Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಪ್ಪು ಹಣದ ಮೇಲೆ 'ಸರ್ಜಿಕಲ್ ಸ್ಟ್ರೈಕ್'-ಅಂತೂ ಎಲ್ಲರಿಗೂ ಅಚ್ಚರಿ!
ಕಪ್ಪುಹಣ ಹೊಂದಿದ್ದ ಒಂದಷ್ಟು ಮಂದಿ ತೆರಿಗೆ ಕಟ್ಟಿ ಬಿಳಿಯಾಗಿಸಿದ್ದರು. ಆದರೆ ಹೆಚ್ಚಿನವರು ಸರಕಾರ ಏನೂ ಮಾಡಲಿಕ್ಕಿಲ್ಲವೆನ್ನುವ ಅಸಡ್ಡೆಯಿಂದಾಗಿ ಹಾಗೆ ಕುಳಿತುಕೊಂಡಿದ್ದರು, ಆದರೆ ಈಗ ಎಲ್ಲಾ ತಲೆಕೆಳಗಾಗಿದೆ...
ಕಪ್ಪು ಹಣವಿದ್ದರೆ ಅದಕ್ಕೆ ಸರಿಯಾದ ತೆರಿಗೆ ಕಟ್ಟಿ ಅದನ್ನು ಬಿಳಿ ಹಣವಾಗಿ ಮಾಡಿ ಎಂದು ಕೇಂದ್ರ ಸರಕಾರವು ಸಪ್ಟೆಂಬರ್ 30ರ ತನಕ ಅವಕಾಶ ನೀಡಿತ್ತು. ಕಪ್ಪುಹಣ ಹೊಂದಿದ್ದ ಒಂದಷ್ಟು ಮಂದಿ ತೆರಿಗೆ ಕಟ್ಟಿ ಬಿಳಿಯಾಗಿಸಿದ್ದರು. ಆದರೆ ಹೆಚ್ಚಿನವರು ಸರಕಾರ ಏನೂ ಮಾಡಲಿಕ್ಕಿಲ್ಲವೆನ್ನುವ ಅಸಡ್ಡೆಯಿಂದಾಗಿ ಹಾಗೆ ಕುಳಿತುಕೊಂಡಿದ್ದರು. ಆದರೆ ನ.8ರಂದು ರಾತ್ರಿ 12 ಗಂಟೆ ಬಳಿಕ 500 ಹಾಗೂ 1000 ನೋಟು ಕಾನೂನುಬದ್ಧವಾಗಿ ಚಲಾವಣೆಯಲ್ಲಿರುವುದಿಲ್ಲವೆಂದು ಘೋಷಣೆಯಾದ ಬಳಿಕ ಕಪ್ಪುಹಣ ಹೊಂದಿರುವವರು ನಿದ್ದೆಗೆಟ್ಟಿದ್ದಾರೆ.
ಕಪ್ಪು ಹಣ ಹಾಗೂ ನಕಲಿ ನೋಟನ್ನು ತಡೆಯಲು ಸರಕಾರದ ಸೂಕ್ತ ನಿರ್ಧಾರ ಇದಾಗಿದೆ. ಈ ಸಂದರ್ಭದಲ್ಲಿ ಕಪ್ಪು ಹಣವೆಂದರೆ ಏನು ಎನ್ನುವ ಪ್ರಶ್ನೆ ಬರುತ್ತದೆ. ತೆರಿಗೆ ಕಟ್ಟದೆ ಇಟ್ಟಿರುವ ಹಣವನ್ನು ಕಪ್ಪು ಹಣವೆಂದು ಪರಿಗಣಿಸಲಾಗಿದೆ. ತೆರಿಗೆ ಕಟ್ಟದೆ ಇರುವಂತಹ ನಗದು ಹಣವು ಹೆಚ್ಚು ವ್ಯಾಪಾರಿಗಳು, ರಾಜಕಾರಣಿಗಳು ಹಾಗೂ ಕೆಲವೊಂದು ವ್ಯಕ್ತಿಗಳಲ್ಲಿ ಇಂತಹ ಹಣವು ಖಜಾನೆಗಳಲ್ಲಿ ಇದೆ. ನಕಲಿ 10 ರೂ.ನಾಣ್ಯಗಳನ್ನು ಪತ್ತೆಹಚ್ಚಲು ಸಿಂಪಲ್ ಟಿಪ್ಸ್
ಆದರೆ 500 ಹಾಗೂ ಒಂದು ಸಾವಿರ ರೂ. ನೋಟನ್ನು ಹಠಾತ್ ಆಗಿ ಬಂದ್ ಮಾಡಿರುವ ಕಾರಣದಿಂದಾಗಿ ಕೆಲವರು ಅಚ್ಚರಿಗೊಂಡಿದ್ದಾರೆ. ಆದರೆ ಇದರ ಬಗ್ಗೆ ಯಾರೂ ಚಿಂತಿಸಬೇಕಿಲ್ಲ. ಯಾಕೆಂದರೆ ಬ್ಯಾಂಕ್‌ಗಳಲ್ಲಿ 500 ರೂ. ನೋಟನ್ನು ಬದಲಾಯಿಸಿಕೊಳ್ಳಬಹುದು. ಇನ್ನು 2 ಸಾವಿರ ರೂ. ನೋಟು ಕೂಡ ಪಡೆಯಬಹುದು. ಏನು ಕಳೆದುಕೊಳ್ಳದೆ ನಕಲಿ ಹಣವನ್ನು ಹೇಗೆ ಧ್ವಂಸ ಮಾಡಬಹುದು ಎಂದು ತಿಳಿದುಕೊಳ್ಳಿ...

ಆಸ್ಪತ್ರೆ ಬಿಲ್ ಪಾವತಿಸಲು......
ಆಸ್ಪತ್ರೆ ಬಿಲ್ ಪಾವತಿಸಲು ಹಾಗೂ ಮೆಡಿಕಲ್ ನಲ್ಲಿ ಔಷಧಿ ಖರೀದಿಸಲು 500 ಹಾಗೂ ಒಂದು ಸಾವಿರದ ನೋಟನ್ನು ಬಳಸಬಹುದು.

ಸರಕಾರಿ ಮಾನ್ಯತೆ ಹೊಂದಿರುವ ಅಂಗಡಿಗಳಲ್ಲಿ....
ಸರಕಾರಿ ಮಾನ್ಯತೆ ಹೊಂದಿರುವ ಸಫಲ್ ನಂತಹ ಅಂಗಡಿಗಳಲ್ಲಿ ನೀವು ಈ ನೋಟುಗಳನ್ನು ಬಳಸಿಕೊಳ್ಳಬಹುದು.

ಪೆಟ್ರೋಲ್ ಬಂಕ್ ಗಳಲ್ಲಿ....
ಪೆಟ್ರೋಲ್ ಬಂಕ್ ಗಳಲ್ಲಿ ನೀವು 500 ಹಾಗೂ ಒಂದು ಸಾವಿರ ನೋಟನ್ನು ಬಳಸಬಹುದು. ಯಾಕೆಂದರೆ ಅವರಲ್ಲಿ ಹಣಕ್ಕೆ ದಾಖಲೆಯಿರುತ್ತದೆ.

ಟಿಕೆಟ್ ಮಾಡಿಸಲು....
ವಿಮಾನ ಟಿಕೆಟ್, ರೈಲು ಟಿಕೆಟ್ ಹಾಗೂ ಸರಕಾರಿ ಬಸ್ ಗಳ ಟಿಕೆಟ್ ಖರೀದಿಸಲು ಇದನ್ನು ಬಳಸಬಹುದು.

ಹಳೆ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು
ವಿಮಾನ ನಿಲ್ದಾಣಗಳಲ್ಲಿ ಹಳೆ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು.

ಹಣ ಪಾವತಿ ಮಾಡುವಂತಹ ವ್ಯವಸ್ಥೆ ಇರುವ ಎಟಿಎಂಗಳಲ್ಲಿ
ಹಳೆಯ ನೋಟುಗಳನ್ನು ನೀವು ಹಣ ಪಾವತಿ ಮಾಡುವಂತಹ ವ್ಯವಸ್ಥೆ ಇರುವ ಎಟಿಎಂಗಳಲ್ಲಿ ಪಾವತಿ ಮಾಡಬಹುದು.(ಇದು ಕಪ್ಪು ಹಣವೆಲ್ಲವೆಂದು ನಾವು ಭಾವಿಸಿರುತ್ತೇವೆ)

ಅಂತೂ ಇಂತೂ ಎಲ್ಲರಿಗೂ ಸರ್ಫೈಸ್....
ಕೇಂದ್ರ ಸರಕಾರದ ಹಠಾತ್ ನಿರ್ಧಾರದಿಂದಾಗಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಈ ಮಾರ್ಗವು ಭ್ರಷ್ಟಾಚಾರ, ಕಪ್ಪು ಹಣ, ಉಗ್ರರಿಗೆ ಸರಬರಾಜಾಗುವ ಹಣ ಸಹಿತ ಎಲ್ಲದಕ್ಕೂ ನಿಯಂತ್ರಣ ಹೇರಲಿದೆ. ಮೋದೀಜಿಗೆ ಒಂದು ಸಲಾಮ್!



Click it and Unblock the Notifications
