Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಏನೇ ಹೇಳಿ, ವಿಷಜಂತು ಜನರ ಸಹವಾಸವೇ ಬೇಡ...
ನಮ್ಮ ಜೀವನದಲ್ಲಿ ನಾವು ಹಲವಾರು ಜನರನ್ನು ಭೇಟಯಾಬೇಕಾದಂತಹ ಪರಿಸ್ಥಿತಿ ಉಂಟಾಗುತ್ತದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಅವರು ನಮಗೆ ಹತ್ತಿರವಾಗುತ್ತಾರೆ ಮತ್ತು ಈ ನಿಕಟತನ ಅವರಿಗೆ ನಾವು ಹೆಚ್ಚು ಬಾಗುವಂತೆ ಮಾಡುತ್ತದೆ. ಆದರೆ ನಮ್ಮೊಡನಿರುವ ಈ ವ್ಯಕ್ತಿಗಳ ಅಂತರಾತ್ಮ ನಮಗೆ ನಿಧಾನವಾಗಿ ಅರಿವಿಗೆ ಬರುತ್ತದೆ. ನಮ್ಮೊಂದಿಗೆ ಅವರು ಹೊರಗೆ ಆತ್ಮೀಯವಾಗಿದ್ದರೂ ಒಳಗೆ ಮತ್ಸರದಿಂದ ಕುದಿಯುತ್ತಿರುತ್ತಾರೆ. ಅವರ ಚಲನವಲನಗಳು ನಮಗೆ ಪೂರಕವಾಗಿದೆ ಎಂದೇ ನಾವು ಭಾವಿಸುತ್ತೇವೆ ಆದರೆ ನಮ್ಮನ್ನು ಸಿಕ್ಕಿಸಿ ಹಾಕುವ ಸಂಚಿಗಾಗಿ ಅವರು ಕಾಯುತ್ತಿರುತ್ತಾರೆ ಎಂಬುದು ನಮಗೆ ಅರಿವಾಗುವುದೇ ಇಲ್ಲ.
ನಿಮ್ಮನ್ನು ಘಾಸಿಗೊಳಿಸುತ್ತಿರುವ ಈ ವ್ಯಕ್ತಿಗಳಿಗೆ ಅವರ ತಪ್ಪುಗಳನ್ನು ತಿಳಿಸಿ. ಅವರು ಚುಚ್ಚುಮಾತುಗಳು ಇಲ್ಲವೇ ವ್ಯಂಗ್ಯೋಕ್ತಿಗಳು ನಿಮ್ಮ ಮನಸ್ಸಿಗೆ ನೋವನ್ನುಂಟು ಮಾಡುತ್ತಿದೆ ಎಂಬುದನ್ನು ತಿಳಿಸಿ. ನೀವು ಎಷ್ಟೂ ತಿಳಿಸಿದರೂ ಅವರು ಬದಲಾಗುತ್ತಿಲ್ಲ ಎಂದಾದಲ್ಲಿ ಆದಷ್ಟು ಅವರನ್ನು ದೂರವಿರಿಸಲು ಪ್ರಯತ್ನಿಸಿ. ನೀವು ಕೂಡ ಇಂತಹ ವ್ಯಕ್ತಿಗಳೊಂದಿಗೆ ಇದ್ದು ಅವರ ಸ್ವಭಾವವನ್ನು ಅರಿತುಕೊಳ್ಳಲು ನಿಧಾನವಾಗುತ್ತಿದ್ದೀರಾ ಎಂದಾದಲ್ಲಿ ಇಂದಿನ ಲೇಖನದಲ್ಲಿ ಇಂತಹ ವ್ಯಕ್ತಿಗಳ ಕುರಿತು ಕೆಲವೊಂದು ಮಾಹಿತಿಗಳನ್ನು ನೀಡುತ್ತಿದ್ದೇವೆ. ಅವರು ನಿಮ್ಮೊಂದಿಗೆ ನಡೆದುಕೊಳ್ಳುವ ರೀತಿಯನ್ನು ನಾವಿಲ್ಲಿ ವಿವರಿಸುತ್ತಿದ್ದು ಇಲ್ಲಿದೆ ಸಂಪೂರ್ಣ ಮಾಹಿತಿ...

ಮಾತಿನಿಂದಲೇ ಘಾಸಿಗೊಳಿಸುತ್ತಾರೆ
ಈ ವಿಷಕಾರುವ ಜನರು ನಿಮ್ಮನ್ನು ತಮ್ಮ ಮಾತುಗಳು ಅಥವಾ ಕ್ರಿಯೆಗಳಿಂದ ಘಾಸಿಗೊಳಿಸುತ್ತಾ ಇರುತ್ತಾರೆ. ಅವರು ಯಾವಾಗಲು ನಿಮ್ಮನ್ನು ಕೆಳಕ್ಕೆ ತರಲು ಪ್ರಯತ್ನಿಸುತ್ತಾ ಇರುತ್ತಾರೆ ಮತ್ತು ಅವರು ಮಾತ್ರ ನಿಮ್ಮ ಶ್ರೇಯೋಭಿಲಾಷಿಗಳು ತಾವು ಎಂದು ತೋರಿಸಿಕೊಳ್ಳುತ್ತಾ ಇರುತ್ತಾರೆ. ನೀವು ಭಾವನಾತ್ಮಕವಾಗಿ ನೊಂದುಕೊಳ್ಳುವ ಮುನ್ನ ಅವರನ್ನು ನಿಭಾಯಿಸುವುದು ಹೇಗೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಇಲ್ಲವಾದಲ್ಲಿ ಅವರ ಒಂದೇ ಗುರಿ ನಿಮ್ಮಲ್ಲಿ ದ್ವೇಷವನ್ನು ಹರಡುವುದಾಗಿರುತ್ತದೆ. ಅವರ ದ್ವೇಷ ಜ್ವಾಲೆಯಲ್ಲಿ ನೀವು ಬೆಂದು ಹೋಗುವ ಮುನ್ನ ಎಚ್ಚೆತ್ತುಕೊಳ್ಳಿ.

ಅವರು ಯಾವಾಗಲು ಒತ್ತಿ ಒತ್ತಿ ಹೇಳುತ್ತಾರೆ
ಅವರ ಉದ್ದೇಶ ಏನಾದರು ಕೆಟ್ಟದ್ದು ಮಾಡುವುದಾಗಿರುವುದರಿಂದ, ಸದಾ ತಮ್ಮ ಗುರಿಯ ಮೇಲೆಯೆ ನಿಗಾ ಇರಿಸಿರುವ ಅವರು ತಮ್ಮ ಮಾತುಗಳಲ್ಲಿ ಆ ಉದ್ದೇಶವನ್ನು ವ್ಯಕ್ತಪಡಿಸುತ್ತಾರೆ. ಮಾತನಾಡುವಾಗ ಯಾವಾಗಲು ನಕಾರಾತ್ಮಕ ಅಂಶಗಳ ಕುರಿತು ಮಾತನಾಡುವ ಅವರು, ಆ ನಕಾರಾತ್ಮಕತೆಯನ್ನು ನಿಮಗೆ ವರ್ಗಾಯಿಸುತ್ತಾರೆ. ಮಾತುಗಳನ್ನು ಅದರಲ್ಲಿಯು ತಮ್ಮ ದ್ವೇಷ ಈಡೇರಿಸುವ ಮಾತುಗಳನ್ನು ಒತ್ತಿ ಒತ್ತಿ ಹೇಳುತ್ತಾ, ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತುತ್ತಾರೆ. "ನಾನು ಹೇಳೋದು ಹೇಳಿದ್ದೇನೆ ಆಮೇಲೆ ನಿಮ್ಮಿಷ್ಟ"...ಇಂತಹ ಮಾತುಗಳು ಆಗಾಗ ಅವರ ಬಾಯಲ್ಲಿ ಬರುತ್ತದೆ. ನೀವು ಆ ವಿಚಾರವನ್ನು ಮರೆಯದಂತೆ ಅವರು ನೆನಪಿಸುತ್ತಾ ಇರುತ್ತಾರೆ. ನೆನಪಿಡಿ ಜೀವನದಲ್ಲಿ ಕೃತಜ್ಞತೆಯನ್ನು ಹೊಂದಿರುವವರು ಸಂತೋಷವಾಗಿರುತ್ತಾರೆಯೇ ಹೊರತು, ದ್ವೇಷ, ಅಸೂಯೆಯನ್ನು ಹೊಂದಿರುವವರಲ್ಲ.

ನಿಮ್ಮನ್ನು ನಿರುತ್ಸಾಹಗೊಳಿಸುತ್ತಾರೆ
ನಿಮ್ಮನ್ನು ನಿರಂತರ ಪ್ರೋತ್ಸಾಹ ಮಾಡುವ ಜನರು ನಿಜಕ್ಕು ನಿಮ್ಮ ಆಸ್ತಿಯಾಗಿರುತ್ತಾರೆ. ಅವರು ನೀವು ನಿಮ್ಮ ಕೆಲಸವನ್ನು ಸರಿಯಾಗಿ ಮಾಡದೆ ಇದ್ದರು ಸಹ ನಿಮ್ಮನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸುವುದಿಲ್ಲ. ಆದರೆ ನಿಮ್ಮನ್ನು ನಿರುತ್ಸಾಹಪಡಿಸುವ ಜನರು ನಿಮ್ಮ ಸುತ್ತಾ ಇದ್ದಲ್ಲಿ, ಅವರು ನಿಮ್ಮ ಪಾಲಿಗೆ ವಿಷಕಾರುವ ಜನರು ಎಂಬುದನ್ನು ಮರೆಯಬೇಡಿ. ಅವರಿಂದ ಸಾಧ್ಯವಾದಷ್ಟು ಅಂತರವನ್ನು ಕಾಪಾಡಿಕೊಳ್ಳಿ.

ಇತರರ ಬಗ್ಗೆ ಕೆಟ್ಟದ್ದನ್ನು ಮಾತನಾಡುತ್ತಾರೆ
ಈ ದುಷ್ಟ ಜನ ತಾವು ಮಾತ್ರ ಸಜ್ಜನರು ಇತರರು ಎಲ್ಲರೂ ಕೆಟ್ಟವರು ಎಂದು ಮಾತನಾಡಿಕೊಳ್ಳುತ್ತಾ ಇರುತ್ತಾರೆ. ಯಾವಾಗಲು ಇತರರು ಮಾಡುವ ಸಣ್ಣ ಸಣ್ಣ ತಪ್ಪುಗಳನ್ನು ಎತ್ತಿ ತೋರಿಸುತ್ತಾರೆ. ಅಸಲಿಗೆ ಅದು ತಪ್ಪು ಆಗಿಲ್ಲವಾದರು ಅದನ್ನು ತಪ್ಪು ಎಂದು ಸಾಭೀತು ಮಾಡುತ್ತಾರೆ. ಆ ಮೂಲಕ ಅವರ ಬಗ್ಗೆ ನಿಮ್ಮಲ್ಲಿ ಸಹ ಒಂದು ಕೆಟ್ಟ ಅಭಿಪ್ರಾಯವನ್ನು ಹುಟ್ಟು ಹಾಕುತ್ತಾರೆ. ಆದ್ದರಿಂದ ಅವರು ಇವರು ಹೇಳುವುದನ್ನು ಸಾಧ್ಯವಾದ ಮಟ್ಟಿಗೆ ನಂಬಬೇಡಿ.



Click it and Unblock the Notifications