Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಎಕ್ಸ್ಪೈರಿ ಡೇಟ್ ಮುಗಿದಿದ್ದರೂ ಇವು ಹಾಳಾಗುವುದಿಲ್ಲವಂತೆ!
ಆಹಾರದ ವಿಷಯದಲ್ಲಿ ನಾವು ಸೂಕ್ತ ಮುನ್ನೆಚ್ಚರಿಕೆಗಳನ್ನು ಪಾಲಿಸಿದಾಗ ಮಾತ್ರವೇ ಆರೋಗ್ಯ ಭಾಗ್ಯವಾಗುತ್ತದೆ ಇಲ್ಲವೆಂದಾದಲ್ಲಿ ಆರೋಗ್ಯ ಮುಳುವಾಗಿ ಪರಿಣಮಿಸುತ್ತದೆ. ರಸ್ತೆಬದಿಯ ಆಹಾರಗಳ ಸೇವನೆ, ತಿನ್ನುವ ಆಹಾರದಲ್ಲಿ ಸ್ವಚ್ಛತೆ ಬೇಕಾದ ಪ್ರೋಟೀನ್ ವಿಟಮಿನ್‌ಗಳು ಇಲ್ಲದಿರುವುದು ಸೇವಿಸುವ ಆರೋಗ್ಯವನ್ನು ಕೆಟ್ಟದ್ದಾಗಿಸುತ್ತದೆ. ಆಹಾರ ಖರೀದಿ ವಿಧಾನದಲ್ಲಿ ನೀವು ಕೆಲವೊಂದು ನಿಯಮಗಳನ್ನು ಅನುಸರಿಸಿದಲ್ಲಿ ಆಹಾರವನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಅರಿವು ತಾನಾಗಿಯೇ ನಿಮ್ಮಲ್ಲಿ ಮೂಡುತ್ತದೆ.
ಆಹಾರ ಪ್ಯಾಕೆಟ್‌ಗಳಲ್ಲಿ ನಮೂದಿಸಿರುವ ಅವಧಿ ಮುಗಿದ (ಎಕ್ಸ್ಪೈರಿ ಡೇಟ್) ಬಗ್ಗೆಯೂ ಹೆಚ್ಚಿನವರಿಗೆ ಜ್ಞಾನವಿರುವುದಿಲ್ಲ. ವಸ್ತುವಿನ ಮಾರಾಟ ದಿನಾಂಕ ಮುಗಿದೆ ಹೋಗಿದೆ ಎಂದಾದಲ್ಲಿ ಆ ವಸ್ತು ಖರೀದಿಗೆ ಯೋಗ್ಯವಲ್ಲ ಇಲ್ಲವೇ ಕೆಟ್ಟಿದೆ ಎಂಬ ತೀರ್ಮಾನಕ್ಕೆ ನಾವು ಬರುತ್ತೇವೆ. ಆದರೆ ಈ ದಿನಾಂಕದ ಸೂಚನೆ ಆಹಾರದ ತಾಜಾತನದ ಮಾಹಿತಿಯನ್ನು ನೀಡುತ್ತದೆಯೇ ಹೊರತು ಕೆಟ್ಟುಹೋಗಿದೆ ಎಂಬುದನ್ನಲ್ಲ. ಆಹಾರದ ಗುಣಮಟ್ಟದಲ್ಲಿ ನೀವು ಲೋಪದೋಷವನ್ನು ಕಂಡುಕೊಳ್ಳಬಹುದೇ ಹೊರತು ಆಹಾರ ಖರೀದಿಸಲು ಯೋಗ್ಯವಾಗಿರುವುದಿಲ್ಲ ಎಂಬ ತೀರ್ಮಾನಕ್ಕೆ ಬರಬೇಡಿ.
ಎಲ್ಲಿಯಾದರೂ ಆಹಾರ ಪ್ಯಾಕೆಟ್ ಕೆಟ್ಟ ವಾಸನೆಯನ್ನು ಹೊಡೆಯುತ್ತಿದ್ದರೆ ಅಥವಾ ನೋಟದಲ್ಲಿ ಏನಾದರೂ ಅಸಾಮಾನ್ಯತೆ ಕಂಡುಬಂದಲ್ಲಿ ನೀವು ಜಾಗರೂಕರಾಗಿರಬೇಕಾಗುತ್ತದೆ. ಕೆಲವೊಂದು ಆಹಾರ ಪದಾರ್ಥಗಳಲ್ಲಿ ಅವಧಿ ಮುಗಿದ ದಿನಾಂಕ ಮುಖ್ಯ ಅಂಶವಾಗಿದ್ದರೆ ಇನ್ನು ಕೆಲವು ಆಹಾರ ಪದಾರ್ಥಗಳನ್ನು ಅವಧಿ ಮುಗಿದ ನಂತರವೂ ಸೇವಿಸಬಹುದಾಗಿದೆ ಅವು ಯಾವುವು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ, ಮುಂದೆ ಓದಿ...

ಪಾಸ್ತಾ
ಒಣ ಪಾಸ್ತಾವು ಒಂದೆರಡು ವರ್ಷಗಳ ಬಾಳ್ವಿಕೆಯನ್ನು ಹೊಂದಿದೆ. ನೀರಿನ ಅಂಶ ಇಲ್ಲದೇ ಇರುವುದರಿಂದ ಇದು ಇನ್ನಷ್ಟು ಕಾಲ ಬಾಳಿಕೆ ಬರುತ್ತದೆ ಕೂಡ. ತಾಜಾ ಪಾಸ್ತಾ ನೀರಿನ ಅಂಶವನ್ನು ಒಳಗೊಂಡಿರುತ್ತದೆ ಮತ್ತು ಬೇಗನೇ ಕೆಟ್ಟುಹೋಗುತ್ತದೆ. ಆದರೂ ಅವಧಿ ಮುಗಿದ ಬಳಿಕವೂ ಸ್ವಲ್ಪ ದಿನಗಳ ಬಳಕೆಗೆ ಪಾಸ್ತಾ ಯೋಗ್ಯ. (ಎರಡರಿಂದ ಮೂರು ವಾರಗಳು ಅಲ್ಲದೆ ಕೆಟ್ಟಿರುವ ವಾಸನೆ ಬರದೇ ಇರುವವರೆಗೆ ಇದು ಬಾಳಿಕೆಗೆ ಬರುತ್ತದೆ)

ಬ್ರೆಡ್
ಸೀಲ್ ಅನ್ನು ಒಡೆಯದೇ ಇದ್ದಲ್ಲಿ ಬ್ರೆಡ್ ಅನ್ನು ಎಕ್ಸ್ಪೈರಿ ದಿನಾಂಕ ಮುಗಿದ ನಂತರವೂ ಸೇವಿಸಬಹುದಾಗಿದೆ. ಎಲ್ಲಿಯಾದರೂ ಬ್ರೆಡ್ ವಾಸನೆ ಬಂದಲ್ಲಿ ಅದನ್ನು ಸೇವಿಸದಿರಿ. ಬೂಸ್ಟ್ ಹಿಡಿದಿರುವ ಜಾಗವನ್ನು ಕತ್ತರಿಸಿ ತೆಗೆದು ಉಳಿದ ಬ್ರೆಡ್ ಸ್ಲೈಸ್ಗಳ ಸೇವನೆಯನ್ನು ನಿಮಗೆ ಮಾಡಬಹುದಾಗಿದೆ. ಹಳೆಯ ಬ್ರೆಡ್ ಬಳಸಿ ಅದ್ಭುತ ಫ್ರೆಂಚ್ ಟೋಸ್ಟ್ ಅನ್ನು ತಯಾರಿಸಬಹುದಾಗಿದೆ. ಆದ್ದರಿಂದ ಬ್ರೆಡ್ ನ ಅವಧಿ ಮುಗಿದಿದೆ ಎಂದು ಅದನ್ನು ಬಿಸಾಡಬೇಡಿ.

ಮೊಸರು
ಮೊಸರು ಕೂಡ ದಿನಾಂಕ ಮುಗಿದ ಹೋದರೂ ತಿನ್ನಬಹುದಾದ ಡೈರಿ ಉತ್ಪನ್ನವಾಗಿದೆ. ಮೊಸರನ್ನು ತೆರೆದು ನೀವು ಬಳಸಿಲ್ಲ ಎಂದಾದಲ್ಲಿ ಅದು ಕೆಟ್ಟು ಹೋಗುತ್ತದೆ. ಆದರೆ ಸೀಲ್ ಮಾಡಿದ ಪ್ಯಾಕೆಟ್ ಮೊಸರು ಅನ್ನು ದಿನಾಂಕ ಮಗಿದ ಬಳಿಕವೂ ಬಳಸಬಹುದಾಗಿದೆ. ಆದರೆ ಬಳಸುವ ಮುನ್ನ ಅದರ ಪರಿಮಳದಲ್ಲಿ ಏನಾದರೂ ವ್ಯತ್ಯಾಸವಾಗಿದೆಯೇ ಎಂಬುದನ್ನು ಕಂಡುಕೊಳ್ಳಿ.

ಚಿಪ್ಸ್
ಬ್ರೆಡ್ನಂತೆಯೇ ಆಲೂಗಡ್ಡೆ ಚಿಪ್ಸ್ ಕೂಡ ಎಕ್ಸ್ಪೈರಿ ದಿನಾಂಕದ ನಂತರ ಸೇವಿಸಬಹುದಾದ ಉತ್ಪನ್ನವಾಗಿದೆ. ತೆರೆದ ಬ್ಯಾಗ್ನಲ್ಲಿ ಚಿಪ್ಸ್ ಇದೆ ಎಂದಾದಲ್ಲಿ ಕೆಲವು ವಾರಗಳವರೆಗೆ ಬಳಸಲು ಇದು ಸೂಕ್ತ. ಇನ್ನು ಪ್ಯಾಕೆಟ್ ಒಡೆಯದೇ ಹಾಗೆಯೇ ಇದೆ ಎಂದಾದಲ್ಲಿ ಕೆಲವು ತಿಂಗಳುಗಳವರೆಗೆ ಇದನ್ನು ಬಳಸಬಹುದಾಗಿದೆ.

ಚಾಕಲೇಟ್
ಅವಧಿ ತೀರಿದ ಬಳಿಕವೂ ಚಾಕಲೇಟ್ ಸೇವನೆಯನ್ನು ಧೈರ್ಯವಾಗಿಯೇ ನಿಮಗೆ ಮಾಡಬಹುದಾಗಿದೆ. 70 ಡಿಗ್ರಿ ಅಥವಾ ಕೆಳಗಿನ ಉಷ್ಣತೆಯಲ್ಲಿ ನೀವು ಚಾಕಲೇಟ್ ಅನ್ನು ಸಂಗ್ರಹಿಸಿಟ್ಟಿದ್ದೀರಿ ಎಂದಾದಲ್ಲಿ ಇದನ್ನು ಸುರಕ್ಷಿತವಾಗಿ ನಿಮಗೆ ಬಳಸಬಹುದಾಗಿದೆ.

ಸೀರಲ್
ಸೀರಲ್ ಕೂಡ ದಿನಾಂಕ ಮುಗಿದರೂ ಬಳಕೆಗೆ ಯೋಗ್ಯವಾಗಿದೆ. ಇತರ ಹೆಚ್ಚಿನ ಆಹಾರಗಳಂತೆಯೇ, ಇದನ್ನು ಸರಿಯಾದ ಸ್ಥಳದಲ್ಲಿ ಸಂಗ್ರಹಿಸಿಟ್ಟರೆ ಸೀರಲ್ ಅನ್ನು ದಿನಾಂಕ ಮುಕ್ತಾಯವಾದ ಬಳಿಕವೂ ಬಳಸಬಹುದಾಗಿದೆ.

ಚೀಸ್
ಅವಧಿ ತೀರಿದ ನಂತರವೂ ಚೀಸ್ ಕೆಟ್ಟುಹೋಗದೇ ಇರುವ ಆಹಾರ ಪದಾರ್ಥವಾಗಿದೆ. ದಿನಾಂಕ ಮುಗಿದ ಹೋದರೂ ಸ್ವಲ್ಪ ದಿನಗಳವರೆಗೆ ಚೀಸ್ ಅನ್ನು ನೀವು ಬಳಸಬಹುದಾಗಿದೆ. ಇದು ಬಳಸಲು ಹೆಚ್ಚು ಸುರಕ್ಷಿತವಾಗಿದೆ.



Click it and Unblock the Notifications