ನೂರಾರು ವರ್ಷಗಳಿಂದ ಬಂಧನದಲ್ಲಿರುವ ಆಲದ ಮರ!

By: manu
Subscribe to Boldsky

ವಿಶ್ವದಲ್ಲಿ ಹಲವಾರು ವಿಚಿತ್ರಗಳು ಹಾಗೂ ವಿಲಕ್ಷಣಗಳು ನಡೆಯುತ್ತಲೇ ಇರುತ್ತದೆ. ಕೆಲವೊಂದು ವಿಚಿತ್ರಗಳಿಗೆ ಕಾರಣಗಳು ಇದ್ದರೆ ಮತ್ತೆ ಕೆಲವು ವಿನಾ ಕಾರಣವಾಗಿರುತ್ತದೆ. ವಿಲಕ್ಷಣಗಳಿಗೆ ಯಾವುದೇ ಸ್ಪಷ್ಟ ಅರ್ಥವಿರುವುದಿಲ್ಲ. ಪಾಕಿಸ್ತಾನದಲ್ಲಿ ನೂರಾರು ವರ್ಷಗಳಿಂದ ಆಲದ ಮರವೊಂದನ್ನು ಕಟ್ಟಿ ಹಾಕಿರುವುದು ಇಂತಹ ವಿಲಕ್ಷಣಗಳಲ್ಲಿ ಒಂದಾಗಿದೆ. ವಿಸ್ಮಯ ಜಗತ್ತು: ಸಾವಿನ ನಂತರ ನಡೆಯುವುದೆಲ್ಲ ವಿಚಿತ್ರ!

ನೂರಾರು ವರ್ಷಗಳಿಂದ ಸರಪಳಿಯಿಂದ ಬಂಧಿಸಲ್ಪಟ್ಟಿರುವ ಆಲದ ಮರವನ್ನು ಬಂಧಮುಕ್ತಗೊಳಿಸಲು ಜನರು ಮುಂದೆ ಬರುವುದಿಲ್ಲ. ಆಲದ ಮರವನ್ನು ಕಟ್ಟಿಹಾಕಿರುವ ಕಾರಣ ತುಂಬಾ ಅವಿವೇಕಿತನದ್ದಾಗಿದೆ. ಆಲದ ಮರವನ್ನು ಕಟ್ಟಿ ಹಾಕಿರುವುದು ಯಾಕೆನ್ನುವ ಬಗ್ಗೆ ಲೇಖನದಲ್ಲಿ ತಿಳಿದುಕೊಳ್ಳಿ....   

ಇದು ನಡೆದಿರುವುದು ಎಲ್ಲಿ?

ಇದು ನಡೆದಿರುವುದು ಎಲ್ಲಿ?

ಪಾಕಿಸ್ತಾನದ ಲಂಡಿ ಕೊಟಲ್ ಎನ್ನುವ ಪ್ರದೇಶದ ಸೇನಾ ಕಂಟೋನ್ಮೆಟ್‌ನಲ್ಲಿ ನಡೆದಿದೆ. ಮರವು ಮುಂದೆ ಸಾಗದಂತೆ ಇದನ್ನು ಕಟ್ಟಿಹಾಕಲಾಗಿದೆಯಂತೆ. ಇದು ತುಂಬಾ ಗಂಭೀರವಾದ ವಿಷಯವಲ್ಲವೇ?

1898ರಿಂದ ಕಟ್ಟಿ ಹಾಕಲಾಗಿದೆ

1898ರಿಂದ ಕಟ್ಟಿ ಹಾಕಲಾಗಿದೆ

ದಶಕಕ್ಕೂ ಮೊದಲು ಬ್ರಿಟಿಷ್ ಅಧಿಕಾರಿ ಜೇಮ್ಸ್ ಸ್ಕ್ವಿಡ್ ಎನ್ನುವಾತ ಈ ಮರವನ್ನು ಕಟ್ಟಿ ಹಾಕಿದ್ದನಂತೆ.

ಹೀಗೆ ಮಾಡಲು ಕಾರಣವೇನು?

ಹೀಗೆ ಮಾಡಲು ಕಾರಣವೇನು?

ಕುಡಿತದ ನಶೆಯಲ್ಲಿದ್ದ ಈ ಅಧಿಕಾರಿಗೆ ಮರವು ತನ್ನತ್ತ ಬರುತ್ತಿರುವುದು ಕಾಣಿಸಿದೆ. ಇದನ್ನು ನೋಡಿ ಭಯಭೀತನಾದ ಆತ ಮರವನ್ನು ಕಟ್ಟಿಹಾಕಲು ನಿರ್ಧರಿಸಿದ.

ಶಿಕ್ಷೆಯ ರೂಪದಲ್ಲಿ....

ಶಿಕ್ಷೆಯ ರೂಪದಲ್ಲಿ....

ತಪ್ಪಿತಸ್ಥರನ್ನು ಶಿಕ್ಷಿಸಲು ನಿರ್ಧರಿಸಿದ್ದ ಆತ ಮರಕ್ಕೆ ಕೂಡ ಶಿಕ್ಷೆ ನೀಡಲು ಬಯಸಿದ. ಇದರಿಂದ ಮರವು ತನ್ನ ಜಾಗದಿಂದ ಅಲುಗಾಡದಂತೆ ಅದನ್ನು ಸರಪಳಿಯಿಂದ ಬಂಧಿಸುವಂತೆ ಆದೇಶ ನೀಡಿದ. ಮರವನ್ನು ಬಂಧಿಸುವಂತೆ ಬ್ರಿಟಿಷ್ ಅಧಿಕಾರಿಯು ಆದೇಶಿಸಿದ್ದ.

Image Source khaleejtimes.com

ತುಂಬಾ ಹಾಸ್ಯಾಸ್ಪದವೆಂದರೆ....

ತುಂಬಾ ಹಾಸ್ಯಾಸ್ಪದವೆಂದರೆ....

ಇಂದಿಗೂ ಕೂಡ ಮರಕ್ಕೆ ಸರಪಳಿಯನ್ನು ಹಾಕಿಡಲಾಗಿದೆ ಮತ್ತು ಅದರ ಕೊಂಬೆಯಲ್ಲಿ ನೇತು ಹಾಕಲ್ಪಟ್ಟಿರುವ ಬೋರ್ಡ್ ನಲ್ಲಿ ನಾನು ಬಂಧಿಸಲ್ಪಟ್ಟಿದ್ದೇನೆ ಎನ್ನುವ ಸಂದೇಶವಿದೆ.....

Image sourcekhaleejtimes.com

 
English summary

A Banyan Tree Is Under Arrest In Pakistan For 100 Years

There are so many strange things that happen in the world and there are a few which do not have any logic. Here is such a case where a banyan tree has been chained in Pakistan for years! Check out the reason for it being under arrest for over a century and there is hardly any reason for which people are not willing to let go of the chains.
Please Wait while comments are loading...
Subscribe Newsletter