Latest Updates
-
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ
ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಲಾಲ್‌ಬಾಗ್‌ನ ಪುಷ್ಪ ಪ್ರದರ್ಶನ
ಲಾಲ್ ಬಾಗ್ ಎಂದರೆ ಅದೊಂದು ಸುಂದರ ಸಸ್ಯಲೋಕ. ಅಲ್ಲಿ ವಿಹರಿಸುವಾಗ ಸಿಗುವ ಆನಂದವೇ ಬೇರೆ. ಅದರಲ್ಲೂ ಅಲ್ಲಿ ನಡೆಯುವ ಪುಷ್ಪ ಪ್ರದರ್ಶನವಂತೂ ಸ್ವರ್ಗವನ್ನೇ ಧರೆಗಿಳಿದಂತೆ ಮಾಡುತ್ತದೆ. ಎಲ್ಲಿ ಕಣ್ಣು ಹಾಯಿಸಿದರೂ ಪುಷ್ಪ ರಾಶಿಯೇ. ಹೂವನ್ನು ನೋಡುವಾಗ ಹೂವೇ ಹೂವೇ.. ಎನ್ನುವ ಹಾಡು ನಮಗೆ ಗೊತ್ತಿಲ್ಲದಂತೆ ಮನದಲ್ಲಿ ಹಾಡುತ್ತಿರುತ್ತದೆ. ದೇಶ ವಿದೇಶಗಳಿಂದ ತಂದಿರುವಂತಹ ಹಲವಾರು ಜಾತಿ, ಬಗೆಯ ಪುಷ್ಪಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.
ಕೇವಲ ಇಷ್ಟು ಮಾತ್ರವಲ್ಲದೆ ಹೂವಿನಿಂದಲೇ ವಿವಿಧ ರೀತಿಯ ಕಲಾಕೃತಿಗಳನ್ನು ರಚಿಸಲಾಗಿದ್ದು, ಇವುಗಳನ್ನೆಲ್ಲಾ ನೋಡಿದರೆ ಅಲ್ಲಿಂದ ಮುಂದೆ ಸಾಗಲು ಮನಸ್ಸೇ ಬರುವುದಿಲ್ಲ. ವಾರಾಂತ್ಯದಲ್ಲಿ ಒಳ್ಳೆಯ ರೀತಿಯಲ್ಲಿ ಸಮಯ ಕಳೆಯಬೇಕೆಂದುಕೊಂಡವರು ಒಮ್ಮೆ ಇಲ್ಲಿಗೆ ಭೇಟಿ ನೀಡಿ. ಆಗಸ್ಟ್ 7ರಿಂದ ಆಗಸ್ಟ್ 16ರ ತನಕ ಲಾಲ್ ಬಾಗ್‌ನಲ್ಲಿ ಪುಷ್ಪ ಪ್ರದರ್ಶನ ನಡೆಯಲಿದೆ. ಬನ್ನಿ ಪ್ರದರ್ಶನದ ಕೆಲವೊಂದು ಅತಿ ಸುಂದರ ನೋಟಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನೀಡುತ್ತಿದ್ದು ಮುಂದೆ ಓದಿ..

ಲಾಲ್‌ಬಾಗ್ ಪುಷ್ಪಪ್ರದರ್ಶನದ ಝಲಕ್
ಮೈಸೂರಿನ ಮಹಾರಾಜರ ಶಿಲ್ಪಾಕೃತಿಗಳು!

ಲಾಲ್‌ಬಾಗ್ ಪುಷ್ಪಪ್ರದರ್ಶನದ ಝಲಕ್
ಅಬ್ಬಬ್ಬಾ ಏನು ಗಾಂಭೀರ್ಯ!, ನಿಜಕ್ಕೂ ಆಶ್ಚರ್ಯವೆನಿಸುತ್ತಿದೆ ಅಲ್ಲವೇ.. ?

ಲಾಲ್‌ಬಾಗ್ ಪುಷ್ಪಪ್ರದರ್ಶನದ ಝಲಕ್
ಎಲ್ಲರನ್ನು ತನ್ನತ್ತ ಸೆಳೆಯುತ್ತಿರುವ ರಂಗುರಂಗಿನ ತರೇಹವಾರಿ ಹೂವುಗಳು

ಲಾಲ್‌ಬಾಗ್ ಪುಷ್ಪಪ್ರದರ್ಶನದ ಝಲಕ್
ಅಬ್ಬಾಬ್ಬಾ, ಈ ಹೂವುಗಳ ಅಂದ-ಚೆಂದ ಮನಸ್ಸಿಗೆ ಮುದ ನೀಡುವಂತಿದೆ ..!

ಮೈಸೂರಿನ ಐದು ಮಹಾರಾಜರ ಶಿಲ್ಪಾಕೃತಿಗಳು
ಬೆಂಗಳೂರು ಅರಮನೆಯ ಮುಂದೆ ದಂಪತಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು

ಲಾಲ್‌ಬಾಗ್ ಪುಷ್ಪಪ್ರದರ್ಶನದ ಝಲಕ್
ಬೆಂಗಳೂರು ಅರಮನೆಯನ್ನು ನೋಡಲು ಎರಡು ಕಣ್ಣುಗಳೇ ಸಾಲದು..!

ಲಾಲ್‌ಬಾಗ್ ಪುಷ್ಪಪ್ರದರ್ಶನದ ಝಲಕ್
ಕೈಬೀಸಿ ಕರೆಯುತ್ತಿರುವ ಬಣ್ಣಬಣ್ಣದ ಹೂಗಳು..

ಲಾಲ್‌ಬಾಗ್ ಪುಷ್ಪಪ್ರದರ್ಶನದ ಝಲಕ್
ಎಲ್ಲರನ್ನು ತನ್ನತ್ತ ಸೆಳೆಯುತ್ತಿರುವ ಗುಲಾಬಿ ಹೂ

ಲಾಲ್‌ಬಾಗ್ ಪುಷ್ಪಪ್ರದರ್ಶನದ ಝಲಕ್
ಎಲ್ಲರನ್ನು ತನ್ನತ್ತ ಸೆಳೆಯುತ್ತಿರುವ ಗುಲಾಬಿ ಹೂ

ಲಾಲ್‌ಬಾಗ್ ಪುಷ್ಪಪ್ರದರ್ಶನದ ಝಲಕ್
ಪುಷ್ಪಗಳಿಂದ ವಾದ್ಯವೊಂದರ ಕಲಾಕೃತಿಯನ್ನು ರಚಿಸಿರುವುದು

ಲಾಲ್‌ಬಾಗ್ ಪುಷ್ಪಪ್ರದರ್ಶನದ ಝಲಕ್
ಪುಷ್ಪಮೇಳದಲ್ಲಿದ್ದ ಹಳದಿ ಚೆಂಡುಹೂಗಳು ನೋಡುಗರ ಕಣ್ಣಿಗೆ ಮುದ ನೀಡಿದವು

ಲಾಲ್‌ಬಾಗ್ ಪುಷ್ಪಪ್ರದರ್ಶನದ ಝಲಕ್
ದಾಸವಾಳ ತಾನು ಯಾರಿಗೂ ಕಮ್ಮಿಯಲ್ಲ ಎನ್ನುವಂತೆ ಫೋಸ್ ಕೊಟ್ಟಿತು!



Click it and Unblock the Notifications
