Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
ಅರಳುವ ಕಮಲದಂತೆ ಮತ್ತೆ ಯಶಸ್ಸಿನ ಮೆಟ್ಟಿಲೇರಿದ ಧೀರರು...
ಜೀವನದಲ್ಲಿ ಯಶಸ್ವಿಯಾಗಿರುವ ವ್ಯಕ್ತಿಗಳು ಆ ಯಶಸ್ಸನ್ನು ಒಮ್ಮೆಲೇ ಪಡೆದಿರುವುದಿಲ್ಲ. ಹಂತಹಂತವಾಗಿ ಮೇಲೇರುತ್ತಾ, ಜೀವನದಲ್ಲಿ ಹಲವಾರು ಏಳುಬೀಳು, ಸೋಲನ್ನು ಅನುಭವಿಸಿ ಎದುರಿಸುತ್ತಾ ಕೆಸರಿನಲ್ಲಿ ಅರಳುವ ಕಮಲದಂತೆ ಮತ್ತೆ ಎದ್ದು ತೋರುತ್ತಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಹೋಂಡಾ ಸಂಸ್ಥೆಯ ಸ್ಥಾಪಕ ಸೊಯಿಚಿರೋ ಹೋಂಡಾರನ್ನು ಹೆಸರಿಸಬಹುದು.
1945ರಲ್ಲಿ ಅಮೇರಿಕಾದ ಬಾಂಬ್ ಧಾಳಿ ಮತ್ತು 1946 ರಲ್ಲಿ ಭೂಕಂಪದಿಂದ ಅವರ ಫ್ಯಾಕ್ಟರಿ ಸಂಪೂರ್ಣವಾಗಿ ನೆಲಕಚ್ಚಿ ಕವಡೆ ಕಾಸಿಗೂ ಗತಿಯಿಲ್ಲದಂತಾಗಿದ್ದರೂ ಬಳಿಕ ಬೈಕುಗಳಿಗೆ ಮೋಟಾರೊಂದನ್ನು ಕೂರಿಸಿ ವೇಗ ಹೆಚ್ಚಿಸುವ ಕಲ್ಪನೆಯೊಂದಿಗೆ ಹೋಂಡಾ ಮೋಟಾರು ಕಂಪನಿಯೊಂದನ್ನು ಸ್ಥಾಪಿಸಿದರು. ನಂತರ ಸಂಭವಿಸಿದ್ದೆಲ್ಲಾ ಇಂದು ಇತಿಹಾಸ. ಇಂತಹ ಸಾಧನೆಗಳನ್ನು ಸಾಧಿಸಿದ ಭಾರತೀಯರಿಗೇನೂ ಕಡಿಮೆಯಿಲ್ಲ. ಬನ್ನಿ, ಇಂತಹ ಕೆಲವು ಮಹಾನ್ ಭಾರತೀಯರ ಬಗ್ಗೆ ಕೆಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಮಹಾತ್ಮ ಗಾಂಧಿ
ಜಗತ್ತೇ ಗೌರವಿಸಿದ ಕೆಲವೇ ವ್ಯಕ್ತಿಗಳಲ್ಲಿ ಮಹಾತ್ಮಾ ಗಾಂಧಿ ಒಬ್ಬರು. ಮೂಲತಃ ವಕೀಲರಾಗಿದ್ದ ಮೋಹನದಾಸ ಕರಮಚಂದ್ ಗಾಂಧಿ ತಮ್ಮ ಸಾಕ್ಷಿ ಅಥವಾ ಪ್ರತಿವಾದಿಗಳೊಂದಿಗೆ ಕಠಿಣ ಪದಗಳನ್ನು ಬಳಸದ ಕಾರಣ ಸೌಮ್ಯ ವಕೀಲರೆಂದೇ ಪ್ರಸಿದ್ಧರಾಗಿದ್ದರು. ಭಾರತದಲ್ಲಿ ಕೆಲಸಮಯ ವಕೀಲಿ ನಡೆಸಿದ ಬಳಿಕ ದಕ್ಷಿಣ ಆಫ್ರಿಕಾಕ್ಕೆ ತರಳಿದ ಗಾಂಧೀಜಿ ಅಲ್ಲಿ ತಮ್ಮ ರಾಜಕೀಯ ಕೌಶಲ್ಯಗಳನ್ನು ಬೆಳೆಸಿಕೊಂಡರು.

ಮಹಾತ್ಮ ಗಾಂಧಿ
ಆದರೆ ಈ ದಾರಿ ಸುಲಭವಾಗಿರಲಿಲ್ಲ. ವರ್ಣಬೇಧ ತಾಂಡವವಾಡುತ್ತಿದ್ದ ದಕ್ಷಿಣ ಆಫ್ರಿಕಾದಲ್ಲಿ ಅವರು ಎಲ್ಲಾ ಕಷ್ಟಗಳನ್ನು ಎದುರಿಸಿ ತಮ್ಮ ಅಹಿಂಸೆಯ ತತ್ವವನ್ನು ಮೆರೆದರು. ಭಾರತಕ್ಕೆ ಮರಳಿದ ಬಳಿಕವೂ ಭಾರತದಲ್ಲಿದ್ದ ಬ್ರಿಟಿಷರ ಎದುರು ತಮ್ಮ ಅಹಿಂಸೆಯನ್ನೇ ಅಸ್ತ್ರವಾಗಿಸಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಕಾರಣರಾದರು.

ಮಹಾತ್ಮ ಗಾಂಧಿ
ಹಿಂದೊಮ್ಮೆ ವಕೀಲರಾಗಿದ್ದ ಗಾಂಧೀಜಿ ಜಗತ್ತಿಗೇ ಆದರ್ಶಪ್ರಾಯರಾಗಿದ್ದರು, ಇಂದಿಗೂ ಇದ್ದಾರೆ. ಆದರೆ ಅವರ ಜೀವನದ ಅತ್ಯಂತ ದೊಡ್ಡ ವೈಫಲ್ಯವೆಂದರೆ ಭುಟ್ಟೋರವರ ಒತ್ತಡಕ್ಕೆ ಮಣಿದು ಭಾರತ ಪಾಕಿಸ್ತಾನ ಇಬ್ಭಾಗವಾಗಲು ಕಾರಣವಾಗಿದ್ದು.

ಅಮಿತಾಭ್ ಬಚ್ಚನ್
ತಮ್ಮ ಗಡಸು ಧ್ವನಿಯ ಕಾರಣ ಆಲ್ ಇಂಡಿಯಾ ರೇಡಿಯೋದ ನಿರೂಪಕನ ಹುದ್ದೆಯ ಸಂದರ್ಶನದಲ್ಲಿ ಸೋಲು ಅನುಭವಿಸಿದ್ದ ಅಮಿತಾಭ್ ಹಿಂದಿ ಚಿತ್ರನಟರಾಗಿ ಅದ್ಭುತ ಯಶಸ್ಸನ್ನು ಪಡೆದ ವ್ಯಕ್ತಿ. ಅಮಿತಾಭ್ ನಟಿಸಿದ್ದಾರೆ ಎಂದರೆ ಎಂತಹ ಕಳಪೆ ಚಿತ್ರಕಥೆಯ ಚಿತ್ರವೂ ಜಯಭೇರಿ ಬಾರಿಸುತ್ತದೆ ಎಂತಲೇ ಲೆಕ್ಕವಾಗಿತ್ತು.

ಅಮಿತಾಭ್ ಬಚ್ಚನ್
ತಮ್ಮ ವೃತ್ತಿಜೀವನದಲ್ಲಿ ಇನ್ನಷ್ಟು ಹೆಚ್ಚಿನದನ್ನು ಸಾಧಿಸಲು ಅವರು Amitabh Bachchan Corporation Limited (ABCL) ಎಂಬ ಸಂಸ್ಥೆಯನ್ನು ಸ್ಥಾಪಿಸಿ ವಿಶ್ವಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಿದ್ದರೂ ಅವರ ಯೋಜನೆಗಳೆಲ್ಲಾ ತಲೆಕೆಳಗಾದವು. ಎದ್ದಷ್ಟು ಬೇಗನೆಯೇ ಈ ಸಂಸ್ಥೆ ಆಧೋಗತಿಗೂ ಇಳಿಯಿತು. ತಮ್ಮ ಜೀವನದ ಸಂಪತ್ತನ್ನೆಲ್ಲಾ ಸುರಿದು ಸ್ಥಾಪಿಸಿದ್ದ ಈ ಸಂಸ್ಥೆ ಮುಳುಗಡೆಯಾದ ಬಳಿಕ ಅಮಿತಾಭ್ ಹಣವಿಲ್ಲದ ಸ್ಥಿತಿಗೆ ತಲುಪಿದರು.

ಅಮಿತಾಭ್ ಬಚ್ಚನ್
ಆದರೆ ಈ ಸೋಲನ್ನು ಒಪ್ಪಿಕೊಳ್ಳದ ಅವರಿಗೆ ಮರುಜನ್ಮ ನೀಡಿದ್ದು ಸಿದ್ಧಾರ್ಥ ಬಾಸು ರವರ ಕೆಬಿಸಿ (ಕೌನ್ ಬನೇಗಾ ಕರೋಡ್ ಪತಿ) ಟೀವಿ ಕಾರ್ಯಕ್ರಮ. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ತಮ್ಮ ವಯಸ್ಸು ಮತ್ತು ವರ್ಚಸ್ಸಿಗೆ ತಕ್ಕನಾದ ಪಾತ್ರಗಳನ್ನೇ ಆಯ್ಕೆ ಮಾಡಿದ ಅವರು ಹಲವು ಟೀವಿ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿ ನಿರೂಪಕನ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಜನಸಾಮಾನ್ಯರೊಂದಿಗೆ ಅವರು ನಡೆದುಕೊಳ್ಳುವ ರೀತಿ, ಜನಪರ ಕಾರ್ಯಕ್ರಮಗಳಲ್ಲಿ ಅವರು ಮಾದರಿಯಾಗುವ ರೀತಿ ಅವರನ್ನು ಮತ್ತೊಮ್ಮೆ ಸುಪರ್ ಸ್ಟಾರ್ ಸ್ಥಾನಕ್ಕೇರಿಸಿದೆ.

ಧೀರೂಭಾಯಿ ಅಂಬಾನಿ
ರಿಲಯೆನ್ಸ್ ಕಂಪನಿಯ ಹೆಸರು ಕೇಳದ ಭಾರತೀಯರು ಯಾರಿದ್ದಾರೆ? ಆದರೆ ಇದರ ಸ್ಥಾಪಕ ಧೀರೂಭಾಯಿ ಅಂಬಾನಿಯವರು ಈ ಮಟ್ಟವನ್ನು ಒಂದೇ ದಿನದಲ್ಲಿ ಏರಲಿಲ್ಲ. ತಮ್ಮ ಹದಿನಾರನೇ ವಯಸ್ಸಿನಲ್ಲಿ ಯೆಮೆನ್ ದೇಶಕ್ಕೆ ತೆರಳಿ ಅಲ್ಲಿ ಸಾಮಾನ್ಯ ಗುಮಾಸ್ತನಾಗಿ ಕಾರ್ಯನಿರ್ವಹಿಸಿದರು. ಆದರೆ ಕೇವಲ ಗುಮಾಸ್ತಿಕೆ ನಡೆಸಿ ದೊಡ್ಡದನ್ನು ಸಾಧಿಸಲು ಸಾಧ್ಯವಿಲ್ಲ ಎಂದರಿತ ಅವರು ಯೆಮೆನ್ ನಲ್ಲಿ ತಮ್ಮೊಂದಿಗಿದ್ದ ಅವರ ಸೋದರ ಸಂಬಂಧಿ ಚಂಪಕಲಾಲ್ ದಮನಿಯವರೊಂದಿಗೆ ಜೊತೆಯಾಗಿ ಯೆಮೆನ್ ನಿಂದ ಪಾಲಿಸ್ಟರ್ ತರಿಸುವ ಮತ್ತು ಭಾರತದಿಂದ ಸಾಂಬಾರು ಪದಾರ್ಥಗಳನ್ನು ರಫ್ತು ಮಾಡುವ ಕಚೇರಿಯೊಂದನ್ನು ತೆರೆದರು.

ಧೀರೂಭಾಯಿ ಅಂಬಾನಿ
ಆ ಕಚೇರಿಯಲ್ಲಿದ್ದುದು ಒಂದು ಮೇಜು, ಮೂರು ಕುರ್ಚಿ ಹಾಗೂ ಒಂದು ಟೆಲಿಫೋನು ಅಷ್ಟೇ. 1966ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯ ಹೆಸರು Reliance Commercial Corporation. ಆದರೆ ಇಬ್ಬರ ದೂರದೃಷ್ಟಿಗಳು ಭಿನ್ನವಾದ ಕಾರಣ ಚಂಪಕಲಾಲ್ ರಿಂದ ಬೇರೆಯಾದರೂ ಒಬ್ಬಂಟಿಯಾಗಿ ಮುಂದುವರೆದು ಭಾರತದ ಅತ್ಯಂತ ಶ್ರೀಮಂತರಾದರು.

ರತನ್ ಟಾಟಾ
ಓರ್ವ ದತ್ತುಪುತ್ರನಾಗಿದ್ದರೂ ಸ್ವಂತ ಪುತ್ರನಿಗಿಂತ ಹೆಚ್ಚಿನ ಕರ್ತವ್ಯ ನಿಭಾಯಿಸಿದ ರತನ್ ಟಾಟಾ ಚಿಕ್ಕಂದಿನಿಂದಲೇ ಅತ್ಯಂತ ಪ್ರಭಾವಶಾಲಿ ಹಾಗೂ ಬುದ್ದಿವಂತರಾಗಿದ್ದರು. ಕುಟುಂಬದ ಹಲವು ಸಂಸ್ಥೆಗಳ ಒಡೆತನವನ್ನು ಯಶಸ್ವಿಯಾಗಿ ನಿಭಾಯಿಸಿದ ಟಾಟಾರ್ ಅವರು 1991ರಲ್ಲಿ ಸಂಸ್ಥೆಯ ಚೇರ್ಮನ್ನರಾಗಿ ನಿಯುಕ್ತರಾದ ಬಳಿಕ ಸಂಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದರು. ಆದರೆ ಈ ಬದಲಾವಣೆಗಳನ್ನು ಅವರ ಉದ್ಯೋಗಿಗಳೇ ಸ್ವೀಕರಿಸಲಿಲ್ಲ. ಆ ಸಮಯದಲ್ಲಿ ಅವರ ಒಡೆತನದ ಎರಡು ಸಂಸ್ಥೆಗಳು ಅವನತಿಯ ಹಾದಿ ಹಿಡಿದಿದ್ದವು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರತನ್ ಟಾಟಾ
ಅವರ ದೂರದೃಷ್ಟಿ ಮತ್ತು ಭವಿಷ್ಯದ ಯೋಜನೆಗಳನ್ನು ಅವರ ಉದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳೇ ವಿರೋಧಿಸಿದರು. ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಎಪ್ಪತ್ತರಿಂದರ ಅರವತ್ತೈದಕ್ಕೆ ಇಳಿಸಿದ ಅವರ ತೀರ್ಮಾನವನ್ನಂತೂ ಇಡಿಯ ಟಾಟಾ ಸಮೂಹ ವಿರೋಧಿಸಿತು. ಇದು ಟಾಟಾರವರಲ್ಲಿಟ್ಟಿದ್ದ ವಿಶ್ವಾಸ ಕಳೆದುಕೊಳ್ಳಲು ಮುಖ್ಯ ಕಾರಣವಾಯಿತು. ಆದರೆ ಭಾರತಿಯನಿಗೆ ಅಗ್ಗವಾಗಿ ಕಾರೊಂದನ್ನು ನೀಡಬೇಕೆಂಬ ಇರಾದೆಯಿಂದ ತಂದ ಟಾಟಾ ನ್ಯಾನೋ ನಿರೀಕ್ಷಿತ ಯಶಸ್ಸು ಪಡೆಯದಿದ್ದರೂ ಇದರ ಸುಧಾರಿತ ಆವೃತ್ತಿಯಲ್ಲಿ ಅವರು ಇಂದಿಗೂ ವ್ಯಸ್ತರಾಗಿದ್ದಾರೆ.

ನರೇಂದ್ರ ಮೋದಿ
ಪ್ರಜಾಪ್ರಭುತ್ವದ ಭಾರತದಲ್ಲಿ ಯಾರು ಏನು ಬೇಕಾದರು ಆಗಬಹುದು ಎಂಬುದಕ್ಕೆ ಇಂದಿನ ಪ್ರಧಾನಿಗಿಂತ ಇನ್ನೊಂದು ಉದಾಹರಣೆ ಸಿಗಲಾರದು. ಒಂದು ಕಾಲದಲ್ಲಿ ಓರ್ವ ಚಹಾ ಮಾರುವವನಾಗಿದ್ದು, ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಾದ ಗಲಭೆ, ರಕ್ತಪಾತದಲ್ಲಿ ಹೆಸರು ಕೆಟ್ಟಿದ್ದರೂ ಇಂದಿನ ಯಶಸ್ಸು ಪಡೆಯುವುದನ್ನು ತಪ್ಪಿಸಲಾಗಲಿಲ್ಲ.

ನರೇಂದ್ರ ಮೋದಿ
ಅಂದಿನ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ರಿಂದ ಹೊಣೆಯನ್ನು ವಹಿಸಿದ ಬಳಿಕ ಹೊರಗಿನವರಿರಲಿ, ಸ್ವತಃ ಸಚಿವ ಸಂಪುಟಕ್ಕೇ ಇವರ ಬಗ್ಗೆ ಭರವಸೆ ಇರಲಿಲ್ಲ. ಇದಕ್ಕೆ ಅವರ ಅನುಭವದ ಕೊರತೆಯನ್ನೇ ಮುಖ್ಯ ಕಾರಣವಾಗಿಸಿದ್ದರು. ಮುಖ್ಯಮಂತ್ರಿಯಾದ ಬಳಿಕ ಆರ್ ಎಸ್ ಎಸ್ ನ ವಿಚಾರಪರಂಪರೆಯಿಂದ ವಿಮುಖರಾಗಿ ರಾಜ್ಯದಲ್ಲಿ ಖಾಸಗಿತನ ಮತ್ತು ಚಿಕ್ಕ ಸಂಪುಟಕ್ಕೆ ಆದ್ಯತೆ ನೀಡಿದರು.

ನರೇಂದ್ರ ಮೋದಿ
ಆದರೆ ಅವರ ಕೌಶಲ್ಯವೆಲ್ಲಾ ಗೋಧ್ರಾ ಕಾಂಡದಲ್ಲಿ ಸತ್ವಪರೀಕ್ಷೆಗೆ ಒಳಗಾಯಿತು. ಇಂದಿಗೂ ಈ ಕಾಂಡಕ್ಕೆ ಇವರೇ ಹೊಣೆ ಎಂದು ನಂಬುವ ಜನರಿದ್ದಾರೆ. ಆದರೆ ಈ ಪ್ರಕರಣದಿಂದ ಅವರು ಖುಲಾಸೆಗೊಂಡ ಬಳಿಕ ಪ್ರಧಾನಿಯಾಗಿ ಆಯ್ಕೆಯಾದರು.

ಸ್ಮೃತಿ ಇರಾನಿ
ಒಂದು ಕಾಲದಲ್ಲಿ ಮ್ಯಾಕ್ ಡೋನಾಲ್ಡ್ ಸಂಸ್ಥೆಯಲ್ಲಿ ಪರಿಚಾರಿಕೆಯಾಗಿ ಕಾರ್ಯನಿರ್ವಹಿಸಿದ್ದ ಇವರಿಗೆ ನಿಜವಾದ ಜನಪ್ರಿಯತೆ ದೊರಕಿದ್ದು ಟೀವಿ ಧಾರಾವಾಹಿಯ ಕ್ಯೂಂ ಕಿ ಸಾಸ್ ಭೀ ಕಭೀ ಬಹೂ ಥೀ ಸರಣಿಯಲ್ಲಿ ಅತ್ತೆಯ ಪಾತ್ರದಿಂದ. ಈ ಧಾರಾವಾಹಿಯ ನಿರ್ಮಾಪಕಿ ಏಕ್ತಾ ಕಪೂರ್ ರವರು ಈ ಧಾರಾವಾಹಿಗಳಿಂದ ಹಿಂದೆ ಸರಿದ ಬಳಿಕ ಈ ಪಾತ್ರ ಕೊನೆಯಾಯಿತೆಂದೇ ಎಂದು ಎಲ್ಲರೂ ತಿಳಿದಿದ್ದರು.

ಸ್ಮೃತಿ ಇರಾನಿ
ಆದರೆ ಈ ತುಳಸಿ ಅತ್ತೆಯ ಪಾತ್ರ ಎಷ್ಟು ಜನಪ್ರಿಯವಾಯಿತೆಂದರೆ ಬಳಿಕ ರಾಜಕೀಯವಾಗಿ ಅವರಿಗೆ ಗೆಲುವು ದೊರಕಿಸಲೂ ಸಾಧ್ಯವಾಯಿತು. ಪ್ರಸ್ತುತ ಅವರು ಕೇಂದ್ರ ಸರ್ಕಾರದ ಮಾನವಸಂಪನ್ಮೂಲ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅತ್ಯಂತ ಮಹತ್ವದ ಈ ಹುದ್ದೆಗೆ ಅವರಲ್ಲಿ ಪದವಿ ಇಲ್ಲದಿರುವುದೂ ಒಂದು ಅಡ್ಡಿಯಾಗದಿರುವುದು ಸೋಜಿಗದ ಸಂಗತಿ.

ಮನ್ಸೂರ್ ಅಲಿ ಖಾನ್ ಪಟೌಡಿ
ಓರ್ವ ಉತ್ತಮ ಕ್ರಿಕೆಟಿಗನಾಗಲು ಕೇವಲ ಆಟದ ಕೌಶಲವಿದ್ದರೆ ಸಾಲದು. ತನ್ನ ತಂಡದ ಎಲ್ಲಾ ಆಟಗಾರರಲ್ಲಿ ಹುರುಪು ತುಂಬುವನಾಗಿದ್ದು ತಂಡದಲ್ಲಿ ಒಗ್ಗಟ್ಟು ಮತ್ತು ಎಲ್ಲರಿಂದ ಅತ್ಯುತ್ತಮವಾದುದನ್ನು ಹೊರತೆಗೆಯುವ ಕೌಶಲ ಇರಬೇಕು. ಇದಕ್ಕೆಲ್ಲಾ ಕಣ್ಣಿನ ದೃಷ್ಟಿ ಉತ್ತಮ ಇರಬೇಕು.
Courtesy - www.sportskeeda.com

ಮನ್ಸೂರ್ ಅಲಿ ಖಾನ್ ಪಟೌಡಿ
ಆದರೆ ಭಾರತ ಕಂಡ ಅತ್ಯಂತ ಉತ್ತಮ ನಾಯಕರಲ್ಲಿ ಒಬ್ಬರಾದ ಮನ್ಸೂರ್ ಆಲಿ ಖಾನ್ ರವರು ರಸ್ತೆ ಅಪಘಾತವೊಂದರಲ್ಲಿ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದರು. ಇನ್ನೊಂದು ಕಣ್ಣಿಂದಲೂ ನೋಡಿದ ನೋಟದಲ್ಲಿ ಎರಡೆರೆಡು ದೃಶ್ಯಗಳು ಕಾಣಿಸುತ್ತಿದ್ದವು. ಆದರೂ ಅವರು ಒಂಟಿಕಣ್ಣಿನಿಂದಲೇ ತಮ್ಮ ನಾಯಕತ್ವ ಮುಂದುವರೆಸಿ ಹಲವು ಪಂದ್ಯಗಳಲ್ಲಿ ಭಾರತ ಜಯಗಳಿಸಲು ನೆರವಾದರು. ಇಂದಿಗೂ ಭಾರತ ಕಂಡ ಅತ್ಯಂತ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲ್ಪಡುತ್ತಾರೆ.
Courtesy- www.sportskeeda.com



Click it and Unblock the Notifications











