Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಲೆ ಕಟ್ಟಲಾಗದ ಅಮೂಲ್ಯ ಸಂಗೀತ ಉಪಕರಣಗಳು
ಸಂಗೀತ ವಿಶ್ವದ ಭಾಷೆ ಎಂದು ಜಗತ್ತು ಒಪ್ಪುತ್ತದೆ. ಸಂಗೀತಕ್ಕೆ ಮರುಳಾಗದ ಜೀವಿಯೇ ಇಲ್ಲ. ಕೆಲವರಿಗೆ ಇಂಪಾದ ನಿಧಾನಗತಿಯ ಸಂಗೀತ ಇಷ್ಟವಾದರೆ ಕೆಲವರಿಗೆ ಅಬ್ಬರದ ಸಂಗೀತ ಇಷ್ಟ. ಸಪ್ತಸ್ವರಗಳ ಸುಲಲಿತ ಏರಿಳಿತಗಳಿಂದ ಮೂಡಿ ಬರುವ ನಿನಾದ ಮನಸಿದ ಮುದಕ್ಕೆ ಅಗತ್ಯ. ಲಯಬದ್ಧವಾದ ರಾಗಕ್ಕೆ ವಿವಿಧ ಉಪಕರಣಗಳ ತಾಳವೂ ಅಷ್ಟೇ ಅಗತ್ಯ. ಆದರೆ ಈ ಸಂಗೀತವನ್ನು ಕೇಳುವುದು ಎಷ್ಟು ಸುಲಭವೋ, ಉಪಕರಣಗಳನ್ನು ನುಡಿಸುವುದು ಹಾಗೂ ಹಾಡುವುದೂ ಅಷ್ಟೇ ಕಷ್ಟ.
ಸಂಗೀತ ಒಂದು ಕಲೆ, ಈ ಕಲೆ ಎಲ್ಲರಿಗೂ ಅಷ್ಟು ಸುಲಭವಾಗಿ ಸಿದ್ಧಿಸುವುದಿಲ್ಲ. ಪ್ರಪಂಚದಲ್ಲಿ ಕೆಲವರಿಗೆ ಮಾತ್ರ ಈ ಕಲೆ ಹೆಚ್ಚು ಒಲಿಯುತ್ತದೆ. ಸಂಗೀತ ಉಪಕರಣಗಳನ್ನು ನುಡಿಸುವುದು ಸಹಾ ಎಲ್ಲರಿಗೂ ಸುಲಭವಾಗಿ ಕೈತಟ್ಟದ ಕಲೆ. ಎಲ್ಲಿಯವರೆಗೆ ಕಲೆಗೆ ತಮ್ಮ ಸಮಯ, ಲಕ್ಷ್ಯಗಳನ್ನು ಮುಡಿಪಾಗಿಡುವುದಿಲ್ಲವೋ ಅಲ್ಲಿಯವರೆಗೆ ಸರಸ್ವತಿ ಒಲಿಯುವುದಿಲ್ಲ.

ಸಂಗೀತದಿಂದ ಹಲವು ರೋಗಗಳ ಶಮನವಾಗುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಖಿನ್ನತೆಗೆ ಒಳಗಾದವರಿಗೆ ಸಂಗೀತ ಮರುಜೀವನ ನೀಡುವ ಸಂಜೀವಿನಿಯಂತಿದೆ. ಅಷ್ಟೇ ಏಕೆ, ಸಂಗೀತದ ವಾತಾವರಣದಲ್ಲಿ ಬೆಳೆಸಿದ ಸಸ್ಯಗಳೂ ಉತ್ತಮ ಇಳುವರಿ ನೀಡುತ್ತವೆ. ಪ್ರೇಮ ಮೂಡಲು ಹಾಗೂ ಮನಸ್ಸು ಪ್ರಫುಲ್ಲಗೊಳ್ಳಲೂ ಸಂಗೀತದ ವಾತಾವರಣ ಪ್ರೇರಕವಾಗಿದೆ. ಜೊತೆಗೆ ಸಂಗೀತ ಉಪಕರಣಗಳ ಸುಮಧುರ ಸಂಯೋಜನೆ ಮನದಲ್ಲಿ ಸ್ವರ್ಗವನ್ನೇ ತೆರೆಯುತ್ತದೆ. ಆದರೆ ಸರಿಯಾಗಿ ಉಪಯೋಗ ಕಲಿಯದವರ ಕೈಯಲ್ಲಿ ಇದು ಮಂಗನ ಕೈಯಲ್ಲಿ ರವಿಶಂಕರ್ ರವರ ಸಿತಾರ್ ಕೊಟ್ಟಷ್ಟೇ ಪ್ರಯೋಜನಕಾರಿ.
ಸಂಗೀತದ ಉಪಕರಣಗಳು ಒಂದು ಚಿಕ್ಕ ಮಡಕೆ ಅಥವಾ ಚಮಚದಿಂದ ಹಿಡಿದು ಎ.ಆರ್. ರಹಮಾನ್ ಉಪಯೋಗಿಸುವ ಕೋಟ್ಯಾಂತರ ರೂಪಾಯಿಯ ಎಲೆಕ್ಟ್ರಾನಿಕ್ ಕೀಬೋರ್ಡ್ ವರೆಗೂ ಇದೆ. ಒಂದು ಸಂಗೀತ ತಂಡದಲ್ಲಿ ಉಪಯೋಗಿಸಲಾಗುವ ಎಲ್ಲಾ ಉಪಕರಣಗಳನ್ನು ಓರ್‍ವನೇ ಕೊಳ್ಳುವುದು ದುಃಸಾಧ್ಯ. ಏಕೆಂದರೆ ಅವುಗಳ ದುಬಾರಿ ಬೆಲೆಯೇ ಪ್ರಮುಖ ಕಾರಣ. ಹಾಗಾಗಿ ಪ್ರತಿಯೊಬ್ಬರೂ ತಾವು ಅತ್ಯುತ್ತಮವಾಗಿ ನುಡಿಸಬಲ್ಲ ಒಂದು ಉಪಕರಣವನ್ನು ಕೊಂಡುಕೊಳ್ಳುವುದು ವಾಡಿಕೆ. ದುಬಾರಿಯಾದ ಈ ಉಪಕರಣಗಳ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಾಗಿದೆ.
ಪಿಟೀಲು (Violin)
ಇಂದು ಎಲೆಕ್ಟ್ರಾನಿಕ್ ಉಪಕರಣಕ್ಕೆ ಅಳವಡಿಸಬಹುದಾದ ಪಿಕಪ್ ನೊಂದಿಗಿನ ಪುಟ್ಟ ಪಿಟೀಲು ಹಳೆಯ ಪಿಟೀಲಿಗಿಂತ ಅತ್ಯುತ್ತಮವಾದ ಹಾಗೂ ಮಧುರವಾದ ಸಂಗೀತವನ್ನು ನುಡಿಸಬಲ್ಲದಾದರೂ ಬೆಲೆಯ ಮಟ್ಟಿಗೆ ಪಿಟೀಲು ಚೌಡಯ್ಯನವರು ನುಡಿಸುತ್ತಿದ್ದಂತಹ ಪಿಟೀಲಿಗೇ ಹೆಚ್ಚು ಬೆಲೆ. ಈ ಪಿಟೀಲುಗಳನ್ನು ನಿರ್ಮಿಸಲು ನುರಿತ ಕೆಲಸಗಾರರಿಂದ ಅತಿ ಸೂಕ್ಷ್ಮವಾದ ಹಾಗೂ ನಾಜೂಕಿನಿಂದ ಮಾತ್ರ ಮಾಡಲು ಸಾಧ್ಯ. ಅಂತೆಯೇ ಪ್ರತಿ ಪಿಟೀಲಿನ ಬೆಲೆಯೂ ಏರುತ್ತಲೇ ಹೋಗುತ್ತದೆ. ಪಿಟೀಲಿನ ವಿಶೇಷತೆ ಏನೆಂದರೆ ನಾವು ಕೇಳಬಲ್ಲ ಧ್ವನಿಯಲೆಗಳು (spectrum) ಬೇರೆ ಯಾವುದೇ ಉಪಕರಣಕ್ಕಿಂತ ಹೆಚ್ಚು ಸಮರ್ಪಕವಾಗಿ ಮೂಡುತ್ತವೆ. ಅಂದರೆ ಅತಿ ಮಂದ್ರ ದಿಂದ (low frequency) ಹಿಡಿದು ಅತಿ ತಾರಕ (high frequency) ಅಲೆಗಳವರೆಗು ಪಿಟೀಲು ಧ್ವನಿ ಮೂಡಿಸಬಲ್ಲುದು. ಈ ಕಾರಣದಿಂದಾಗಿಯೇ ವಿಶ್ವ ವಿಖ್ಯಾತ ಪಿಟೀಲು ವಾದಕ ಗುಸೆಪ್ಪಿ ಗ್ವಾರ್ನಿರಿಯವರು ನುಡಿಸುತ್ತಿದ್ದ ಪಿಟೀಲು ನಾಲ್ಕು ಮಿಲಿಯನ್ ಡಾಲರುಗಳಿಗೆ ಹರಾಜಾಗಿದೆ. ಭಾರತದ ಅತ್ಯಂತ ಪ್ರಸಿದ್ಧ 12 ಸಂಗೀತ ಕಲಾವಿದರು
ಪಿಯಾನೋ
ಶ್ರೀಮಂತರ ಮನೆಯ ಅಂದವನ್ನು ಹೆಚ್ಚಿಸುವ ಅರ್ಧವೃತ್ತಾಕಾರದ ಮೇಜಿನಂತಿರುವ ಪಿಯಾನೋ ಇನ್ನೊಂದು ಅತಿ ದುಬಾರಿ ಸಂಗೀತ ಉಪಕರಣ. ಇದರಲ್ಲಿ ಸಂಗೀತಕ್ಕೆ ಅಗತ್ಯವಿರುವ ತಂತಿ ಹಾಗೂ ಇತರ ವಸ್ತುಗಳಿಗಿಂತಲೂ ಬಳಸಲಾಗಿರುವ ಮರಕ್ಕೇ ಹೆಚು ಬೆಲೆ. ನೆದರ್ಲ್ಯಾಂಡ್ ನ ದ ಕ್ರಿಸ್ಟಲ್ ಮ್ಯೂಸಿಕ್ ಪಿಯಾನೋ ಎಂಬ ಸಂಸ್ಥೆ 1996 ರಿಂದ ಮಾರುಕಟ್ಟೆಗೆ ತಂದಿರುವ ಸಂಪೂರ್ಣ ಪಾರದರ್ಶಕ ಪಿಯಾನೋ ಇಂದು ಅತಿ ಹೆಚ್ಚು ಬೆಲೆಬಾಳುವ ಉಪಕರಣವಾಗಿದೆ. ಇನ್ನೋರ್‍ವ ಖ್ಯಾತ ಸಂಗೀತಗಾರ ಜಾನ್ ಲೆನನ್ ರವರು ಉಪಯೋಗಿಸುತ್ತಿದ್ದ ಪಿಯಾನೋ 2.8 ಮಿಲಿಯನ್ ಡಾಲರುಗಳಿಗೆ ಹರಾಜಾಗಿದೆ.
ಡ್ರಂ ಸೆಟ್
ಘಟ ಅಂದರೆ ಮಡಕೆ ಒಂದು ಅಗ್ಗವಾದ ತಾಳವಾದ್ಯವಾಗಿದೆ. ಆದರೆ ಸುಮಧುರ ತಾಳಕ್ಕೆ ಡ್ರಂ ಸೆಟ್ ಇದ್ದರೆ ಇನ್ನೂ ಚೆನ್ನ. ಶಾಸ್ತ್ರೀಯ ಸಂಗೀತಕ್ಕೆ ತಬಲಾ, ಮೃದಂಗ ಮೊದಲಾದ ಪಕ್ಕವಾದ್ಯಗಳು ಶೋಭೆ ನೀಡಿದರೆ, ಪಾಶ್ಚಾತ್ಯ ಮತ್ತು ಜನಪ್ರಿಯ ಚಿತ್ರಗೀತೆಗಳಿಗೆ ಡ್ರಂ ಸೆಟ್ ಸೂಕ್ತ. ಆದರೆ ದುಬಾರಿ ಡ್ರಂ ಸೆಟ್ ವಿಚಾರ ಬಂದಾಗ ಭಾರತದಲ್ಲಿ ಸುಮಾರು ಇಪ್ಪತ್ತೈದರಿಂದ ಐವತ್ತು ಸಾವಿರ ರೂಪಾಯಿಗಳವರೆಗೆ ಉತ್ತಮ ಡ್ರಂ ಸೆಟ್ ದೊರಕುತ್ತದೆ. ಆದರೆ ಅಮೇರಿಕಾದ ಸ್ಪಾವುನ್ (SPAUN) ಸಂಸ್ಥೆಯ ಡ್ರಂ ಸೆಟ್ ಬೆಲೆ ಬರೋಬ್ಬರಿ ಐವತ್ತು ಸಾವಿರ ಡಾಲರು! ಅಂದರೆ ಸುಮಾರು ಮೂವತ್ತು ಲಕ್ಷ ರೂಪಾಯಿಗಳು!. ಏನು, ಇದನ್ನೇನು ಚಿನ್ನದಿಂದ ಮಾಡಿದ್ದೇ ಎಂದು ಕೇಳಿದರೆ ಅವರು ಹೇಳುವ ಉತ್ತರ- ಹೌದು, ಚಿನ್ನದಿಂದಲೇ ತಯಾರಿಸಲಾಗಿದೆ. ತನ್ನ ಸಮಯದ ಶ್ರೇಷ್ಠ ಡ್ರಮರ್ ಆಗಿದ್ದ ಕೀಥ್ ಮೂನ್ಸ್ ತಾನು ಉಪಯೋಗಿಸುತ್ತಿದ್ದ ಬೆಳ್ಳಿಯ ಡ್ರಮ್ ಗಳ ಅರ್ಧದಷ್ಟನ್ನು ಹರಾಜು ಹಾಕಿದಾದ ಅವರಿಗೆ ದೊರೆತ ಮೊತ್ತ 252,487 ಡಾಲರುಗಳು ಅಂದರೆ ಸುಮಾರು ಒಂದು ಕೋಟಿ, ಐವತ್ತೈದು ಲಕ್ಷ ರೂಪಾಯಿಗಳು!
ಅಕಾಸ್ಟಿಕ್ ಗಿಟಾರ್
ಪಾಶ್ಚಾತ್ಯ ಸಂಗೀತ ಪ್ರಾರಂಭವಾಗಿಂದಿನಿಂದಲೂ ಬಳಕೆಯಲ್ಲಿರುವ ಉಪಕರಣ ಗಿಟಾರ್. ಹಿಂದೆ ವಿದ್ಯುತ್ ಇಲ್ಲದ ಕಾಲದಲ್ಲಿ ಗಿಟಾರಿನ ದೊಡ್ಡ ಹೊಟ್ಟೆಯೇ ಧ್ವನಿಯನ್ನು ದೊಡ್ಡದಾಗಿಸುತ್ತಿತ್ತು. ವಿದ್ಯುತ್ ಉಪಕರಣಗಳ ಈ ಯುಗದಲ್ಲಿಯೂ ಅಕಾಸ್ಟಿಕ್ ಗಿಟಾರ್ ಇಂದೂ ಬಳಕೆಯಲ್ಲಿದೆ. ಎಪ್ಪತ್ತರ ದಶಕರ ಖ್ಯಾತ ಗಾಯಕ ಎರಿಕ್ ಕ್ಲಾಪ್ಟನ್ ರವರು ತಮ್ಮ ಗಿಟಾರುಗಳನ್ನು ಇನ್ನೋರ್ವ ಗಿಟಾರ್ ವಾದಕ ಫೆಂಡರ್ ಸ್ಟ್ರಾಟೋಕ್ಯಾಸ್ಟರ್ ರ ಉಪಕರಣಗಳೊಂದಿಗೆ ಹರಾಜು ಹಾಕಿದಾಗ ಅವರಿಗೆ ಲಭ್ಯವಾದ ಮೊತ್ತ ಸುಮಾರು ಒಂದು ಮಿಲಿಯನ್ ಡಾಲರುಗಳು. ಫೆಂಡರ್ ಸ್ಟ್ರಾಟೋಕ್ಯಾಸ್ಟರ್ ರವರ ಗಿಟಾರುಗಳಿಗೆ ಒಟ್ಟಾರೆ ಸಿಕ್ಕಿದ ಮೊತ್ತ ಸುಮಾರು 3.7 ಮಿಲಿಯನ್ ಡಾಲರುಗಳು!
ತುತ್ತೂರಿ (Trumpets)
ಬಣ್ಣದ ತಗಡಿನ ತುತ್ತೂರಿ ಈಗ ಪದ್ಯದಲ್ಲಿ ಮಾತ್ರ ಕಾಣಸಿಗುವುದು. ಏಕೆಂದರೆ ಉತ್ತಮ ಗುಣಮಟ್ಟದ ತುತ್ತೂರಿ ಕೊಳ್ಳಬೇಕೆಂದರೆ ಭಾರೀ ಹಣ ತೆರಬೇಕು. ಅತಿ ಸೂಕ್ಷ್ಮ ಜೋಡಣೆಗಳುಳ್ಳ ಈ ವಾದಕವನ್ನು ಕೆಲವೇ ಸಂಸ್ಥೆಗಳು ನಿರ್ಮಿಸುತ್ತಿವೆ. ಮಾನೆಟ್, ಟೇಲರ್, ಹೋಲ್ಟನ್ ಅಂಡ್ ಕಿಂಗ್ ಮೊದಲಾದ ಸಂಸ್ಥೆಗಳ ತುತ್ತೂರಿಗಳು ಸುಮಾರು ಎರಡು ಲಕ್ಷ ರೂಪಾಯಿಗಳವರೆಗೆ ಬೆಲೆಬಾಳುತ್ತವೆ. ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಬೆಲೆ ಪಡೆದ ತುತ್ತೂರಿ ಎಂದರೆ ಗಿಲ್ಲೆಸ್ಪೀಯವರು ಉಪಯೋಗಿಸಿದ ತುತ್ತೂರಿ, ಇದು 5500 ಡಾಲರ್ ಅಂದರೆ ಸುಮಾರು ಮೂರೂವರೆ ಲಕ್ಷ ರೂಪಾಯಿಗಳಿಗೆ ಹರಾಜಾಗಿದೆ. ಸಂಗೀತವನ್ನೇ ತಮ್ಮ ಜೀವನದ ಗುರಿಯನ್ನಾಗಿಸಿದವರ ಕನಸಿನ ಈ ಉಪಕರಣಗಳು ಅಪೂರ್ವ ಹಾಗೂ ದುಬಾರಿಯವೂ ಆಗಿವೆ.



Click it and Unblock the Notifications











