ಇವರೇ ಸ್ವಾಮಿ, ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳು!

By Super

ಐಶ್ವರ್ಯ ಸಂಪಾದಿಸುವುದು ಎಲ್ಲರ ಕನಸಾದರೂ ಇದು ಕೆಲವು ವ್ಯಕ್ತಿಗಳ ಮಾತ್ರವೇ ಹೆಚ್ಚು ಸಂಗ್ರಹವಾಗುತ್ತದೆ. ವಿಶ್ವದ ಶ್ರೀಮಂರ ಮತ್ತು ಶ್ರೀಮಂತಿಕೆಯ ಮಾಹಿತಿಯನ್ನು ಕಲೆಹಾಕುವ ಆಕ್ಸ್ ಫಾಮ್ (Oxfam) ಸಂಸ್ಥೆಯ ಪ್ರಕಾರ ವಿಶ್ವದ ತೊಂಬತ್ತೊಂಬತ್ತು ಶೇಖಡಾ ಸಂಪತ್ತು ಕೇವಲ ಒಂದು ಶೇಖಡಾ ಜನರ ಬಳಿ ಇದೆ. ಭಾರತದ ಮಟ್ಟಿಗಂತೂ ಇದು ಶೇಖಡಾ 0.001 ಇರಬಹುದು.

ಆದರೆ ಈ ಸಂಪತ್ತು ಚಂಚಲ, ಇಂದು ಇವರ ಬಳಿ ಇದ್ದರೆ ನಾಳೆ ಇನ್ನೊಬ್ಬರ ಬಳಿ ಇರುತ್ತದೆ. ಅಂತೆಯೇ ಅತಿ ಹೆಚ್ಚು ಶ್ರೀಮಂತರ ಪಟ್ಟಿಯಲ್ಲಿಯೂ ಸ್ಥಾನಗಳು ಕ್ರಿಕೆಟ್ ಆಟಗಾರರ ವಾರದ ಟಾಪ್ ಟೆನ್‌ಗಳಂತೆ ಮೇಲೆ ಕೆಳಕ್ಕೆ ಬರುತ್ತಾ ಇರುತ್ತವೆ. ಈ ಹೊತ್ತಿನಲ್ಲಿ ಇವರ ಒಟ್ಟು ನೈಜ ಸಂಪತ್ತು (net value) ಎಷ್ಟಿದೆ ಎಂಬ ಮಾಹಿತಿಯನ್ನು ಪರಿಗಣಿಸಿ ವಿಶ್ವದ ಅತಿಹೆಚ್ಚು ಶ್ರೀಮಂತರ ಕ್ರಮಾಂಕವನ್ನು ನೀಡಲಾಗುತ್ತದೆ.

ಅಂತೆಯೇ ಭಾರತಕ್ಕೂ ಒಂದು ಪಟ್ಟಿ ಇದೆ. ಇದನ್ನು ಫೋರ್ಬ್ಸ್ ಸಂಸ್ಥೆ ಪ್ರಸ್ತುತಪಡಿಸುತ್ತದೆ. ವಾಸ್ತವವಾಗಿ ಇದು ಕೇವಲ ಬಿಳಿಹಣದ ಶ್ರೀಮಂತರನ್ನು ಮಾತ್ರ ಪರಿಗಣಿಸುತ್ತದೆ. ಕಪ್ಪುಹಣವನ್ನು ಪರಿಗಣಿಸಿದರೆ ಭಾರತದ ಹಲವಾರು ಹೆಸರುಗಳು ಈ ಪಟ್ಟಿಯಲ್ಲಿರುತ್ತಿದ್ದವೋ ಏನೋ....! ಈ ವರ್ಷ, 2015ರ ವಿಶ್ವದ ಅತಿ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಅದರಲ್ಲಿ ಹಲವು ಶ್ರೀಮಂತರು ಭಾರತೀಯರಾಗಿದ್ದಾರೆ. ಇಂದು ಅವರ ಭಾರತದ ಪಟ್ಟಿಯಲ್ಲಿ ಯಾವ ಸ್ಥಾನ ಮತ್ತು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಯಾವ ಸ್ಥಾನ ಪಡೆದಿದ್ದಾರೆ ಎಂಬ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:
(ಓದುವ ಕ್ರಮ- ಕ್ರಮಾಂಕ, ಹೆಸರು, ನೈಜ ಸಂಪತ್ತು, ಅಮೇರಿಕನ್ ಡಾಲರುಗಳಲ್ಲಿ
ಭಾರತದಲ್ಲಿ ಕ್ರಮಾಂಕದ ಸ್ಥಾನ, ವಿಶ್ವಮಟ್ಟದಲ್ಲಿ ಕ್ರಮಾಂಕದ ಸ್ಥಾನ)

ಮುಖೇಶ್ ಅಂಬಾನಿ –19.1 ಬಿಲಿಯನ್ ಡಾಲರುಗಳು

ಮುಖೇಶ್ ಅಂಬಾನಿ –19.1 ಬಿಲಿಯನ್ ಡಾಲರುಗಳು

ಭಾರತ: ಮೊದಲ ಸ್ಥಾನ ಮತ್ತು ವಿಶ್ವಮಟ್ಟದಲ್ಲಿ 39ನೇ ಸ್ಥಾನ

ವಿವರ: ಹಿಂದೊಮ್ಮೆ ನಲವತ್ತು ಬಿಲಿಯನ್ ಡಾಲರುಗಳೊಂದಿಗೆ ವಿಶ್ವದ ಮೂರನೆಯ ಕ್ರಮಾಂಕ ಪಡೆದಿದ್ದ ಮುಖೇಶ್ ಅಂಬಾನಿಯವರ ಸಂಪತ್ತು ಈಗ ಹತ್ತೊಂಬತ್ತು ಬಿಲಿಯನ್ ಡಾಲರುಗಳಿಗೆ ಇಳಿದು ಮೂವತ್ತೊಂಬತ್ತನೇ ಸ್ಥಾನ ಪಡೆದಿದ್ದರೂ ಭಾರತದ ಮಟ್ಟಿಗೆ ಮಾತ್ರ ಪ್ರಥಮ ಸ್ಥಾನದಲ್ಲಿಯೇ ಇದ್ದಾರೆ.

ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮುಖೇಶ್ ಅಂಬಾನಿ –19.1 ಬಿಲಿಯನ್ ಡಾಲರುಗಳು

ಮುಖೇಶ್ ಅಂಬಾನಿ –19.1 ಬಿಲಿಯನ್ ಡಾಲರುಗಳು

ಈ ಇಳಿಕೆಗೆ ರಿಲಯನ್ಸ್ ಷೇರು ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಂಡಿರುವುದು ಪ್ರಮುಖ ಕಾರಣವಾಗಿದೆ. ತಮ್ಮ ತಂದೆ ಹಾಗೂ ಖ್ಯಾತ ಉದ್ಯಮಿ ಧೀರೂಭಾಯಿ ಅಂಬಾನಿಯವರ ಉದ್ಯಮವನ್ನು ಉತ್ತುಂಗಕ್ಕೇರಿಸಿದ ಖ್ಯಾತಿ ಪಡೆದ ಮುಖೇಶ್ ಅಂಬಾನಿಯವರು ಭಾರತದ ಓರ್ವ ಗೌರವಾನ್ವಿತ ಉದ್ಯಮಿಯಾಗಿದ್ದಾರೆ.

ದಿಲೀಪ್ ಶಾಂಘ್ವಿ–18 ಬಿಲಿಯನ್ ಡಾಲರುಗಳು

ದಿಲೀಪ್ ಶಾಂಘ್ವಿ–18 ಬಿಲಿಯನ್ ಡಾಲರುಗಳು

ಭಾರತ: ಎರಡನೆಯ ಸ್ಥಾನ ಮತ್ತು ವಿಶ್ವಮಟ್ಟದಲ್ಲಿ 44ನೇ ಸ್ಥಾನ

ವಿವರ: ಸನ್ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಯ ಸ್ಥಾಪಕರಾದ ದಿಲೀಪ್ ಶಾಂಘ್ವಿಯವರೂ ಭಾರತದ ಇನ್ನೋರ್ವ ಗೌರವಾನ್ವಿತ ಉದ್ಯಮಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದಿಲೀಪ್ ಶಾಂಘ್ವಿ–18 ಬಿಲಿಯನ್ ಡಾಲರುಗಳು

ದಿಲೀಪ್ ಶಾಂಘ್ವಿ–18 ಬಿಲಿಯನ್ ಡಾಲರುಗಳು

ತಮ್ಮ ಸಂಸ್ಥೆಯನ್ನು ಭಾರತದ ಅತ್ಯುತ್ತಮ ಸ್ಥಾನದಲ್ಲಿರಿಸಲು ಅವರ ಶ್ರಮ ಬಹಳವಾಗಿದೆ. ಇವರ ಸಂಪತ್ತು ಸ್ವಂತ ಪರಿಶ್ರಮದಿಂದ ಸಂಪಾದಿಸಿದ್ದಾಗಿದ್ದು ಮುಖೇಶ್ ಅಂಬಾನಿಯವರಿಗಿಂತ ಕೊಂಚವೇ ಹಿಂದಿದ್ದು ಎರಡನೇ ಸ್ಥಾನದಲ್ಲಿದ್ದಾರೆ.

ಅಜೀಂ ಪ್ರೇಮ್ ಜೀ–15.9 ಬಿಲಿಯನ್ ಡಾಲರುಗಳು

ಅಜೀಂ ಪ್ರೇಮ್ ಜೀ–15.9 ಬಿಲಿಯನ್ ಡಾಲರುಗಳು

ಭಾರತ: ಮೂರನೆಯ ಸ್ಥಾನ ಮತ್ತು ವಿಶ್ವಮಟ್ಟದಲ್ಲಿ 48ನೇ ಸ್ಥಾನ

ವಿವರ: ವಿಪ್ರೋ ಟೆಕ್ನಾಲಜೀಸ್ ಸಂಸ್ಥೆಯ ಸ್ಥಾಪಕರಾದ ಅಜೀಂ ಪ್ರೇಂಜಿಯವರು ವಿಪ್ರೋ ಸಂಸ್ಥೆಯನ್ನು ಭಾರತದ ಅತ್ಯಂತ ದೊಡ್ಡ ಐಟಿ ಸಂಸ್ಥೆಯನ್ನಾಗಿ ರೂಪಿಸಲು ಅತಿ ಹೆಚ್ಚಿನ ಶ್ರಮ ಪಟ್ಟಿದ್ದಾರೆ. ವಾಸ್ತವವಾಗಿ ವಿಪ್ರೋ ಸಂಸ್ಥೆ ಅವರ ತಂದೆಯವರ ಆಧೀನದಲ್ಲಿದ್ದಾಗ ಅಡುಗೆ ಎಣ್ಣೆಯ ತಯಾರಿಕಾ ಸಂಸ್ಥೆಯಾಗಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಜೀಂ ಪ್ರೇಮ್ ಜೀ–15.9 ಬಿಲಿಯನ್ ಡಾಲರುಗಳು

ಅಜೀಂ ಪ್ರೇಮ್ ಜೀ–15.9 ಬಿಲಿಯನ್ ಡಾಲರುಗಳು

ಈ ಸಂಸ್ಥೆಯ ಒಡೆತನ ಅಜೀಂರವರ ಕೈಗೆ ಬಂದ ಹೊತ್ತಿನಲ್ಲಿ ಭಾರತದಲ್ಲಿ ಐಟಿ ಯುಗ ಪ್ರಾರಂಭವಾಗಿತ್ತು.ಇದನ್ನು ನಗದೀಕರಿಸಿಕೊಂಡ ಅಜೀಂರವರು ವಿಪ್ರೋ ಸಂಸ್ಥೆಯನ್ನು ಭಾರತದ ಅತಿ ದೊಡ್ಡ ಹೊರಗುತ್ತಿಗೆ ಸಂಸ್ಥೆಯನ್ನಾಗಿ ಪರಿವರ್ತಿಸಿದರು. ಇದರ ಪರಿಣಾಮವಾಗಿ ಇಂದು ಅವರು ಭಾರತದ ಮೂರನೆಯ ಅತಿ ಶ್ರೀಮಂತರಾಗಿದ್ದಾರೆ.

ಹಿಂದೂಜಾ ಸಹೋದರರು -14.8 ಬಿಲಿಯನ್ ಡಾಲರುಗಳು

ಹಿಂದೂಜಾ ಸಹೋದರರು -14.8 ಬಿಲಿಯನ್ ಡಾಲರುಗಳು

ಭಾರತ: ನಾಲ್ಕನೆಯ ಸ್ಥಾನ ಮತ್ತು ವಿಶ್ವಮಟ್ಟದಲ್ಲಿ 69ನೇ ಸ್ಥಾನ

ವಿವರ: ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿಗೆ ತೊಂಭತ್ತು ವರ್ಷದ ಯಶಸ್ಸಿನ ಇತಿಹಾಸವಿರುವ ಹಿಂದೂಜಾ ಸಹೋದರರು ಒಂದು ಮಾದರಿಯಾಗಿದ್ದಾರೆ. ಇವರ ಒಡೆತನದಲ್ಲಿ ಹಲವಾರು ಸಂಸ್ಥೆಗಳಿವೆ. ಅಶೋಕ್ ಲೈಲ್ಯಾಂಡ್, ಇಂಡಸ್ ಇಂಡ್ ಬ್ಯಾಂಕ್, ಗಲ್ಫ್ ಆಯಿಲ್ ಕಾರ್ಪೋರೇಶನ್ ಲಿ. ಹಿಂದೂಜಾ ಟೆಕ್ನಾಲಾಜೀಸ್ ಲಿ. ಮೊದಲಾದ ಸಂಸ್ಥೆಗಳು ಭಾರತ ಮತ್ತು ಇನ್ನೂ ಹಲವಾರು ದೇಶಗಳಲ್ಲಿ ಶಾಖೆಗಳನ್ನು ಹೊಂದಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಿಂದೂಜಾ ಸಹೋದರರು -14.8 ಬಿಲಿಯನ್ ಡಾಲರುಗಳು

ಹಿಂದೂಜಾ ಸಹೋದರರು -14.8 ಬಿಲಿಯನ್ ಡಾಲರುಗಳು

ವಾಣಿಜ್ಯ ಶಿಕ್ಷಣದಲ್ಲಿ ಹಿಂದೂಜಾ ಸಹೋದರರು ತಮ್ಮ ಸೂಟಿನ ಬಟ್ಟೆಯನ್ನು ಇಂಗ್ಲೆಂಡಿನಲ್ಲಿ ಖರೀದಿಸಿದರೂ ಅಲ್ಲಿ ಹೊಲಿಸುವುದು ದುಬಾರಿ ಎಂಬ ಕಾರಣ ನೀಡಿ ಮುಂಬೈಯ ಸಾಧಾರಣ ದರ್ಜಿಯ ಬಳಿ ಅಗ್ಗವಾಗಿ ಹೊಲಿಸುತ್ತಾರೆ ಎಂಬ ವಿಷಯವನ್ನು ಒಂದು ಉದಾಹರಣೆಯಾಗಿ ನೀಡಲಾಗುತ್ತದೆ. ಇವರ ಒಡೆತನದ ಯಾವುದೇ ವಿಭಾಗ ಇದುವರೆಗೆ ವಿಫಲವಾಗಿಲ್ಲದಿರುವುದು ಒಂದು ಹೆಗ್ಗಳಿಕೆಯಾಗಿದೆ.

ಪಲೋಂಜಿ ಮಿಸ್ತ್ರಿ- 14.7 ಬಿಲಿಯನ್ ಡಾಲರುಗಳು

ಪಲೋಂಜಿ ಮಿಸ್ತ್ರಿ- 14.7 ಬಿಲಿಯನ್ ಡಾಲರುಗಳು

ಭಾರತ: ಐದನೆಯ ಸ್ಥಾನ ಮತ್ತು ವಿಶ್ವಮಟ್ಟದಲ್ಲಿ 55ನೇ ಸ್ಥಾನ

ವಿವರ: ಭಾರತದ ಒಂದು ಖ್ಯಾತ ಕಟ್ಟಡ ನಿರ್ಮಾಣ ಸಂಸ್ಥೆಯಾದ ಷಪೂರ್ಜಿ ಪಲೋಂಜಿ ಗ್ರೂಪ್ ಈಗ ನೂರೈವತ್ತನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು ಪ್ರಸ್ತುತ ಸ್ಥಾಪಕರಾದ ಪಲೋಂಜಿ ಮಿಸ್ತ್ರಿಯರವ ಹಿರಿಯ ಪುತ್ರ ಷಪೂರ್ ಮಿಸ್ತ್ರಿಯವರ ಒಡೆತನದಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಈ ಸಂಸ್ಥೆ ಸ್ಟ್ಯಾಂಡರ್ಡ್ ಚಾರ್ಟರ್ಡ್ ಪ್ರೈವೇಟ್ ಈಕ್ವಿಟಿ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪಲೋಂಜಿ ಮಿಸ್ತ್ರಿ- 14.7 ಬಿಲಿಯನ್ ಡಾಲರುಗಳು

ಪಲೋಂಜಿ ಮಿಸ್ತ್ರಿ- 14.7 ಬಿಲಿಯನ್ ಡಾಲರುಗಳು

ಅಲ್ಲದೇ ಭಾರತದಲ್ಲಿ ಕಡಿಮೆ ಬೆಲೆಯ, ಅಂದರೆ ಇನ್ನೂರು ಮಿಲಿಯನ್ ಡಾಲರು ವೆಚ್ಚದಲ್ಲಿ ಇಪ್ಪತ್ತು ಸಾವಿರ ಮನೆಗಳನ್ನು ಕಟ್ಟಲು ಏಶಿಯನ್ ಡೆವೆಲಪ್ ಮೆಂಟ್ ಬ್ಯಾಂಕ್ ನೊಂದಿಗೂ ಪಾಲುದಾರಿಕೆ ಹೊಂದಿದೆ. ಭಾರತದ ಖ್ಯಾತ ಸಂಸ್ಥೆ ಟಾಟಾ ಗ್ರೂಪ್ ನ ಒಟ್ಟ ಶೇರುಗಳಲ್ಲಿ 18.4% ಪಾಲುದಾರಿಕೆ ಹೊಂದಿದ್ದು ಇದರ ಮೊತ್ತ 109ಬಿಲಿಯನ್ ಡಾಲರುಗಳಾಗಿದೆ. ಈ ವಹಿವಾಟನ್ನು ಅವರ ಕಿರಿಯ ಪುತ್ರ ಸೈರಸ್ ನೋಡಿಕೊಳ್ಳುತ್ತಿದ್ದಾರೆ.

Image courtesy- http://www.rediff.com

ಶಿವ್ ನಡರ್ -12.9 ಬಿಲಿಯನ್ ಡಾಲರುಗಳು

ಶಿವ್ ನಡರ್ -12.9 ಬಿಲಿಯನ್ ಡಾಲರುಗಳು

ಭಾರತ: ಆರನೆಯ ಸ್ಥಾನ ಮತ್ತು ವಿಶ್ವಮಟ್ಟದಲ್ಲಿ 66ನೇ ಸ್ಥಾನ

ವಿವರ: ಖ್ಯಾತ ಹೆಚ್ ಸಿ ಎಲ್ ಸಂಸ್ಥೆಯ ಸಹ-ಸ್ಥಾಪಕರಾದ ಶಿವ್ ಸ್ವತಃ ಓರ್ವ ಕಂಪ್ಯೂಟರ್ ಸಾಫ್ಟ್ ವೇರ್ ಅಭಿಯಂತರರಾಗಿದ್ದು ಭಾರತದಲ್ಲಿ ಐಟಿ ವಹಿವಾಟಿನೊಂದಿಗೆ ಸಂಸ್ಥೆಯ ಶೇರುಬೆಲೆಯೂ ಮೇಲಕ್ಕೇರುತ್ತಲೇ ಸಾಗುತ್ತಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶಿವ್ ನಡರ್ -12.9 ಬಿಲಿಯನ್ ಡಾಲರುಗಳು

ಶಿವ್ ನಡರ್ -12.9 ಬಿಲಿಯನ್ ಡಾಲರುಗಳು

ಭಾರತದಲ್ಲಿ ಸಾಫ್ಟ್ ವೇರ್‌ನೊಂದಿಗೆ ಹಾರ್ಡ್‌ವೇರ್ ಅನ್ನೂ ನೀಡುವ ಕೆಲವೇ ಸಂಸ್ಥೆಗಳಲ್ಲೊಂದಾದ ಹೆಚ್ ಸಿ ಎಲ್ ಖ್ಯಾತಿಯ ಮೂಲಕ ತಮ್ಮ ಸ್ವಸಾಮರ್ಥ್ಯದಿಂದ ಶಿವ್ ಪ್ರಸ್ತುತ ಆರನೆಯ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಗೋದ್ರೆಜ್ ಕುಟುಂಬ -11.4 ಬಿಲಿಯನ್ ಡಾಲರುಗಳು

ಗೋದ್ರೆಜ್ ಕುಟುಂಬ -11.4 ಬಿಲಿಯನ್ ಡಾಲರುಗಳು

ಭಾರತ: ಏಳನೆಯ ಸ್ಥಾನ ಮತ್ತು ವಿಶ್ವಮಟ್ಟದಲ್ಲಿ ಸ್ಥಾನ ಇಲ್ಲ.

ವಿವರ: ಭಾರತದಲ್ಲಿ ವಾಣಿಜ್ಯ ವಹಿವಾಟು ಮತ್ತು ಗೃಹಬಳಕೆಯ ಸಾಧನಗಳನ್ನು ನಿರ್ಮಾಣ ಮಾಡುವ ಈ ಸಂಸ್ಥೆಗೆ ಈಗ 118ರ ಹರೆಯ.

ಗೋದ್ರೆಜ್ ಕುಟುಂಬ -11.4 ಬಿಲಿಯನ್ ಡಾಲರುಗಳು

ಗೋದ್ರೆಜ್ ಕುಟುಂಬ -11.4 ಬಿಲಿಯನ್ ಡಾಲರುಗಳು

ತಮ್ಮ ಉತ್ಪನ್ನಗಳನ್ನು ಕುಟುಂಬದ ಹೆಸರು ನೀಡಿರುವ ಈ ಸಂಸ್ಥೆಯ ಉತ್ಪನ್ನಗಳು ಈಗಲೂ ಹೆಸರಿನ ಮೂಲಕವೇ ಹೆಚ್ಚು ಮಾರಾಟವಾಗುತ್ತಿವೆ. ಕುಟುಂಬದಲ್ಲಿ ಒಂಭತ್ತು ಸದಸ್ಯರಿದ್ದರೂ ಹಿರಿಯರಾದ ಆದಿ ಗೋದ್ರೆಜ್ ರವರೇ ಸಂಸ್ಥೆಯ ಚೇರ್ಮನ್ ರಾಗಿ ಗುರುತಿಸಲ್ಪಡುತ್ತಾರೆ.

ಲಕ್ಷ್ಮಿ ಮಿತ್ತಲ್ -11.2 ಬಿಲಿಯನ್ ಡಾಲರುಗಳು

ಲಕ್ಷ್ಮಿ ಮಿತ್ತಲ್ -11.2 ಬಿಲಿಯನ್ ಡಾಲರುಗಳು

ಭಾರತ: ಎಂಟನೆಯ ಸ್ಥಾನ ಮತ್ತು ವಿಶ್ವಮಟ್ಟದಲ್ಲಿ 88ನೇ ಸ್ಥಾನ

ವಿವರ: ಹಿಂದಿನ ವರ್ಷಗಳಲ್ಲಿ ಪಟ್ಟಿಯ ಮೇಲ್ಭಾಗದಲ್ಲಿದ್ದ ಮಿತ್ತಲ್ ಈಗ ಕೆಳಗಿಳಿದು ಎಂಟನೆಯ ಸ್ಥಾನ ಪಡೆದಿದ್ದಾರೆ. ಉಕ್ಕಿನ ವಹಿವಾಟು ನಡೆಸುವ ಇನ್ನೊಂದು ಸಂಸ್ಥೆಯಾದ ಆರ್ಸೆಲಾರ್ ಮೂಲಕ ಹೆಚ್ಚು ಲಾಭಗಳಿಸುವ ಇರಾದೆಯಿದ್ದರೂ 2014ರಲ್ಲಿ ಚೀನಾದಿಂದ ಆಮದಾದ ಅಗ್ಗದ ಕಚ್ಚಾವಸ್ತು ಮತ್ತು ಕಬ್ಬಿಣದ ಕಾರಣ ನೇರವಾಗಿ ಒಂದು ಬಿಲಿಯನ್ ಡಾಲರ್ ನಷ್ಟ ಅನುಭವಿಸುವಂತಾಯಿತು. ಇದೇ ಇವರ ಸ್ಥಾನವನ್ನು ಪಟ್ಟಿಯಲ್ಲಿ ಕೆಳಗಿಳಿಸಲೂ ಕಾರಣವಾಯಿತು.

ಸೈರಸ್ ಪೂನಾವಾಲಾ- 7.9 ಬಿಲಿಯನ್

ಸೈರಸ್ ಪೂನಾವಾಲಾ- 7.9 ಬಿಲಿಯನ್

ಭಾರತ: ಒಂಭತ್ತನೆಯ ಸ್ಥಾನ ಮತ್ತು ವಿಶ್ವಮಟ್ಟದಲ್ಲಿ ಸ್ಥಾನ ಇಲ್ಲ.

ವಿವರ: ಯಾವುದೇ ಸಂಸ್ಥೆಯ ಸಹಯೋಗವಿಲ್ಲದೇ ಕೇವಲ ವ್ಯಾಕ್ಸೀನ್ ಗಳನ್ನು ಮಾರಾಟ ಮಾಡುವ ವಿಶ್ವದ ಅತಿದೊಡ್ಡ ಸಂಸ್ಥೆಯಾದ ಸೀರಮ್ ಇನ್ಸ್ಟಿಟ್ಯೂಟ್ ಪೂನಾದಲ್ಲಿದ್ದು ವಾರ್ಷಿಕ 1.3 ಬಿಲಿಯನ್ ಔಷಧಿಗಳ ಬಾಟಲಿಗಳನ್ನು ತಯಾರಿಸುತ್ತಿದೆ. 2014 ರಲ್ಲಿ ವಿಶ್ವದ 295ನೇ ಸ್ಥಾನ ಪಡೆದಿದ್ದ ಸೈರಸ್ ಈ ವರ್ಷ ಭಾರತದ ಅತಿ ಶ್ರೀಮಂತರಲ್ಲಿ ಒಂಭತ್ತನೆಯ ಸ್ಥಾನ ಪಡೆದಿದ್ದಾರೆ.

ಕುಮಾರ್ ಬಿರ್ಲಾ -7.8 ಬಿಲಿಯನ್ ಡಾಲರುಗಳು

ಕುಮಾರ್ ಬಿರ್ಲಾ -7.8 ಬಿಲಿಯನ್ ಡಾಲರುಗಳು

ಭಾರತ: ಹತ್ತನೆಯ ಸ್ಥಾನ ಮತ್ತು ವಿಶ್ವಮಟ್ಟದಲ್ಲಿ ಸ್ಥಾನ ಇಲ್ಲ.

ವಿವರ: ಬಿರ್ಲಾ ಸಿಮೆಂಟ್ ಮೂಲಕ ಭಾರತದ ಶ್ರೇಷ್ಠ ಸಂಸ್ಥೆಯಾಗಿರುವ ಬಿರ್ಲಾ ಸಂಸ್ಥೆಯ ಒಡೆತನ ಕುಮಾರ್ ಬಿರ್ಲಾರ ಹೆಗಲಿಗೆ ಬಂದ ಬಳಿಕ ಇನ್ನಷ್ಟು ಉತ್ತುಂಗಕ್ಕೇರತೊಡಗಿತು. ಆದರೆ ಕಳೆದ ವರ್ಷ ಕಲ್ಲುಗಣಿ ಹಗರಣದಲ್ಲಿ ಸಿಬಿಐ ಕುಮಾರ್ ರವರ ಹೆಸರನ್ನು ಬಳಸಿ ಹಿಗ್ಗಾ ಮುಗ್ಗ ಎಳೆದಾಡಿದ ಪರಿಣಾಮವಾಗಿ ವಹಿವಾಟಿನಲ್ಲಿ ಪ್ರಭಾವ ಬೀರಿತ್ತು. ಇವರ ಒಡೆತನದ ಹಿಂಡಾಲ್ಕೋ ಸಂಸ್ಥೆಯ ಗುತ್ತಿಗೆ ಪರವಾನಿಗೆಯನ್ನೂ ರದ್ದುಪಡಿಸಲಾಗಿತ್ತು. ಆದರೆ ಈ ಹಿನ್ನಡೆಗಳಾವುವೂ ಕುಮಾರ್ ರವರನ್ನು ಹತ್ತನೆಯ ಶ್ರೀಮಂತ ಪಟ್ಟಿಯಿಂದ ಕೆಳಗಿಳಿಸಲು ಸಾಧ್ಯವಾಗಿಲ್ಲ. ಏಕೆಂದರೆ ಇವರ ಒಡೆತನದ ಇನ್ನೊಂದು ಸಂಸ್ಥೆಯಾದ ಐಡಿಯಾ ಸೆಲ್ಯುಲಾರ್ ಅತ್ಯಂತ ಲಾಭದಲ್ಲಿ ನಡೆಯುತ್ತಿದ್ದು ಕಲ್ಲುಗಣಿಯ ಎಲ್ಲಾ ನಷ್ಟಗಳನ್ನು ನುಂಗಿ ಕುಮಾರ್ ರವರಿಗೆ ಹತ್ತನೆಯ ಸ್ಥಾನ ನೀಡಿದೆ.

X
Desktop Bottom Promotion