Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೈಸೂರಿನ ಹುಲಿ ಖ್ಯಾತಿಯ ಟಿಪ್ಪುವಿನ ರೋಚಕ ಇತಿಹಾಸ
ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ಬಂದೂಕಿನ ಶಕ್ತಿಯಿಂದ ದೇಶವನ್ನೇ ತನ್ನ ವಶಕ್ಕೆ ತೆಗೆದುಕೊಂಡ ಬ್ರಿಟಿಷರ ವಿರುದ್ದ ಹೋರಾಡಿದವರಲ್ಲಿ ಪ್ರಮುಖ ಹೆಸರು ಟಿಪ್ಪು ಸುಲ್ತಾನ್. ತಮ್ಮ ನಿಜನಾಮಧೇಯಕ್ಕಿಂತಲೂ ಶೇರ್-ಎ-ಮೈಸೂರ್ (ಮೈಸೂರಿನ ಹುಲಿ) ಎಂಬ ಅಂಕಿತನಾಮದಿಂದಲೇ ಹೆಚ್ಚು ಪ್ರಸಿದ್ಧನಾಗಿದ್ದ ಟಿಪ್ಪು ಸುಲ್ತಾನ್ ಕರ್ನಾಟಕದ ಹೆಸರನ್ನು ಇತಿಹಾಸದಲ್ಲಿ ಚಿರಸ್ಥಾಯಿಯಾಗಿಸಿದ್ದಾರೆ.
ಹದಿನೆಂಟನೆಯ ಶತಮಾನದ ಇತಿಹಾಸವನ್ನು ಪರಿಗಣಿಸಿದರೆ ಭಾರತದಾದ್ಯಂತ ರಾಜರ, ಸಾಮಂತರ ಆಳ್ವಿಕೆ ಜಾರಿಯಲ್ಲಿತ್ತು. ವೈರತ್ವ ಮತ್ತು ಮಿತೃತ್ವಗಳನ್ನು ನಿಭಾಯಿಸಲು ಯುದ್ಧಗಳು ನಡೆಯುವುದು ಸಾಮಾನ್ಯವಾಗಿತ್ತು. ಇಬ್ಬರು ಸ್ನೇಹಿತರ ನಡುವೆ ವೈರತ್ವ ಹುಟ್ಟುಹಾಕಿ ಇಬ್ಬರ ಜಗಳದಿಂದ ಲಾಭ ಪಡೆಯುವ 'ಒಡೆದು ಆಳುವ ನೀತಿ'ಯನ್ನು ಅನುಸರಿಸಿದ ಬ್ರಿಟಿಷರು ತಮ್ಮ ಯೋಜನೆಯಲ್ಲಿ ಬಹುತೇಕ ಯಶಸ್ವಿಯೂ ಆದರು.
ಆದರೆ ಬ್ರಿಟಿಷರ ಬಂದೂಕಿಗೆ ಎದೆಯೊಡ್ಡಿ ನಿಂತು ಅವರ ಆಕ್ರಮಣವನ್ನು ಎದುರಿಸಿ ತಮ್ಮ ನೆಲ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಯತ್ನಿಸಿದ ಮಹಾನ್ ಪರಾಕ್ರಮಿಗಳಲ್ಲಿ ಟಿಪ್ಪು ಸುಲ್ತಾನ್ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಅಷ್ಟೇ ಅಲ್ಲ, ತಮ್ಮ ಸುತ್ತಮುತ್ತಲ ರಾಜರ ಮತ್ತು ಸಾಮಂತರಲ್ಲಿ ಒಗಟ್ಟು ಮೂಡಿಸಿ ಇಡಿಯ ದಕ್ಷಿಣ ಭಾರತವನ್ನೇ ಬ್ರಿಟಿಷರ ತೆಕ್ಕೆಯಿಂದ ರಕ್ಷಿಸಿಕೊಂಡ ಕಾರಣಕ್ಕಾಗಿಯೇ ಅವರಿಗೆ ಶೇರ್-ಎ-ಹಿಂದ್ (ಭಾರತದ ಹುಲಿ) ಮತ್ತು ಶೇರ್-ಎ-ಮಷ್ರಿಖ್ (ಪೂರ್ವದ ಹುಲಿ) ಎಂಬ ಇನ್ನೆರಡು ಅಂಕಿತನಾಮಗಳೂ ಲಭಿಸಿವೆ.
ಉತ್ತರ ಭಾರತವನ್ನು ಸುಲಭವಾಗಿ ಆಕ್ರಮಿಸಿದ ಬ್ರಿಟಿಷರು ದಕ್ಷಿಣ ಭಾರತದಲ್ಲಿ ಟಿಪ್ಪೂ ಸುಲ್ತಾನನ್ನು ಎದುರಿಸಲು ಬಹಳ ಕಷ್ಟಪಡಬೇಕಾಗಿ ಬಂದಿತ್ತು. ಟಿಪ್ಪು ಸಾಹೇಬ್ ಎಂದು ಬ್ರಿಟಿಷರಿಂದ ಕರೆಯಲ್ಪಡುತ್ತಿದ್ದ ಟಿಪ್ಪು ಸುಲ್ತಾನ್ ಅಂದಿನ ದಕ್ಷಿಣದ ಪ್ರಾಂತಗಳಾದ ಮದ್ರಾಸ್ ಮತ್ತು ಮಂಗಳೂರು ಪ್ರಾಂತಗಳನ್ನು ಮೊದಲ ಮತ್ತು ಎರಡು ಅಂಗ್ಲೋ ಮೈಸೂರ್ ವಾರ್ (ಅಥವಾ ಅಂಗ್ಲ-ಮೈಸೂರು ಯುದ್ದ) ಗಳಲ್ಲಿ ಬ್ರಿಟಿಷರ ವಿರುದ್ಧ ಸೆಣೆಸಿ ಉಳಿಸಿದ್ದರು.

ಬಾಲ್ಯ
1750ರಲ್ಲಿ ಇಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ದೇವನಹಳ್ಳಿಯಲ್ಲಿ ಹೈದರಾಲಿ ಮತ್ತು ಫಾತಿಮಾ ಫಖರುನ್ನೀಸಾ ದಂಪತಿಯ ಮಗನಾಗಿ ಹುಟ್ಟಿದರು. ಆ ದಿನಗಳಲ್ಲಿ ಹೈದರಾಲಿ ಮೈಸೂರು ಸಂಸ್ಥಾನದ ಸೇನೆಯಲ್ಲಿ ಅಧಿಕಾರಿಯಾಗಿದ್ದರು. ಹುಟ್ಟಿದಾಗ ಟಿಪ್ಪೂ ಸುಲ್ತಾನರಿಗೆ ಫತೇಹ್ ಅಲಿ ಎಂದು ನಾಮಕರಣವಾಗಿತ್ತು. ಬಳಿಕ ಹೈದರಾಲಿ ನಂಬುವ ಸಂತರಾದ ಸಂತ ಟಿಪ್ಪೂ ಮಸ್ತಾನ್ ಔಲಿಯಾರವರ ಗೌರವಾರ್ಥ ತಮ್ಮ ಮಗನನ್ನೂ ಟಿಪ್ಪೂ ಸುಲ್ತಾನ್ ಎಂದು ಕರೆಯತೊಡಗಿದರು. ವಾಸ್ತವವಾಗಿ ಟಿಪ್ಪೂ ಸುಲ್ತಾನ್ ಎಂಬುದು ಅವರನ್ನು ಕರೆಯುವ ಹೆಸರಾಗಿದೆ, ಅವರ ನಿಜನಾಮಧೇಯ ಸುಲ್ತಾನ್ ಫತೇಹ್ ಅಲಿ ಖಾನ್ ಶಹಾಬ್ ಎಂದಾಗಿದೆ.

ಉನ್ನತ ಶಿಕ್ಷಣ
ಟಿಪ್ಪು ಸುಲ್ತಾನನ ಜನನದ ಬಳಿಕ ಹೈದರಾಲಿಯ ವೃತ್ತಿಜೀವನದಲ್ಲಿ ಏಳ್ಗೆ ಕಾಣುತ್ತಾ ಹೋಗಿತ್ತು. ಮುಂದಿನ ಹನ್ನೊಂದು ವರ್ಷಗಳಲ್ಲಿ ಹಂತಹಂತವಾಗಿ ಮೇಲೇರಿದ ಅವರು 1761ರಲ್ಲಿ ಮೈಸೂರು ಸಂಸ್ಥಾನದ ಆಡಳಿತಗಾರರಾಗಿ ನೇಮಕಗೊಂಡರು. ಅಂದಿನ ದಿನಗಳಲ್ಲಿ ಹೈದರಾಲಿ ಫ್ರೆಂಚ್ ಸರ್ಕಾರದೊಂದಿಗೆ ಹೆಚ್ಚು ವ್ಯವಹಾರ ನಡೆಸುತ್ತಿದ್ದರು. ಇದೇ ಮೈತ್ರಿಯಿಂದ ಟಿಪ್ಪೂ ಸುಲ್ತಾನರಿಗೆ ಫ್ರೆಂಚ್ ವಿಶ್ವವಿದ್ಯಾಲಯದಲ್ಲಿ ರಾಜತಾಂತ್ರಿಕ ಮತ್ತು ರಾಜ್ಯಾಡಳಿತ ವಿಷಯಗಳಲ್ಲಿ ಉನ್ನತ ಶಿಕ್ಷಣ ದೊರಕಿತು.

ಉನ್ನತ ಶಿಕ್ಷಣ
ಮುಂದಿನ ನಾಲ್ಕು ವರ್ಷಗಳ ಕಾಲ ಅಂದಿನ ದಿನಗಳಲ್ಲಿ ಲಭ್ಯರಿದ್ದ ಅತ್ಯಂತ ದಕ್ಷರಾದ ಶಿಕ್ಷಕರಿಂದ ಅವರು ವಿವಿಧ ವಿಷಯಗಳಲ್ಲಿ ಶಿಕ್ಷಣ ಪಡೆದರು. ರಾಜತಾಂತ್ರಿಕ ವಿಷಯದ ಜೊತೆಗೇ ಕುದುರೆಸವಾರಿ, ಕತ್ತಿವರಸೆ, ಬಂದೂಕು ಚಲಾಯಿಸುವಿಕೆ ಮೊದಲಾದ ವಿದ್ಯೆಗಳಲ್ಲೂ ಪಾರಾಂಗತರಾದರು. 1765ರಲ್ಲಿ ಸ್ವದೇಶಕ್ಕೆ ಹಿಂದಿರುಗಿದ ಟಿಪ್ಪೂ ಸುಲ್ತಾನ್ ಮಾಡಿದ ಮೊದಲ ಕೆಲಸವೆಂದರೆ ಮಲಬಾರ್ ಪ್ರಾಂತದ ಸಾಮಂತರ ವಿರುದ್ಧ ಯುದ್ಧ ಮಾಡಿ ಸಾಮಂತ ಮತ್ತು ಅವರ ಕುಟುಂಬವನ್ನು ವಶಕ್ಕೆ ಪಡೆದುಕೊಂಡಿದ್ದು. ಆಗ ಅವರ ವಯಸ್ಸು ಕೇವಲ ಹದಿನೈದು ವರ್ಷ! ಅವರ ಸೈನ್ಯದಲ್ಲಿದ್ದುದು ಕೇವಲ ಎರಡು ಸಾವಿರ ಯೋಧರು ಮಾತ್ರ. ಬಳಿಕ ಮಲಬಾರ್ ಪ್ರಾಂತದ ಮೇಲೆ ದಂಡೆತ್ತಿ ಬಂದ ಹೈದರಾಲಿಗೆ ಮಲಬಾರ್ ಪ್ರಾಂತವನ್ನು ಕಬಳಿಸಲು ಹೆಚ್ಚು ಶ್ರಮದ ಅಗತ್ಯವೇ ಬೀಳಲಿಲ್ಲ.

ಘಾಝಿ ಖಾನ್
ಟಿಪ್ಪು ಸುಲ್ತಾನರ ಶಿಕ್ಷಣದಲ್ಲಿ ಮಹತ್ವದ ಪಾತ್ರ ವಹಿಸಿದ ವ್ಯಕ್ತಿಯೆಂದರೆ ಘಾಝಿ ಖಾನ್. ಹೈದರಾಲಿಯ ಸೈನ್ಯದಲ್ಲಿ ಸೇನಾಪತಿಯಾಗಿದ್ದ ಇವರು ಸ್ವತಃ ಅಪ್ರತಿಮ ಯೋಧರೂ, ಯುದ್ದದ ಕುರಿತಾಗಿ ಅಪಾರ ಅನುಭವವುಳ್ಳವರೂ ಆಗಿದ್ದರು. ಟಿಪ್ಪುಸುಲ್ತಾನರಿಗೆ ತಮ್ಮ ವಿದ್ಯೆಯನ್ನು ಧಾರೆ ಎರೆದ ಅವರು ಟಿಪ್ಪುಸುಲ್ತಾನ್ ಮುಂದಿನ ದಿನಗಳಲ್ಲಿ ಕೇವಲ ಓರ್ವ ಯೋಧ ಮಾತ್ರವಲ್ಲದೇ ಅಪ್ರತಿಮ ಆಡಳಿತಗಾರನಾಗಲೂ ಕಾರಣರಾದರು.

ಮೈಸೂರು ರಾಜ್ಯದ ಆಡಳಿತಗಾರನಾದ ಟಿಪ್ಪುಸುಲ್ತಾನ್
1782ರ ಡಿಸೆಂಬರ್ ಆರರಂದು ಹೈದರಾಲಿ ಚಿತ್ತೂರಿನಲ್ಲಿ ವಿಧಿವಶರಾದರು. ಅವರ ಬೆನ್ನಿನಲ್ಲೊಂದು ದೊಡ್ಡದಾದ ವ್ರಣ ಅಥವಾ ಬೊಕ್ಕೆ ಎದ್ದಿದ್ದು ಯಾವ ಚಿಕಿತ್ಸೆಗೂ ಬಗ್ಗಿರಲಿಲ್ಲ. ಅಂದಿನ ಇತಿಹಾಸಕಾರರು ಬೊಕ್ಕೆಯ ಬಗ್ಗೆ ನೀಡಿದ ವಿವರಣೆಗಳನ್ನು ಪರಿಗಣಿಸಿ ಇದು ಕ್ಯಾನ್ಸರ್ ಆಗಿತ್ತು ಎಂದು ಇಂದಿನ ಇತಿಹಾಸಕಾರರು ದೃಢಪಡಿಸಿದ್ದಾರೆ. ಆ ಸಮಯದಲ್ಲಿ ಮಲಬಾರ್ ಪ್ರಾಂತದಲ್ಲಿದ್ದ ಟಿಪ್ಪುಸುಲ್ತಾನ್ ತಂದೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಚಿತ್ತೂರಿಗೆ ಧಾವಿಸಿದರು. ಅವರು ಮೈಸೂರು ತಲುಪುವ ಮುನ್ನವೇ ರಾಜನಪಟ್ಟ ಪಡೆಯಬೇಕೆಂಬ ದುರಾಸೆಯಿಂದ ಹೈದರಾಲಿಯ ತಮ್ಮ ಅಬ್ದುಲ್ ಕರೀಂ ಸಂಚು ರೂಪಿಸಿದ್ದರು. ಆದರೆ ಸಂಚು ಫಲಕೊಡುವ ಮುನ್ನವೇ ಮೈಸೂರು ತಲುಪಿದ ಟಿಪ್ಪುಸುಲ್ತಾನ್ ಯಾವುದೇ ಸಂಚಿಕೆ ಅವಕಾಶ ನೀಡದೇ ತಂದೆಯ ಸ್ಥಾನವನ್ನು ಅಲಂಕರಿಸಿದರು.

ಮೈಸೂರು ರಾಜ್ಯದ ಆಡಳಿತಗಾರನಾದ ಟಿಪ್ಪುಸುಲ್ತಾನ್
ಮೈಸೂರಿನ ರಾಜರಾಗುವ ಮೊದಲೇ ಮೊದಲ ಮತ್ತು ಎರಡನೇ ಅಂಗ್ಲೋ ಮೈಸೂರು ಯುದ್ಧಗಳನ್ನು ಜಯಿಸಿದ ಅನುಭವ ಪಡೆದಿದ್ದರು. ಆದರೆ ಇಡಿಯ ಭಾರತವನ್ನೇ ಜಯಿಸುವ ಮಹತ್ವಾಕಾಂಕ್ಷೆಯಿಂದ ಆಗಮಿಸಿದ್ದ ಬ್ರಿಟಿಷರ ವಿರುದ್ದ ಹೋರಾಡುವುದು ಬಹಳ ಕಷ್ಟ ಎಂದು ಅವರು ಅರಿತಿದ್ದರು. ಹೈದರಾಲಿಯ ಸಾವಿನ ಕುರಿತು ಬ್ರಿಟಿಷರಿಗೆ ಸುದ್ದಿ ತಲುಪಿದಾಗ ಬ್ರಿಟಿಷ್ ಸೇನೆಯ ಮುಂದಾಳತ್ವದ ಜವಾಬ್ದಾರಿಯನ್ನು ಅಂದಿನ ಮೇಜರ್ ಜನರಲ್ ಕೂಟೆಯವರಿಂದ ಜೇಮ್ಸ್ ಸ್ಟುವರ್ಟ್ ರಿಗೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿತ್ತು. ಇದು ಟಿಪ್ಪುಸುಲ್ತಾನರಿಗೆ ವರವಾಗಿ ಪರಿಣಮಿಸಿತ್ತು. ಇಲ್ಲದಿದ್ದರೆ ಆ ಸೂಕ್ಷ್ಮ ಘಳಿಗೆಯಲ್ಲಿ ಬ್ರಿಟಿಷರ ಧಾಳಿಯಾಗಿದ್ದಿದ್ದರೆ ಮೈಸೂರಿನ ಇತಿಹಾಸವೇ ಬದಲಾಗಿ ಹೋಗುತ್ತಿತ್ತು, ಇಡಿಯ ಮೈಸೂರು ಸುಲಭವಾಗಿ ಬ್ರಿಟಿಷರ ವಶವಾಗುತ್ತಿತ್ತು.

ಭಾರತದ ಪ್ರಥಮ ಕ್ಷಿಪಣಿಗಳು - ಮೈಸೂರು ರಾಕೆಟ್ (Mysorean rockets)
ತಮ್ಮ ಬಳಿ ಇದ್ದ ಈಟಿ, ಕತ್ತಿ, ಗುರಾಣಿಗಳಿಗಿಂತಲೂ ಬ್ರಿಟಿಷರ ಬಳಿ ಇರುವ ಬಂದೂಕುಗಳು ಬಹಳ ಶಕ್ತಿಶಾಲಿಯಾದುದು ಎಂದು ಟಿಪ್ಪುಸುಲ್ತಾನ್ ಅರಿತಿದ್ದರು. ಇದಕ್ಕೆಂದೇ ದೂರದಿಂದಲೇ ಬ್ರಿಟಿಷರ ಧಾಳಿಯನ್ನು ಎದುರಿಸಬಹುದಾದ ಕ್ಷಿಪಣಿಗಳ ತಯಾರಿಕೆಗೆ ಅವರು ಪ್ರಮುಖ ಆದ್ಯತೆ ನೀಡಿದರು. ಇದರ ಪರಿಣಾಮವಾಗಿ ರೂಪಿತವಾದ ಮೈಸೂರು ಕ್ಷಿಪಣಿ ಅಥವಾ ಮೈಸೂರು ರಾಕೆಟ್ ಭಾರತದ ಪ್ರಥಮ ಕ್ಷಿಪಣಿಗಳೆಂದು ಪ್ರಸಿದ್ಧವಾಗಿವೆ.

ಮೈಸೂರು ರಾಕೆಟ್
ಈ ಕ್ಷಿಪಣಿಗಳು ಸುಮಾರು ಎರಡು ಕಿ.ಮೀ ವರೆಗೆ (ಇತ್ತೀಚೆಗೆ ದೃಢಪಟ್ಟಿಸಿರುವ ಪ್ರಕಾರ) ಪ್ರಹಾರ ಮಾಡಬಲ್ಲ ಕ್ಷಮತೆ ಹೊಂದಿದ್ದವು. ಹೈದರಾಲಿಯ ಸಮಯದಲ್ಲಿಯೇ ಈ ಕ್ಷಿಪಣಿಗಳನ್ನು ಉಪಯೋಗಿಸಲಾಗಿದ್ದರೂ ತಂತ್ರಜ್ಞಾನದಲ್ಲಿ ಮತ್ತು ಕ್ಷಮತೆಯಲ್ಲಿ ಹಿಂದಿದ್ದವು. ಟಿಪ್ಪುಸುಲ್ತಾನ ಅಭಿವೃದ್ಧಿ ಪಡಿಸಿದ ಈ ಕ್ಷಿಪಣಿಗಳು ತಮ್ಮೊಂದಿಗೆ ಚೂಪಾದ ಬಾಣಗಳಂತಿರುವ ಲೋಹದ ತುಂಡುಗಳನ್ನೂ ಕೊಂಡೊಯ್ದು ವೈರಿಗಳ ತಲೆ ಅಥವಾ ಶರೀರವನ್ನು ಸೀಳಿ ಬಿಡುತ್ತಿದ್ದವು.

ಸೈನಿಕರಿಗೆ ತರಬೇತಿ
ಈ ಕ್ಷಿಪಣಿಗಳನ್ನು ಸೂಕ್ತವಾಗಿ ಬಳಸಲು ಇಡಿಯ ಮೈಸೂರು ಸಂಸ್ಥಾನದಲ್ಲಿ ಇಪ್ಪತ್ತನಾಲ್ಕು ಕುಶೂನ್ (cushoon) ಎಂಬ ಕ್ಷಿಪಣಿಪಡೆಗಳನ್ನು ರಚಿಸಿ ಪ್ರತಿ ಪಡೆಯಲ್ಲಿಯೂ ಈ ಕ್ಷಿಪಣಿಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಇನ್ನೂರು ನುರಿತ ಮತ್ತು ತರಬೇತಿ ಪಡೆದ ನಂಬಿಗಸ್ತ ಸೈನಿಕರನ್ನು ನಿಯೋಜಿಸಿದ. ಅಲ್ಲದೇ ಈ ಕ್ಷಿಪಣಿಗಳನ್ನು ಹೇಗೆ ಬಳಸಬೇಕು, ಯಾವ ತಂತ್ರವನ್ನು ಹೂಡಬೇಕು ಎಂದು ವಿವರಿಸುವ ಯುದ್ಧತಂತ್ರದ ವಿವರಗಳನ್ನು 'ಫತಹುಲ್ ಮುಜಾಹಿದೀನ್' ಎಂಬ ಗ್ರಂಥದಲ್ಲಿ ಸ್ವತಃ ಬರೆದು ಪ್ರಕಟಿಸಿದ್ದರು. ಈ ಗ್ರಂಥದಲ್ಲಿ ವಿವರಿಸಿದ ಯುದ್ಧತಂತ್ರಗಳನ್ನು ಅನುಸರಿಸಿ ಬ್ರಿಟಿಷರ ವಿರುದ್ಧ ಹೋರಾಡಲು ಟಿಪ್ಪೂವಿನ ಸೈನ್ಯ ಸಮರ್ಥವಾಗಿತ್ತು.

ಬ್ರಿಟಿಷರ ನಿದ್ದೆಗಿಡಿಸಿದ ಮೈಸೂರು ರಾಕೆಟ್ಟುಗಳು
ಟಿಪ್ಪುಸುಲ್ತಾನನ ನಂಬಿಗಸ್ತ ಸೈನ್ಯ ಆತನ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದೆ. ತಮ್ಮ ನೇತಾರನಿಗಾಗಿ ಜೀವವನ್ನೇ ಪಣಕ್ಕಿಟ್ಟ ಸೇನೆಯಲ್ಲಿ ಎಲ್ಲಾ ಜಾತಿಯ ಯೋಧರಿದ್ದರು. ಮುಸ್ಲಿಂ ಯೋಧನಾಗಿದ್ದ ಟಿಪ್ಪುಸುಲ್ತಾನ ಎಲ್ಲಾ ಜಾತಿಗಳಿಗೂ ಸಮಾನ ಗೌರವ ನೀಡುತ್ತಿದ್ದ, ಎಲ್ಲಾ ವರ್ಗದ ಜನರೊಂದಿಗೆ ಸಮಾನವಾಗಿ ಬೆರೆಯುತ್ತಿದ್ದ ಕಾರಣ ಬ್ರಿಟಿಷರ 'ಒಡೆದು ಆಳುವ ನೀತಿ' ಗೂ ಮೈಸೂರು ಸಂಸ್ಥಾನ ಬಗ್ಗಿರಲಿಲ್ಲ. ಜೊತೆಗೇ ಟಿಪ್ಪುಸುಲ್ತಾನನ ಆಗಸದಿಂದ ಬಾಣಗಳ ಮಳೆಗೆರೆಯುವ ರಾಕೆಟ್ಟುಗಳು ಬೇರೆ. ಇವೆಲ್ಲಾ ಬ್ರಿಟಿಷರ ನೆದ್ದೆಗೆಡಿಸಿದವು. ಬ್ರಿಟಿಷರ ಬಳಿಯೂ ಕ್ಷಿಪಣಿಗಳಿದ್ದವು. ಆದರೆ ಟಿಪ್ಪುಸುಲ್ತಾನನ ಮೈಸೂರು ರಾಕೆಟ್ಟುಗಳಿಗೆ ಯಾವುದೇ ವಿಧದಲ್ಲಿ ಸಾಟಿಯಾಗಿರಲಿಲ್ಲ. ಈ ಕ್ಷಿಪಣಿಗಳು ಮೊದಲ ಮತ್ತು ಎರಡನೇ ಆಂಗ್ಲೋ ಮೈಸೂರು ಯುದ್ದವನ್ನು ಜಯಿಸಲು ಹೈದರಾಲಿ ಮತ್ತು ಟಿಪ್ಪುಸುಲ್ತಾನರಿಗೆ ನೆರವಾದವು.

ಟಿಪ್ಪುವಿನ ರಾಕೆಟ್ಟಿಗೆ ಎದುರಾಳಿದಾದ ಕಾಂಗ್ರೀವ್ ರಾಕೆಟ್
ಪ್ರಥಮ ಎರಡು ಯುದ್ದಗಳಲ್ಲಿ ಕ್ಷಿಪಣಿಗಳ ಧಾಳಿಗೆ ತತ್ತರಿಸಿದ ಬ್ರಿಟಿಷ್ ಸೈನ್ಯ ಈ ಸೋಲನ್ನು ಒಂದು ಸವಾಲಾಗಿ ಸ್ವೀಕರಿಸಿತು. ಟಿಪ್ಪುಸುಲ್ತಾನ ಯಾವ ಆಯುಧಗಳನ್ನು ಬಳಸುತ್ತಿದ್ದಾನೆ? ಇದನ್ನು ಎದುರಿಸಲು ಏನು ಮಾಡಬೇಕು ಎಂಬ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಬ್ರಿಟಿಷ್ ಸೇನೆಯ ಪ್ರಮುಖರಾಗಿದ್ದ ಕರ್ನಲ್ ವಿಲಿಯಂ ಕಾಂಗ್ರೀವ್ ರವರು (ನಂತರ ಅವರಿಗೆ ಸರ್ ಪದವಿ ದೊರಕಿತು) ಟಿಪ್ಪುಸುಲ್ತಾನನಿಂದ ವಶಪಡಿಸಿಕೊಂಡ ಕ್ಷಿಪಣಿಯೊಂದನ್ನು 1801ರಲ್ಲಿ ಇಂಗ್ಲೆಂಡಿಗೆ ಕಳುಹಿಸಿ ಅದನ್ನು ಅಧ್ಯಯನ ಮಾಡಲು ಆದೇಶ ನೀಡಿದರು. ಅಂದಿನಿಂದ ಮುಂದಿನ ನಾಲ್ಕು ವರ್ಷಗಳವರೆಗೆ ಸತತವಾಗಿ ಈ ಕ್ಷಿಪಣಿಯ ಕಣಕಣವನ್ನೂ ಅಭ್ಯಸಿಸಿದ ಬ್ರಿಟಿಷರು ಇದಕ್ಕೆ ಎದುರಾಳಿಯಾದ ಕ್ಷಿಪಣಿಯನ್ನು ನಿರ್ಮಿಸುವಲ್ಲಿ ಸಫಲರಾದರು.

1805ರಲ್ಲಿ ಕಾಂಗ್ರೀವ್ ರಾಕೆಟ್
ಸರ್ ಕಾಂಗ್ರೀವ್ ರವರ ನಿರ್ದೇಶನದ ಮೇರೆಗೆ ನಿರ್ಮಿಸಿದ್ದರಿಂದ ಈ ಕ್ಷಿಪಣಿಗೆ 1805ರಲ್ಲಿ ಕಾಂಗ್ರೀವ್ ರಾಕೆಟ್ ಎಂದು ಹೆಸರಿಡಲಾಯಿತು. ಬಳಿಕ ಸಾವಿರಾರು ರಾಕೆಟ್ಟುಗಳನ್ನು ತಯಾರಿಸಿ ಹಡಗಿನಲ್ಲಿ ಭಾರತಕ್ಕೆ ಕಳುಹಿಸಲಾಯಿತು. ಇದಕ್ಕೂ ಮೊದಲು (1803 ಮತ್ತು 1815ರ ನಡುವೆ) ನೆಪೋಲಿಯನ್ ನ ಆಕ್ರಮಣದ ವಿರುದ್ದ ಉಪಯೋಗಿಸಲಾಯಿತು. 1812ರ ಇಂಗ್ಲೆಂಡ್ ಮತ್ತು ಅಮೇರಿಕಾ ನಡುವೆ ಎರಡೂವರೆ ವರ್ಷ ನಡೆದ ಭೀಕರ 1812ರ ಆಂಗ್ಲೋ ಅಮೇರಿಕನ್ ಯುದ್ದ (Anglo-American War of 1812) ದಲ್ಲಿಯೂ ಈ ಕ್ಷಿಪಣಿಗಳು ಪ್ರಮುಖ ಪಾತ್ರ ವಹಿಸಿದವು. ಬಳಿಕ 1814ರ ಬಾಲ್ಟಿಮೋರ್ ಯುದ್ದವನ್ನು ಜಯಿಸಲೂ ಈ ರಾಕೆಟ್ಟುಗಳು ಪ್ರಮುಖ ಕಾರಣವಾಗಿದ್ದವು.

ರಾಷ್ಟ್ರೀಯ ಸ್ಮಾರಕ ಬೆಂಗಳೂರು ಕೋಟೆ
ಇಂದು ರಾಷ್ಟ್ರೀಯ ಸ್ಮಾರಕವಾಗಿರುವ ಬೆಂಗಳೂರು ಕೋಟೆ 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ ಕೆಂಪೇಗೌಡ ಕಟ್ಟಿಸಿದಾಗ (1537) ಈ ರೂಪದಲ್ಲಿರಲಿಲ್ಲ. ಆಗ ಮಣ್ಣು ಇಟ್ಟಿಗೆ ಮತ್ತು ಮರದಿಂದ ಕಟ್ಟಲಾಗಿತ್ತು. 1673 -1704 ರ ನಡುವೆ ಚಿಕ್ಕದೇವರಾಯ ಒಡೆಯರ್ ರವರು ಪ್ರತಿವರ್ಷದ ಮಳೆಯಿಂದ ಸ್ವಲ್ಪಸ್ವಲ್ಪವಾಗಿ ಕರಗುತ್ತಾ ಬಂದಿದ್ದ ಕೋಟೆಯನ್ನು ಮತ್ತೊಮ್ಮೆ ಮಣ್ಣು ಮತ್ತು ಇಟ್ಟಿಗೆಯನ್ನು ಪೇರಿಸಿ ಬಲಪಡಿಸಿದರು. 1761ರಲ್ಲಿ ಹೈದರಾಲಿ ಈ ಕೋಟೆಯನ್ನು ವಿದೇಶದಿಂದ ಆಗಮಿಸಿದ ತಾಂತ್ರಿಕರ ನೆರವಿನಿಂದ ಕಲ್ಲಿನಿಂದ ಇಂದಿರುವ ರೂಪಕ್ಕೆ ಪರಿವರ್ತಿಸಿದರು.

ರಾಷ್ಟ್ರೀಯ ಸ್ಮಾರಕ ಬೆಂಗಳೂರು ಕೋಟೆ
ನಂತರದ ಯುದ್ದವೊಂದರಲ್ಲಿ ಬ್ರಿಟಿಶರ ಬಾಂಬ್ ಧಾಳಿಗೆ ಕೋಟೆಯ ಕೆಲಭಾಗ ಕುಸಿದು ಬಿದ್ದಿತ್ತು. ಯುದ್ದದ ಬಳೀಕ ಟಿಪ್ಪುಸುಲ್ತಾನ ಇದನ್ನು ಮತ್ತೆ ಮೊದಲಿನ ರೂಪಕ್ಕೆ ತಂದು ಇನ್ನಷ್ಟು ಬಲಪಡಿಸಿದ ಕಾರಣ ಕೋಟೆ ಇಂದಿಗೂ ಗತಕಾಲದ ವೈಭವವನ್ನು ಮೆರೆಯುತ್ತಿದೆ. ಆದರೆ 1791ರ ಯುದ್ದದಲ್ಲಿ ಬ್ರಿಟಿಷರು ಮೂರನೆಯ ಆಂಗ್ಲೋ ಮೈಸೂರು ಯುದ್ದದಲ್ಲಿ ಈ ಕೋಟೆಯನ್ನು ವಶಪಡಿಸಿಕೊಂಡು ತಮ್ಮ ಮುಂದಿನ ಯುದ್ದಗಳಿಗಾಗಿ ಕೇಂದ್ರವನ್ನಾಗಿಸಿಕೊಂಡರು. ಜೊತೆಗೇ ಅತ್ಯಂತ ವೈಭವವಾಗಿದ್ದ ಕೋಟೆಯಿಂದ ಏನೆನ್ನನ್ನೆಲ್ಲಾ ಹೊತ್ತೊಯ್ಯಬಹುದೋ ಅವನ್ನೆಲ್ಲಾ ಹಡಗಿನಲ್ಲಿ ತುಂಬಿಸಿ ಇಂಗ್ಲೆಂಡಿಗೆ ಕೊಂಡೊಯ್ದರು.

ರಾಷ್ಟ್ರೀಯ ಸ್ಮಾರಕ ಬೆಂಗಳೂರು ಕೋಟೆ
ಇಂದು ಕೋಟೆಯ ಕೊತ್ತಳ ಮತ್ತು ದೆಹಲಿ ಗೇಟ್ ಎಂದು ಕರೆಯಲ್ಪಡುವ ಹೆಬ್ಬಾಗಿಲು ಮಾತ್ರ ಮೂಲರೂಪದಲ್ಲಿ ಉಳಿದಿವೆ. ತನ್ನ ಸೈನ್ಯದಲ್ಲಿರುವ ಹಿಂದೂ ಸೈನಿಕರ ಭಾವನೆಗಳನ್ನು ಗೌರವಿಸುತ್ತಿದ್ದ ಟಿಪ್ಪುಸುಲ್ತಾನ ಈ ಕೋಟೆಯೊಳಗೆ ಗಣಪತಿ ದೇವಸ್ಥಾನವೊಂದನ್ನು ನಿರ್ಮಿಸಿ ಪೂಜೆಗೆ ಅನುವು ಮಾಡಿಕೊಟ್ಟಿದ್ದ. ಇಂದಿಗೂ ಕೋಟೆಯೊಳಗೆ ಈ ದೇವಸ್ಥಾನವನ್ನು ನೋಡಬಹುದು.

ಕೋಟೆಯೊಳಗಿನ ಟಿಪ್ಪುಸುಲ್ತಾನನ ಮರದ ಅರಮನೆ
ಬೆಂಗಳೂರು ಕಲಾಸಿಪಾಳ್ಯಂ ಬಸ್ ನಿಲ್ದಾಣದ ಬಳಿ ಇರುವ ಬೆಂಗಳೂರು ಕೋಟೆಯ ಪ್ರಾಂಗಣದಲ್ಲಿ ಮರದಿಂದ ನಿರ್ಮಿಸಲಾದ ಅರಮನೆಯೊಂದಿದೆ. ಟಿಪ್ಪುಸುಲ್ತಾನನ ಬೇಸಿಗೆಯ ಅರಮನೆ ಎಂದು ಪ್ರಸಿದ್ಧಿ ಪಡೆದಿರುವ ಈ ಅರಮನೆ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಹೈದರಾಲಿ ಈ ಅರಮನೆಯ ಕಟ್ಟಡವನ್ನು 1781ರಲ್ಲಿ ಪ್ರಾರಂಭಿಸಿದ್ದರೂ ನಡುವೆ ವಿಧಿವಶರಾಗಿದ್ದರಿಂದ ಬಳಿಕ ಟಿಪ್ಪುಸುಲ್ತಾನ್ ಬಳಿಕ 1791ರಲ್ಲಿ ಪೂರ್ಣಗೊಳಿಸಿದರು. ವಿಶಾಲವಾದ ಹಜಾರ, ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಸಾವಿರಾರು ಕಮಾನು ಕಂಭಗಳು, ಹೂಗಳ ವರ್ಣಚಿತ್ರಗಳಿಂದ ಕೂಡಿದ ಗೋಡೆಗಳು ಇಂದಿಗೂ ಸುಸ್ಥಿತಿಯಲ್ಲಿವೆ. ಚಿನ್ನದ ಬಣ್ಣಕ್ಕಾಗಿ ಅಪ್ಪಟ ಚಿನ್ನವನ್ನೇ ಬಳಸಿದ್ದರು ಎಂದು ನಂಬಿ ಚಿನ್ನದ ಬಣ್ಣವನ್ನು ಕೆರೆದು ತೆಗೆದಿರುವ ಕುರುಹುಗಳನ್ನು ಕೊಂಚ ಗಮನವಿಟ್ಟು ನೋಡಿದರೆ ಕಂಡುಬರುತ್ತದೆ.



Click it and Unblock the Notifications











