ಮುಸ್ಲಿಮರು ಎಂದಾಕ್ಷಣ ಅವರೆಲ್ಲರೂ ಉಗ್ರಗಾಮಿಯಲ್ಲ...

By Deepu

ಕುವೆಂಪುರವರು ನಾಡ ಗೀತೆಯಲ್ಲಿ ಬರೆದ ಸಾಲುಗಳನ್ನು ಒಮ್ಮೆ ನೆನಪಿಸಿಕೊಳ್ಳಿ " ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ, ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರ ಧ್ಯಾನ" ಈ ಸಾಲು ನಮ್ಮ ದೇಶ ಮತ್ತು ನಾಡು ಸರ್ವ ಜನಾಂಗದವರು ನೆಲೆಸಿರುವ ಶಾಂತಿ ಧಾಮ ಎಂದು ಸಾರುತ್ತದೆ. ಅಂತಹ ಶಾಂತಿಯ ಧಾಮದಲ್ಲಿ ಅಶಾಂತಿಯ ಆಕ್ರಂಧನ ಈಗಾಗಲೇ ಆರಂಭವಾಗಿ ಬಿಟ್ಟಿದೆ.

ಉಗ್ರಗಾಮಿಗಳು ಈ ಅಶಾಂತಿಯ ಬೆಳೆಯನ್ನು ಬೆಳೆಯಲು ನಾನಾ ಕಸರತ್ತು ಮಾಡುತ್ತಿದ್ದಾರೆ, ಅದರಲ್ಲಿ ಅವರು ಯಶಸ್ವಿ ಸಹ ಆಗಿದ್ದಾರೆ. ಉಗ್ರಗಾಮಿ ಎಂದ ಒಡನೆ ನಮ್ಮ ಮನಸ್ಸಿನಲ್ಲಿ ಒಬ್ಬ ಮುಸಲ್ಮಾನ್ ವ್ಯಕ್ತಿಯ ಅಸ್ಪಷ್ಟ ಚಿತ್ರಣ ಬರುತ್ತದೆ. ಅದಕ್ಕೆ ಕಾರಣಗಳೂ ಇವೆ. ಆದರೆ ಆ ಉಗ್ರಗಾಮಿ ಮುಸಲ್ಮಾನ್ ಇರಬಹುದು. ಹಾಗೆಂದು ಎಲ್ಲಾ ಮುಸಲ್ಮಾನರು ಉಗ್ರಗಾಮಿಗಳಲ್ಲವಲ್ಲ.

ಏಕೆಂದರೆ ನಮ್ಮ ದೇಶದಲ್ಲಿ ಜನಾಧಾರಣೆಗೆ ಪಾತ್ರವಾಗಿರುವ ಧರ್ಮಗಳಲ್ಲಿ ಹಿಂದೂ ನಂತರದ ಸ್ಥಾನ ಇಸ್ಲಾಂಗೆ ಬರುತ್ತದೆ. ನಮ್ಮ ದೇಶದ ಪ್ರಗತಿಗೆ ಮತ್ತು ಇತಿಹಾಸ ನಿರ್ಮಾಣಕ್ಕೆ ಮುಸಲ್ಮಾನರ ಕೊಡುಗೆ ಸಹ ಇದೆ ಎಂಬುದನ್ನು ಮರೆಯಬಾರದು. ಆದರೆ ಅವರನ್ನು ಇತ್ತೀಚೆಗೆ ಉಗ್ರಗಾಮಿಗಳು ಎಂಬ ಮಸೂರದಿಂದ ನಾವು ನೋಡಲು ಆರಂಭಿಸಿದ್ದೇವೆ. ಹೀಗೆ ಇವರು ಇಡೀ ವಿಶ್ವದಲ್ಲಿಯೇ ಅತ್ಯಂತ ತಪ್ಪು ಗ್ರಹಿಕೆಗಳಿಗೆ ಪಾತ್ರರಾಗಿರುವ ಜನಗಳಾಗಿದ್ದಾರೆ. ಬದುಕಿನ ಗುಟ್ಟನ್ನು ಬಿಚ್ಚಿಡುವ ಇಸ್ಲಾಂ ಧರ್ಮದ ಸತ್ಯಾಸತ್ಯತೆ

ಅದರಲ್ಲಿಯೂ ಉಗ್ರಗಾಮಿಗಳು ಎಂದರೆ ಅವರು ಮುಸಲ್ಮಾನರು ಎಂಬ ಮಟ್ಟಕ್ಕೆ ಇವರನ್ನು ನಾವು ಪರಿಗಣಿಸಿದ್ದೇವೆ. ಆದರೆ ಮುಸಲ್ಮಾನರ ಪ್ರಕಾರ ಅವರು ನಿಜವಾದ ಮುಸಲ್ಮಾನರೇ ಅಲ್ಲ. ಅವರ ಬೋಧನೆಯಂತೆ "ಇಸ್ಲಾಂ" ಎಂಬ ಪದವೇ ಶಾಂತಿ ಎಂಬ ಅರ್ಥವನ್ನು ಸೂಚಿಸುತ್ತದೆಯಂತೆ. ಹೀಗಾಗಿ ಮುಸಲ್ಮಾನರು ಸ್ವಭಾವತಃ ಶಾಂತಿಯನ್ನು ಬಯಸುವ ಜನ. ಆದರೆ "ಜಿಹಾದ್" ಈ ಜನರನ್ನು ಪ್ರಪಂಚದ ದೃಷ್ಟಿಯಲ್ಲಿ ತಪ್ಪಾಗಿ ಅರ್ಥೈಸುತ್ತಿದೆ. ಭಾರತದಲ್ಲಿ ಜಿಹಾದ್ ಮತ್ತು ಉಗ್ರವಾದ ಈ ಎರಡು ಅಂಶಗಳ ನಡುವೆಯು ಸಹ ಇಸ್ಲಾಂ ಧರ್ಮದ ಕುರಿತಾಗಿ ಜನರು ಮಾತನಾಡಿಕೊಳ್ಳುತ್ತಾರೆ. ಬನ್ನಿ ಭಾರತೀಯ ಮುಸಲ್ಮಾನರ ಕುರಿತಾಗಿ ನಾವು ಇಂದು ನಿಮಗೆ ಕೆಲವೊಂದು ಕುತೂಹಲಕಾರಿ ವಿಚಾರಗಳನ್ನು ಇಂದು ನಿಮಗೆ ತಿಳಿಸಿಕೊಡುತ್ತೇವೆ....

ಹಲವು ರಾಜ್ಯಗಳಲ್ಲಿ ಇಸ್ಲಾಂ ಧರ್ಮದವರು ಹೆಚ್ಚಿಗೆ ಇದ್ದಾರೆ

ಹಲವು ರಾಜ್ಯಗಳಲ್ಲಿ ಇಸ್ಲಾಂ ಧರ್ಮದವರು ಹೆಚ್ಚಿಗೆ ಇದ್ದಾರೆ

ಅಧ್ಯಯನಗಳ ಪ್ರಕಾರ ಕಾಶ್ಮೀರ, ಲಕ್ಷದ್ವೀಪ, ಅಸ್ಸಾಂ ಮತ್ತು ಕೇರಳದಲ್ಲಿ ಇಸ್ಲಾಂ ಧರ್ಮೀಯರು ಹೆಚ್ಚಿಗೆ ಕಂಡು ಬರುತ್ತಾರೆ. ಭಾರತದಲ್ಲಿ 110 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಅಲ್ಪ ಸಂಖ್ಯಾತರಾಗಿ ಇಸ್ಲಾಂ ಧರ್ಮೀಯರು ಇದ್ದಾರೆ. ಹೀಗೆ ಭಾರತದಲ್ಲಿ ಇಸ್ಲಾಮಿಯರು ಐದನೆಯ ಒಂದು ಭಾಗದಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ.

ಅಧಿಕ ಸಂತಾನೋತ್ಪತ್ತಿ ಅನುಪಾತ

ಅಧಿಕ ಸಂತಾನೋತ್ಪತ್ತಿ ಅನುಪಾತ

ದೇಶದಲ್ಲಿರುವ ಇತರೆ ಧರ್ಮದ ಜನರಿಗೆ ಹೋಲಿಸಿದರೆ ಮುಸಲ್ಮಾನರಲ್ಲಿ ಅಧಿಕ ಸಂತಾನೋತ್ಪತಿ ಅನುಪಾತ ಕಂಡು ಬರುತ್ತದೆ. ಇವರಲ್ಲಿ ಮಕ್ಕಳು ಜನನವಾಗುವ ದರ ಅಧಿಕವಾಗಿರುವುದರಿಂದಾಗಿ ಇತ್ತೀಚಿನ ವರ್ಷಗಳಲ್ಲಿ 10% ರಿಂದ 14.2% ನಷ್ಟು ಹೆಚ್ಚಾಗಿದೆ. ಹೀಗಾಗಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಅವರ ಧರ್ಮದಲ್ಲಿರುವ ಕೆಲವು ನಂಬಿಕೆಗಳು ಸಹ ಕಾರಣವಾಗಿವೆ.

ವಲಸಿಗರ ಪೀಳಿಗೆಯವರು

ವಲಸಿಗರ ಪೀಳಿಗೆಯವರು

ಭಾರತದಲ್ಲಿರುವ ಹಲವಾರು ಮುಸಲ್ಮಾನರು ಅರಬ್ಬರು, ಟರ್ಕರು, ಆಪ್ಘಾನ್ನರು ಮತ್ತು ಮೊಘಲರ ಪೀಳಿಗೆಯವರಾಗಿದ್ದಾರೆ. ಇವರೆಲ್ಲರು ಭಾರತದ ವಿವಿಧ ನಗರಗಳಲ್ಲಿ, ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ ಹಂಚಿಹೋಗಿದ್ದಾರೆ. ಇವರನ್ನು ಭಾರತೀಯ ಮೂಲ ನಿವಾಸಿಗಳಿಂದ ಬೇರ್ಪಡಿಸಿ ನೋಡಲು ಸಾಧ್ಯವಾಗದ ಮಟ್ಟಕ್ಕೆ ಇವರು ನಮ್ಮಲ್ಲಿ ಬೆರೆತು ಹೋಗಿದ್ದಾರೆ. ಅವರನ್ನು ವಲಸಿಗರು ಎಂದು ಸಹ ಹೇಳಲು ಸಾಧ್ಯವಾಗದ ಮಟ್ಟಕ್ಕೆ ಇವರು ಭಾರತೀಯರಾಗಿದ್ದಾರೆ.

ಭಾರತದ ಎರಡನೆ ಅತಿ ದೊಡ್ಡ ಧರ್ಮ

ಭಾರತದ ಎರಡನೆ ಅತಿ ದೊಡ್ಡ ಧರ್ಮ

ಭಾರತದಲ್ಲಿ ಹಿಂದೂ ಧರ್ಮವು ಅಧಿಕವಾಗಿ ಅನುಸರಿಸಲ್ಪಡುವ ಧರ್ಮವಾಗಿದೆ. ಇಸ್ಲಾಂ 14.2% ನಷ್ಟು ಇದೆ. ಇಡೀ ವಿಶ್ವದಲ್ಲಿ ಇಸ್ಲಾಂ ಶೇ.10% ಜನಸಂಖ್ಯೆಯನ್ನು ಹೊಂದಿದೆ. ಹಾಗೆ ನೋಡಿದರೆ ವಿಶ್ವದಲ್ಲಿ ಮೂರನೇ ಒಂದು ಭಾಗ ಮುಸಲ್ಮಾನರು ಇದ್ದಾರೆ.

ಅಧಿಕ ಸಂಖ್ಯೆಯ ಮಸೀದಿಗಳು

ಅಧಿಕ ಸಂಖ್ಯೆಯ ಮಸೀದಿಗಳು

ಅಧ್ಯಯನಗಳ ಪ್ರಕಾರ ಭಾರತದಲ್ಲಿ 300,000 ಸಕ್ರಿಯ ಮಸೀದಿಗಳು ಇವೆ. ಇಷ್ಟು ಸಂಖ್ಯೆಯ ಮಸೀದಿಗಳು ಮುಸ್ಲಿಂ ರಾಷ್ಟ್ರಗಳಲ್ಲಿ ಸಹ ಇಲ್ಲವೆಂಬ ಹೆಗ್ಗಳಿಕೆ ಭಾರತಕ್ಕೆ ಲಭಿಸಿದೆ. ಯುಎಇ ನಲ್ಲಿ 1418 ಮತ್ತು ಬಾಂಗ್ಲಾದೇಶದಲ್ಲಿ 6000 ಮಸೀದಿಗಳಿವೆ.

ಮುಸಲ್ಮಾನರ ಕುರಿತ ಇಂಟರೆಸ್ಟಿಂಗ್ ಸಂಗತಿ

ಮುಸಲ್ಮಾನರ ಕುರಿತ ಇಂಟರೆಸ್ಟಿಂಗ್ ಸಂಗತಿ

ಹೀಗೆ ಭಾರತೀಯ ಮುಸಲ್ಮಾನರ ಕುರಿತಾಗಿ ಹಲವಾರು ಕುತೂಹಲಕಾರಿ ಸಂಗತಿಗಳು ಇವೆ. ಈ ಅಂಕಣದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಅದಕ್ಕಾಗಿ ಈ ಕೆಳಗೆ ನೀಡಲಾಗಿರುವ ಅಭಿಪ್ರಾಯ ಅಂಕಣದಲ್ಲಿ ಬರೆಯಿರಿ.

X
Desktop Bottom Promotion