For Quick Alerts
ALLOW NOTIFICATIONS  
For Daily Alerts

ಈ ದೇಶಗಳಲ್ಲಿ ದಿನನಿತ್ಯ ಹೆಚ್ಚುತ್ತಿದೆ ಆತ್ಮಹತ್ಯೆ ಪ್ರಕರಣಗಳು!

By Super Admin
|

ವಿಶ್ವದ ಎಲ್ಲಾ ಜೀವಿಗಳ ಪೈಕಿ ಮನುಷ್ಯರೇ ಅತಿ ವಿಶಿಷ್ಟರಾಗಿರಲು ನಮ್ಮ ಬುದ್ದಿಶಕ್ತಿಯೇ ಕಾರಣ. ನಮ್ಮ ಯೋಚಿಸುವಿಕೆಯ ಪರಿಣಾಮವಾಗಿ ಅದ್ಭುತಗಳನ್ನೇ ಸಾಧಿಸಿದರೂ ಕೆಲವರು ದುರ್ಬಲ ಘಳಿಗೆಯಲ್ಲಿ ಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾವುದೋ ಗಹನವಾದ ತೊಂದರೆಯಲ್ಲಿ ಸಿಕ್ಕಿಕೊಂಡು ಇದಕ್ಕೆ ಪರಿಹಾರವೇ ಇಲ್ಲದಿದ್ದಾಗ ಜೀವನದಲ್ಲಿ ಭರವಸೆ, ನಂಬಿಕೆ, ವಿಶ್ವಾಸಗಳನ್ನೇ ಕಳೆದುಕೊಳ್ಳುತ್ತಾರೆ. ಕಡೆಗೆ ಯಾವುದೇ ದಾರಿ ಕಾಣದಾಗದೇ ಆತ್ಮಹತ್ಯೆಯತ್ತ ಮನಸ್ಸು ತಿರುಗಿಸುತ್ತಾರೆ.

ಕಷ್ಟಗಳು ಎಂದರೆ ಕ್ರಿಕೆಟ್ ಆಟದಲ್ಲಿ ಬೌಲರ್ ಎಸೆದ ಚೆಂಡಿನಂತೆ. ಚೆಂಡು ಬರುತ್ತಿದೆ ಎಂದು ಬ್ಯಾಟ್ ಬಿಟ್ಟು ಓಡಿದರೆ ಗೆಲುವು ಎಲ್ಲಿ ಸಿಗಬೇಕು? ಬದಲಿಗೆ ದಿಟ್ಟವಾಗಿ ನಿಂತು ಚೆಂಡನ್ನು ಹೇಗೆ ಎದುರಿಸಬೇಕು ಎಂದು ತಿಳಿದುಕೊಂಡರೆ ಮುಂದಿನದ್ದೆಲ್ಲಾ ಸುಲಭ. ಮೊದಲ ಎಸೆತಕ್ಕೇ ಅಲ್ಲದಿದ್ದರೂ ಕೆಲವಾದರೂ ಎಸೆತಗಳ ಬಳಿಕ ಚೆಂಡು ಎದುರಿಸುವುದು ಹೇಗೆ ಎಂದು ಗೊತ್ತಾಗಿಯೇ ಆಗುತ್ತದೆ. ಅಂತೆಯೇ ಕಷ್ಟಗಳನ್ನು ಎದುರಿಸುತ್ತಾ ಹೋದಂತೆ ಇದನ್ನು ನಿಭಾಯಿಸುವ ವಿಧಾನಾಳೂ ತಿಳಿಯುತ್ತಾ ಹೋಗುತ್ತವೆ. ಆಗಲೇ ವ್ಯಕ್ತಿ ಅತಿ ಸ್ಥೈರ್ಯವಂತ ಮತ್ತು ಸುಖೀಜೀವನವನ್ನು ಎದುರಿಸುವವನಾಗುತ್ತಾನೆ. ನಿಗೂಢ ಜಗತ್ತು: ಆತ್ಮಹತ್ಯೆ ಮಾಡಿಕೊಂಡವರ ಆತ್ಮದ ಕಥೆ!

ಆದರೆ ಈ ಪರಿ ಎಲ್ಲಾ ಕಡೆ ಕಾಣಬರುವುದಿಲ್ಲ. ಎಷ್ಟೋ ಕಡೆ ಅವ್ಯಾಹತವಾಗಿ ನಡೆಯುವ ಅನಾಚಾರಗಳನ್ನು ಎದುರಿಸಲಾಗದೇ ಸಾವೇ ಮೇಲು ಎಂದು ಜನರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನೂ ಕಾಣಬಹುದು. ಬನ್ನಿ ವಿಶ್ವದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳು ಯಾವ ದೇಶದಲ್ಲಿ ಆಗುತ್ತಿವೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾಗಿದೆ.

ಸೂಚನೆ: ಆತ್ಮಹತ್ಯೆಯ ಪ್ರಕರಣಗಳನ್ನು ಸಾವಿನ ಪ್ರಮಾಣ (death rate) ಮೂಲಕ ಅಳೆಯಲಾಗುತ್ತದೆ. ಅಂದರೆ ಒಂದು ವರ್ಷದಲ್ಲಿ ಆ ದೇಶದ ಒಟ್ಟು ಜನಸಂಖ್ಯೆಯ ಎಷ್ಟು ಶೇಖಡಾ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಶೇಖಡದಲ್ಲಿ ಹೇಳಲಾಗುತ್ತದೆ. ಉದಾಹರಣೆಗೆ ಒಂದು ವರ್ಷದಲ್ಲಿ ನೂರು ಜನರ ಜನಸಂಖ್ಯೆಯಲ್ಲಿ ಹತ್ತು ಜನರು ಆತ್ಮಹತ್ಯೆ ಮಾಡಿಕೊಂಡರೆ ಇದು ಶೇ ಹತ್ತು ಎಂದಾಗುತ್ತದೆ.

ಗಯಾನಾ

ಗಯಾನಾ

ಒಂದು ಕಾಲದಲ್ಲಿ ಫ್ರೆಂಚರ ವಸಾಹತು ಆಗಿದ್ದ ಗಯಾನ ದೇಶದಲ್ಲಿ ಅತಿ ಹೆಚ್ಚು ಅಂದರೆ ಸಾವಿನ ಪ್ರಮಾಣ 44.2%ರಷ್ಟು ಆಗಾಧವಾದ ಆತ್ಮಹತ್ಯೆಗಳು ಈ ದೇಶದಲ್ಲಿಯೇ ಜರುಗುತ್ತವೆ. ಅತಿ ಹೆಚ್ಚು ಅರಣ್ಯ ದಟ್ಟಣೆ ಮತ್ತು ಅತಿ ಕಡಿಮೆ ನಾಗರಿಕತೆ ಇರುವ ಈ ವಿಶಿಷ್ಟ ಮತ್ತು ಪುಟ್ಟ ದೇಶದಲ್ಲಿ ಕಾನೂನುಗಳು ಬಿಗಿಯಾಗಿರದೇ ಇರುವ ಕಾರಣ ಕಾಡುವ ಬಡತನ, ಮದ್ಯಪಾನದ ಅತಿ ಹೆಚ್ಚಿನ ವ್ಯಸನ ಮೊದಲಾದವುಗಳಿಂದ ಹೊರಬರಲು ಜನರು ಕಡ್ಲೆಕಾಯಿ ಖರೀದಿಸಿದಷ್ಟೇ ಸುಲಭವಾಗಿ ದೊರಕುವ ವಿಷಕಾರಿ ಕೀಟನಾಶಕಗಳನ್ನು ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಉತ್ತರ ಕೊರಿಯಾ

ಉತ್ತರ ಕೊರಿಯಾ

ಒಂದು ಕಾಲದಲ್ಲಿ ಜಮೀನುದಾರರ ದಬ್ಬಾಳಿಕೆ ತಡೆಯಲಾಗದೇ ಭಾರತದ ಎಷ್ಟೋ ಹಳ್ಳಿಗಳಲ್ಲಿ ಸಾಮೂಹಿಕ ಆತ್ಮಹತ್ಯೆ ಜರುಗಿರುವುದನ್ನು ಇತಿಹಾಸದಲ್ಲಿ ಕಾಣಬಹುದು. ಆದರೆ ಈ ದಬ್ಬಾಳಿಕೆಯ ಇನ್ನೊಂದು ರೂಪ ಉತ್ತರ ಕೊರಿಯಾದ ಸರ್ವಾಧಿಕಾರದ ರೂಪದಲ್ಲಿ ತಾಂಡವವಾಡುತ್ತಿದೆ. ಸಾವಿನ ಪ್ರಮಾಣವಾದ 38.5%ರಷ್ಟು ಪ್ರಕರಣಗಳು ಈ ದೇಶದಲ್ಲಿ ಜರುಗುತ್ತಿವೆ. ವಾಸ್ತವವಾಗಿ ಈ ಅಂಕಿ ಅಂಶಗಳು ಸರ್ಕಾರಿ ದಾಖಲೆಗಳೇ ಹೊರತು ವಾಸ್ತವ ಇನ್ನೂ ಹೆಚ್ಚಿರಬಹುದು. ಏಕೆಂದರೆ ಉತ್ತರ ಕೊರಿಯಾದಲ್ಲಿ ನುಚ್ಚು ನೂರಾಗಿರುವ ಮಾನವಹಕ್ಕುಗಳು, ಸಂಪಾದನೆಯ ಗರಿಷ್ಠ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕಾದ ಅನಿವಾರ್ಯತೆ, ಸರ್ಕಾರಿ ಕಾಯ್ದೆಗಳ ಪ್ರಕಾರವೇ ಊಟ, ನಿದ್ದೆಗಳನ್ನೂ ಮಾಡಬೇಕಾದ ಗುಲಾಮತನ ಮೊದಲಾದವುಗಳನ್ನು ಸಹಿಸದ ಅಮಾಯಕ ಕುಟುಂಬಗಳು ಹತಾಷೆಯಿಂದ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಪ್ರತಿದಿನ ವರದಿಯಾಗುತ್ತಿವೆ.

ದಕ್ಷಿಣ ಕೊರಿಯಾ

ದಕ್ಷಿಣ ಕೊರಿಯಾ

ಸದ್ಯಕ್ಕೆ 28.9%ರಷ್ಟು ಸಾವಿನ ಪ್ರಮಾಣ ಮೂಲಕ ಮೂರನೆಯ ಸ್ಥಾನ ಪಡೆದಿರುವ ದಕ್ಷಿಣ ಕೊರಿಯಾದಲ್ಲಿ ಜನರೇಕೆ ಆತ್ಮಹತ್ಯೆಗೆ ಒಲವು ತೋರುತ್ತಿದ್ದಾರೆ ಎಂದೇ ಆರ್ಥವಾಗುವುದಿಲ್ಲ. ಅತ್ಯುತ್ತಮ ಜೀವನ ಮಟ್ಟ, ಶಿಕ್ಷಣ, ಆರೋಗ್ಯ, ಸವಲತ್ತು ಸೌಲಭ್ಯಗಳನ್ನು ಹೊಂದಿದ್ದರೂ ಜನರು ಹತಾಷೆಯನ್ನೇಕೆ ಹೊಂದುತ್ತಿದ್ದಾರೆ ಎಂಬುದು ಸರ್ಕಾರಕ್ಕೂ ನುಂಗಲಾರದ ತುತ್ತಾಗಿದೆ. ಇದನ್ನು ತಡೆಹಿಡಿಯಲು ಇತ್ತೀಚಿನವರೆಗೆ ಬಂದೂಕು ಪಡೆಯಲು ಇದ್ದ ಸುಲಭ ಕಟ್ಟಲೆಗಳನ್ನು ಬಿಗಿಯಾಗಿಸಿ ಸಾರ್ವಜನಿಕರಿಗೆ ಸುಲಭವಾಗಿ ದೊರಕದಂತೆ ಮಾಡಿದ ಬಳಿಕ ಈಗ ಕೊಂಚ ಕಡಿಮೆಯಾಗಿದೆ.

ಶ್ರೀಲಂಕಾ

ಶ್ರೀಲಂಕಾ

ನಮ್ಮ ನೆರೆಯ ದೇಶವಾದ ಶ್ರೀಲಂಕಾದಲ್ಲಿಯೂ 28.8%ರಷ್ಟು ಸಾವಿನ ಪ್ರಮಾಣ ದಾಖಲಾಗಿದೆ. ವೇಗವಾಗಿ ಅಭಿವೃದ್ದಿ ಪಡೆದ ರಾಷ್ಟ್ರವಾಗಿದ್ದು ಉತ್ತಮ ಶಿಕ್ಷಣ ಆರೋಗ್ಯ ಮತ್ತು ಸೌಲಭ್ಯಗಳನ್ನು ಹೊಂದಿದ್ದರೂ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ನೇಣು ಮತ್ತು ವಿಷಪ್ರಾಶನದ ವಿಧಾನಗಳನ್ನೇ ಜನರು ಹೆಚ್ಚು ಹೆಚ್ಚಾಗಿ ಅನುಸರಿಸುತ್ತಿದ್ದಾರೆ.

ಲಿಥುವೇನಿಯಾ

ಲಿಥುವೇನಿಯಾ

ಈ ದೇಶದಲ್ಲಿಯೂ ಸಾವಿನ ಪ್ರಮಾಣ 28.2%ರಷ್ಟು ದಾಖಲಾಗಿದ್ದು ಪ್ರತಿದಿನ ಈ ಸಂಖ್ಯೆ ಏರುತ್ತಲೇ ಇದೆ. ಹದಗೆಟ್ಟ ಸಾಮಾಜಿಕ ವ್ಯವಸ್ಥೆ ಮತ್ತು ಆರ್ಥಿಕ ದುರ್ಬಲತೆ ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿವೆ.

ಸುರಿನಾಮೆ

ಸುರಿನಾಮೆ

ದಕ್ಷಿಣ ಅಮೇರಿಕಾದ ಉತ್ತರ ಭಾಗದಲ್ಲಿರುವ ಅತಿ ಚಿಕ್ಕ ದೇಶವಾದ ಸುರಿನಾಮೆ ಒಂದು ಕಾಲದಲ್ಲಿ ಡಚ್ಚರ ಆಧೀನದಲ್ಲಿದ್ದು ಈಗ ಸ್ವತಂತ್ರವಾಗಿದ್ದರೂ ಇಂದು ಹಲವು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದೆ. ೧೯ನೇ ಶತಮಾನದಲ್ಲಿ ಡಚ್ಚರು ತಾಳೆ ಮರಗಳನ್ನು ಬೆಳೆಸಿ ಇದರ ಕೃಷಿಗಾಗಿ ಭಾರತದಿಂದ ಕಾರ್ಮಕರನ್ನು ಕೊಂಡೊಯ್ದ ಕಾರಣ ಇವರ ಸಂತತಿ ಬೆಳೆದು ಈಗ ಸುರಿನಾಮೆಯ ಪ್ರಮುಖ ಸಂಖ್ಯೆಯ ಜನಸಂಖ್ಯೆ ಹೊಂದಿದೆ. ಉಳಿದವರೆಲ್ಲಾ ಮೂಲನಿವಾಸಿಗಳು. ಚಿನ್ನ, ಬಾಕ್ಸೈಟ್ ನಂತಹ ಅದಿರುಗಳನ್ನು ಹೊಂದಿದ್ದರೂ ಸರ್ಕಾರದ ಬ್ರಷ್ಟಾಚಾರದಿಂದಾಗಿ ದೇಶ ಅಭಿವೃದ್ದಿ ಪಡೆಯದೇ ಜನರಲ್ಲಿ ಹತಾಷೆಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಸಾವಿನ ಪ್ರಮಾಣ 27.8%ಇಲ್ಲಿ ದಾಖಲಾಗಿದೆ. ಅತಿ ಹೆಚ್ಚಿನ ಮದ್ಯವ್ಯಸನ, ನಿರುದ್ಯೋಗ,ಬಡತನ ಮೊದಲಾದವು ಆತ್ಮಹತ್ಯೆಗೆ ಪ್ರೇರಣೆಗಳಾಗಿವೆ.

ಮೊಜಾಂಬಿಕ್

ಮೊಜಾಂಬಿಕ್

ಆಫ್ರಿಕಾದ ಆಗ್ನೇಯ ಭಾಗದಲ್ಲಿರುವ ಈ ದೇಶದಲ್ಲಿಯೂ ಸಾವಿನ ಪ್ರಮಾಣ 27.4% ರಷ್ಟಿದೆ. ಆದರೆ ಈ ದೇಶದಲ್ಲಿ ಆತ್ಮಹತ್ಯೆಗೆ ಪ್ರಮುಖ ಕಾರಣ ಏಡ್ಸ್ ಅಥವಾ ಹೆಚ್ ಐ ವಿ ಎಂಬ ಮಹಾಮಾರಿ. ಅಸುರಕ್ಷಿತ ಲೈಂಗಿಕ ಸಂಪರ್ಕ, ಸೂಕ್ತ ವೈದ್ಯಕೀಯ ನೆರವಿನ ಕೊರತೆ ರೋಗ ಉಲ್ಬಣಗೊಳ್ಳಲು ಕಾರಣವಾಗಿ ಈ ರೋಗದಿಂದ ಮುಕ್ತಿ ಪಡೆಯಲು ಆತ್ಮಹತ್ಯೆಗೆ ಶರಣಾಗಿರುವುದು ಪ್ರಮುಖ ಕಾರಣವಾಗಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಗಮನ ಹರಿಸುವುದು ಅತ್ಯಾವಶ್ಯವಾಗಿದೆ.

English summary

Countries With Highest Suicide Rate

However, there are many people out there who do not think a second before committing suicide. Do you know that every 40 seconds a person commits suicide in some part of the world? Well, that is a fact and it is quite an alarming fact. Here, in this article, we've shared the list of countries that have the highest suicide rates.
X
Desktop Bottom Promotion