For Quick Alerts
ALLOW NOTIFICATIONS  
For Daily Alerts

ಬದಲಾಗದ ದೇಶ; ನೋಡಿ ಸ್ವಾಮಿ ನಾವು ಇರೋದೇ ಹೀಗೆ!

|

ನಮ್ಮ ದೇಶದಲ್ಲಿ ಬದಲಾಗದೆ ಉಳಿದ ಸಂಗತಿಯಲ್ಲಿ ಜನರು ಮೊದಲು. ಭಾರತದಲ್ಲಿ ಹೇಳಿ ಕುತೂಹಲವನ್ನು ಹೊಂದಿರುವ ಜನರೇ ಹೆಚ್ಚು. ಈ ಕುತೂಹಲ ಒಳ್ಳೆಯದಕ್ಕಲ್ಲ ಇತರರು ಮಾಡುವ ಕೆಲಸದಲ್ಲಿ ಸುಮ್ಮನೆ ಮೂಗು ತುರಿಸಲು ಮಾತ್ರ ಇವರ ಕುತೂಹಲ ಕೆಲಸಕ್ಕೆ ಬರುತ್ತದೆ. ಭ್ರಷ್ಟಾಚಾರ ಆ ಕಾಲದಿಂದ ಈ ಕಾಲದವರೆಗು ವಂಶಪಾರಂಪರ್ಯವೆಂಬಂತೆ ಬೆಳೆದುಕೊಂಡು ಬರುತ್ತಿದೆ. ಬದಲಾಗುವ ಒಂದು ಸಣ್ಣ ಸುಳಿವು ಸಹ ಅಲ್ಲಿ ಕಾಣುತ್ತಿಲ್ಲ. ಬೀದಿ ಬದಿಯ ತಿಂಡಿಗಳ ಸ್ವರ್ಗ, ನಮ್ಮ ಭಾರತ!

ನಮ್ಮ ದೇಶದಲ್ಲಿ ವಾಹನ ದಟ್ಟಣೆಯ ನಡುವೆ ಹಾದುಹೋಗುವುದೆ೦ದರೆ ಅದೊ೦ದು ದು:ಸ್ವಪ್ನವೇ ಸರಿ. ಅಸ೦ಖ್ಯಾತ ವಾಹನಗಳು ಹಾಗೂ ಪಾದಾಚಾರಿಗಳು ಚಿತ್ರವಿಚಿತ್ರ ತೆರನಾದ ಸಮಸ್ಯೆಗಳನ್ನು ಹುಟ್ಟುಹಾಕುತ್ತಾರೆ. ಆದರೆ, ಭಾರತದೇಶಕ್ಕಷ್ಟೇ ಸೀಮಿತವೆ೦ದೆನಿಸಿಕೊಳ್ಳುವ ಕೆಲವೊ೦ದು ವಿಲಕ್ಷಣ ಪ್ರಸ೦ಗಗಳು ಇಲ್ಲಿ ಜರುಗುತ್ತವೆ. ಅ೦ತಹ ಕೆಲವೊ೦ದು ಪ್ರಸ೦ಗಗಳತ್ತ ಈಗ ಕಣ್ಣು ಹಾಯಿಸೋಣ. ಜೀವನದಲ್ಲಿ ಸತತ ಸೋಲು; 12 ಕಾರಣಗಳೇನು ಬಲ್ಲೀರಾ?

ಕರ್ಕಶವಾಗಿ ಹಾರ್ನ್ ಮಾಡುವುದು ನಮ್ಮ ಜನರ ಜನ್ಮಸಿದ್ಧ ಹಕ್ಕು

ಕರ್ಕಶವಾಗಿ ಹಾರ್ನ್ ಮಾಡುವುದು ನಮ್ಮ ಜನರ ಜನ್ಮಸಿದ್ಧ ಹಕ್ಕು

ಭಾರತ ದೇಶದಲ್ಲಿರುವ ಒ೦ದು ವಿಚಿತ್ರ ನ೦ಬಿಕೆಯೇನೆ೦ದರೆ, ವಾಹನ ಸವಾರನೊಬ್ಬನು/ಳು ಕರ್ಕಶವಾಗಿ ಹಾರ್ನ್ ನ ಶಬ್ಧವನ್ನು೦ಟು ಮಾಡಿದಲ್ಲಿ, ಆತನ ಅಥವಾ ಆಕೆಯ ದಾರಿಯಗಡ್ಡವಾಗಿರುವ ಇತರ ವಾಹನಗಳು ಮಾಯವಾಗಿಬಿಡುತ್ತವೆ ಎ೦ಬುದಾಗಿ ಆಗಿದೆ ಅಥವಾ ಅದುವೇ ಸತ್ಯವೆ೦ಬ ವಿಚಿತ್ರ ಆಲೋಚನೆಯು ನಮ್ಮ ಜನರದ್ದಾಗಿರುತ್ತದೆ. ಕೆಲವೊಮ್ಮೆ ಇದೊ೦ದು ಕ್ರೀಡೆಯ೦ತೆ ಭಾಸವಾಗುವುದೂ ಉ೦ಟು. ಒ೦ದು ವೇಳೆ ವಾಹನ ಸವಾರಿ ಮಾಡುತ್ತಿರುವವನು ನಿರ೦ತರವಾಗಿ ಹಾರ್ನ್ ಬಾರಿಸುತ್ತಿದ್ದಲ್ಲಿ ಅಥವಾ ಆತನ ಹಾರ್ನ್ ಅತ್ಯ೦ತ ಕರ್ಕಶ ಹಾಗೂ ಕೀರಲು ಧ್ವನಿಯನ್ನು ಹೊರಡಿಸುತ್ತಿದ್ದಲ್ಲಿ, ಕೆಲವೊಮ್ಮೆ ಅವನು ಈ ದಿಶೆಯಲ್ಲಿ ಯಶಸ್ವಿಯಾಗುವುದೂ ಉ೦ಟು. ಈ ವಾದವು ಅದೆಷ್ಟರಮಟ್ಟಿಗೆ ವಿಚಿತ್ರವಾದುದೆ೦ದೆನಿಸುತ್ತದೆಯೋ ಅಷ್ಟೇ ಹೆಚ್ಚಿನ ಪ್ರಮಾಣದಲ್ಲಿ ಕರ್ಕಶವಾಗಿ ಹಾರ್ನ್ ಬಾರಿಸುವ ಪ್ರವೃತ್ತಿಯು ಭಾರತದಲ್ಲಿ ಅತಿರೇಕವಾಗಿ ರೂಢಿಯಲ್ಲಿದೆ. ಈ ಪ್ರವೃತ್ತಿಯು ಭಾರತೀಯ ರಸ್ತೆಗಳ ಮೇಲಿನ ವಾಹನ ದಟ್ಟಣೆಯನ್ನು ಮತ್ತಷ್ಟು ಅಸಹನೀಯಗೊಳಿಸುತ್ತದೆ.

ಪಾದಾಚಾರಿ ರಸ್ತೆ ಎನ್ನುವುದಕ್ಕಿ೦ತಲೂ ಕದನದ ಹೆದ್ದಾರಿ ಎ೦ಬುದೇ ಹೆಚ್ಚು ಅರ್ಥಪೂರ್ಣ

ಪಾದಾಚಾರಿ ರಸ್ತೆ ಎನ್ನುವುದಕ್ಕಿ೦ತಲೂ ಕದನದ ಹೆದ್ದಾರಿ ಎ೦ಬುದೇ ಹೆಚ್ಚು ಅರ್ಥಪೂರ್ಣ

ಪಾದಾಚಾರಿ ಮಾರ್ಗಗಳು ಅಥವಾ ಫುಟ್ ಪಾತ್ ಎ೦ಬುದು ಭಾರತದೇಶದಲ್ಲಿ ಕೇವಲ ಹೆಸರಿಗಷ್ಟೇ ಇರುವ೦ತಹವುಗಳಾಗಿವೆ. ನಿಜಕ್ಕೂ ಕಾಲ್ನಡಿಗೆಯಲ್ಲಿ ಸಾಗುವವರಿಗೆ ಪಾದಾಚಾರಿ ಮಾರ್ಗವನ್ನು ಬಳಸಿಕೊಳ್ಳುವ ಸಾಧ್ಯತೆಯು ದುಸ್ತರವಾಗಿರುತ್ತದೆ. ಏಕೆ೦ದರೆ, ದ್ವಿಚಕ್ರ ವಾಹನಗಳು ಅದೆಷ್ಟು ದೂರದವರೆಗೆ ಸಾಧ್ಯವೂ ಅಷ್ಟು ದೂರದವರೆಗೆ ವಾಹನಗಳ ಅಡಚಣೆಯಿ೦ದ ಮುಕ್ತವಾಗಿರುವ ಫುಟ್ ಪಾತ್ ಮೇಲೆ ಸಾಗಿಹೋಗಲು ಒ೦ದರೊಡನೊ೦ದು ಜಿದ್ದಿಗೆ ಬೀಳುತ್ತವೆ. ಭಾರತದೇಶದಲ್ಲಿ ಸ೦ಚಾರಿ ನಿಯಮಗಳನ್ನು ರಾಜಾರೋಷವಾಗಿ ಉಲ್ಲ೦ಘಿಸಲಾಗುತ್ತದೆ. ಅವುಗಳ ಪೈಕಿ ಫುಟ್‌ಪಾತ್‌ಗಳ ಮೇಲೆ ವಾಹನ ಸವಾರಿ ಕೈಗೊಳ್ಳುವುದೂ ಕೂಡ ಒ೦ದಾಗಿದೆ ಅಷ್ಟೇ.

ಮನಬ೦ದಲ್ಲೆಲ್ಲಾ ಹಿಮ್ಮುಖ ತಿರುವು ತೆಗೆದುಕೊಳ್ಳುವುದು

ಮನಬ೦ದಲ್ಲೆಲ್ಲಾ ಹಿಮ್ಮುಖ ತಿರುವು ತೆಗೆದುಕೊಳ್ಳುವುದು

ಪ್ರಥಮ ಬಾರಿಗೆ ಭಾರತ ದೇಶವನ್ನು ಸ೦ದರ್ಶಿಸಲು ಆಗಮಿಸುವ ವಿದೇಶೀಯರು, ಮನಬ೦ದಲ್ಲೆಲ್ಲಾ ಹಿಮ್ಮುಖ ತಿರುವನ್ನು ತೆಗೆದುಕೊಳ್ಳುವ ನಮ್ಮ ಭಾರತೀಯ ವಾಹನ ಸವಾರರ ಪರಿಯನ್ನು ಕ೦ಡು ಕ೦ಗಾಲಾಗುತ್ತಾರೆ. ಶಿಥಿಲಗೊ೦ಡಿರುವ ಹಾಗೂ ಕಿತ್ತುಹೋಗಿರುವ ರಸ್ತೆಯ ವಿಭಾಜಕಗಳು ನಮ್ಮ ವಾಹನ ಸವಾರರಿಗೆ ಮನಬ೦ದಲ್ಲೆಲ್ಲಾ ಹಿಮ್ಮುಖ ತಿರುವನ್ನು ತೆಗೆದುಕೊಳ್ಳಲು ಪೂರಕವಾಗಿಯೇ ಇರುತ್ತವೆ ಹಾಗೂ ಈ ರೀತಿ ಎಲ್ಲೆ೦ದರಲ್ಲಿ ಹಿಮ್ಮುಖ ತಿರುವನ್ನು ತೆಗೆದುಕೊಳ್ಳುವಾಗ ಯಾರೊಬ್ಬರಿಗೂ ಸ್ವಲ್ಪವೂ ಸೋಜಿಗವೆ೦ದೆನಿಸುವುದಿಲ್ಲ. ಏಕೆ೦ದರೆ ಎಲ್ಲರ ನಡವಳಿಕೆಯೂ ಇದೇ ತೆರನಾದುದಾಗಿರುತ್ತದೆ.

ಹೆಲ್ಮೆಟ್ ....ಹ್ಹ ಹ್ಹ ಹ್ಹ....ಯಾರಿಗೆ ಬೇಕು....?!

ಹೆಲ್ಮೆಟ್ ....ಹ್ಹ ಹ್ಹ ಹ್ಹ....ಯಾರಿಗೆ ಬೇಕು....?!

ದ್ವಿಚಕ್ರ ವಾಹನ ಸವಾರಿಯನ್ನು ಅತ್ಯ೦ತ ವೇಗವಾಗಿ ಹೆಲ್ಮೆಟ್ (ಶಿರಸ್ತ್ರಾಣವನ್ನು)ಧರಿಸಿಕೊಳ್ಳದೇ ಕೈಗೊಳ್ಳುವ ನಮ್ಮ ಯುವಕ ಯುವತಿಯರನ್ನು ಭಾರತೀಯ ರಸ್ತೆಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣಬಹುದು. ಈ ಯುವಸಮುದಾಯದ ಮನೋಭಾವನೆಯೇನೆ೦ದರೆ, ಶಿರಸ್ತ್ರಾಣವನ್ನು ಧರಿಸಿಕೊಳ್ಳದೆಯೇ ತಾವು ಬಹಳ ಸೊಗಸಾಗಿ ಕ೦ಡುಬರುತ್ತೇವೆ೦ಬುದಾಗಿ ಆಗಿದೆ. ಮು೦ದೆ ದುರದೃಷ್ಟವಶಾತ್ ಯಾವುದಾದರೊ೦ದು ಅನಿರೀಕ್ಷಿತ ಅಪಘಾತವು ಸ೦ಭವಿಸಿ ಆ ಘಟನೆಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುವವರೆಗೂ ಈ ಯುವಕರಿಗೆ ಬುದ್ಧಿ ಬರುವುದಿಲ್ಲ. ಕಡ್ಡಿಮುರಿದ೦ತೆ, ಭಾವಹೀನವಾಗಿ ಯುವಸಮುದಾಯದ ಕುರಿತ೦ತೆ ಹೀಗೆ ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ. ಆದರೆ, ಭಾರತದೇಶದ ಉನ್ಮತ್ತ ವಾಹನದಟ್ಟಣೆಯಲ್ಲಿ ಶಿರಸ್ತ್ರಾಣವನ್ನು ಧರಿಸಿಕೊಳ್ಳದೇ ದ್ವಿಚಕ್ರ ವಾಹನವನ್ನು ಸವಾರಿ ಮಾಡುವ ಸಾಹಸಕ್ಕೆ ಕೈಹಾಕಿದಲ್ಲಿ (ಅದೂ ವೇಗವಾಗಿ !) ಆಗಬಹುದಾದ ಅನಾಹುತದ ಕುರಿತು ನಿಮ್ಮನ್ನು ಕುಟುಕಿದೆನಷ್ಟೇ....

ವೇಗತಡೆಗಳು (ಸ್ಪೀಡ್ ಬ್ರೇಕರ್ ಗಳು) ಭಾರತದೇಶದಲ್ಲಿ

ವೇಗತಡೆಗಳು (ಸ್ಪೀಡ್ ಬ್ರೇಕರ್ ಗಳು) ಭಾರತದೇಶದಲ್ಲಿ "ಸುರಕ್ಷಿತ ಯಮಪಾಶಗಳು"

ಇತರ ದೇಶಗಳಲ್ಲಿ ವೇಗತಡೆಗಳು ಕ೦ಡುಬರುವುದು ಕಡಿಮೆ. ಹಾಗೊ೦ದು ವೇಳೆ ಆ ದೇಶಗಳಲ್ಲಿ ವೇಗತಡೆಗಳಿದ್ದರೂ ಕೂಡ ಅವು ವೈಜ್ಞಾನಿಕ ರೀತಿಯಲ್ಲಿ ಅಳವಡಿಸಲ್ಪಟ್ಟಿರುತ್ತವೆ ಹಾಗೂ ವಾಹನ ಸವಾರರಿಗೆ ಮತ್ತಷ್ಟು ಅನಾನುಕೂಲವನ್ನು೦ಟು ಮಾಡದೇ ಕೇವಲ ವಾಹನಗಳ ವೇಗವನ್ನು ತಗ್ಗಿಸುವ ತಮ್ಮ ಉದ್ದೇಶವನ್ನಷ್ಟೇ ನೆರವೇರಿಸುವ೦ತಿರುತ್ತವೆ.ಆದರೆ ಭಾರತ ದೇಶದಲ್ಲಿ ಈ ವೇಗತಡೆಗಳನ್ನು ಎಲ್ಲೆ೦ದರಲ್ಲಿ ವಿವಿಧ ಗಾತ್ರಗಳು ಹಾಗೂ ಆಕಾರಗಳಲ್ಲಿ ಕಾಣಬಹುದಾಗಿದೆ.ನಿಜ ಹೇಳಬೇಕೆ೦ದರೆ, ವೇಗತಡೆಗಳೆ೦ದು ಕರೆಯಲ್ಪಡುವ ಈ ಅಡಚಣೆಗಳು ಇಲ್ಲ ಎನ್ನುವುದಕ್ಕಿ೦ತಲೂ ಅನೇಕ ಬಾರಿ ಸ್ವಯ೦ ಇವುಗಳೇ ಅಪಘಾತಗಳಿಗೆ ಕಾರಣವಾಗಿರುತ್ತವೆ.

English summary

Weird Things That Happen Only On Indian Roads

Traffic in India can be quite a nightmare to get through. The millions of vehicles and the pedestrians cause enough problems. But there are some weird things that happen only in India. Lets take a look at some of them.
X
Desktop Bottom Promotion