Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೆದುಳನ್ನೇ ಸತಾಯಿಸುವ ಟ್ರಿಕ್ಸ್!, ಇದು ಕೊಂಚ ಇಂಟರೆಸ್ಟಿಂಗ್...
'ದಯವಿಟ್ಟು ನೀಲಿ ಆನೆಯೊಂದನ್ನು ಊಹಿಸಿಕೊಳ್ಳಬೇಡಿ' ಎಂದು ಹೇಳಿದ ತಕ್ಷಣ ನಮ್ಮ ಮನದಲ್ಲೊಂದು ನೀಲಿ ಬಣ್ಣದ ಆನೆ ಬಂದೇ ಬಿಟ್ಟಿರುತ್ತದೆ. ಇದನ್ನೇ ಹಿರಿಯರು ಮನವೆಂಬ ಮರ್ಕಟ ಎಂದು ಕರೆದಿದ್ದಾರೆ. ವಾಸ್ತವವಾಗಿ ನಮ್ಮ ಮೆದುಳು ಸೂಚನೆಗಳನ್ನು ವಿಶ್ಲೇಷಿಸಿ ವಿಷಯಗಳನ್ನು ಗ್ರಹಿಸಿಕೊಳ್ಳುತ್ತದೆ.
ಅಲ್ಲದೇ ಸಾಮಾನ್ಯವಾದ ಕೆಲಸಗಳನ್ನು ಮೆದುಳು ಬಳ್ಳಿಯೇ ವಹಿಸಿಕೊಳ್ಳುವ ಮೂಲಕ ಮೆದುಳಿನ ಕೆಲಸವನ್ನು ಕಡಿಮೆ ಮಾಡುತ್ತದೆ. ನಮ್ಮ ಮೆದುಳಿನ ಕಾರ್ಯವಿಧಾನ ಹಾಗೂ ಕ್ಷಮತೆಯ ಬಗ್ಗೆ ವಿಜ್ಞಾನ ತಿಳಿಯದಿರುವ ಇನ್ನೂ ನೂರಾರು ವಿಷಯಗಳಿವೆ. ಆದರೆ ಮನವೆಂಬ ಈ ಮರ್ಕಟವನ್ನು ಕೊಂಚ ಸತಾಯಿಸುವುದು ಸಾಧ್ಯ. ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು, ಇದೋ ಇಲ್ಲಿದೆ ಸರಳ ಟ್ರಿಕ್ಸ್...
ಉದಾಹರಣೆಗೆ, ಸುತ್ತಮುತ್ತ ಭಾರೀ ಚಳಿ ಇದ್ದರೂ ನನಗೆ ಬಿಸಿಯಾಗುತ್ತಿದೆ ಎಂದು ಯೋಚಿಸುತ್ತಿದ್ದರೆ ನಿಜವಾಗಿಯೂ ನಮಗೆ ಬಿಸಿಯಾಗಿದ್ದಂತೆ ಅನ್ನಿಸುವುದುಂಟು. ಅಂತೆಯೇ ಯಾವ ವಿಷಯವನ್ನು ಮರೆಯಲು ಯತ್ನಿಸುತ್ತೀರೋ ಅದನ್ನು ಮರೆಯಲಾಗದೇ, ಯಾವುದನ್ನು ಮರೆಯಬಾರದೋ ಅದನ್ನು ಸುಲಭವಾಗಿ ಮರೆತು ಬಿಡುತ್ತೇವೆ. ನೀವು ಎಡ ಮೆದುಳಿನವರೇ ಅಥವಾ ಬಲ ಮೆದುಳಿನವರೇ?
ಅಂತೆಯೇ ನಮ್ಮ ದೃಷ್ಟಿಕೋನವನ್ನು ಧನಾತ್ಮಕ ದಿಕ್ಕಿನಲ್ಲಿರಿಸಿದರೆ ಇದರ ಪರಿಣಾಮಗಳೂ ಧನಾತ್ಮಕವಾಗಿಯೇ ಇರುತ್ತವೆ. ತದ್ವಿರುದ್ಧವಾಗಿ ಋಣಾತ್ಮಕ ಚಿಂತನೆಯ ವ್ಯಕ್ತಿಗಳಿಗೆ ಸದಾ ತೊಂದರೆಗಳೇ ಕಾಣುತ್ತಿರುತ್ತವೆ. ಬನ್ನಿ, ಈ ಮೆದುಳನ್ನು ಸತಾಯಿಸುವ ಕೆಲವು ಟ್ರಿಕ್ಕುಗಳಿಂದ ನಮ್ಮ ನಿತ್ಯಜೀವನದ ಕೆಲವು ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸೋಣ: ಮೆದುಳನ್ನು ಚುರುಕಾಗಿಸುವ ಪ್ರಭಾವಶಾಲಿ ತಂತ್ರಗಳು

ಸಿಟ್ಟಿಗೆದ್ದೀದ್ದೀರಾ? ಬಲಗೈ ಕೆಲಸವನ್ನು ಎಡಗೈಗೆ ನೀಡಿ
ಯಾವುದಾದರೊಂದು ಕೆಲಸ ಸುಸೂತ್ರವಾಗಿ ನಡೆಯದಿದ್ದರೆ ಸುಮ್ಮನೆ ಕೋಪ ಎಲ್ಲರಿಗೂ ಬರುತ್ತದೆ. ಆದರೆ ಕೋಪದ ಭರದಲ್ಲಿ ಕೈಗೊಂಡ ತೀರ್ಮಾನಗಳೆಲ್ಲವೂ ಗೋತಾ ಹೊಡೆದು ಇದ್ದ ಕೆಲಸವನ್ನು ಇನ್ನಷ್ಟು ಜಟಿಲಗೊಳಿಸುವುದನ್ನು ನಾವೆಲ್ಲಾ ಅನುಭವಿಸಿದ್ದೇವೆ. ಆದ್ದರಿಂದ ಮೊದಲು ಸಿಟ್ಟಿಗೆದ್ದ ಮನವನ್ನು ಶಾಂತಗೊಳಿಸಿ ಬಳಿಕ ಸಾವಧಾನದಿಂದ ಸಮಸ್ಯೆಗೆ ಪರಿಹಾರ ಹುಡುಕಿದರೆ ಇದಕ್ಕೆ ಸಮರ್ಪಕ ಉತ್ತರ ದೊರಕುತ್ತದೆ. ಆದರೆ ಸಿಟ್ಟಿಗೆದ್ದ ಮನವನ್ನು ಶಾಂತಗೊಳಿಸುವುದು ಹೇಗೆ? ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಿಟ್ಟಿಗೆದ್ದೀದ್ದೀರಾ? ಬಲಗೈ ಕೆಲಸವನ್ನು ಎಡಗೈಗೆ ನೀಡಿ
ಇದೇನೂ ಬೆಕ್ಕಿಗೆ ಘಂಟೆ ಕಟ್ಟಿದಷ್ಟು ಕಷ್ಟವಲ್ಲ. ಬದಲಿಗೆ ಬಲಗೈಯಲ್ಲಿ ಅಭ್ಯಾಸವಾಗಿರುವ ಯಾವುದಾದರೊಂದು ಕೆಲಸವನ್ನು ಎಡಗೈಯಿಂದ ಮಾಡಲು ಯತ್ನಿಸುವುದು. ಉದಾಹರಣೆಗೆ ಎಡಗೈಯಲ್ಲಿ ವಾಕ್ಯವೊಂದನ್ನು ಬರೆಯಲು ಯತ್ನಿಸುವುದು. ಈ ಯತ್ನದಲ್ಲಿ ಮೆದುಳು ತನ್ನ ಸಾಮರ್ಥ್ಯವನ್ನು ಎಡಗೈಗೆ ಬರೆಯಲು ಹೊಸದಾಗಿ ಕಲಿಸಲು ವಿನಿಯೋಗಿಸುವುದರಿಂದ ಅತ್ತ ಸಿಟ್ಟಿಗೇಳಲು ಕಾರಣವಾಗಿದ್ದ ವಿಷಯ ಪಲ್ಲಟಗೊಂಡು ಮನಸ್ಸು ಶಾಂತಗೊಳ್ಳಲು ಸಾಧ್ಯವಾಗುತ್ತದೆ.

ಸಂವಹನದಲ್ಲಿ ಕೈಗಳನ್ನು ಬಳಸಿ
ಉತ್ತಮ ವಾಗ್ಮಿಗಳು ತಮ್ಮ ಮಾತಿನ ಜೊತೆಗೇ ತಮ್ಮ ಕೈಗಳನ್ನೂ ಸಮರ್ಥವಾಗಿ ಬಳಸುತ್ತಾರೆ, ಗಮನಿಸಿ. ಆದ್ದರಿಂದ ನಿಮ್ಮಿಂದ ಯಾವುದಾದರೊಂದು ವಿಷಯ ಇನ್ನೊಬ್ಬರಿಗೆ ತಿಳಿಸುವಾಗ ಆದಷ್ಟು ನಿಮ್ಮ ಕೈಗಳನ್ನು ಬಳಸಿ ವಿಷಯಕ್ಕೆ ತಕ್ಕಂತೆ ಸಂಜ್ಞೆಗಳನ್ನು ಮಾಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಂವಹನದಲ್ಲಿ ಕೈಗಳನ್ನು ಬಳಸಿ
ಇದರಿಂದ ಎದುರಿನವರಿಗೆ ಸುಲಭವಾಗಿ ಮತ್ತು ಸ್ಪಷ್ಟವಾಗಿ ಅರ್ಥವಾಗುತ್ತದೆ. ಉದಾಹರಣೆಗೆ ಐದು ಲೀಟರ್ ಪೆಟ್ರೋಲು ಹಾಕಿ ಎಂದು ಪೆಟ್ರೋಲು ಬಂಕ್ ನವರಿಗೆ ಹೇಳುವಾಗ ಐದು ಬೆರಳುಗಳನ್ನು ತೋರಿಸಿದರೆ ಅವರಿಗೆ ಅದು ಸ್ಪಷ್ಟವಾಗಿ ಐದೇ ಎಂದು ಅರ್ಥವಾಗುತ್ತದೆ

ಕ್ರಿಯಾತ್ಮಕರಾಗಲು ಹುಬ್ಬುಗಳನ್ನು ಮೇಲೇರಿಸಿ
ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಬೇಕುಬೇಕೆಂದೇ ನಿಮ್ಮ ಹುಬ್ಬುಗಳನ್ನು ಮೇಲೇರಿಸಿದರೆ ನಿಮ್ಮ ಕ್ರಿಯಾತ್ಮಕತೆ ಹೆಚ್ಚುತ್ತದೆ. ಹುಬ್ಬನ್ನು ಏರಿಸಿದಾಗ ವಿಷಯವನ್ನು ಗ್ರಹಿಸುವ ಶಕ್ತಿ ಹೆಚ್ಚುತ್ತದೆ. ತನ್ಮೂಲಕ ಮೆದುಳಿನ ಕ್ಷಮತೆ, ಇಲ್ಲದಿರುವುದರನ್ನು ಊಹಿಸಿಕೊಳ್ಳುವ ಶಕ್ತಿ ಹೆಚ್ಚುತ್ತದೆ.

ವಿಷಯಗಳನ್ನು ಬರೆದಿಟ್ಟುಕೊಳ್ಳಿ
ಒಂದು ವೇಳೆ ವಿಷಯವೊಂದನ್ನು ಕುರಿತು ನಾಳೆ ಸಭೆಯಲ್ಲಿ ಭಾಷಣ ಅಥವಾ ಕಛೇರಿಯ ಇತರರಿಗೆ ವಿಷಯವನ್ನು ತಿಳಿಸಬೇಕಾಗಿದ್ದಲ್ಲಿ, ಅಥವಾ ಪರೀಕ್ಷೆಯನ್ನು ಎದುರಿಸಬೇಕಾಗಿದ್ದಲ್ಲಿ ಎಲ್ಲಾ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಆ ವಿಷಯಗಳ ಬಗ್ಗೆ ಕ್ಷಿಪ್ರವಾದ ಮಾಹಿತಿಗಳನ್ನು ಅಥವಾ ನಿಮಗೆ ಕಂಡಾಕ್ಷಣ ಅರ್ಥವಾಗುವಂತೆ ನೀವೇ ನಿರೂಪಿಸಿಕೊಂಡ ವಿಷಯಗಳನ್ನು ರಾತ್ರಿಯೇ ಚಿಕ್ಕ ಹಾಳೆಯಲ್ಲಿ ಬರೆದಿಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿಷಯಗಳನ್ನು ಬರೆದಿಟ್ಟುಕೊಳ್ಳಿ
ಮರುದಿನ ಈ ವಿಷಯಗಳ ಬಗ್ಗೆ ನೋಡುತ್ತಿದ್ದಂತೆಯೇ ಮೆದುಳಿನಲ್ಲಿ ಆ ವಿಷಯದ ಪೂರ್ಣ ವಿವರ ಥಟ್ಟನೇ ನೆನಪಾಗಿಬಿಡುತ್ತದೆ. ಒಂದು ಸಂಶೋಧನೆಯಲ್ಲಿ ನೆನಪಿಡಬೇಕಾದುದನ್ನು ಬರೆದು ನೆನಪಿಟ್ಟುಕೊಂಡರೆ ಮರುದಿನ ಕೇವಲ ಬರೆದಿಟ್ಟ ವಿಷಯದ ಮೇಲೆ ಸುಮ್ಮನೇ ಕಣ್ಣಾಡಿಸಿದರೂ ಎಲ್ಲವೂ ನೆನಪಾಗಿಬಿಡುತ್ತದೆ ಎಂದು ಕಂಡುಕೊಳ್ಳಲಾಗಿದೆ. ಈ ಮಾಹಿತಿ ಹೆಚ್ಚೂಕಡಿಮೆ ಶಾಶ್ವತವಾಗಿ ನಿಮ್ಮ ಜ್ಞಾನಭಂಡಾರದಲ್ಲಿರುತ್ತದೆ.

ಗಂಭೀರ ಸಂದರ್ಭಗಳಲ್ಲಿ ನಕ್ಕುಬಿಡಿ
ಗಂಭೀರ ಸ್ಥಿತಿಯಲ್ಲಿ ಮೆದುಳಿನ ಮೇಲಿನ ಒತ್ತಡದ ಕಾರಣ ಹೃದಯಕ್ಕೆ ಹೆಚ್ಚಿನ ರಕ್ತವನ್ನು ಮೆದುಳಿಗೆ ರವಾನಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಗಂಭೀರ ಪರಿಸ್ಥಿತಿಯಲ್ಲಿ ಹೆಚ್ಚಿನವರು ಅಧಿಕ ರಕ್ತದೊತ್ತಡದಿಂದ ಸುಸ್ತಾಗುಗುವುದು, ಹೃದಯ ದೌರ್ಬಲ್ಯವಿದ್ದವರಿಗೆ ಆಘಾತ ಮೊದಲಾದ ತೊಂದರೆಗಳು ಎದುರಾಗಬಹುದು.

ಗಂಭೀರ ಸಂದರ್ಭಗಳಲ್ಲಿ ನಕ್ಕುಬಿಡಿ
ಇದರ ಬದಲಿಗೆ ಗಂಭೀರವಾದ ಸಮಯದಲ್ಲಿ ನಗು ಬರುವಂತಹ ಮಾಹಿತಿಯನ್ನು ಪಡೆದರೆ ಇದು ಮೆದುಳಿಗೆ 'ಎಲ್ಲವೂ ಸರಿ ಇದೆ' ಎಂಬ ಸೂಚನೆಯನ್ನು ನೀಡಿದಂತಾಗುತ್ತದೆ. ಆದ್ದರಿಂದ ಸುಳ್ಳು ಸುಳ್ಳೇ ನಕ್ಕು ಗಂಭೀರ ಪರಿಸ್ಥಿತಿಯಲ್ಲಿಯೂ ರಕ್ತದೊತ್ತಡ ಹೆಚ್ಚದಂತೆ ನೋಡಿಕೊಳ್ಳಬಹುದು.

ಮಾಡಬಾರದ ವಿಷಯಗಳನ್ನೂ ಬರೆದಿಡಿ
ಸಾಮಾನ್ಯವಾಗಿ ಜೀವನದಲ್ಲಿ ಯಶಸ್ಸನ್ನು ಪಡೆದಿರುವವರು ತಮ್ಮ ಕಾರ್ಯಗಳನ್ನು ಬರೆದಿಟ್ಟು ಅದನ್ನು ಕ್ಲುಪ್ತಕಾಲದಲ್ಲಿ ಪೂರ್ಣಗೊಳಿಸುತ್ತಾ ಹೋಗುತ್ತಾರೆ. ಇದರಿಂದ ಅವರ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದಕ್ಕೆ ತದ್ವಿರುದ್ಧವಾದ ಅಂದರೆ ಏನು ಮಾಡಬಾರದು ಎಂಬುದನ್ನು ನಾವಾರೂ ಬರೆದಿಡುವುದಿಲ್ಲ. ಒಂದು ವೇಳೆ ಇದನ್ನೂ ಬರೆದಿಟ್ಟು ಆಗಾಗ ಮನನ ಮಾಡಿಕೊಳ್ಳುತ್ತಿದ್ದರೆ ನಮ್ಮ ಕ್ಷಮತೆ ಇನ್ನಷ್ಟು ಹೆಚ್ಚುವುದು.

ಒಂದು ಸಮಯಕ್ಕೆ ಒಂದೇ ಕೆಲಸ ಮಾಡಿ
ಏಕಾಗ್ರತೆ ಎಂಬ ಪದಕ್ಕೆ ವಿವರ ನೀಡುವುದಾದರೆ ಒಂದು ಸಮಯದಲ್ಲಿ ಒಂದೇ ಕೆಲಸವನ್ನು ಮಾಡುವುದು ಎಂದು ಶಬ್ಧಕೋಶಗಳು ತಿಳಿಸುತ್ತವೆ. ಯಾವುದೇ ಕೆಲಸದಲ್ಲಿ ಮೆದುಳಿನ ಪೂರ್ಣ ಗಮನವನ್ನು ಕೆಲಸದೆಡೆಗೆ ನೀಡುವ ಮೂಲಕ ಆ ಕೆಲಸ ಪರಿಪೂರ್ಣವಾಗುವಂತೆ ನೋಡಿಕೊಳ್ಳಬಹುದು.

ಒಂದು ಸಮಯಕ್ಕೆ ಒಂದೇ ಕೆಲಸ ಮಾಡಿ
ಆದರೆ ನಾವೆಲ್ಲಾ ಒಂದೇ ಸಮಯದಲ್ಲಿ ಹಲವಾರು ಕೆಲಸಗಳನ್ನು ಮಾಡುತ್ತಾ ಮೆದುಳಿಗೆ ಅಪಾರ ಶ್ರಮ ನೀಡುತ್ತೇವೆ. ಇದರಿಂದ ಯಾವುದೇ ಕೆಲಸಕ್ಕೆ ಪೂರ್ಣವಾದ ಗಮನ ನೀಡಲು ಸಾಧ್ಯವಾಗದೇ ಯಾವುದೇ ಕೆಲಸವೂ ಪೂರ್ಣವಾಗಿ ಆಗದೇ ಹೋಗುತ್ತದೆ.



Click it and Unblock the Notifications











