Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಬೆಲೆ ನೋಡುವ ಮೊದಲು ಎಕ್ಸ್ಪೈರಿ ಡೇಟ್ ಗಮನಿಸಿ...
ಯಾವುದೇ ಒಂದು ಉತ್ಪನ್ನಗಳು ಉತ್ಪಾದನೆಗೊಂಡಾಗ ಅವುಗಳಿಗೆ ಅವಧಿ ಮೀರುವ ದಿನಾಂಕವನ್ನು ಪ್ರಕಟಿಸುವುದು ಕಾನೂನಿನ ರೀತಿ ಕಡ್ಡಾಯ. ಇದು ಆ ಉತ್ಪನ್ನಗಳನ್ನು ಬಳಸುವವರ ಹಿತದೃಷ್ಟಿಯಿಂದ ಒಳ್ಳೆಯದೆ. ಅದರಲ್ಲೂ ನಾವು ಔಷಧೀಯ ಉತ್ಪನ್ನಗಳನ್ನು ಕೊಳ್ಳುವಾಗ ಮೊದಲು ಅದರ ಅವಧಿ ಮೀರುವ ದಿನಾಂಕವನ್ನು ನೋಡುತ್ತೇವೆ. ಅದೇ ರೀತಿ ನಾವು ದಿನ ನಿತ್ಯ ಸೇವಿಸುವ ಆಹಾರ ಉತ್ಪನ್ನಗಳನ್ನು ಕೊಳ್ಳುವಾಗ ಮುತುವರ್ಜಿಯನ್ನು ವಹಿಸುತ್ತೇವೆಯೆ ಎಂದು ಹೇಳಲು ಬಾರದು.
ಏಕೆಂದರೆ ನಾವು ಉತ್ಪನ್ನದ ಅಂದ-ಚಂದ ಮತ್ತು ಬೆಲೆಯನ್ನು ನೋಡುತ್ತೇವೆಯೇ ಹೊರತು ಅದರ ಅವಧಿ ಮೀರುವ ದಿನವನ್ನಲ್ಲ!. ನೀವು ಉಳಿದಿದ್ದನ್ನೆಲ್ಲ ಮರೆತರು ಸರಿ, ಅದರ ಅವಧಿ ಮೀರುವ ದಿನವನ್ನು ಮಾತ್ರ ಎಂದಿಗು ನೋಡಲು ಮರೆಯಬೇಡಿ. ಬನ್ನಿ ನಾವು ಯಾವ ಯಾವ ವಸ್ತುಗಳ ಅವಧಿ ಮೀರುವ ದಿನವನ್ನು ನೋಡಲು ಮರೆಯುತ್ತೇವೆ ಎಂಬುದನ್ನು ನೋಡಿಕೊಂಡು ಬರೋಣ...

ಸೌಂದರ್ಯವರ್ಧಕಗಳು
ಈ ಉತ್ಪನ್ನಗಳು ಸಹ ಅವಧಿ ಮೀರುವ ದಿನವನ್ನು ಹೊಂದಿರುತ್ತವೆ ಎಂಬುದೇ ಬಹುತೇಕ ಜನರಿಗೆ ಗೊತ್ತಿಲ್ಲ. ಒಂದು ವೇಳೆ ನೀವು ಅವಧಿ ಮೀರಿದ ದಿನದ ನಂತರ ಸಹ ಈ ವಸ್ತುಗಳನ್ನು ಬಳಸಿದಲ್ಲಿ ನಿಮಗೆ ಅಲರ್ಜಿ, ತ್ವಚೆಯ ಇನ್‌ಫೆಕ್ಷನ್, ಕಣ್ಣು ಉರಿ, ಬೊಬ್ಬೆಗಳು ಕಾಣಿಸಿಕೊಳ್ಳುತ್ತವೆ. ಮಸಕರ, ಐ ಲೈನರ್, ನೇಲ್ ಪಾಲಿಶ್ ಮತ್ತು ಲಿಪ್‌ಸ್ಟಿಕ್ ಇತ್ಯಾದಿ ವಸ್ತುಗಳ ಅವಧಿ ಮೀರುವ ದಿನವು ಒಂದರಿಂದ ಎರಡು ವರ್ಷದವರೆಗೆ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಸ್ಯಾನಿಟರಿ ನ್ಯಾಪ್‌ಕಿನ್‌ಗಳು
ನೀವು ಓದಿದ್ದು ನಿಜ, ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಸಹ ಅವಧಿ ಮೀರುವ ದಿನವನ್ನು ಹೊಂದಿರುತ್ತವೆ. ಮುಂದಿನ ಬಾರಿ ಇದನ್ನು ಕೊಳ್ಳುವಾಗ ಅದರ ಅವಧಿ ಮೀರುವ ದಿನಾಂಕವನ್ನು ಪರಿಶೀಲಿಸುವುದನ್ನು ಮರೆಯಬೇಡಿ. ಅವಧಿ ಮೀರಿದ ದಿನವನ್ನು ಹೊಂದಿರುವ ನ್ಯಾಪ್‌ಕಿನ್‌ಗಳು ತ್ವಚೆಯ ಸಮಸ್ಯೆಯನ್ನು ಉಂಟು ಮಾಡುತ್ತವೆ.

ಬ್ಯಾಂಡೇಜ್‌ಗಳು
ಬ್ಯಾಂಡೇಜ್, ಅರೆ ಇದಕ್ಕು ಅವಧಿ ಮೀರುವ ದಿನ ಇದೆಯೇ? ಇದುವರೆಗೂ ಅದನ್ನು ನಾನು ನೋಡಿಲ್ಲ. ಗಾಯ ಆದಾಗ ಕೈಗೆ ಸಿಕ್ಕ ಬ್ಯಾಂಡೇಜ್ ಅನ್ನು ಸುತ್ತಿಕೊಂಡು ಹೋಗುವ ಗುಣ ಎಷ್ಟು ಜನರಲ್ಲಿ ಇಲ್ಲ ಹೇಳಿ? ಬ್ಯಾಂಡೇಜ್‌ಗಳಲ್ಲಿ ಸಹ ಔಷಧಿ ಇರುತ್ತವೆ, ಆದ್ದರಿಂದ ಇವುಗಳನ್ನು ಅವಧಿ ಮೀರಿದ ನಂತರ ಬಳಸುವುದು ತಪ್ಪು.

ಮಸಾಲೆ ಪದಾರ್ಥಗಳು
ನಮ್ಮ ಮನೆಗಳಲ್ಲಿ ಅಂಗಡಿಗಳಿಂದ ತಂದ ಮಸಾಲೆ ಪದಾರ್ಥಗಳನ್ನು ಮೊದಲು ಆಯಾ ಡಬ್ಬಿಗಳಲ್ಲಿ ಸಂಗ್ರಹಿಸಿ ಇಡುತ್ತಾರೆ. ಖಾರದ ಪುಡಿ, ಧನಿಯಾ ಪುಡಿ ಹೀಗೆ ಬೇರೆ ಬೇರೆ ಪದಾರ್ಥಗಳಿಗೆ ಬೇರೆ ಬೇರೆ ಡಬ್ಬ. ಅಲ್ಲಿಗೆ ಆ ಪದಾರ್ಥ ಯಾವಾಗ ಅವಧಿ ಮೀರುತ್ತದೆ ಎಂಬುದು ಅವರಿಗೆ ತಿಳಿಯುವುದಾದರು ಹೇಗೆ? ಆದ್ದರಿಂದ ಇವುಗಳಿಗು ಅವಧಿ ಮೀರುವ ದಿನಾಂಕವಿದೆ ಎಂಬುದನ್ನು ಮರೆಯಬೇಡಿ. ಒಂದು ವೇಳೆ ಸಂಗ್ರಹಿಸಿಡಬೇಕಾದಾಗ ದಿನಾಂಕವನ್ನು ಸಹ ಎಲ್ಲಾದರು ಬರೆದಿಟ್ಟುಕೊಂಡು ಸಂಗ್ರಹಿಸಿ.

ಮೊಟ್ಟೆಗಳು
ಇದು ನಿಜಕ್ಕೂ ಅಚ್ಚರಿಯುಂಟು ಮಾಡುತ್ತಿದೆಯೆ? ಹೌದು ಸ್ವಾಮಿ, ಮೊಟ್ಟೆಗಳಿಗು ಸಹ ಅವಧಿ ಮೀರುವ ದಿನಾಂಕವಿರುತ್ತದೆ. ಅದನ್ನು ಮೂರು ವಾರಗಳ ಒಳಗೆ ಸೇವಿಸಬೇಕು. ಅದನ್ನು ತಿಳಿಯುವುದು ಹೇಗೆ, ಅದರ ಮೇಲೆ ಲೇಬಲ್ ಇರುವುದಿಲ್ಲ ಎಂಬ ಗೊಂದಲವೇ? ಮೊಟ್ಟೆಯನ್ನು ತಣ್ಣಗಿನ ನೀರಿನಲ್ಲಿ ಹಾಕಿ, ಅದು ತೇಲಿದರೆ ಒಳ್ಳೆಯದು. ಮುಳುಗಿದರೆ ಎತ್ತಿ ಎಸೆಯಿರಿ.

ಟಾಫಿಗಳು
ಕಡಿಮೆ ಬೆಲೆಗೆ ಟಾಫಿಗಳನ್ನು ಕೊಳ್ಳಬೇಕು ಎಂದರೆ ಇಡೀ ಪ್ಯಾಕನ್ನು ಖರೀದಿಸಬೇಕಾಗುತ್ತದೆ. ಆಮೇಲೆ ನಾವು ಏನು ಮಾಡುತ್ತೆವೆ, ಅದನ್ನು ತೆಗೆದುಕೊಂಡು ಬಂದು ಪೊಟ್ಟಣವನ್ನು ತೆರೆದು, ಫ್ರಿಡ್ಜ್‌ನಲ್ಲಿಟ್ಟು ಬಿಡುತ್ತೇವೆ. ಅವಧಿ ಮೀರಿದ ಟಾಫಿಗಳನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆಯಲ್ಲಿ ಸಮಸ್ಯೆಗಳು ಉಂಟಾಗುತ್ತವೆ.

ಕಾರ್ನ್‌ಫ್ಲೇಕ್ಸ್‌ಗಳು ಮತ್ತು ಓಟ್ಸ್
ಬೆಳಗ್ಗೆ ನಿಮಗೆ ಉಪಾಹಾರ ಮಾಡಲು ಮನಸ್ಸಿಲ್ಲದಿದ್ದಲ್ಲಿ, ನೀವು ಸೇವಿಸುವುದು ಓಟ್ಸ್ ಅಥವಾ ಕಾರ್ನ್‌ಫ್ಲೆಕ್ಸ್‌ಗಳನ್ನು ತಾನೆ. ಆದರೆ ಇವುಗಳನ್ನು ಬಳಸುವ ಮುನ್ನ ಅವುಗಳ ಅವಧಿ ಮೀರುವ ದಿನವನ್ನು ಎಂದಾದರು ಪರೀಕ್ಷಿಸಿದ್ದೀರಾ?

ಕಾಂಡೋಮ್‌ಗಳು
ಹೌದು, ಕಾಂಡೋಮ್‌ಗಳು ಸಹ ಅವಧಿ ಮೀರುವ ದಿನವನ್ನು ಹೊಂದಿರುತ್ತವೆ! ಅವಧಿ ಮೀರಿದ ದಿನವನ್ನು ಹೊಂದಿರುವ ಕಾಂಡೋಮ್ ಅನ್ನು ನೀವು ಬಳಸುವುದರಿಂದಾಗಿ, ಅವುಗಳು ಹರಿದು ಹೋಗಬಹುದು. ಆಗ ನಿಮ್ಮ ಉದ್ದೇಶವು ತಲೆಕೆಳಗಾಗುವುದು ಸಹಜ.



Click it and Unblock the Notifications
