For Quick Alerts
ALLOW NOTIFICATIONS  
For Daily Alerts

  ನಂಬಿಕೆಯೇ ಬರುತ್ತಿಲ್ಲ, ಇಂತಹ ಜನರೂ ಜಗತ್ತಿನಲ್ಲಿ ಇದ್ದಾರೆಯೇ?

  By Arshad
  |

  ಬ್ರಿಟಿಷರು ಭಾರತದಲ್ಲಿದ್ದಾಗ ಅವರನ್ನು ಅನುಸರಿಸಿದ ಗಾಢವರ್ಣದ ಭಾರತೀಯರು ತಮ್ಮನ್ನು ತಾವು ಬ್ರಿಟಿಷರಿಗೆ ಸರಿಸಮ ಎಂದು ತೋರಿಸಿಕೊಳ್ಳಲು ಭಾರೀ ಪ್ರಮಾಣದ ಸೌಂದರ್ಯ ಪ್ರಸಾಧನಗಳನ್ನು ಬಳಸುತ್ತಿದ್ದರಂತೆ. ಆದರೆ ಇಂದು ಕಾಲ ಬದಲಾಗಿದೆ. ವ್ಯಕ್ತಿಯ ವ್ಯಕ್ತಿತ್ವ ಆತನ ಬಣ್ಣದಲ್ಲಿ ಅಲ್ಲ, ಆತನ ಅಂತರಂಗದಲ್ಲಿದೆ ಎಂದು ಜನರು ತಿಳಿದಿದ್ದಾರೆ. ಆದರೆ ನಮ್ಮ ನಡುವೆ ಇರುವ ಕೆಲವು ವ್ಯಕ್ತಿಗಳು ತಮ್ಮ ವಿಲಕ್ಷಣ ಚರ್ಮದ ವರ್ಣದಿಂದಲೇ ಖ್ಯಾತಿ ಪಡೆದಿದ್ದಾರೆ.   ವಿಚಿತ್ರ ಅಂಗಗಳನ್ನು ಹೊಂದಿರುವ ಮಾನವ ಶರೀರಗಳು

  ಸಾಮಾನ್ಯವಾಗಿ ನಾವೆಲ್ಲಾ ಪ್ರಖರ ಮತ್ತು ಗೌರವರ್ಣದ ವ್ಯಕ್ತಿಗಳನ್ನು ಥಟ್ಟನೇ ಗುರುತಿಸುತ್ತೇವೆ. ಒಂದು ವೇಳೆ ಇವರ ಚರ್ಮದ ಬಣ್ಣ ಗೋಧಿಯೂ ಅಲ್ಲ ಗೌರವರ್ಣವೂ ಅಲ್ಲದೇ ಬೇರೆಯೇ ಆಗಿದ್ದರೆ? ಈ ವ್ಯಕ್ತಿಗಳು ಗುಂಪಿನಲ್ಲಿ ಎಲ್ಲರ ಗಮನ ಸೆಳೆಯುತ್ತಾ ಆಕರ್ಷಣೆಯ ಕೇಂದ್ರವಾಗುತ್ತಾರೆ. ಈ ಬಣ್ಣದ ವ್ಯತ್ಯಾಸ ಅವರನ್ನು ಅಸಾಮಾನ್ಯವಾಗಿಸಿ ಅವರ ಜೀವನವನ್ನೇ ಬದಲಿಸಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ.....

  ಖೌದಿಯಾ ದಿಯೋಪ್ (Khoudia Diop)

  ಖೌದಿಯಾ ದಿಯೋಪ್ (Khoudia Diop)

  ಸೆನೆಗಲ್ ರಾಷ್ಟ್ರದ ನಿವಾಸಿಯಾಗಿರುವ ಈ ಮಹಿಳೆಗೆ ಅವರ ಚರ್ಮದ ಬಣ್ಣದ ಕಾರಣಕ್ಕಾಗಿಯೇ ಎಲ್ಲೆಡೆ ಅವಹೇಳನ ಎದುರಿಸಬೇಕಾಗಿ ಬಂದಿತ್ತು. ಏಕೆಂದರೆ ಕೂದಲಿನಷ್ಟೇ ಗಾಢವಾದ ಕೃಷ್ಣವರ್ಣೆಯಾಗಿರುವ ಈಕೆ ಸೆನೆಗಲ್ ನ ಗಾಢವರ್ಣೀಯರ ನಡುವೆಯೂ ಇನ್ನಷ್ಟು ಗಾಢವಾಗಿ ಕಾಣುತ್ತಿದ್ದರೆ. ಆದರೆ ಧೃತಿಗೆಡದ ಇವರು ತಮ್ಮ ಹದಿನೇಳನೇ ವಯಸ್ಸಿನಲ್ಲಿ ತಮ್ಮ ಕೃಷ್ಣವರ್ಣವನ್ನೇ ಬಂಡವಾಳವಾಗಿಟ್ಟುಕೊಂಡು ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದರು. ಇಂದು ತಮ್ಮ ವರ್ಣದ ಮೂಲಕ ವಿಶ್ವವಿಖ್ಯಾತಿಯನ್ನು ಗಳಿಸಿರುವುದು ಮಾತ್ರವಲ್ಲ ಸಾಕಷ್ಟು ಹಣ ಮತ್ತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ 235,000ಕ್ಕೂ ಹೆಚ್ಚು ಹಿಂಬಾಲಕರನ್ನೂ ಪಡೆದಿದ್ದಾರೆ.

  Image courtesy

  ಫ್ರಿಟ್ಜ್ ಲೀಡ್ಕೆ (Fritz Liedtke)ಯವರ ಖ್ಯಾತ ಮಚ್ಚೆಮುಖಗಳು

  ಫ್ರಿಟ್ಜ್ ಲೀಡ್ಕೆ (Fritz Liedtke)ಯವರ ಖ್ಯಾತ ಮಚ್ಚೆಮುಖಗಳು

  ಖ್ಯಾತ ಛಾಯಾಚಿತ್ರಕಾರ ಫ್ರಿಟ್ಜ್ ಲೀಡ್ಕೆ (Fritz Liedtke) ಯವರು ನೂರಾರು ರೂಪದರ್ಶಿಯರ ಚಿತ್ರಗಳನ್ನು ತೆಗೆದಿದ್ದರೂ ಮುಖದ ಮೇಲೆ ಬಹುವಾಗಿಯೇ ಮಚ್ಚೆಗಳುಳ್ಳ ವ್ಯಕ್ತಿಗಳ ಚಿತ್ರಗಳನ್ನು ಅವರು "ಅದ್ಭುತ ಕಲಾವಂತಿಕೆಯ ಮಚ್ಚೆಗಳು" ಎಂದು ವರ್ಣಿಸಿದ್ದಾರೆ. ತಾವು ತೆಗೆದ ಚಿತ್ರಗಳಲ್ಲಿ ಈ ಮುಖಗಳು ಅತ್ಯುತ್ತಮವಾದ ಚಿತ್ರಗಳಾಗಿವೆ ಎಂದು ಅವರು ಉದ್ಗರಿಸಿದ್ದಾರೆ.

  Image Courtesy

  ಕೋನಿ ಚಿಯು (Connie Chiu)

  ಕೋನಿ ಚಿಯು (Connie Chiu)

  ಹಾಂಕಾಂಗ್ ನಗರವಾಸಿಯಾದ ಈ ಮಹಿಳೆ Jean-Paul Gaultier ಎಂಬ ವಸ್ತ್ರವಿನ್ಯಾಸಕರೊಂದಿಗೆ ಕೆಲಸ ಮಾಡುತ್ತಿದ್ದರು. ಆಲ್ಬಿನಿಸಂ ಎಂಬ ಅಪರೂಪದ ಕಾಯಿಲೆ ಇರುವ ಈ ಮಹಿಳೆಯ ಕೂದಲು, ಚರ್ಮ ಎಲ್ಲವೂ ಅಪ್ಪಟ ಬಿಳಿಯಾಗಿದೆ. ಇವರಿಗೆ ಸೂರ್ಯನ ಬೆಳಕು ಅಸಹನೀಯವಗಿರುತ್ತದೆ. ಆದರೆ ತಮ್ಮ ಚರ್ಮದ ವರ್ಣವನ್ನು ಅವರು ಲೆಕ್ಕಿಸದೇ ತಮ್ಮಲ್ಲಿರುವ ಹಾಡುಗಾರಿಕಾ ಕಲೆಯಿಂದ ಉತ್ತಮ ಗಾಯಕಿ ಎಂಬ ಬಿರುದನ್ನು ಪಡೆದಿದ್ದಾರೆ.

  Image courtesy

  ನಿಕಿಯಾ ಫೀನಿಕ್ಸ್

  ನಿಕಿಯಾ ಫೀನಿಕ್ಸ್

  ಕ್ಯಾರೋಲಿನಾ ರಾಜ್ಯದ ನಿವಾಸಿಯಾಗಿರುವ ಈ ಮಹಿಳೆ ಮೊದಲು ವಾರ್ತಾ ತಾಣದ ನಿರ್ವಾಹಕಿಯಾಗಿದ್ದರು. ಆದರೆ ಇವರ ಮುಖದ ಮೇಲೆ ಇರುವ ಗಾಢವಾದ ಮಚ್ಚೆಗಳು ಇವರನ್ನು ಗುಂಪಿನಲ್ಲಿ ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ಮಾಡಿರುವ ಕಾರಣ ಇದನ್ನೇ ಅವರು ತಮ್ಮ ವೃತ್ತಿಯಾಗಿಸಿಕೊಂಡರು. ಇಂದು ಇವರೊಬ್ಬ ಖ್ಯಾತ ರೂಪದರ್ಶಿಯಾಗಿದ್ದಾರೆ.

  Image Courtesy

  English summary

  Gorgeous People With Unique Skin Colour

  Here, in this article, we are about to share the list of some of the gorgeous people who have unique skin colour. These are the ones who stand out in a crowd, as their skin tone makes them look different! Check out their interesting stories of their skin tone and how life has changed for them due to their different skin tones! Read on to know more...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more