For Quick Alerts
ALLOW NOTIFICATIONS  
For Daily Alerts

  ಗಡ್ಡ ಬಿಟ್ಟ ಹುಡುಗರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

  By Manu
  |

  ಕಾಲಕ್ಕೆ ತಕ್ಕಂತೆ ಫ್ಯಾಷನ್ ಕೂಡ ಬದಲಾಗುತ್ತಾ ಇರುತ್ತದೆ. ಮೊನ್ನೆ ಇದ್ದಂತಹ ಫ್ಯಾಷನ್ ನಾಳೆ ಇರುವುದಿಲ್ಲ. ಒಂದು ವರ್ಷದ ಹಿಂದೆ ಇದ್ದ ಬಟ್ಟೆಯ ವಿನ್ಯಾಸವನ್ನು ಈಗ ಯಾರೂ ಕೇಳುವವರಿಲ್ಲ. ಅದೇ ಫ್ಯಾಷನ್ ಲೋಕ. ಕೂದಲು, ಬಟ್ಟೆ, ಗಡ್ಡ ಹೀಗೆ ಎಲ್ಲದರಲ್ಲೂ ಒದೊಂದು ಫ್ಯಾಷನ್ ಬದಲಾಗುತ್ತಾ ಇರುತ್ತದೆ.

  ಸಂಪೂರ್ಣವಾಗಿ ಗಡ್ಡ ಮೀಸೆ ಬೋಳಿಸಿಕೊಂಡ ಫ್ಯಾಷನ್ ಹಿಂದೆ ಇತ್ತು. ಆದರೆ ಈಗ ಕೆಲವೊಂದು ಸಿನಿಮಾ ನಾಯಕರು ಗಡ್ಡ ಮೀಸೆ ಬಿಡುತ್ತಿರುವ ಕಾರಣದಿಂದಾಗಿ ಅದು ಫ್ಯಾಷನ್ ಆಗಿ ಹೋಗಿದೆ. ಗಡ್ಡ ಮೀಸೆ ಬಿಡುವ ಪುರುಷರು ಈಗ ಮಹಿಳೆಯರನ್ನು ಸೆಳೆಯಲು ಯಶಸ್ವಿಯಾಗುತ್ತಿದ್ದಾರೆ ಎಂದರೆ ಇದನ್ನು ನಂಬಲೇಬೇಕು.    ಗಡ್ಡ ಬೆಳೆಸಲು ನೀರು-ಗೊಬ್ಬರದ ಅಗತ್ಯವಿಲ್ಲ..!

  ಹೌದು, ಒಂದು ಕಾಲದಲ್ಲಿ ಮಹಿಳೆಯರಿಗೆ ಗಡ್ಡಮೀಸೆ ಬೋಳಿಸಿಕೊಂಡ ಪುರುಷರು ಇಷ್ಟವಾಗುತ್ತಿದ್ದರು. ಆದರೆ ಈಗ ಗಡ್ಡ ಬಿಟ್ಟಿರುವ ಪುರುಷರು ಅವರಿಗೆ ಇಷ್ಟವಾಗುತ್ತಿದ್ದಾರೆ. ಇದಕ್ಕಾಗಿಯೇ ಪುರುಷರು ಕೂಡ ಗಡ್ಡ ಬಿಟ್ಟು ಮಹಿಳೆಯರನ್ನು ಸೆಳೆಯಲು ಪ್ರಯತ್ನಿಸುತ್ತಾ ಇದ್ದಾರೆ.      ಮಾಡರ್ನ್ ಹುಡುಗನಿಗೆ ಫ್ಯಾಷನೇಬಲ್ ಗಡ್ಡ

  ಆದರೆ ಮಹಿಳೆಯರಿಗೆ ಗಡ್ಡದಾರಿ ಪುರುಷರು ಇಷ್ಟವಾಗಲು ಕಾರಣವೇನೆಂದು ಕೇಳಿದರೆ ನೀವು ಮನಸ್ಸಿನಲ್ಲೇ ನಗಬಹುದು. ಮಹಿಳೆಯರ ಕೋಮಲವಾದ ಮುಖಕ್ಕೆ ಗಡ್ಡ ತಾಗಿದಾಗ ಮತ್ತು ಕಿಸ್ ನೀಡುವಾಗ ಆಗುವ ಅನುಭವ ಹೇಳತೀರದು. ಗಡ್ಡದಾರಿ ಪುರುಷರು ಮಹಿಳೆರಿಗೆ ಇಷ್ಟವಾಗುವುದು ಯಾಕೆಂದು ಮುಂದೆ ಓದುತ್ತಾ ಅರಿತುಕೊಳ್ಳಿ....

  ಸಂಪೂರ್ಣ ಪುರುಷರಂತೆ ಕಾಣುತ್ತಾರೆ!

  ಸಂಪೂರ್ಣ ಪುರುಷರಂತೆ ಕಾಣುತ್ತಾರೆ!

  ಪುರುಷರು ಗಡ್ಡ ಬಿಟ್ಟರೆ ಆಗ ಅವರು ಸಂಪೂರ್ಣ ಪುರುಷರಂತೆ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ. ಪುರುಷರ ಗಡ್ಡವು ಮಹಿಳೆಯರ ಹೃದಯ ಬಡಿತವನ್ನು ಸಾವಿರಾರು ಪಟ್ಟು ಹೆಚ್ಚಿಸುವುದು!

  ಪ್ರೌಢತೆ

  ಪ್ರೌಢತೆ

  ಗಡ್ಡಮೀಸೆ ಬೋಳಿಸಿಕೊಂಡಿರುವ ಪುರುಷರಿಗೆ ಹೋಲಿಸಿದರೆ ಗಡ್ಡ ಬಿಟ್ಟಿರುವಂತಹ ಪುರುಷರು ಹೆಚ್ಚು ಪ್ರೌಢ ಹಾಗೂ ಗಂಭೀರವಾಗಿ ಕಾಣುತ್ತಾರೆ. ಇದರಿಂದಾಗಿ ಗಡ್ಡ ಬಿಟ್ಟಿರುವ ಪುರುಷರನ್ನು ಮಹಿಳೆಯರು ಇಷ್ಟಪಡುವುದು.

  ಬಲಿಷ್ಠರಾಗಿ ಕಾಣುತ್ತಾರೆ

  ಬಲಿಷ್ಠರಾಗಿ ಕಾಣುತ್ತಾರೆ

  ಗಡ್ಡದಾರಿ ಪುರುಷರು ಹೆಚ್ಚು ಆತ್ಮವಿಶ್ವಾಸ ಹಾಗೂ ಬಲಿಷ್ಠರಾಗಿದ್ದಾರೆನ್ನುವ ಕಾರಣದಿಂದ ಮಹಿಳೆಯರು ಅವರ ಬಗ್ಗೆ ಹುಚ್ಚರಂತಾಗುತ್ತಾರೆ.

  ಗಡ್ಡಮೀಸೆ ಬೋಳಿಸುವ ದಿನ ಈಗಿಲ್ಲ

  ಗಡ್ಡಮೀಸೆ ಬೋಳಿಸುವ ದಿನ ಈಗಿಲ್ಲ

  ಬಾಲಿವುಡ್ ನಲ್ಲಿ ಶಾಹೀದ್ ಕಪೂರ್ ನನ್ನು ಚಾಕಲೇಟ್ ಬಾಯ್ ಎಂದು ಕರೆಯಲಾಗುತ್ತಿತ್ತು. ಆತ ಸಂಪೂರ್ಣವಾಗಿ ಗಡ್ಡಮೀಸೆ ಬೋಳಿಸಿಕೊಂಡಿರುವುದೇ ಇದಕ್ಕೆ ಕಾರಣವಾಗಿತ್ತು. ಆದರೆ ಈಗ ಶಾಹೀದ್ ಕಪೂರ್ ಕೂಡ ಗಡ್ಡ ಬಿಡುತ್ತಿದ್ದಾನೆ.

  ನೋಡಲು ಸುಂದರವಾಗಿರಬೇಕು

  ನೋಡಲು ಸುಂದರವಾಗಿರಬೇಕು

  ಪುರುಷರು ಗಡ್ಡ ಬಿಟ್ಟರೆ ಅದನ್ನು ಟ್ರಿಮ್ ಮಾಡಿಕೊಂಡು ಸರಿಯಾಗಿ ಇಟ್ಟುಕೊಂಡಿರಬೇಕು. ಇಲ್ಲವೆಂದಾದರೆ ಅದನ್ನು ನೋಡಲು ಅಸಹ್ಯವಾಗಿರುತ್ತದೆ.

  ಆ ಸ್ಪರ್ಶಕ್ಕಾಗಿ

  ಆ ಸ್ಪರ್ಶಕ್ಕಾಗಿ

  ಗಡ್ಡದಲ್ಲಿ ಕೈಯಾಡಿಸುವುದೆಂದರೆ ಅದು ಒಂದು ರೀತಿಯ ವಿಶೇಷ ಅನುಭವ ಉಂಟುಮಾಡುತ್ತದೆ. ಇದಕ್ಕಾಗಿಯೇ ಮಹಿಳೆಯರು ಗಡ್ಡದಾರಿಗಳನ್ನು ಇಷ್ಟಪಡುವುದು.

  English summary

  Reasons Why Women Love Bearded Men

  ooooh men with beards! Is there anything much to say apart from them being charming, kingly, manly, sexy, attractive, mind-blowing and the list goes on. Women fall flat for men with beards as it makes them look wild and very appealing.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more