For Quick Alerts
ALLOW NOTIFICATIONS  
For Daily Alerts

ವಿಸ್ಮಯ ಜಗತ್ತು: ಜಗತ್ತಿಗೇ ಸವಾಲಾದ ಸ್ಮಶಾನಗಳ ನಿಗೂಢ ರಹಸ್ಯ!

By Super Admin
|

ಹುಟ್ಟು ಸಾವು ಎರಡೂ ವಿಧಿ ಲಿಖಿತ. ಹುಟ್ಟಿದ ಪ್ರತಿಯೊಂದಕ್ಕೂ ಸಾವು ಎನ್ನುವುದು ಇದ್ದೇ ಇರುತ್ತದೆ. ಭೂಮಿ ಮೇಲೆ ಯಾರು ಅಮರರಲ್ಲ. ಆದರೆ ಸಾವು ಬಂದ ಬಳಿಕ ಆ ಜೀವವನ್ನು ಆಯಾಯ ಧರ್ಮಕ್ಕೆ ಅನುಗುಣವಾಗಿ ಮಣ್ಣು ಮಾಡುತ್ತಾರೆ. ಸತ್ತವರನ್ನು ಸುಮಾರು ಆರು ಅಡಿ ಗುಂಡಿಯಲ್ಲಿ ಮಣ್ಣು ಮಾಡುವುದು ಸಾಮಾನ್ಯವಾಗಿದೆ. ಎಂತಹ ಧೈರ್ಯವಂತರನ್ನೂ ಬೆಚ್ಚಿ ಬೀಳಿಸುವ ಸ್ಮಶಾನಗಳು

ಆದರೆ ಮಣ್ಣು ಮಾಡಿದ ದೇಹವು ಎದ್ದು ಬಂದು ಏನಾದರೂ ಸಮಸ್ಯೆ ಮಾಡಲು ಆರಂಭಿಸಿದರೆ ಆಗ ಪಿಶಾಚಿ ಎನ್ನುವ ಹೆಸರನ್ನು ನೀಡುತ್ತೇವೆ. ಅದರಲ್ಲೂ ಕೆಲವೊಂದು ಸ್ಮಶಾನಗಳಲ್ಲಿನ ಇಂತಹ ಹಲವಾರು ರೋಚಕ ಕಥೆಗಳು ನಿಮ್ಮನ್ನು ಬೆಚ್ಚಿ ಬೀಳಿಸುವುದರಲ್ಲಿ ಸಂಶಯವೇ ಇಲ್ಲ. ಸತ್ತವರು ಅಡ್ಡಾಡುವಂತಹ ಸ್ಮಶಾನಗಳಲ್ಲಿನ ರೋಚಕ ಕಥೆಗಳನ್ನು ಈ ಲೇಖನದಲ್ಲಿ ನೀವು ಓದಿಕೊಳ್ಳುತ್ತೀರಿ. ಇದನ್ನು ಓದಿ ಬಳಿಕ ರಾತ್ರಿ ಸರಿಯಾಗಿ ನಿದ್ರೆ ಮಾಡಿಕೊಳ್ಳಿ, ಭಯ ಪಡದಿರಿ....

ಯಹೂದಿಗಳ ಹಳೆಯ ಸ್ಮಶಾನ

ಯಹೂದಿಗಳ ಹಳೆಯ ಸ್ಮಶಾನ

ಝೆಕ್ ಗಣರಾಜ್ಯದ ಪ್ರಾಗ್ ಜೊಸೆಫೊವ್ ನಲ್ಲಿದೆ ಈ ಸ್ಮಶಾನವಿದೆ. ಈ ಸ್ಮಶಾನದಲ್ಲಿ ಲೆಕ್ಕವಿಲ್ಲದಷ್ಟು ಶವಗಳ ಅಂತ್ಯಕ್ರಿಯೆ ನಡೆಸಲಾಗಿದೆ. 12 ಸಾವಿರಷ್ಟು ಸಮಾಧಿ ಶಿಲೆಗಳನ್ನು ಇಲ್ಲಿ ನೆಡಲಾಗಿದೆ. ಆದರೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಶವಗಳ ಅಂತ್ಯಸಂಸ್ಕಾರ ಇಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಈ ಸ್ಮಶಾನದಲ್ಲಿ ರಾತ್ರಿ ವೇಳೆ ವಿಚಿತ್ರ ಚಲನವಲನಗಳು ನಡೆಯುತ್ತದೆ. Image courtesy

ಚಾಮುಲಾ ಸ್ಮಶಾನ

ಚಾಮುಲಾ ಸ್ಮಶಾನ

ಇದು ಮ್ಯಾಕ್ಸಿಕೋದ ದಕ್ಷಿಣದ ರಾಜ್ಯ ಚಿಯಪಿಸ್ ನ ಸಾನ್ ಜೂವಾನ್ ಚಾಮುಲಾದಲ್ಲಿ ಇದೆ. 1960ರ ತನಕ ಇದು ಕ್ಯಾಥೋಲಿಕ್ ಚರ್ಚ್ ಆಗಿತ್ತು. ಆದರೆ ಧರ್ಮಗುರು ಬಿಟ್ಟು ತೆರಳಿದ ಬಳಿಕ ಇಲ್ಲಿ ಇದುವರೆಗೆ ಯಾವುದೇ ಔಪಚಾರಿಕ ಪ್ರಾರ್ಥನೆಗಳು ನಡೆದಿಲ್ಲ. ಪ್ರತೀ ವರ್ಷ ಇಲ್ಲಿ ಬಲಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಮತ್ತು ಈ ವೇಳೆ ನೂರಾರು ಕೋಳಿಗಳನ್ನು ಬಲಿ ಕೊಡಲಾಗುತ್ತದೆ. Image courtesy

ಲೆಸ್ ಕ್ಯಾಟಕೊಂಬ್ಸ್

ಲೆಸ್ ಕ್ಯಾಟಕೊಂಬ್ಸ್

ಫ್ರಾನ್ಸ್‌ನ ಪ್ಯಾರಿಸ್ ನಲ್ಲಿರುವ ಭೂಗತ ಸ್ಮಶಾನವಿದು. ಈ ಸ್ಥಳವನ್ನು ವಿಚಿತ್ರವಾಗಿ ಶೃಂಗರಿಸಲಾಗಿದೆ. ಪ್ರತೀ ರಾತ್ರಿ ಇಲ್ಲಿ ಪಿಶಾಚಿಗಳ ಕಾಟ ಇದ್ದೇ ಇರುತ್ತದೆ. ಏನಾದರೂ ಘಟನೆಗಳು ನಡೆಯುತ್ತಲೇ ಇರುತ್ತದೆಯಂತೆ. ನೀವು ಈ ಸ್ಥಳಕ್ಕೆ ಭೇಟಿ ನೀಡದಿರಲಿ ಎಂದು ನಾವು ಬಯಸುತ್ತೇವೆ. Image courtesy

ಸೇಂಟ್ ಲೂಯಿಸ

ಸೇಂಟ್ ಲೂಯಿಸ

ನ್ಯೂ ಆರ್ಲಿಯನ್ ನಲ್ಲಿರುವ ಅತ್ಯಂತ ಪುರಾತನ ಸ್ಮಶಾನ ಇದಾಗಿದೆ. ಈ ಸ್ಮಶಾನದಲ್ಲಿ ಅತ್ಯಂತ ಕುಖ್ಯಾತ ಸಮಾಧಿಗಳು ಇದೆಯೆನ್ನಲಾಗಿದೆ. ಗ್ರ್ಯಾಂಡೆ ವೂಡೊ ಕ್ವೀನ್ ಎಂದೇ ಕರೆಯಲಾಗುತ್ತಿದ್ದ ಮಾರಿಯಾ ಲಾವೆಯುಳ ಸಮಾಧಿ ಕೂಡ ಇಲ್ಲಿದೆ. ಇಲ್ಲಿಗೆ ಭೇಟಿ ನೀಡುವವರಿಗೆ ಆಕೆ ಹಲವಾರು ರೀತಿಯಿಂದ ಕಿರುಕುಳ ನೀಡುತ್ತಾಳಂತೆ. Image courtesy

ಕ್ಯಾಪುಚಿನ್ ಕ್ರಿಪ್ಟ್

ಕ್ಯಾಪುಚಿನ್ ಕ್ರಿಪ್ಟ್

ಇಟಲಿಯ ರೋಮ್ ನಗರದಲ್ಲಿರುವ ಪಿಯಾಝಾ ಬಾರ್ಬೆರಿನಿಯಾದ ಚರ್ಚ್ ಕೆಳಗೆ ಹಲವಾರು ಸಣ್ಣ ಸಣ್ಣ ಪ್ರಾರ್ಥನಾ ಮಂದಿರಗಳನ್ನು ಇದು ಒಳಗೊಂಡಿದೆ. ಸುಮಾರು 3700 ಕ್ರೈಸ್ತಭಿಕ್ಷುಗಳ ಅಸ್ಥಿಪಂಜರಗಳು ಈಗಲೂ ಅಲ್ಲಿ ಇದೆಯೆಂದು ನಂಬಲಾಗಿದೆ. ಇಷ್ಟು ಅಸ್ಥಿಪಂಜರಗಳನ್ನು ನೋಡಿದ ಬಳಿಕ ರಾತ್ರಿ ನಿದ್ರೆ ಬೀಳುವುದು ಡೌಟ್. Image courtesy

English summary

Creepiest Cemeteries That Will Scare You

Death is something that is totally unavoidable. The very thought of being buried 6-feet underground can run a chill down anyone's spine. But as destined, it has to be faced at some point of time.In this article, we are here to share facts on some of the creepiest cemeteries that will surely scare you to death. So, find out more about these creepy graveyards mentioned i this article, and we're sure these would give you goosebumps! Well, all that we would want to tell you is happy reading and enjoy your sleep tonight! Have a look.
Story first published: Monday, July 11, 2016, 13:21 [IST]
X
Desktop Bottom Promotion