Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅನರ್ಘ್ಯ ರತ್ನ ಶಂಕರ್‌ನಾಗ್ ಕುರಿತ ಅಚ್ಚರಿಯ ಸಂಗತಿಗಳು
ಶಂಕರ್ ನಾಗ್, ಹೆಸರು ಕೇಳಿದ ತಕ್ಷಣ ಅವರ ಬಗ್ಗೆ ಅರಿತಿರುವ ಯಾವುದೇ ಕನ್ನಡಿಗನಿಂದ ಹೊರಡುವ ಉದ್ಗಾರ 'ಅವರಿನ್ನಷ್ಟು ದಿನ ಬದುಕಿರಬೇಕಿತ್ತು!". ಹೌದು, ಕೇವಲ ಮೂವತ್ತಾರರ ಹರೆಯದಲ್ಲಿ (ಜನನ:9 ನವೆಂಬರ್ 1954) ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ದಾವಣಗೆರೆಯ ಬಳಿ ಲಾರಿಯೊಂದಕ್ಕೆ ಮುಖಾಮುಖಿಯಾದ ಢಿಕ್ಕಿಯಲ್ಲಿ ಶಂಕರ್ ನಾಗ್ ಇಹಲೋಕ ತ್ಯಜಿಸಿದರು. ಕನ್ನಡಿಗರ ಪಾಲಿಗೆ ಕರಾಳವಾದ ಆ ದಿನಾಂಕ ಸೆಪ್ಟೆಂಬರ್ 30, 1990. ಆದರೆ ಕನ್ನಡಿಗರ ಮನದಲ್ಲಿ ಶಂಕರ್ ನಾಗ್ ಇನ್ನೂ ಹಸಿರಾಗಿದ್ದಾರೆ.
ಆಟೋ ರಾಜ ಚಿತ್ರದ ಮೂಲಕ ಆಟೋ ರಾಜ ಎಂಬ ಅನ್ವರ್ಥನಾಮವನ್ನು ಪಡೆದು ಸಕಲ ಆಟೋ ಚಾಲಕರ ಹೃದಯದಲ್ಲಿ ನೆಲೆಸಿರುವ ಅವರ ಚಿತ್ರವನ್ನು ಕರ್ನಾಟಕದ ಎಷ್ಟೋ ಆಟೋರಿಕ್ಷಾಗಳ ಒಳ ಮತ್ತು ಹೊರಭಾಗಗಳಲ್ಲಿ ಇಂದಿಗೂ ಕಾಣಬಹುದು. ಶಂಕರ್ ನಾಗ್ ಏಕಿಷ್ಟು ನೆನಪಾಗುತ್ತಾರೆ ಎಂದರೆ ಇಂದು ಸಾಕಾರವಾಗುತ್ತಿರುವ ಎಷ್ಟೋ ಯೋಜನೆಗಳು ಸುಮಾರು ಮೂವತ್ತು ವರ್ಷ ಹಿಂದೆಯೇ ಅವರು ಕಂಡಿದ್ದ ಕನಸುಗಳಾಗಿದ್ದವು. ಚಲನಚಿತ್ರದ ಚಿತ್ರೀಕರಣವಾದ ಬಳಿಕ ಸಂಸ್ಕರಣೆಗೆ ಮದ್ರಾಸಿಗೆ ಓಡಬೇಕಾಗಿದ್ದುದು ಕನ್ನಡ ಚಿತ್ರರಂಗಕ್ಕೆ ಒಂದು ಪ್ರಮುಖ ಕೊರತೆಯಾಗಿತ್ತು. ಈ ಕೊರತೆಯನ್ನು ನೀಗಿಸಲು ಶಂಕರ್ ನಾಗ್ ರವರ ಶ್ರಮ ಸಂಕೇತ್ ಸ್ಟುಡಿಯೋ ಬೆಂಗಳೂರಿನಲ್ಲಿ ಪ್ರಾರಂಭವಾಗಲು ಕಾರಣವಾಯಿತು.
1978ರಿಂದ 1990ರ ನಡುವೆ ಅವರು ನಟಿಸಿದ ಚಿತ್ರಗಳಲ್ಲಿ ಯಾವುದೂ ವಿಫಲವಾಗದೇ ಇರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಯಾವಾಗಲೂ ಹೊಸತನ್ನೇ ನೀಡಲು ಬಯಸುತ್ತಿದ್ದ ಅವರ ಮಹತ್ವಾಕಾಂಕ್ಷೆಯ ಚಿತ್ರ 'ಒಂದು ಮುತ್ತಿನ ಕಥೆ' ಡಾ. ರಾಜ್ ರವರ ನಾಯಕತ್ವದಲ್ಲಿ ಮೂಡಿಬಂದಿದ್ದು ಕನ್ನಡ ಚಿತ್ರರಂಗದ ಪಾಲಿನ ಮುತ್ತೇ ಆಗಿದೆ. ಅದುವರೆಗೆ ಕೇವಲ ಅಂಗ್ಲ ಚಿತ್ರಗಳಲ್ಲಿ ನೀರಿನಡಿಯ ಚಿತ್ರೀಕರಣವನ್ನು ನೋಡಿದ್ದ ಕನ್ನಡಿಗರಿಗೆ ಕನ್ನಡ ಚಿತ್ರವೊಂದರಲ್ಲಿ ನೀರಿನಡಿಯ ದೃಶ್ಯಗಳು ಕಾಣಸಿಕ್ಕಿದ್ದು ಇದೇ ಪ್ರಥಮ ಬಾರಿಯಾಗಿತ್ತು. ಅವರೇ ಬರೆದು, ನಿರ್ದೇಶಿಸಿ, ನಟಿಸಿ, ನಿರ್ಮಿಸಿದ ಪ್ರಥಮ ಚಿತ್ರ 'ಮಿಂಚಿನ ಓಟ' ಕನ್ನಡಿಗರಿಗೆ ಒಂದು ಥ್ರಿಲ್ಲರ್ ಚಿತ್ರವನ್ನು ನೋಡಿದಂತಾಗಿತ್ತು.
ಅವರ ಪಯತ್ನವನ್ನು ಗಮನಿಸಿದ ಕರ್ನಾಟಕ ಸರ್ಕಾರ 1979ನೇ ವರ್ಷದ ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ಪ್ರಥಮ ಮತ್ತು ಅತ್ಯುತ್ತಮ ಚಿತ್ರದ ವಿಭಾಗದಲ್ಲಿ ಎರಡನೆಯ ಸ್ಥಾನ ನೀಡಿ ಗೌರವಿಸಿತು. ಆರ್. ಕೆ ನಾರಾಯಣನ್ ರವರ 'ಮಾಲ್ಗುಡಿ ಡೇಸ್' ದೂರದರ್ಶನ ಧಾರಾವಾಹಿಯ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಅವರು ಮಲೆನಾಡಿನ ತುತ್ತತುದಿಯ ಘಟ್ಟದ ಊರಾದ ಆಗುಂಬೆಯನ್ನು ದೇಶಕ್ಕೆ ಪರಿಚಯಿಸಿದರು. ಶಂಕರ್ ನಾಗ್ ಕೇವಲ ಒಬ್ಬ ನಟನಾಗಿರಲಿಲ್ಲ. ಅವರು ನಿರ್ದೇಶಕ, ನಿರ್ಮಾಪಕನಿಗಿಂತಲೂ ಮಿಗಿಲಾಗಿ ಓರ್ವ ದಿಗ್ದರ್ಶಕರಾಗಿದ್ದರು ಎಂದರೆ ಹೆಚ್ಚು ಸರಿಹೋಗುತ್ತದೆ. ಏಕೆಂದರೆ ಅವರ ಕಲ್ಪನೆಯಲ್ಲಿ ಹೊಚ್ಚ ಹೊಸ ವಿಷಯಗಳು ಮೂಡುತ್ತಿದ್ದುದು ಮಾತ್ರವಲ್ಲ, ಅದರ ಹಿಂದೆ ನಿರಂತರವಾದ ಪ್ರಯತ್ನ, ಆ ಮೂಲಕ ಆ ಕನಸನ್ನು ನನಸಾಗಿಸುವುದನ್ನೇ ಕನ್ನಡಿಗರು ಅವರನ್ನು ಮರೆಯದಿರಲು ಪ್ರಮುಖ ಕಾರಣವಾಗಿದೆ. ಡಾ. ರಾಜ್ ರಂತೆಯೇ ತಮ್ಮ ಅಭಿಮಾನಿಗಳನ್ನು ತಮ್ಮ ಕುಟುಂಬ ಎಂದು ಪರಿಗಣಿಸುತ್ತಿದ್ದ ಶಂಕರ್‌ನಾಗ್ ರವರ ಬಗ್ಗೆ ಇನ್ನೂ ಹಲವು ಕುತೂಹಲಕರ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.

ಎಂಟೇ ದಿನದಲ್ಲಿ ಕಟ್ಟಿ ಮುಗಿಸುವ ಮನೆ
ಆ ದಿನಗಳಲ್ಲಿ ಇಂಟರ್ನೆಟ್ ಇರಲಿಲ್ಲ. ಯಾವುದೇ ವಿಷಯವನ್ನು ಕಲಿಯಬೇಕಾದರೆ ಗ್ರಂಥಾಲಯ ಅಥವಾ ವಿಶ್ವವಿದ್ಯಾಲಯಗಳ ಮೊರೆ ಹೋಗಬೇಕಿತ್ತು. ಇಲ್ಲದಿದ್ದರೆ ಆ ವಿಷಯದಲ್ಲಿ ಪಾರಾಂಗತರೊಂದಿಗೆ ಸಂಪರ್ಕ ಬೆಳೆಸಿ ಆ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕಿತ್ತು. ಇವು ಅತ್ಯಂತ ಹೆಚ್ಚಿನ ಸಮಯ ಕಬಳಿಸುವ, ತಾಳ್ಮೆಯ ಪರೀಕ್ಷೆ ಮಾಡುವ ವಿಷಯವಾದ್ದರಿಂದ ಹೆಚ್ಚಿನವರು ತಮ್ಮ ಉದ್ಯೋಗ ನಿಮಿತ್ತವಿರುವ ವಿಷಯಗಳಿಗೇ ಹೆಚ್ಚಿನ ಆದ್ಯತೆ ನೀಡುವುದು ಸಾಮಾನ್ಯವಾಗಿತ್ತು.
ನಟ ನಿರ್ದೇಶಕನಾಗಿ ಬಿಡುವಿಲ್ಲದ ದುಡಿಮೆಯ ನಡುವೆಯೂ ಅವರು ಕಡಿಮೆ ಖರ್ಚಿನಲ್ಲಿ ಮತ್ತು ತ್ವರಿತವಾಗಿ ಮಧ್ಯಮ ವರ್ಗದವರಿಗಾಗಿ ಪುಟ್ಟ ಮನೆಯೊಂದನ್ನು ಕಟ್ಟಬಹುದಾದ ಯೋಜನೆಯನ್ನು ಸಿದ್ಧಗೊಳಿಸಿದ್ದರು. ಈ ಯೋಜನೆಗೆ ಸರ್ಕಾರದ ಬೆಂಬಲ ಸಿಕ್ಕರೆ ಕರ್ನಾಟಕದ ಲಕ್ಷಾಂತರ ಜನರಿಗೆ ಸುಲಭದಲ್ಲಿ ಸೂರು ಭಾಗ್ಯ ಸಿಗಬಹುದಿತ್ತು. ಈ ಮನೆಯನ್ನು ಕೇವಲ ಎಂಟೇ ದಿನದಲ್ಲಿ ನಿರ್ಮಿಸಬಹುದಾಗಿದ್ದುದು ಇಂದಿಗೂ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಗ್ರಾಸವಾಗಿದೆ. ಈ ಯೋಜನೆಯನ್ನು ಅವರು ಅಂದಿನ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆಯವರಿಗೆ ನೀಡಲು ಯೋಜಿಸಿದ್ದರು. ಆದರೆ ಅದಕ್ಕೂ ಮೊದಲೇ ಅವರು ಭಗವಂತನಿಗೆ ಪ್ರಿಯರಾದರು.

ಅವರಿಗೆ ಹಲವು ಸಂಗೀತ ವಾದ್ಯಗಳನ್ನು ನುಡಿಸಲು ಬರುತ್ತಿತ್ತು
ಶಂಕರ್ ನಾಗ್ ರನ್ನು ನಿಕಟವಾಗಿ ಕಂಡವರು ಅವರು ಒಬ್ಬರೇ ಇದ್ದಾಗ ಬೇರಾವುದೋ ಕೆಲಸದಲ್ಲಿ ಮಗ್ನರಾಗಿದ್ದಾಗ ಹಾಡೊಂದನ್ನು ಗುನುಗುತ್ತಲೇ ಇರುವುದನ್ನು ಗಮನಿಸಿರಬಹುದು. ಸಂಗೀತದ ಆರಾಧ್ಯರಾಗಿದ್ದ ಶಂಕರ್ ನಾಗ್ ಸ್ವತಃ ಓರ್ವ ಸಂಗೀತಗಾರರೂ ಆಗಿದ್ದರು. ಅವರು ಸ್ವತಃ ತಬಲಾ, ಹಾರ್ಮೋನಿಯಂ ಮತ್ತು ಕೊಳಲನ್ನು ಸುಲಲಿತವಾಗಿ ನುಡಿಸಲು ಕಲಿತಿದ್ದರು. ಸಂಗೀತ ಲೋಕದ ಪ್ರತಿಭೆಯಾದ ಇಳೆಯರಾಜರ ಸಂಗೀತವನ್ನು ತಮ್ಮ ಎರಡು ಚಿತ್ರಗಳಿಗೆ (ಜನುಮ ಜನುಮದ ಅನುಬಂಧ, ಗೀತ) ಅವರು ಅಳವಡಿಸಿ ಕನ್ನಡದ ಸಂಗೀತಕ್ಕೆ ಹೊಸ ಆಯಾಮ ನೀಡಿದರು.

ಹೊಸ ಹೊಸ ಕಾರುಗಳಿಗೆ ಅವರು ಮನಸೋಲುತ್ತಿದ್ದರು
ಸಾಮಾನ್ಯವಾಗಿ ಖ್ಯಾತನಾಮರಲ್ಲಿ ಹೊಸ ಮತ್ತು ನವೀನ ಮಾದರಿಯ ಕಾರುಗಳಿರುತ್ತವೆ. ಅವರು ಈ ಕಾರುಗಳ ಯೋಗಕ್ಷೇಮದ ಜವಾಬ್ದಾರಿಯನ್ನು ಸ್ವತಃ ಕೈಗೊಳ್ಳದೇ ತಮ್ಮ ನಂಬಿಗಸ್ತರಿಗೆ ವಹಿಸಿ ನಿರಾಳವಾಗಿದ್ದುಬಿಡುತ್ತಾರೆ. ಆದರೆ ಶಂಕರ್ ನಾಗ್ ಕಾರುಗಳ ಬಗ್ಗೆ ಎಷ್ಟು ಒಲವು ಹೊಂದಿದ್ದರೋ, ಅಷ್ಟೇ ಅವುಗಳ ಬಗ್ಗೆ ಕಾಳಜಿಯನ್ನೂ ವಹಿಸುತ್ತಿದ್ದರು. ಇದಕ್ಕಾಗಿ ಅವರು ಖರೀದಿಸಿದ ಕಾರಿನ ಬಗ್ಗೆ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿಡುತ್ತಿದ್ದರು. ಕಾರುಗಳ ಬಗೆಗಿನ ಅವರ ಪ್ರೇಮವನ್ನು ಗೀತ ಮತ್ತು ಮಿಂಚಿನ ಓಟ ಚಿತ್ರಗಳಲ್ಲಿ ಕಾಣಬಹುದು.

ಕಾರಿನಲ್ಲಿ ಏನಿಲ್ಲ?-ಅಡುಗೆಮನೆ, ಗ್ರಂಥಾಲಯ, ಟೈಪ್ ರೈಟರ್ ಸಹಿತ ಎಲ್ಲಾ
ತಮ್ಮ ಕೆಲಸದ ನಿಮಿತ್ತ ಹಲವೆಡೆ ಪಯಣಿಸುತ್ತಲೇ ಇರಬೇಕಾದ ಅನಿವಾರ್ಯತೆಯಿಂದ ತಮ್ಮ ಸಮಯವನ್ನು ಕಳೆದುಕೊಳ್ಳಲು ಅವರು ಇಚ್ಛಿಸುತ್ತಿರಲಿಲ್ಲ. ಅದಕ್ಕಾಗಿ ಅವರು ತಮ್ಮ ನೆಚ್ಚಿನ ವಾಹನವೊಂದನ್ನು ತಮ್ಮ ಚಲಿಸುವ ಮನೆಯನ್ನಾಗಿ ಮಾರ್ಪಾಡಿಸಿಕೊಂಡಿದ್ದರು. ಆ ವಾಹನದಲ್ಲಿ ಅಡುಗೆಮನೆ, ಕೆಲವು ಅಗತ್ಯ ಪುಸ್ತಕಗಳು, ಪವಡಿಸಲು ವ್ಯವಸ್ಥೆ, ಸಂಗೀತ, ಕುಡಿಯುವ ನೀರು, ಅಷ್ಟೇ ಏಕೆ, ತಮಗೆ ಹೊಳೆದ ವಿಷಯಗಳನ್ನು ಕೂಡಲೇ ದಾಖಲಿಸಲು ಮತ್ತು ತಮ್ಮ ಸಂಭಾಷಣೆಗಳನ್ನು ನಿಗದಿತ ಸಮಯಕ್ಕೂ ಮೊದಲೇ ಮುಗಿಸಲು ಒಂದು ಟೈಪ್ ರೈಟರನ್ನೂ ಇಟ್ಟುಕೊಂಡಿದ್ದರು.

ನಟನೆಗಾಗಿ ಬ್ಯಾಂಕ್ ನೌಕರಿಯನ್ನೂ ಬೇಡ ಎಂದ ಶಂಕರ್ ನಾಗ್!
ಪ್ರಾಥಮಿಕ ಶಿಕ್ಷಣದ ಬಳಿಕ ಅವರು ರಂಗಶಿಕ್ಷಣಕ್ಕಾಗಿ ಮುಂಬೈ ತಲುಪಿದರು. ಅಲ್ಲಿ ಮರಾಠಿ ರಂಗಮಂಚದಲ್ಲಿ ಕೆಲವು ಪಾತ್ರಗಳನ್ನು ನಿರ್ವಹಿಸಿದರು. (ಇಂತಹ ಒಂದು ರಂಗಮಂಚದ ಅಭ್ಯಾಸದ ವೇಳೆ ಅರುಂಧತಿಯವರ ಭೇಟಿಯಾಯಿತು. ಇದು ಪ್ರೇಮಕ್ಕೆ ತಿರುಗಿ ಬಳಿಕ ಅವರು ವಿವಾಹವಾದರು). ಈ ಸಮಯದಲ್ಲಿ ಅವರನ್ನು ಬ್ಯಾಂಕ್ ನೌಕರಿಯೊಂದು ಅರಸಿಕೊಂಡು ಬಂದಿತ್ತು. ಆ ದಿನಗಳಲ್ಲಿ ಬ್ಯಾಂಕ್ ನೌಕರಿ ಎಂದರೆ ಲಾಟರಿ ಹೊಡೆದಂತಹ ಅವಕಾಶವಾಗಿತ್ತು. ಆದರೆ ಕುರ್ಚಿಯ ಹಿಂದೆ ಕುಳಿತು ಜೀವಮಾನ ಕಳೆಯಲು ಸಿದ್ಧರಿಲ್ಲದ ಶಂಕರ್ ನಾಗ್ ಈ ಅವಕಾಶವನ್ನು ನಿರಾಕರಿಸಿ ರಂಗಕರ್ಮಿಯಾಗಿ ಮುಂದುವರೆದರು. ಆ ಬಳಿಕ ಅವರು ಎಂದೂ ಹಿಂದೆ ನೋಡಿದ್ದೇ ಇಲ್ಲ.

ನಟನೆಗಿಂತಲೂ ನಿರ್ದೇಶನವೇ ಅವರ ಪ್ರಥಮ ಪ್ರಾಶಸ್ತ್ಯವಾಗಿತ್ತು
ಯಾವುದೇ ಪಾತ್ರವನ್ನಾದರೂ ಲೀಲಾಜಾಲವಾಗಿ ನಿಭಾಯಿಸಬಲ್ಲ ಕ್ಷಮತೆಯಿದ್ದ ಶಂಕರ್ ನಾಗ್ ನಟನೆಗಿಂತಲೂ ನಿರ್ದೇಶನಕ್ಕೇ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದರು. ಈ ಕನಸನ್ನು ಅವರು 'ಮಿಂಚಿನ ಓಟ' ಚಿತ್ರದ ಮೂಲಕ ನನಸಾಗಿಸಿಕೊಂಡರು. ಆ ಬಳಿಕವೂ ಅವರು ಹಲವಾರು ಚಿತ್ರಗಳಲ್ಲಿ ನಾಯಕ, ಉಪನಾಯಕ, ಪೋಷಕ ಪಾತ್ರಗಳನ್ನು ನಿರ್ವಹಿಸಿದರೂ ಹಲವು ಚಿತ್ರಗಳನ್ನು ನಿರ್ದೇಶಿಸಿದರು. ಇದರಲ್ಲಿ 'ಒಂದು ಮುತ್ತಿನ ಕಥೆ' ಪ್ರಮುಖವಾಗಿದೆ. ಹೊಸತೀರ್ಪು, ನೋಡಿ ಸ್ವಾಮಿ ನಾವಿರೋದೇ ಹೀಗೆ, ಆಕ್ಸಿಡೆಂಟ್ ಮೊದಲಾದ ಕನ್ನಡ ಚಿತ್ರಗಳನ್ನೂ, ಲಾಲಚ್ ಎಂಬ ಹಿಂದಿ ಮತ್ತು 'ದ ವಾಚ್ಮನ್'ಎಂಬ ಹಿಂದಿ ಮತ್ತು ಇಂಗ್ಲಿಷ್ ದ್ವಿಭಾಷಾ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ.

ಸಮಾನ ಮನಸ್ಕರು ಒಂದೆಡೆ ಸೇರುವ ಕಂಟ್ರಿ ಕ್ಲಬ್ ಸ್ಥಾಪಕ
ಹಲವು ವಿದೇಶಗಳನ್ನು ಸುತ್ತಿದ ಅವರು ಗಮನಿಸಿದ ವಿಷಯವೆಂದರೆ ಸಮಾನ ಮನಸ್ಕರು ಒಂದೆಡೆ ಕಲೆತು ವಿಷಯಗಳನ್ನು ಚರ್ಚಿಸುವ ಬಗೆ, ಇದು ಹಲವು ಅಭಿವೃದ್ಧಿಗಳಿಗೆ ಮೂಲ ಎಂದು ಅರಿತ ಅವರು ಈ ಪರಿಯನ್ನು ಕನ್ನಡದ ನೆಲದಲ್ಲಿ ಪ್ರಾರಂಭಿಸಲು ಮನಸ್ಸಿನಲ್ಲಿಯೇ ಯೋಜಿಸಿದ್ದರು. ತಮ್ಮ ಅಣ್ಣ ಅನಂತ್ ನಾಗ್ ರೊಂದಿಗೂ ಈ ಬಗ್ಗೆ ಸಮಾಲೋಚಿಸಿ ಅವರ ಫಾರ್ಮ್ ಹೌಸ್ ಒಂದರಲ್ಲಿ ಕಂಟ್ರಿ ಕ್ಲಬ್ ಹೆಸರಿನಲ್ಲಿ ಒಂದು ವೇದಿಕೆಯನ್ನು ಸ್ಥಾಪಿಸಲು ಯೋಜಿಸಿದ್ದರು. ಸಮಾನ ಮನಸ್ಕರು ಇದರ ಸದಸ್ಯರಾಗಿ ನಿಗದಿತ ಸಮಯದಲ್ಲಿ ಒಂದೆಡೆ ಕಲೆತು ಸಮಾಲೋಚಿಸಬಹುದಾಗಿತ್ತು. ನವೆಂಬರ್ 20, 1990ರಂದು ಈ ಕ್ಲಬ್ ಉದ್ಘಾಟನೆಯಾಗಬೇಕಿತ್ತು. ಆದರೆ ಈ ಪ್ರಯತ್ನ ಫಲಕೊಡುವ ಮುನ್ನವೇ ಅವರು ದಿವಂಗತರಾದರು.

ಅಪಘಾತದ ಹಿಂದಿನ ರಾತ್ರಿ ಕಂಟ್ರಿಕ್ಲಬ್ ನಲ್ಲಿದ್ದ ಶಂಕರ್ ನಾಗ್
ಸೆಪ್ಟೆಂಬರ್ 29, 1990 ರ ರಾತ್ರಿ ಅವರು ಕಂಟ್ರಿ ಕ್ಲಬ್ ನಲ್ಲಿಯೇ ಇದ್ದರು. ಆದರೆ ಮರುದಿನ ಅವರು ಬಾಗಲಕೋಟೆಯ ಲೋಕಾಪುರ ಎಂಬ ಊರಿಗೆ ತಮ್ಮ ಜೋಕುಮಾರ ಸ್ವಾಮಿ ಚಿತ್ರದ ಚಿತ್ರೀಕರಣಕ್ಕೆ ತೆರಳಬೇಕಿತ್ತು. ಆದರೆ ಸಮಯವನ್ನು ವ್ಯರ್ಥಮಾಡಲಿಚ್ಛಿಸದ ಅವರು ಆ ರಾತ್ರಿಯೇ ಮಡದಿ ಅರುಂಧತ್ ನಾಗ್ ಮತ್ತು ಮಗಳು ಕಾವ್ಯಾರೊಂದಿಗೆ ಹೊರಟರು. ಮರುದಿನ ಬೆಳಗ್ಗಿನ ಜಾವ ದಾವಣಗೆರಯ ಹೊರವಲಯದಲ್ಲಿರುವ ಅನಗೋಡು ಎಂಬ ಊರಿನಲ್ಲಿ ಲಾರಿಯೊಂದಿಗೆ ಮುಖಾಮುಖಿ ಢಿಕ್ಕಿ ಸಂಭವಿಸಿ ಶಂಕರ್ ನಾಗ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಅರುಂಧತಿ ನಾಗ್ ರವರಿಗೆ ಪ್ರಾಣಾಂತಿಕ ಗಾಯಗಳಾದವು. ಮಗಳು ಕಾವ್ಯಾಳಿಗೂ ಗಾಯಗಳಾದರೂ ಪ್ರಾಣಾಂತಿಕವಾಗಿರಲಿಲ್ಲ.

ಅಣ್ಣದ ಹಿತವಚನ ಕಡೆಗಣಿಸಿದ ಫಲ
ಆ ದಿನ ಅನಂತ್ ನಾಗ್ ರವರೂ ಕಂಟ್ರಿ ಕ್ಲಬ್ ನಲ್ಲಿಯೇ ಇದ್ದರು. ತಮ್ಮನು ಕೂಟದ ಬಳಿಕ ರಾತ್ರಿಯೇ ಹೊರಡುತ್ತಾನೆಂದು ತಿಳಿದಾದ ವ್ಯಾಕುಲರಾದ ಅವರು ತಮ್ಮನಿಗೆ ಈಗ ಹೋಗಬೇಡ, ಮಲಗಿ ಎದ್ದು ಬೆಳಿಗ್ಗೆ ಹೊರಡು ಎಂದು ಹಿತವಚನ ನೀಡಿದರು. ಆದರೆ ಲೋಕಾಪುರಕ್ಕೆ ಸಮಯಕ್ಕೂ ಮುಂಚೆ ತಲುಪಲೇ ಬೇಕು ಎಂದು ಶಂಕರ್ ನಾಗ್ ಹಠ ಹಿಡಿದುದರಿಂದ ಅನಿವಾರ್ಯವಾಗಿ ಒಪ್ಪಿಗೆ ನೀಡಿದ ಅವರು ನೂರು ಬಾರಿ ಸಾವಕಾಶವಾಗಿ ಹೋಗು, ಹೆಂಡತಿ ಮಕ್ಕಳನ್ನು ಕ್ಷೇಮವಾಗಿ ಕರೆದುಕೊಂಡು ಹೋಗು ಎಂದು ಬೀಳ್ಕೊಟ್ಟರು. ಆದರೆ ಅದೇ ಅವರ ಅಂತಿಮ ಬೇಟಿಯಾಗಿತ್ತು. ಅನಂತ್ ನಾಗ್ ರವರ 'ನನ್ನ ತಮ್ಮ ಶಂಕರ' ಎಂಬ ಕೃತಿಯಲ್ಲಿ ಈ ವಿಷಯವನ್ನು ಓದುವಾಗ ಖಂಡಿತವಾಗಿಯೂ ಕಣ್ಣು ಮಂಜಾಗುತ್ತದೆ.

ಮೆಟ್ರೋ ರೈಲನ್ನು ಮೂವತ್ತು ವರ್ಷ ಹಿಂದೆಯೇ ಶಂಕರ್ ನಾಗ್ ಕಲ್ಪಸಿದ್ದರು
ನಟನೆಯ ಜೊತೆ ಅವರಿಗೆ ವಿದೇಶಗಳನ್ನು ಪ್ರವಾಸ ಮಾಡುವ, ಅಲ್ಲಿನ ಅಭಿವೃದ್ಧಿಗಳನ್ನು ಗಮನಿಸಿ ನಮ್ಮ ನಾಡಿಗೂ ಅದನ್ನು ಅನ್ವಯಿಸುವ ಅಕಾಂಕ್ಷೆಯಿತ್ತು. ಇದಕ್ಕಾಗಿ ಅವರು ಜಪಾನ್ ದೇಶದ ರಾಜಧಾನಿ ಟೋಕಿಯೋ, ಕೆನಡಾ ರಾಜಧಾನಿ ಟೊರೋಂಟೋ ಮತ್ತು ಮಲೇಷಿಯಾದ ರಾಜಧಾನಿ ಕುವಾಲಾಲುಂಪುರ್ ನಗರಗಳಿಗೆ ಭೇಟಿ ನೀಡಿ ಮೆಟ್ರೋ ರೈಲಿನ ಕಾರ್ಯನಿರ್ವಹಣೆಯ ಬಗ್ಗೆ ವಿವರಗಳನ್ನು ಸಂಗ್ರಹಿಸಿದ್ದರು. 1985ರಲ್ಲಿ ಮೆಟ್ರೋ ರೈಲನ್ನು ನಮ್ಮ ಬೆಂಗಳೂರಿನಲ್ಲಿ ಹೇಗೆ ಅನ್ವಯಿಸಿಕೊಳ್ಳಬಹುದು ಎಂಬ ಕನಸನ್ನು ಕಂಡು ಅದಕ್ಕಾಗಿ ಪ್ರಾಯೋಗಿಕವಾದ ನೀಲನಕ್ಷೆಯನ್ನೂ ತಯಾರಿಸಿದ್ದರು. ಆದರೆ ವಿಧಿಯಾಟ ಬೇರೆಯಾಗಿತ್ತು,



Click it and Unblock the Notifications


