Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಎಲಾ ಇವನ! ಹೋಗಿ ಹೋಗಿ ನಾಗರ ಹಾವನ್ನು ಮದುವೆಯಾಗುವುದೇ?
ತನ್ನ ಪ್ರಿಯತಮೆ ಮರಣದ ಬಳಿಕ ನಾಗರ ಹಾವಾಗಿ ಪರಿವರ್ತಿತಳಾಗಿದ್ದಾಳೆ ಎಂದು ಬಲವಾಗಿ ನಂಬಿರುವ ಈ ಥಾಯ್ಲೆಂಡಿನ ಯುವಕ ಏನು ಮಾಡಿದ್ದಾನೆ ಗೊತ್ತೇ? ಒಂದು ಹೆಣ್ಣುನಾಗರ ಹಾವಿನೊಂದಿಗೆ ಮದುವೆ ಮಾಡಿಕೊಂಡಿದ್ದಾನೆ!
ತನ್ನ ಪ್ರಿಯತಮೆ ಮರಣದ ಬಳಿಕ ನಾಗರ ಹಾವಾಗಿ ಪರಿವರ್ತಿತಳಾಗಿದ್ದಾಳೆ ಎಂದು ಬಲವಾಗಿ ನಂಬಿರುವ ಈ ಥಾಯ್ಲೆಂಡಿನ ಯುವಕ ಏನು ಮಾಡಿದ್ದಾನೆ ಗೊತ್ತೇ? ಹಾವಿನ ಕನಸ್ಸು ಬಿದ್ದರೆ ಏನಂತ ಅರ್ಥ?
ಒಂದು ಹೆಣ್ಣುನಾಗರ ಹಾವಿನೊಂದಿಗೆ ಮದುವೆ ಮಾಡಿಕೊಂಡಿದ್ದಾನೆ. ಅತ್ಯಂತ ಅಪಾಯಕರ, ಅಸಹ್ಯಕರ ಮತ್ತು ವಿಚಿತ್ರ ಎನ್ನಿಸುವ ಈ ಘಟನೆ ನಿಜವಾಗಿ ನಡೆದಿರುವ ಘಟನೆಯಾಗಿದ್ದು ಅಂತರ್ಜಾಲದ ಮೂಲಕ ಎಲ್ಲೆಡೆ ಹರಡುತ್ತಿದೆ.... ಮುಂದೆ ಓದಿ..

ಈತ ಬೌದ್ಧ ಧರ್ಮದ ಅನುಯಾಯಿ
ಬೌದ್ಧ ಧರ್ಮದ ಅನುಯಾಯಿಯಾಗಿರುವ ಈ ಯುವಕ, ಬೌದ್ಧಧರ್ಮದಲ್ಲಿ ತಿಳಿಸಿರುವ ಪ್ರಕಾರ ಮರಣಾನಂತರ ವ್ಯಕ್ತಿಗಳು ಪ್ರಾಣಿ, ಸರೀಸೃಪಗಳ ರೂಪವನ್ನು ಮುಂದಿನ ಜನ್ಮಗಳಲ್ಲಿ ಧರಿಸುತ್ತಾರೆ ಎಂದು ನಂಬಿದ್ದಾನೆ.

ನಾಗರ ಹಾವನ್ನು ಕಂಡಾಕ್ಷಣ....
ಇದುವರೆಗೆ ಈ ಯುವಕನ ನಿಜನಾಮವನ್ನು ಬಹಿರಂಗ ಪಡಿಸಿಲ್ಲ. ಈ ಯುವಕ ಮೊದಲ ಬಾರಿ ಈ ನಾಗರಹಾವನ್ನು ಕಂಡ ತಕ್ಷಣ ಹೃದಯದಲ್ಲಿ ಯಾವುದೋ ಅವ್ಯಕ್ತ ಭಾವನೆಯುಂಟಾಗಿತ್ತು. ಮರುಕ್ಷಣಕ್ಕೆ ಆತನ ಮೆದುಳಿಗೆ ಹೊಳೆದದ್ದು ಅರೆ!

ನಾಗರ ಹಾವನ್ನು ಕಂಡಾಕ್ಷಣ....
ಈ ಹಾವು ಹಿಂದಿನ ಜನ್ಮದಲ್ಲಿ ತನ್ನ ಪ್ರಿಯತಮೆಯಾಗಿದ್ದಳು ಎಂಬುದು. ಬಳಿಕ ಈತ ಆ ಹಾವನ್ನು ಜತನದಿಂದ ತನ್ನ ಮನೆಗೆ ತಂದು ಬಳಿಕ ವಿವಾಹವಾಗಿದ್ದಾನೆ. (ಯಾರು ವಿವಾಹ ವಿಧಿ ಬೋಧಿಸಿದರೋ ಗೊತ್ತಿಲ್ಲ, ಅಷ್ಟೇ ಏಕೆ. ಯಾವ ನೆಂಟರು ಸಾಕ್ಷಿ ಹೇಳಿದ್ದರೋ ಅದೂ ಗೊತ್ತಿಲ್ಲ)

ಜೊತೆ ಜೊತೆಯಾಗಿ ತಿರುಗಾಡುತ್ತಾರಂತೆ!
ಈಗ ಈ ಜೋಡಿ ಜೊತೆಯಾಗಿ ಚಲನಚಿತ್ರ ನೋಡುವುದು, ಬಾತುಕೋಳಿಗಳಿಗೆ ತಿನಿಸು ನೀಡುವುದು (ಈಕೆ ಬಾತುಗಳನ್ನು ತಿನ್ನುವ ಬಗ್ಗೆ ಯೋಚಿಸುತ್ತಿದ್ದಿರಬಹುದು), ಆಟ ಆಡುವುದು (ಯಾವ ಆಟವೋ ಗೊತ್ತಿಲ್ಲ), ಜಿಮ್‌ಗೆ ಹೋಗಿ ವ್ಯಾಯಾಮ ಮಾಡುವುದು (ಹಾವು ಯಾವ ವ್ಯಾಯಾಮ ಮಾಡುತ್ತದೆ?) ಮೊದಲಾದ ಹತ್ತು ಹಲವು ಚಟುವಟಿಕೆಗಳಿಂದ ದಾಂಪತ್ಯ ಸವಿಯುತ್ತಿದ್ದಾರಂತೆ.

ಈತ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ
ಈತನ ಹುಚ್ಚಾಟಗಳನ್ನು ನೋಡಿ ಈತನ ಹಿತೈಷಿಗಳು ಹಾವಿಸ ಸಹವಾಸ ಬೇಡ ಮಾರಾಯಾ, ಇದನ್ನು ಕಾಡಿನಲ್ಲಿ ಬಿಟ್ಟು ಬಿಡು ಎಂದು ಹಿತವಚನಗಳನ್ನು ನೀಡಿದ್ದರೂ ಈತ ಅವರ ಮಾತುಗಳಿಗೆ ಕಿವಿಗೊಡುತ್ತಿಲ್ಲ. ಬದಲಿಗೆ ಈ ಹಾವನ್ನು ಇನ್ನಷ್ಟು ಹಚ್ಚಿಕೊಳ್ಳುತ್ತಿದ್ದಾನೆ.

ಹಾವಿನೊಂದಿಗೆ ಜೀವನ ನಡೆಸುತ್ತಿರುವ ಮಾನವ!
ಪ್ರಸ್ತುತ "ಹಾವಿನೊಂದಿಗೆ ಜೀವನ ನಡೆಸುತ್ತಿರುವ ಮಾನವ" ಎಂಬ ಪ್ರಖ್ಯಾತಿ (ಕುಖ್ಯಾತಿ)ಯನ್ನು ಪಡೆದಿರುವ ಈತನ ಸಂಸಾರವನ್ನು ನೋಡಲು ಜನರು ಗುಂಪುಗುಂಪಾಗಿ ಆತನ ಮನೆಗೆ ಬರುತ್ತಿದ್ದಾರಂತೆ.

ಇದು ಪ್ರೀತಿಯೋ ಅಥವಾ ಮಾನಸಿಕ ಕಾಯಿಲೆಯೋ?
ಈ ವಿಷಯ ತಿಳಿದ ಬಳಿಕ ಬುದ್ಧಿಜೀವಿಗಳು "ನಿಜವಾದ ಪ್ರೇಮವೆಂದರೆ ಇದೇ" ಎಂದು ಉದ್ಗಾರ ತೆಗೆಯಬಹುದು.

ಇದು ಪ್ರೀತಿಯೋ ಅಥವಾ ಮಾನಸಿಕ ಕಾಯಿಲೆಯೋ?
ಆದರೆ ಕಲ್ಪನೆಗೂ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿರುವಾಗ ವಿಷಕಾರಿ ಪ್ರಾಣಿಯೊಂದಿಗೆ ಸಂಸಾರ ನಡೆಯುವುದು ಎಷ್ಟು ಅಪಾಯಕಾರಿ ಎಂಬುದನ್ನು ಆತನಿಗೆ ಹೇಗೆ ತಿಳಿಯಹೇಳಬೇಕೋ ಎಂದು ಆತನ ಮನೆಯವರಿಗೆ ಗೊತ್ತಾಗುತ್ತಿಲ್ಲವಂತೆ. ನಿಮಗೇನಾದರೂ ಹೇಳಬೇಕೆನಿಸಿದರೆ ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಬಹುದು.



Click it and Unblock the Notifications
