Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ್ಞಾನವನ್ನು ಒರೆಗೆ ಹಚ್ಚುವ ಅಚ್ಚರಿಯ ಸಂಗತಿಗಳು
ಜ್ಞಾನ ಸಂಪತ್ತು ಎಂಬುದು ವಿಸ್ತಾರವಾದ ಸಾಗರವಿದ್ದಂತೆ. ಇಲ್ಲಿ ಕಲಿತಷ್ಟೂ ಮುಗಿಯುವುದಿಲ್ಲ ಮತ್ತು ಇನ್ನೂ ಕಲಿಯಬೇಕೆಂಬ ತುಡಿತ ನಮ್ಮದಾಗುತ್ತದೆ. ಪ್ರಪಂಚದಲ್ಲಿ ನಡೆಯುತ್ತಿರುವ ಆಗು ಹೋಗುಗಳು, ಅದ್ಭುತಗಳು ಹೀಗೆ ನಮ್ಮ ಜ್ಞಾನವನ್ನು ವೃದ್ಧಿಸುವ ಹಲವಾರು ಸೂತ್ರಗಳು ನಮ್ಮ ಮುಂದಿವೆ. ಜ್ಞಾನವಿಲ್ಲದವನು ಹದ್ದಿಗಿಂತಲೂ ಕಡೆ ಎಂದು ಶಾಸ್ತ್ರ ಪುರಾಣಗಳು ಹೇಳುತ್ತವೆ.
ಈ ಜ್ಞಾನವನ್ನುಪಡೆಯಲು ವಿಪರೀತ ದುಡ್ಡು ಖರ್ಚು ಮಾಡಬೇಕಾಗಿಲ್ಲ. ಮಹಾನ್ ಪಂಡಿತರುಗಳನ್ನು ಹುಡುಕಬೇಕಾಗಿಲ್ಲ. ನಿಮಗೆ ಗೊತ್ತಿರುವ ಕೆಲವೊಂದು ಸಂಗತಿಗಳನ್ನು ಮತ್ತಷ್ಟು ಪಕ್ವಗೊಳಿಸುವ ವಿಧಾನಗಳನ್ನು ಅರಿತರೆ ಸಾಕು. ವಿಶ್ವದಲ್ಲಿರುವ ಕೆಲವೊಂದು ಅದ್ಭುತಗಳು ನಮ್ಮ ಬುದ್ಧಿ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ನಮಗೆ ಅಪಾರ ಜ್ಞಾನವುಂಟಾಗುವಂತೆ ಮಾಡುತ್ತದೆ. ಅಲ್ಲದೆ ಕೆಲವೊಂದು ಆಶ್ಚರ್ಯಕರ ಸಂಪ್ರದಾಯಗಳು, ವಿಸ್ಮಯ ಸಂಗತಿಗಳಿದ್ದು ಅದನ್ನು ಹುಡುಕುವ ಪ್ರಯತ್ನ ನಿಮ್ಮದಾಗಿರುವುದು ಅತ್ಯವಶ್ಯಕ. ಪುರಾಣ ಗ್ರಂಥಗಳೂ ಕೂಡ ವಿಶ್ವದಲ್ಲಿನ ಈ ವಿಸ್ಮಯಗಳನ್ನು ವಿಸ್ತಾರವಾಗಿ ತಿಳಿಸಿದ್ದು ಭೂಮಿಯ ಬಗೆಗೆ ಹೆಮ್ಮೆ ಉಂಟು ಮಾಡುವಂತೆ ಮಾಡಿದೆ.
ಅದರಲ್ಲೂ ಕೆಲವೊಂದು ವಿಚಿತ್ರ ಸಂಪ್ರದಾಯಗಳು ಮತ್ತು ವಾಸ್ತವಾಂಶಗಳನ್ನು ತಿಳಿಯುತ್ತಾ ಹೋಗುತ್ತಿದ್ದಂತೆ ಇನ್ನಷ್ಟು ಚಕಿತತೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಉದಾಹರಣೆಗೆ ಭಾರತದ ಕೆಲವು ಶವಸಂಸ್ಕಾರದ ಬಗ್ಗೆ ತಿಳಿದುಕೊಳ್ಳೋಣ. ಕೆಲವು ಬುಡಕಟ್ಟುಗಳಲ್ಲಿ ಶವವನ್ನು ಕುಳ್ಳರಿಸಿ ತಮಟೆ ಬಾರಿಸುತ್ತಾ ಸ್ಮಶಾನಕ್ಕೆ ಕೊಂಡೊಯ್ದರೆ ಇನ್ನೊಂದೆಡೆ ಶವಕ್ಕೆ ಬೆಂಕಿ ತಗಲಿಸುವ ಮೊದಲು ಬೆತ್ತಗಳಿಂದ ರಪರಪನೇ ಬಾರಿಸಲಾಗುತ್ತದೆ. ಇದರಿಂದ ಭೂಮಿಯ ಪಾಪವೆಲ್ಲಾ ಕಳೆದು ಆತ್ಮ ಸ್ವರ್ಗ ಸೇರುತ್ತದಂತೆ, ಬನ್ನಿ ಇಂತಹ ಕೆಲವು ಅಚ್ಚರಿಯ ಕೆಲವೊಂದು ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ, ಮುಂದೆ ಓದಿ..
ನೋಟುಗಳನ್ನು ತಯಾರಿಸಲು ಹತ್ತಿ ಬಳಸಲಾಗುತ್ತದೆಯಂತೆ..!

ಮೊನಾಲಿಸಾ
ಮೊನಾಲಿಸಾ ಚಿತ್ರದ ಬಗ್ಗೆ ಅನೇಕ ದಂತ ಕತೆಗಳಿದ್ದು ಆ ಚಿತ್ರದ ಬಗ್ಗೆ ಮತ್ತಷ್ಟು ತಿಳಿಯುವಂತೆ ಜನರಲ್ಲಿ ಕುತೂಹಲ ಮೂಡಿಸಿದೆ. ಈ ಮೊನಾಲಿಸಾ ಯಾರು ಎಂಬ ರಹಸ್ಯವನ್ನು ಬೇಧಿಸಲು ಅನೇಕ ಶತಮಾನಗಳಿಂದ ಪ್ರಯತ್ನ ನಡೆಯುತ್ತಿವೆ.
ಈ ಪೇಯಿಟಿಂಗ್ ಲಿಯೋನಾರ್ಡೊ ಡಾ ವಿಂಚಿ ಮರಣ ಹೊಂದಿ 500 ವರ್ಷಗಳು ಕಳೆದರೂ ಇದರ ಜನಪ್ರಿಯತೆ ಹೆಚ್ಚಾಯಿತೇ ಹೊರತು ಕಮ್ಮಿಯಾಗಲಿಲ್ಲ. ಅದು ಏನೇ ಇರಲಿ ಆದರೆ ಮೊನಾಲಿಸಾ ಪ್ರಖ್ಯಾತ ತೈಲವರ್ಣಚಿತ್ರ ಮೊನಾಲಿಸಾಳ ತುಟಿಯನ್ನು ಬಿಡಿಸಲು ಲಿಯೋನಾರ್ಡೋ ಡ ವಿನ್ಸಿ ಹತ್ತು ವರ್ಷ ತೆಗೆದುಕೊಂಡರಂತೆ...! ಮೊನಾಲಿಸಾ ಬಗ್ಗೆ ಕುತೂಹಲ ಮೂಡಿಸುವ 9 ರಹಸ್ಯಗಳು
ಭಾರತದ ಸೈನ್ಯ
ಭಾರತವು ತನ್ನ ಸೈನ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ತೊಡಗಿಸಿಕೊಂಡಿದೆ. ಇದು ತನ್ನ ಮಿಲಿಟರಿ ವೆಚ್ಚಗಳನ್ನು ಸಹ ಗಣನೀಯವಾಗಿ ಹೆಚ್ಚಿಸುತ್ತಿದೆ. 11 ಮಿಲಿಯನ್ ಸೈನಿಕರನ್ನು ಹೊಂದಿರುವ ಭಾರತವು ವಿಶ್ವದಲ್ಲಿಯೇ ಎರಡನೆ ಅತಿದೊಡ್ಡ ಸೈನ್ಯವಾಗಿದೆ. ನಮ್ಮ ದೇಶವು ರಕ್ಷಣೆಗಾಗಿ 46 ಬಿಲಿಯನ್ ಯುಎಸ್ ಡಾಲರ್‌ಗಳನ್ನು ವಿನಿಯೋಗಿಸುತ್ತಿದೆ. ಇದರ ಜೊತೆಗೆ ಆಯುಧಗಳನ್ನು ಆಮದು ಮಾಡಿಕೊಳ್ಳುವ ಅತಿ ದೊಡ್ಡ ಆಮದುಗಾರ ದೇಶ ಎಂಬ ಖ್ಯಾತಿಯು ಸಹ ಭಾರತಕ್ಕೆ ಇದೆ.
ಜೇಡ
ಜಗತ್ತಿನಲ್ಲಿ ಅಂಟಾಕ್ಟಿಕಾದಲ್ಲಿ ಮಾತ್ರ ಜೇಡ ಇಲ್ಲ ಅತ್ಯಂತ ಶೀತಲ ಪ್ರದೇಶವಾದ ಅಂಟಾರ್ಕ್ಟಿಕಾದಲ್ಲಿ ಮಾತ್ರ ಜೇಡವನ್ನು ವಿಜ್ಞಾನಿಗಳು ಕಂಡಿಲ್ಲ. ಆದರೆ ಸರಿಸುಮಾರು ಇಷ್ಟೇ ತಣ್ಣಗಿರುವ ಸೈಬೀರಿಯಾದಲ್ಲಿ ಜೇಡಗಳಿವೆ (siberian spider). ಅಂದರೆ ಇದುವರೆಗೆ ಯಾವುದೇ ಹಡಗಿನ ಮೂಲಕ ಜೇಡ ಅಲ್ಲಿ ತಲುಪಿಯೇ ಇಲ್ಲವೆಂದಾಯ್ತು, ಮುಂದಿನ ದಿನಗಳಲ್ಲಿ ಹೀಗಾಗಬಾರದು ಎಂದೇನಿಲ್ಲ.
ಮಹಾಯುದ್ಧದ ರಹಸ್ಯ
ಮಹಾಯುದ್ಧದ ಕಾಲದಲ್ಲಿ ಹಲವು ಸಂಶೋಧನೆಗಳಾಗಿವೆ. ವೈದ್ಯಕೀಯ ಕ್ಷೇತ್ರದಲ್ಲಿಯೂ ಹಲವು ಔಷಧಿಗಳನ್ನು ಕಂಡುಹಿಡಿಯಲಾಗಿತ್ತು. ಯಾವುದೇ ವೈದ್ಯಕೀಯ ಸಂಶೋಧನೆಯನ್ನು ಮನುಷ್ಯರ ಮೇಲೆ ಪ್ರಯೋಗಿಸುವ ಮುನ್ನ ಇಲಿ, ಹಂದಿ ಮೊದಲಾದವುಗಳ ಮೇಲೆ ಪ್ರಯೋಗ ನಡೆಸಿ ಅಧ್ಯಯನದ ಬಳಿಕ ಮನುಷ್ಯರ ಮೇಲೆ ಪ್ರಯೋಗಿಸಲಾಗುತ್ತದೆ. ಆದರೆ ಎರಡನೇ ಮಹಾಯುದ್ಧದ ಕಾಲದಲ್ಲಿ ಹಿಟ್ಲರ್ ಮೂಡಿಸಿದ್ದ ಜ್ಯೂ ವಿರೋಧಿ ಅಲೆ ಜ್ಯೂಗಳನ್ನು ಹಂದಿಗಳಿಗಿಂತಲೂ ಕೀಳಾಗಿ ಕಾಣುವ ಮಟ್ಟಕ್ಕೆ ಕರೆದೊಯ್ದಿತ್ತು. ಉದಾಹರಣೆಗೆ ಎಕ್ಸ್ ರೇ ಕಿರಣಗಳನ್ನು ಜ್ಯೂ ಪುರುಷರ ಮೇಲೆ ಮತ್ತು ಮಹಿಳೆಯರ ಮೇಲೆ ಹಾಯಿಸಿ ಅವರ ಫಲವತ್ತತೆ ಬಗ್ಗೆ ಅಧ್ಯಯನ ನಡೆಸಲಾಯಿತು. ಕಿರಣ ಹಾಯಿಸಿದ ಕೈ ಕಾಲು, ಮಾಂಸಖಂಡಗಳನ್ನು ಯಾವುದೇ ಅರವಳಿಕೆಯಿಲ್ಲದೇ ಕತ್ತರಿಸಿ ತೆಗೆಯಲಾಯಿತು. ಒಟ್ಟಾರೆ ಜ್ಯೂಗಳು ಜೀವಂತವಿದ್ದಂತೆಯೇ ನರಕ ಅನುಭವಿಸಿದರು.
ನಗ್ನ ರೂಪ ತಾಳುವ ನಾಗಾಸಾಧುಗಳು
ಹಿಂದೂ ಸಂಪ್ರದಾಯದಲ್ಲಿ ಅತಿ ಮಹತ್ವದ ಸ್ಥಾನ ಪಡೆದಿರುವ ಕುಂಭಮೇಳದ ಪ್ರಮುಖ ಆಕರ್ಷಣೆ ಎಂದರೆ ನಾಗಾ ಸಾಧುಗಳು ಅಥವಾ ನಾಗಾ ಬಾಬಾಗಳು. ಪ್ರಥಮ ನೋಟಕ್ಕೇ ಇವರ ಅಸಾಮಾನ್ಯ ವೇಷಭೂಷಣ ಕುತೂಹಲ ಮೂಡಿಸಿದರೆ ಇವರು ಅನುಸರಿಸುವ ಚಿತ್ರ ವಿಚಿತ್ರ ಸಂಪ್ರದಾಯಗಳು ಇನ್ನಷ್ಟು ಬೆರಗು ಮೂಡಿಸುತ್ತವೆ. ಭಾರತದಲ್ಲಿರುವ ಕೆಲವೊಂದು ವಿಲಕ್ಷಣ ಆಚರಣೆಗಳು
ಅದರಲ್ಲೂ ಶಿವನ ಆರಾಧಕರಿಗೆ ಪವಿತ್ರವಾದ ಈ ಮೇಳದಲ್ಲಿ ನದಿಯಲ್ಲಿ ಮುಳುಗು ಹಾಕುವುದು ಒಂದು ಮುಖ್ಯ ವಿಧಿಯಾಗಿದೆ. ಈ ಸಮಯದಲ್ಲಿ ಯಾವುದೇ ಅಳುಕಿಲ್ಲದೇ ನಗ್ನರೂಪದಲ್ಲಿ ಹಾಜರಾಗುವ ನಾಗಾಸಾಧುಗಳ ಸಂಪ್ರದಾಯಗಳು ಚಕಿತತೆ ಮೂಡಿಸುತ್ತವೆ



Click it and Unblock the Notifications












