಿಗಳು ಶಿಕ್ಷಕರಾಗಿ ಸೇವೆ ಸಲ್ಲಿಸಬೇಕು ಎಂಬ ನಂಬಿಕೆಯನ್ನು ಹೊಂದಿದ್ದ ರಾಧಾಕೃಷ್ಣನ್ ರವರು ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದರು. ಇವರ ಸೇವೆಗೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಪ್ರಾರಂಬಿಸಿದ Radhakrishnan Chevening Scholarships ವಿದ್ಯಾರ್ಥಿ ವೇತನ ಪ್ರಮುಖವಾಗಿದೆ. ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ದೇಶದ ಎಲ್ಲಾ ಶಿಕ್ಷಕರಿಗೆ ಬೋಲ್ಡ್ ಸ್ಕೈ ತಂಡ ಹಾರ್ದಿಕವಾಗಿ ಅಭಿನಂದಿಸುತ್ತದೆ.

  English summary

  Teacher’s Day Spl: Why Is It Celebrated?

  Every student needs a teacher. Forget about students, every human being needs a teacher. Learning something from someone is an integral part of the human life. Without the guidance of visionaries and teachers, human life would lack direction.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more