For Quick Alerts
ALLOW NOTIFICATIONS  
For Daily Alerts

ಅಚ್ಚರಿಗೆ ತಳ್ಳುವ ಚಿತ್ರ-ವಿಚಿತ್ರ ಸಂಗೀತ ಉಪಕರಣಗಳು!

By Manu
|

ಸಂಗೀತವನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ...? ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಸಂಗೀತವೂ ಇಷ್ಟವಾಗುತ್ತದೆ. ಕೆಲವರಿಗೆ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಗಾಯನ ಇಷ್ಟವಾಗುತ್ತದೆ. ಯುವಕರು ಅತ್ಯಾಧುನಿಕ ಸಂಗೀತ ಕೇಳಲು ಬಯಸುತ್ತಾರೆ.

ಆಯಾಯ ರಾಜ್ಯಗಳಲ್ಲಿ ಅಲ್ಲಿನ ಭಾಷೆಯ ಚಲನಚಿತ್ರಗಳ ಹಾಡುಗಳು, ಸಂಗೀತ ಇಷ್ಟವಾಗುತ್ತದೆ. ಗಾಳಿಯ ಸದ್ದು, ಮಳೆನೀರ ಹನಿಗಳು ಬೀಳುವುದು, ಹಕ್ಕಿಗಳ ಕೂಗು ಕೂಡ ಸಂಗೀತವೆನ್ನಬಹುದು. ಸಂಗೀತದಲ್ಲಿ ವಿಶೇಷ ಸಂಶೋಧನೆಗಳನ್ನು ಮಾಡಬೇಕೆಂದು ಇಂದಿನ ದಿನಗಳಲ್ಲಿ ಇರುವುದೆಲ್ಲವನ್ನೂ ಸಂಗೀತ ಉಪಕರಣಗಳಾಗಿ ಮಾಡಿಕೊಳ್ಳುತ್ತಾ ಇದ್ದಾರೆ. ಬೆಲೆ ಕಟ್ಟಲಾಗದ ಅಮೂಲ್ಯ ಸಂಗೀತ ಉಪಕರಣಗಳು

ಆದರೆ ಇದನ್ನು ನುಡಿಸಲು ಕೂಡ ನೈಪುಣ್ಯತೆ ಬೇಕು. ಹಿಂದಿನಿಂದಲೂ ಬಳಸುತ್ತಿರುವಂತಹ ಕೆಲವೊಂದು ವಿಚಿತ್ರ ಸಂಗೀತ ಉಪಕರಣಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇವುಗಳ ಕೂಡ ವಿಶೇಷವಾದ ಸಂಗೀತವನ್ನು ಉಂಟು ಮಾಡುತ್ತದೆ. ಇದುವರೆಗೆ ನೀವು ಕೇಳದೆ ಇರುವಂತಹ ಕೆಲವೊಂದು ಸಂಗೀತ ಉಪಕರಣಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ಹೇಳಿಕೊಡಲಿದ್ದೇವೆ.

Bizarre And Unique Musical Instruments

ಡಿಡಗೆರಿಡೂ
ಸುಮಾರು 4000 ವರ್ಷಗಳ ಹಿಂದೆ ಬಳಸುತ್ತಿದ್ದ ಏರೋಫೋನ್ಸ್ ಇದಾಗಿದೆ. ಇದು ವಿಶ್ವದ ಅತ್ಯಂತ ಪುರಾತನ ಏರೋಫೋನ್ಸ್ ಎನ್ನಲಾಗಿದೆ. ಇದು ಉತ್ತರ ಆಸ್ಟ್ರೇಲಿಯಾದ ಮೂಲನಿವಾಸಿಗಳು ಬಳಸುತ್ತಿದ್ದ ವಾದ್ಯವೆಂದು ತಿಳಿದುಬಂದಿದೆ. ಈ ವಾದ್ಯವನ್ನು ಈಗಲೂ ಕೆಲವು ಮಂದಿ ನುಡಿಸುತ್ತಾರೆ.

ನ್ಯಕೆರ್ಲ್ಹಪ
ಸ್ವೀಡಿಸ್ ವಾದ್ಯವಾಗಿರುವ ಈ ಸಂಗೀತ ಸಾಧನದಲ್ಲಿ 16 ತಂತಿಗಳು ಮತ್ತು 36 ಕೀಲಿಗಳಿವೆ. ಆಧುನಿಕ ಯುಗದಲ್ಲಿ ಇರುವಂತಹ ಅತ್ಯಂತ ಪುರಾತನವಾಗಿರುವ ಸಂಗೀತ ಸಾಧನವೆಂದು ಇದನ್ನು ಕರೆಯಲಾಗುತ್ತಿದೆ.

ಕಜೋನ್
ತಾಳವಾದ್ಯವಾಗಿ ಬಳಸುವಂತಹ ಮರದ ಪೆಟ್ಟಿಯಂತಿರುವ ಈ ಸಾಧನವನ್ನು ಪೆರು ದೇಶದಲ್ಲಿರುವ ಆಫ್ರಿಕಾದ ಗುಲಾಮರು ಕಂಡುಹಿಡಿದಿದ್ದಾರೆ.

ಹಾಡುವ ಮತ್ತು ರಿಂಗಣಿಸುವ ಮರ
ವಿವಿಧ ಗಾತ್ರದ ಮತ್ತು ರೀತಿಯ ಸ್ಟೀಲ್ ಪೈಪ್ ಗಳನ್ನು ಅಳವಡಿಸಿಕೊಂಡು ಮಾಡಿರುವಂತಹ ಸಂಗೀತ ಸಾಧನ ಇದಾಗಿದೆ. ಈ ಸಾಧನವನ್ನು ಮೈಕ್ ಟೊನ್ಕಿನ್ ಮತ್ತು ಅನ್ನಾ ಲಿಯೂ ತಯಾರಿಸಿದ್ದಾರೆ.

ಕಿಂಬಲೊಮ್
ಹಂಗೇರಿಯಲ್ಲಿ ಅತ್ಯಂತ ಜನಪ್ರಿಯವಾಗಿರುವಂತಹ ಸಾಧನ ಇದಾಗಿದೆ. ಸಂಗೀತ ಕಚೇರಿಗಳಲ್ಲಿ ಈ ಸಾಧನವನ್ನು ಸುತ್ತಿಗೆ ರೀತಿಯ ಉಪಕರಣದಿಂದ ಬಡಿಯಲಾಗುತ್ತದೆ. ಇದರ ತುದಿಯಲ್ಲಿ ಒಂದು ವಿಷಮ ಸಮಾನಾಂತರವಾಗಿರುವ ಪೆಟ್ಟಿಗೆ ಮತ್ತು ಲೋಹದ ತಂತಿಗಳನ್ನು ಜೋಡಿಸಲಾಗಿದೆ.

ಸ್ಟೈಲೋಫೋನ್
1967ರಲ್ಲಿ ಬ್ರಿಯನ್ ಜಾರ್ವಿಸ್ ಎನ್ನುವಾತ ಕಂಡುಹಿಡಿದ ಅನಲಾಗ್ ಸ್ಟೈಲಿಸ್ ಚಾಲಿತ ಸಂಯೋಜಕ ಇದಾಗಿದೆ. ಸಂಗೀತಕ್ಕಾಗಿ ಬಳಸುವಂತಹ ಅತ್ಯಂತ ವಿಲಕ್ಷಣ ಸಾಧನ ಇದಾಗಿದೆ.

English summary

Bizarre And Unique Musical Instruments

Here, in this article, we've shared the list of instruments that are used to create music. These are the most unique instruments that are not used commercially; however, they do give rise to some soothing piece of music when played by the musicians.Find out more about the most unique musical instruments that we are sure you have not heard of until now. Check them out!!
Story first published: Tuesday, August 16, 2016, 19:21 [IST]
X
Desktop Bottom Promotion