Latest Updates
-
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ? -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ -
ದೆಹಲಿ ಬಿಸಿಲು: ಸುಡುವ ತಾಪಮಾನದಲ್ಲೂ ಸ್ಟೈಲಿಶ್ ಆಗಿ ಕಾಣಲು ವೈರಲ್ ಆಗ್ತಿವೆ ಈ ಸಿಂಪಲ್ ಹ್ಯಾಕ್ಸ್!
ಅಯ್ಯೋ ರಾಮ, ನಾಯಿ ಮರಿ ಕೊನೆಗೆ ತೋಳವಾಗಿ ಬಿಟ್ಟಿತು!
ನಾಯಿ ಮನುಷ್ಯನ ಆಪ್ತಮಿತ್ರನಾಗಿದ್ದು ಸಾವಿರಾರು ವರ್ಷಗಳಿಂದ ಒಡನಾಡಿಯಾಗಿದೆ. ಇಂದಿನ ದಿನಗಳಲ್ಲಂತೂ ಸಾಕು ನಾಯಿಯನ್ನು ಕೆಲವರು ಮನೆಯ ಸದಸ್ಯನೆಂದೇ ಪರಿಗಣಿಸುತ್ತಾರೆ. ಎಷ್ಟೋ ದೇಶಗಳಲ್ಲಿ ನಾಯಿಗಳನ್ನು ದತ್ತು ತೆಗೆದುಕೊಳ್ಳುವ, ಅಂದರೆ ಕಾನೂನುಬದ್ಧನಾದ ಪಾಲಕನಾಗುವ ಅವಕಾಶವೂ ಇದೆ. ನಾಯಿಯ ದೇಹದಲ್ಲಿ ಮೈಕ್ರೋ ಚಿಪ್ ಅಳವಡಿಸಿ ನಾಯಿಯ ಚಲನವಲನಗಳನ್ನು ಗಮನಿಸುವ ಅವಕಾಶವೂ ಇದೆ.

Image source
ಅರಿಜೋನಾದ ನಿವಾಸಿಯೊಬ್ಬರು ಸಾಕಲೆಂದು ಚಿಕ್ಕ ನಾಯಿಮರಿಯನ್ನು ತಂದು ಮನೆಯಲ್ಲಿಟ್ಟು ಮನೆಯ ಸದಸ್ಯನಂತೆಯೇ ನೋಡಿಕೊಳ್ಳುತ್ತಿದ್ದರು. ಬೆಳೆಯುತ್ತಾ ಬಂದ ಹಾಗೆ ಈ ಮರಿ ನಾಯಿಯಾಗುವ ಬದಲು ತೋಳನಾಗುವುದೇ? ಈ ನಾಯಿಮರಿ ಎಲ್ಲಿಂದ ತಂದರು ಎಂಬಲ್ಲಿಂದ ಈ ಕಥೆಯ ನಿಜವಾದ ಕುತೂಹಲಕರ ಘಟನೆ ಪ್ರಾರಂಭವಾಗುತ್ತದೆ.. ಮುಂದೆ ಓದಿ
ಈ ವ್ಯಕ್ತಿ ಯಾವುದೋ ಕೆಲಸಕ್ಕೆ ಹೊರಗೆ ಹೋಗಿದ್ದವರಿಗೆ ಒಂದು ಮನೆಯ ಮುಂದೆ 'ನಾಯಿಮರಿಗಳಿವೆ, ಉಚಿತ' ಎಂಬ ಫಲಕ ಕಂಡಿತ್ತು. ಉಚಿತ ಎಂಬ ಪದಕ್ಕೆ ನಾವು ಭಾರತೀಯರು ಮಾತ್ರವಲ್ಲ, ಅಮೇರಿಕನ್ನರೂ ಮುಗಿಬೀಳುತ್ತಾರೆ.
ಪುಕ್ಕಟೆ ಸಿಗುವುದಾದರೆ ಇರಲಿ ಎಂದು ಯೋಚಿಸಿ ಮನೆಯೊಳಗೆ ನುಗ್ಗಿದ ಈ ವ್ಯಕ್ತಿ ಎರಡನೆಯ ಯೋಚನೆಯನ್ನೇ ಮಾಡದೇ ಸುಂದರವಾಗಿದ್ದ ನಾಯಿಮರಿಯೊಂದನ್ನು ಹೊತ್ತು ಮನೆಗೆ ತಂದರು ಹಾಗೂ ಕಾನೂನುಬದ್ಧವಾಗಿ ಮನೆಯ ಸದಸ್ಯನನ್ನಾಗಿಸಿದರು.
ಮನೆಗೆ ಬಂದ ಸದಸ್ಯನಿಗೆ "ನಿಯೋ" ಎಂದು ನಾಮಕರಣವನ್ನೂ ಮಾಡಲಾಯ್ತು. ತನ್ನ ಮಾಲಿಕನ ಹೊರತಾಗಿ ಇತರ ಸದಸ್ಯರಿಗೆ ಗುರಾಯಿಸುತ್ತಿದ್ದ ಈ ನಾಯಿಮರಿಗೆ ಮಲವಿಸರ್ಜನೆಯ ಪಾಠ ಹೇಳಿ ಕೊಡುವುದೂ ಬಹಳವೇ ಕಷ್ಟವಾಗಿತ್ತು. ಅಚ್ಚರಿಯ ಸತ್ಯಘಟನೆ: ಮಗುವನ್ನು ಕಾಪಾಡಿದ ಬೀದಿನಾಯಿಗಳು!
ಬೆಳೆಯುತ್ತಾ ಬಂದಂತೆ ಈ ಮರಿಗೆ ಮನುಷ್ಯರ ಒಡನಾಟವೇ ಬೇಡವಾಯ್ತು. ತನ್ನ ಮಾಲಿಕರೊಂದಿಗೂ ಒಡನಾಟ ಕಡಿಮೆ ಮಾಡಿತು. ನೆರೆಹೊರೆಯವರು ಬಂದರಂತೂ ಮುಖ ಅಡಗಿಸಿ ಒಳಗೆ ಮುದುರು ಕುಳಿತುಕೊಳ್ಳುತ್ತಿತ್ತು.
ಆದರೆ ಅಕ್ಕಪಕ್ಕದ ನಾಯಿಗಳೊಂದಿಗೆ ಮಾತ್ರ ಇದು ಸುಲಲಿತವಾಗಿ ಬೆರೆಯುತ್ತಿತ್ತು. ಇದಕ್ಕಾಗಿ ಬೇಲಿಯಡಿಯಲ್ಲಿ ಕಾಲುಗಳಿಂದಲೇ ಸುರಂಗವೊಂದನ್ನು ಕೊರೆದಿತ್ತು. ಇದನ್ನು ಬಂದ್ ಮಾಡಿದ ಬಳಿಕ ಬೇಲಿಯನ್ನು ಹಾರಿಯೇ ತನ್ನ ನಾಯಿಸ್ನೇಹಿತರೊಂದಿಗೆ ಆಡಲು ಹೋಗುತ್ತಿತ್ತು.
ಹೊರಗೆ ಆಟವಾಡಲು ಹೋದ ನಿಯೋ ಮನುಷ್ಯರನ್ನು ಕಂಡರೆ ಗುರಾಯಿಸುತ್ತಿತ್ತು. ಬೆಳೆಯುತ್ತಾ ಹೋದಂತೆ ಇದರ ಕೂದಲು ನೀಳವಾಗಿ, ಕೋರೆಹಲ್ಲು ಇನ್ನಷ್ಟು ಉದ್ದವಾಗಿ ಕಣ್ಣುಗಳು ತೀಕ್ಷ್ಣವಾಗುತ್ತಾ ಹೋದಂತೆ ಇದನ್ನು ಕಂಡವರಿಗೆ ಇದು ನಿಜವಾಗಿಯೂ ನಾಯಿಯೋ ತೋಳವೋ ಎಂಬ ಅನುಮಾನ ಮೂಡಲು ಪ್ರಾರಂಭವಾಯಿತು.
ತನ್ನ ಮನೆಯ ಬೇಲಿಗೆ ಕನ್ನ ಕೊರೆದಂತೆಯೇ ಇತರರ ಮನೆಯ ಬೇಲಿಯಡಿಯಿಂದ ನುಗ್ಗಿ ಏನನ್ನೋ ಹುಡುಕಾಡುವುದನ್ನು ಗಮನಿಸಿದ ನೆರೆಹೊರೆಯವರು ಮೊದಮೊದಲು ನಿಯೋ ಮಾಲಿಕರಿಗೆ ದೂರು ಮುಟ್ಟಿಸಿದ್ದರು.
ಇದಕ್ಕೆ ಬುದ್ದಿ ಕಲಿಸಲು ಒಂದೆರಡು ಗುದ್ದು ಹಾಕಿದ್ದರೂ ಪ್ರಯೋಜನವಾಗಿರಲಿಲ್ಲ. ದಿನೇ ದಿನೇ ಉಪಟಳ ಜಾಸ್ತಿಯಾಗುತ್ತಾ ಹೋದಂತೆ ಅಕ್ಕಪಕ್ಕದವರು ಪ್ರಾಣಿದಯಾಸಂಸ್ಥೆಯಾದ "Human Society of Southern Arizona" ಎಂಬ ಕಚೇರಿಯ ಅಧಿಕಾರಿಗಳಿಗೆ ದೂರು ನೀಡಿದರು.
ಈ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕಾ ನಿರ್ದೇಶಕರು ದೂರನ್ನು ಪರಿಶೀಲಿಸಲು ಸ್ವತಃ ನಿಯೋನ ಮಾಲಿಕರ ಮನೆಗೆ ಆಗಮಿಸಿದರು. ನಿಯೋನನ್ನು ಕಂಡ ಈ ತಜ್ಞರ ಕಣ್ಣುಗಳಿಗೆ ಇದು ನಾಯಿಯಲ್ಲ, ತೋಳ ಎಂಬುದನ್ನು ಕಂಡುಕೊಳ್ಳಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಇದರೊಂದಿಗೇ ಮನುಷ್ಯನಿಗೆ ಸ್ನೇಹಿತನಾಗಬೇಕಾಗಿದ್ದ ನಿಯೋ ಉಪಟಳ ನೀಡುವ ಪ್ರವೃತ್ತಿಯನ್ನು ಕಂಡುಕೊಂಡ ಬಳಿಕವಂತೂ ಅವರಿಗೆ ಯಾವುದೇ ಅನುಮಾನ ಉಳಿಯಲಿಲ್ಲ. ಶ್...ಎಚ್ಚರಿಕೆ! ಬಹಳ ಖತರ್ನಾಕ್ ಪ್ರಾಣಿಗಳಿವು....
ಅರಿಜೋನಾ ಪ್ರಾಂತದ ಕಾನೂನಿನ ಪ್ರಕಾರ ಅಲ್ಲಿನ ನಿವಾಸಿಗಳು ತೋಳಗಳನ್ನಾಗಲೀ, ಇತರ ವನ್ಯಜೀವಿಗಳನ್ನಾಗಲೀ ಸಾಕು ಪ್ರಾಣಿಯಂತೆ ಸಾಕಲು ಸಾಧ್ಯವಿಲ್ಲ. ಅಲ್ಲಿನ ಸ್ಥಳೀಯ ಮೂಲನಿವಾಸಿಗಳಾಗಿದ್ದವರು ಬೇಟೆಗಾಗಿ ತೋಳಗಳನ್ನು ಸಾಕಲು ಅನುಮತಿ ಇದ್ದರೂ ಇದಕ್ಕಾಗಿ ವಿಶೇಷ ಪರವಾನಗಿಯನ್ನು ಪಡೆದುಕೊಳ್ಳಬೇಕಿತ್ತು. ಆದ್ದರಿಂದ ಅನಿವಾರ್ಯವಾಗಿ ನಿಯೋನನ್ನು ಕ್ಯಾಲಿಫೋರ್ನಿಯಾದ ತೋಳಧಾಮಕ್ಕೆ ಕರೆದೊಯ್ಯಲಾಯಿತು.
ತೋಳಧಾಮಕ್ಕೆ ಕರೆದೊಯ್ದಿದ್ದೇ ತಡ, ಅಲ್ಲಿನ ಇತರ ತೋಳಗಳನ್ನು ಕಂಡು ತನ್ನ ಪರಮಾಶ್ಚರ್ಯ ಆನಂದಗಳನ್ನು ವ್ಯಕ್ತಪಡಿಸಿದ ನಿಯೋ ಕೆಲವೇ ದಿನಗಳಲ್ಲಿ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ತನಗೆ ಅನ್ನ ಹಾಕಿದ ಮಾಲಿಕನನ್ನು ಮರೆತೇ ಬಿಟ್ಟಿದೆ. ಇತ್ತ ಅಮಾಯಕರಿಗೆ ನಾಯಿಮರಿ ಎಂದು ಅಕ್ರಮವಾಗಿ ತೋಳದ ಮರಿಯನ್ನು ಕೊಟ್ಟು ಮೋಸ ಮಾಡಿದ ವ್ಯಕ್ತಿಗಳ ವಿರುದ್ಧ ಮೊಕದ್ದಮೆಯನ್ನು ದಾಖಲಿಸಲಾಗಿದೆ.



Click it and Unblock the Notifications





