ಈ ವಿಶ್ವವೇ ಒಂದು ಅಚ್ಚರಿಯ ಲೋಕ! ಒಪ್ಪುತ್ತೀರಿ ಅಲ್ಲವೇ..?

By Super

ಈ ವಿಶ್ವವೊಂದು ವಿಸ್ಮಯದ ಪೆಟ್ಟಿಗೆಯಾಗಿದೆ. ವಿವಿಧ ಪ್ರದೇಶಗಳಲ್ಲಿರುವ ವಿಚಿತ್ರ ಸಂಪ್ರದಾಯಗಳು ಮತ್ತು ವಾಸ್ತವಾಂಶಗಳನ್ನು ತಿಳಿದರೆ ಚಕಿತತೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಉದಾಹರಣೆಗೆ ಭಾರತದ ಕೆಲವು ಶವಸಂಸ್ಕಾರದ ಬಗ್ಗೆ ತಿಳಿದುಕೊಳ್ಳೋಣ.

ಕೆಲವು ಬುಡಕಟ್ಟುಗಳಲ್ಲಿ ಶವವನ್ನು ಕುಳ್ಳರಿಸಿ ತಮಟೆ ಬಾರಿಸುತ್ತಾ ಸ್ಮಶಾನಕ್ಕೆ ಕೊಂಡೊಯ್ದರೆ ಇನ್ನೊಂದೆಡೆ ಶವಕ್ಕೆ ಬೆಂಕಿ ತಗಲಿಸುವ ಮೊದಲು ಬೆತ್ತಗಳಿಂದ ರಪರಪನೇ ಬಾರಿಸಲಾಗುತ್ತದೆ. ಇದರಿಂದ ಭೂಮಿಯ ಪಾಪವೆಲ್ಲಾ ಕಳೆದು ಆತ್ಮ ಸ್ವರ್ಗ ಸೇರುತ್ತದಂತೆ. ಭೂತ- ಪ್ರೇತಗಳು ಬರೀ ಭ್ರಮೆಯಂತೆ! ನಂಬುತ್ತೀರಾ?

ಪಾರ್ಸಿ ಜನರು ಶವವನ್ನು ಒಂದು ಕೋಟೆಯಂತಿರುವ ಬಾವಿಯಲ್ಲಿ ದೂಡಿ ಬಿಡುತ್ತಾರೆ. ಅಲ್ಲಿ ಕಾದಿರುವ ರಣಹದ್ದುಗಳು ಶವವನ್ನು ತಿನ್ನುತ್ತವೆ. ಇಂತಹ ಹತ್ತು ಹಲವಾರು ಮಾಹಿತಿಗಳು ನಿಮ್ಮ ನಂಬಿಕೆಯನ್ನೇ ಅಲ್ಲಾಡಿಸಿ ಅಚ್ಚರಿಯ ಲೋಕಕ್ಕೆ ಕೊಂಡೊಯ್ಯುತ್ತವೆ. ಬನ್ನಿ ಇಂತಹ ಕೆಲವು ಅಚ್ಚರಿಯ ಮಾಹಿತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ, ಮುಂದೆ ಓದಿ.. ಎಂತಹ ಧೈರ್ಯವಂತನ ಎದೆ ನಡುಗಿಸುವ ಭಯಂಕರ ಸ್ಥಳಗಳು!

ಸೌದಿ ಅರೇಬಿಯಾ

ಸೌದಿ ಅರೇಬಿಯಾ

ಸೌದಿ ಅರೇಬಿಯಾದಲ್ಲಿ ಒಂದು ವೇಳೆ ಪತಿ ಆಕೆಗೆ ಬೆಳಗ್ಗಿನ ಖಹ್ವಾ (ಕಾಫಿ)ಯನ್ನು ನೀಡದೇ ಇದ್ದರೆ ಇದೇ ಕಾರಣದಿಂದ ಆಕೆ ನ್ಯಾಯಾಲಯದಲ್ಲಿ ವಿಚ್ಛೇದನ ಕೇಳಬಹುದು!

ಸೌದಿ ಅರೇಬಿಯಾ

ಸೌದಿ ಅರೇಬಿಯಾ

ಒಂಟೆಗಿಂತಲೂ ಸಾಮಾನ್ಯ ಇಲಿ ಹೆಚ್ಚು ದಿನ ನೀರಿಲ್ಲದೇ ಬದುಕಬಲ್ಲದು.

ಹೊಟ್ಟೆಯ ಒಳಭಾಗ

ಹೊಟ್ಟೆಯ ಒಳಭಾಗ

ನಮ್ಮ ಜಠರರಸ ಎಷ್ಟು ಪ್ರಬಲ ಎಂದರೆ ಇದು ಹೊಟ್ಟೆಯ ಒಳಭಾಗವನ್ನೇ ಸುಡಬಲ್ಲುದು. ಇದನ್ನು ತಡೆಯಲು ಒಂದು ದಪ್ಪನೆಯ ಲೋಳೆಯ ಪದರವನ್ನು ಹೊಟ್ಟೆಯ ಒಳಭಾಗದಲ್ಲಿ ಸೃಷ್ಟಿಸುತ್ತದೆ. ಇದು ಪ್ರತಿ ಎರಡು ವಾರಗಳಿಗೊಮ್ಮೆ ಹೊಸತಾಗಿ ಸೃಷ್ಟಿಸಿಕೊಳ್ಳುತ್ತಾ ಇರಬೇಕು.

ಇಂಗ್ಲಿಷ್ ಅಕ್ಷರ ಐ

ಇಂಗ್ಲಿಷ್ ಅಕ್ಷರ ಐ

ಇಂಗ್ಲಿಷ್ ಅಕ್ಷರ ಐ (i) ನ ಮೇಲಿರುವ ಚಿಕ್ಕ ಚುಕ್ಕೆಗೆ ಟಿಟ್ಲ್ (tittle) ಎಂದು ಕರೆಯುತ್ತಾರೆ

 ಒಣದ್ರಾಕ್ಷಿ

ಒಣದ್ರಾಕ್ಷಿ

ಒಂದು ಲೋಟದ ತುಂಬಾ ಶಾಂಪೇನ್ ತುಂಬಿದ್ದು ಮೇಲಿನಿಂದ ಒಂದು ಒಣದ್ರಾಕ್ಷಿಯನ್ನು ಎಸೆದರೆ ಅದು ಲೋಟದ ತಳಭಾಗದಿಂದ ಮೇಲ್ಭಾಗದವರೆಗೆ ಓಲಾಡುತ್ತಾ ಇರುತ್ತದೆ.

ಉಪ್ಪಿನ ರುಚಿ

ಉಪ್ಪಿನ ರುಚಿ

ಯಾವುದೇ ಆಹಾರವನ್ನು ನಾವು ಜೊಲ್ಲಿನ ಸಹಾಯವಿಲ್ಲದೆ ರುಚಿ ನೋಡಲು ಸಾಧ್ಯವಿಲ್ಲ. ಉದಾಹರಣೆಗೆ ನಾಲಿಗೆಯನ್ನು ಒಣಗಿಸಿ ಅದರ ಮೇಲೆ ಕೊಂಚ ಉಪ್ಪು ಹಾಕಿ ನೋಡಿ, ರುಚಿ ಗೊತ್ತಾಗುವುದೇ ಇಲ್ಲ. ಆದರೆ ಕೊಂಚ ಜೊಲ್ಲು ಸೇರಿದ ಕೂಡಲೇ ಉಪ್ಪಿನ ರುಚಿ ತಿಳಿಯುತ್ತದೆ. ಇದು ಎಲ್ಲಾ ರುಚಿಗಳಿಗೂ ಅನ್ವಯಿಸುತ್ತದೆ. ಅನುಮಾನವಿದ್ದರೆ ಪ್ರಯತ್ನಿಸಿ ನೋಡಿ.

ಜಿರಾಫೆ

ಜಿರಾಫೆ

ಜಿರಾಫೆ ತನ್ನ ಕಿವಿಗಳನ್ನು ತನ್ನ ಇಪ್ಪತ್ತೊಂದು ಇಂಚು ಉದ್ದದ ನಾಲಿಗೆಯಿಂದಲೇ ಸ್ವಚ್ಛಗೊಳಿಸಬಲ್ಲುದು.

Photos Courtesy : commons.wikimedia

ನಾಲಗೆ

ನಾಲಗೆ

ಪ್ರತಿ ವ್ಯಕ್ತಿಯ ಬೆರಳಚ್ಚುಗಳಂತೆಯೇ ನಾಲಗೆಯ ಮುದ್ರಣವೂ ವಿಶಿಷ್ಟವಾಗಿರುತ್ತದೆ

ಆಲ್ಬರ್ಟ್ ಐನ್ಸ್ಟೈನ್

ಆಲ್ಬರ್ಟ್ ಐನ್ಸ್ಟೈನ್

ಅತಿ ಪ್ರತಿಭಾವಂತ ಆಲ್ಬರ್ಟ್ ಐನ್ಸ್ಟೈನ್ ಒಂಬತ್ತು ವರ್ಷದವರಿದ್ದಾಗ ನಿರರ್ಗಳವಾಗಿ ಮಾತನಾಡಲು ತಡವರಿಸುತ್ತಿದ್ದರಂತೆ, ಇದು ಅವರ ಒಂದು ನ್ಯೂನ್ಯತೆ ಎಂದು ಅವರ ತಂದೆತಾಯಿಗಳು ಭಾವಿಸಿದ್ದರು.

ಮಕ್ಕಳು

ಮಕ್ಕಳು

ವಿಶ್ವದಲ್ಲಿ ಪ್ರತಿದಿನ ಸುಮಾರು ಹನ್ನೆರಡು ಮಕ್ಕಳನ್ನು ಬೇರೆಯೇ ತಂದೆತಾಯಿಗಳಿಗೆ ನೀಡಲಾಗುತ್ತದೆ..!

ಚಾಕಲೇಟು

ಚಾಕಲೇಟು

ಚಾಕಲೇಟು ನಿಮ್ಮ ನಾಯಿಯನ್ನು ಕೂಲ್ಲುತ್ತದೆ! ಕೆಲವು ಔನ್ಸ್ ನಷ್ಟು ಕಪ್ಪು ಚಾಕಲೇಟನ್ನು ನಾಯಿಗೆ ತಿನ್ನಿಸಿದರೆ ಅದರ ಹೃದಯ ಮತ್ತು ನರವ್ಯವಸ್ಥೆಯ ಮೇಲೆ ನೇರ ಪರಿಣಾಮವಾಗಿ ಸಾವು ಸಂಭವಿಸುತ್ತದೆ.

ಹಣಕಾಸಿನ ನೋಟು

ಹಣಕಾಸಿನ ನೋಟು

ನಮ್ಮ ಹಣಕಾಸಿನ ನೋಟುಗಳನ್ನು ತಯಾರಿಸಲು ಕಾಗದ ಬಳಸಲಾಗುವುದಿಲ್ಲ. ಬದಲಿಗೆ ಹತ್ತಿ ಬಳಸಲಾಗುತ್ತದೆ. 1950ಕ್ಕೂ ಮೊದಲು ನೋಟುಗಳನ್ನು ಮಾದಕ ಎಲೆಗಳಾದ ಮಾರಿಯುವಾನಾ (marijuana) ಗಿಡದ ಎಲೆಗಳಿಂದ ತಯಾರಿಸಲಾಗುತ್ತಿತ್ತು.

ಲಿಪ್ ಸ್ಟಿಕ್‌

ಲಿಪ್ ಸ್ಟಿಕ್‌

ಲಿಪ್ ಸ್ಟಿಕ್‌ಗಳಲ್ಲಿ ಮೀನಿನ ಹುರುಪೆಯ ಅಂಶವಿದೆ.

ಡೊನಾಲ್ಡ್ ಡಕ್

ಡೊನಾಲ್ಡ್ ಡಕ್

ಚಡ್ಡಿ ಧರಿಸಿಲ್ಲ ಎಂಬ ಕಾರಣಕ್ಕೆ ಕಾರ್ಟೂನ್ ಪಾತ್ರ ಡೊನಾಲ್ಡ್ ಡಕ್ ಬಾತುಕೋಳಿಯನ್ನು ಫಿನ್ಲೆಂಡ್ ನಲ್ಲಿ ಕೆಲವು ಕಾಲ ಪ್ರತಿಬಂಧಿಸಲಾಗಿತ್ತು.

ಟೊಮೇಟೊ ಸಾಸ್

ಟೊಮೇಟೊ ಸಾಸ್

1830ರವರೆಗೂ ಟೊಮೇಟೊ ಸಾಸ್ ಅನ್ನು ಒಂದು ಔಷಧದ ರೂಪದಲ್ಲಿ ಮಾರಲಾಗುತ್ತಿತ್ತು.

ಚದುರಂಗದ ಆಟ

ಚದುರಂಗದ ಆಟ

ಚದುರಂಗದ ಆಟದ ಪ್ರಥಮ ನಾಲ್ಕು ನಡೆಗಳು ಹೇಗಿರಬಹುದು ಎಂಬ ಸಂಭವವನ್ನು ಲೆಕ್ಕ ಹಾಕಿದರೆ ಬರೋಬ್ಬರಿ 318,979,564,000 ಎಂಬ ಲೆಕ್ಕ ಸಿಗುತ್ತದೆ.

ಅಪ್ಪರ್ ಮತ್ತು ಲೋವರ್ ಅಕ್ಷರಗಳು

ಅಪ್ಪರ್ ಮತ್ತು ಲೋವರ್ ಅಕ್ಷರಗಳು

ಇಂಗ್ಲೀಷ್‌ನ ದೊಡ್ಡ ಮತ್ತು ಚಿಕ್ಕ ಅಕ್ಷರಗಳಿಗೆ ಅಪ್ಪರ್ ಮತ್ತು ಲೋವರ್ ಅಕ್ಷರಗಳು ಎಂದು ಏಕೆ ಕರೆಯುತ್ತಿದ್ದರು ಗೊತ್ತೇ? ಹಿಂದೆ ಮುದ್ರಣ ಯಂತ್ರಗಳಲ್ಲಿ ಒಂದೊಂದು ಅಕ್ಷರಕ್ಕೂ ಒಂದೊಂದು ಸೀಸದ ಮೊಳೆಯಂತಹ ಅಚ್ಚು ಇರುತ್ತಿತ್ತು. ದೊಡ್ಡ ಅಕ್ಷರಗಳನ್ನು ಮೇಲಿನ (ಅಪ್ಪರ್) ಮತ್ತು ಚಿಕ್ಕ ಅಕ್ಷರಗಳನ್ನು ಕೆಳಗಿನ (ಲೋವರ್) ಹಜಾರದಲ್ಲಿಡಲಾಗುತ್ತಿತ್ತು, ಅಷ್ಟೇ.

ಮೊನಾಲಿಸಾ

ಮೊನಾಲಿಸಾ

ಪ್ರಖ್ಯಾತ ತೈಲವರ್ಣಚಿತ್ರ ಮೊನಾಲಿಸಾಳ ತುಟಿಯನ್ನು ಬಿಡಿಸಲು ಲಿಯೋನಾರ್ಡೋ ಡ ವಿನ್ಸಿ ಹತ್ತು ವರ್ಷ ತೆಗೆದುಕೊಂಡರಂತೆ...!

ಬ್ರೂಸ್ ಲೀ

ಬ್ರೂಸ್ ಲೀ

ಖ್ಯಾತ ಕರಾಟೆ ಪಟು ಬ್ರೂಸ್ ಲೀ ಎಷ್ಟು ವೇಗದಿಂದ ತಮ್ಮ ಪಟುಗಳನ್ನು ಚಲಾಯಿಸುತ್ತಿದ್ದರೆಂದರೆ ಅದನ್ನು ಗಮನಿಸಲು ಚಲನಚಿತ್ರದಲ್ಲಿ ಅವನ್ನು ನಿಧಾನಗತಿಯಲ್ಲಿ ಓಡಿಸಿ ತೋರಿಸಲಾಗುತ್ತಿತ್ತು.

ಈರುಳ್ಳಿ

ಈರುಳ್ಳಿ

ಈರುಳ್ಳಿ ಕೊಚ್ಚುವಾಗ ಕಣ್ಣೀರು ಬರುತ್ತದೆಯೇ? ಒಂದು ಬಬ್ಬಲ್ ಗಮ್ ಜಗಿಯುತ್ತಾ ಪ್ರಯತ್ನಿಸಿ!

ಗಿನ್ನಿಸ್ ದಾಖಲೆ

ಗಿನ್ನಿಸ್ ದಾಖಲೆ

ಸಾರ್ವಜನಿಕ ಗ್ರಂಥಾಲಯದಿಂದ ಅತಿ ಹೆಚ್ಚು ಕಳುವಾಗಿರುವ ಗ್ರಂಥವೆಂದರೆ ಗಿನ್ನಿಸ್ ದಾಖಲೆಯ ಪುಸ್ತಕ. ಇದೂ ಒಂದು ಗಿನ್ನಿಸ್ ದಾಖಲೆಯೇ ಹೌದು.

X
Desktop Bottom Promotion