For Quick Alerts
ALLOW NOTIFICATIONS  
For Daily Alerts

ಹೆಂಗಸರೇ ಹೀಗೆ! ಅವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ

By Super Admin
|

ಗಂಡಸರು ಮತ್ತು ಹೆಂಗಸರು ದೈಹಿಕವಾಗಿ ಅಷ್ಟೇ ಅಲ್ಲದೆ, ಮಾನಸಿಕವಾಗಿ ಸಹ ಭಿನ್ನತೆಯಿಂದ ಕೂಡಿರುತ್ತಾರೆ. ಗಂಡಸರು ಸದೃಢವಾದ ಭಾವನೆಗಳನ್ನು ತೋರ್ಪಡಿಸಿದರೆ, ಹೆಂಗಸರು ತಮ್ಮ ಭಾವನೆಗಳನ್ನು ಅದುಮಿಟ್ಟುಕೊಂಡು ಆಗಾಗ ಹೊರಗೆ ತೋರಿಸುತ್ತಾರೆ. ರಹಸ್ಯದ ವಿಷಯವನ್ನು ಮಹಿಳೆಯರ ಬಳಿ ಮಾತ್ರ ಹೇಳಬೇಡಿ!

ಹಾಗೆ ಒಮ್ಮೊಮ್ಮೆ ಹೆಂಗಸರು ಭಾವನೆಗಳನ್ನು ವ್ಯಕ್ತಪಡಿಸಿದರು ಸಹ ಗಂಡಸರು ಅದನ್ನು ಗ್ರಹಿಸಲು ವಿಫಲರಾಗುತ್ತಾರೆ. ಹೆಂಗಸರ ಮನಸ್ಸಿನಲ್ಲಿ ಏನಿರುತ್ತದೆ ಎಂದು ತಿಳಿದುಕೊಳ್ಳಲು ಆಕೆಯನ್ನು ಸೃಷ್ಟಿಸಿದ ಬ್ರಹ್ಮನಿಂದ ಸಹ ಸಾಧ್ಯವಿಲ್ಲ ಎಂದು ಗಂಡಸರು ನಂಬುತ್ತಾರೆ. ಆದರೆ ನಾವು ಇಂದು ನಿಮಗೆ ಗಂಡಸರು ಹೆಂಗಸರಲ್ಲಿ ಅರ್ಥ ಮಾಡಿಕೊಳ್ಳದ 11 ವಿಷಯಗಳು ಯಾವುವು ಎಂದು ತಿಳಿಸಿಕೊಡುತ್ತೇವೆ. ಬನ್ನಿ ಅವು ಯಾವುವು ಎಂದು ನೋಡೋಣ....

ಅವರೇಕೆ ಅಷ್ಟೊಂದು ನಾಟಕ ಮಾಡುತ್ತಾರೆ?

ಅವರೇಕೆ ಅಷ್ಟೊಂದು ನಾಟಕ ಮಾಡುತ್ತಾರೆ?

ಹೆಂಗಸರು ತಮ್ಮ ಭಾವನೆಗಳನ್ನು ಹೊರಗೆ ತೋರಿಸಿದಾಗ ಗಂಡಸರಿಗೆ ಅದು ನಾಟಕದಂತೆ ತೋರುತ್ತದೆ. ಆದರೆ ಹೆಂಗಸರು ನಿಜವಾಗಿ ಭಾವನೆಗಳನ್ನು ಹೊರಗೆ ತೋರಿಸಿಕೊಳ್ಳುವುದಿಲ್ಲ, ಒಂದು ವೇಳೆ ಅವರು ಭಾವನೆಗಳನ್ನು ಹೊರಗೆ ತೋರಿಸಿಕೊಂಡರೆ, ನಮ್ಮ ಕಣ್ಣಿಗೆ ನಾಟಕವಾಗಿ ಕಂಡರೂ ಸಹ, ಅದು ವಾಸ್ತವ ಎಂಬುದನ್ನು ಇವರು ಅರ್ಥ ಮಾಡಿಕೊಳ್ಳುವುದಿಲ್ಲ.

ಅವರೇಕೆ ಬೇಗ ಮದುವೆಯಾಗಲು ಬಯಸುತ್ತಾರೆ?

ಅವರೇಕೆ ಬೇಗ ಮದುವೆಯಾಗಲು ಬಯಸುತ್ತಾರೆ?

ಹೆಂಗಸರೇಕೆ ಅಷ್ಟು ಬೇಗ ಮದುವೆಯಾಗಲು ಬಯಸುತ್ತಾರೆ ಎಂಬುದು ಗಂಡಸರಿಗೆ ಅರ್ಥವಾಗದ ವಿಚಾರ. ಆದರೆ ಹೆಂಗಸರು ಜೀವನದ ಭದ್ರತೆಗೆ ಮತ್ತು ಕುಟುಂಬದ ಸುರಕ್ಷಿತ ಪರಿಧಿಯ ಒಳಗೆ ಜೀವಿಸಲು ಆಸೆಪಡುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ ನಮ್ಮ ಗಂಡಸರು. ಅವರಿಗೆ ಒಂದು ಸಂಬಂಧವು ಸುಭದ್ರವಾಗಿರಬೇಕೆಂಬ ಹಂಬಲ ಇರುತ್ತದೆ.

ಅವರೇಕೆ ತುಂಬಾ ಬ್ರೌಸ್ ಮಾಡುತ್ತಾರೆ?

ಅವರೇಕೆ ತುಂಬಾ ಬ್ರೌಸ್ ಮಾಡುತ್ತಾರೆ?

ಶಾಪಿಂಗ್ ಮಾಡುವಾಗ ಗಂಡಸರು ತಮಗೆ ಬೇಕಾದ ಬಟ್ಟೆಗಳನ್ನು ಒಂದೇ ಅಂಗಡಿಯಿಂದ ಕೊಂಡುಕೊಳ್ಳುತ್ತಾರೆ. ಆದರೆ ಹೆಂಗಸರು ಒಂದೊಂದನ್ನು ಒಂದೊಂದು ಅಂಗಡಿಯಿಂದ ಖರೀದಿಸುತ್ತಾರೆ. ಇನ್ನೂ ಆನ್‌ಲೈನ್‌ನಲ್ಲಿ ಅವರಿಗೆ ಸಮಾಧಾನವೇ ಸಿಗುವುದಿಲ್ಲ. ಸಿಕ್ಕಾಪಟ್ಟೆ ಬ್ರೌಸ್ ಮಾಡಿ, ಒಂದು ವಾಲೆಟ್ ತೆಗೆಯುವವರಿಗೆ ಕಡಿಮೆಯಿರುವುದಿಲ್ಲ. ಆದರೆ ಇದೇಕೆ ಎಂದು ಗಂಡಸರಿಗೆ ಅರ್ಥವಾಗುವುದಿಲ್ಲ. ಏಕೆಂದರೆ ಹೆಂಗಸರು ತಮ್ಮ ಕನಸಿನ ವಸ್ತುವಿಗಾಗಿ ಯಾವತ್ತಿಗೂ ರಾಜಿಯಾಗುವುದಿಲ್ಲ.

ಅವರೇಕೆ ತಾವು ಅಂದುಕೊಂಡಿದ್ದೇ ಹಾಗಬೇಕು ಎನ್ನುತ್ತಾರೆ?

ಅವರೇಕೆ ತಾವು ಅಂದುಕೊಂಡಿದ್ದೇ ಹಾಗಬೇಕು ಎನ್ನುತ್ತಾರೆ?

ಹೆಂಗಸಿಗೆ ಗಂಡಸಿಗಿಂತ ತನ್ನದು ಎನ್ನುವ ಭಾವನೆ ಹೆಚ್ಚಾಗಿರುತ್ತದೆ. ಆಕೆ ಸ್ವಲ್ಪ ಪೊಸೆಸಿವ್ ಹಾಗಾಗಿ ತಾನು ಬಯಸಿದಂತೆ ಇರಬೇಕು, ತನ್ನ ಮುಂದೆಯೇ ಇರಬೇಕು ಎಂಬ ಹಠ ಇರುತ್ತದೆ. ಎಷ್ಟಾದರು ಹಠ ಹೆಂಗಸಿನ ಆಸ್ತಿ ಅಲ್ಲವೇ, ಆದರೆ ಇದನ್ನು ನಮ್ಮ ಗಂಡಸರು ಅರ್ಥ ಮಾಡಿಕೊಳ್ಳುವುದಿಲ್ಲ. ಜೊತೆಗೆ ಹೆಂಗಸರಿಗೆ ತಮ್ಮವರು ತಮ್ಮ ಕುರಿತು ಕಾಳಜಿ ತೋರಬೇಕು ಎಂಬ ಭಾವನೆ ಇರುತ್ತದೆ. ಈ ಕಾಳಜಿ ಕೇಳುವ ರೀತಿ ಗಂಡಸರಿಗೆ ಕಿರಿಕಿರಿಯುಂಟು ಮಾಡುತ್ತದೆ.

ಅಷ್ಟು ಪಾದರಕ್ಷೆಗಳು ಏಕೆ ಬೇಕು?

ಅಷ್ಟು ಪಾದರಕ್ಷೆಗಳು ಏಕೆ ಬೇಕು?

ಗಂಡಸರ ಬಳಿ 1-2 ಜೊತೆ ಪಾದರಕ್ಷೆ ಇದ್ದರೆ, ಮಹಿಳೆಯರ ಬಳಿ ಸಿಕ್ಕಾಪಟ್ಟೆ ಇರುತ್ತಾದೆ. ಏಕೆಂದರೆ ಅವರಿಗೆ ಅಡಿಯಿಂದ ಮುಡಿಯವರೆಗೆ ತಮ್ಮದೇ ಆದ ವಿಶಿಷ್ಟ ಲುಕ್ ಬೇಕು ಸ್ವಾಮಿ, ನೀವೇಕೆ ಅದರ ಕುರಿತು ಅರ್ಥ ಮಾಡಿಕೊಳ್ಳುವುದಿಲ್ಲ. ನೆನಪಿರಲಿ ಅದನ್ನು ಧರಿಸುವುದೇ, ಮೊದಲು ನಿಮ್ಮನ್ನು ಆಕರ್ಷಿಸುವ ಸಲುವಾಗಿ ಎಂಬುದನ್ನು ಮರೆಯಬೇಡಿ. ಫ್ಯಾಶನ್ ಇತ್ಯಾದಿ ಎಲ್ಲವೂ ಕೇವಲ ಮಾತಿಗಷ್ಟೇ!

ಅವರಿಗೇಕೆ ಸಿಕ್ಕಾಪಟ್ಟೆ ಜಂಭ

ಅವರಿಗೇಕೆ ಸಿಕ್ಕಾಪಟ್ಟೆ ಜಂಭ

ಅಷ್ಟು ಮಾತ್ರ ಇರದಿದ್ದರೆ ಹೇಗೆ, ಹೆಂಗಸರಿಗೆ ಜಂಭವಿದ್ದರೇನೆ ಚಂದ. ಅದು ಅವರ ಹಠ, ಪೊಸೆಸಿವ್‌ನೆಸ್ ನಿಂದ ಬಂದಿರುತ್ತದೆ. ಅವರು ಎಂದಿಗು ಒಂದೇ ವಿಚಾರಕ್ಕೆ ಅಂಟಿಕೊಂಡು ಕೂರುವವರಲ್ಲ. ಅದಕ್ಕಾಗಿ ಸ್ವಲ್ಪ ಜಂಭ ಇರುತ್ತದೆ. ಅದಕ್ಕೆ ಇನ್ನೂ ನಾನಾ ಕಾರಣಗಳು ಇರುತ್ತವೆ. ಅದರಲ್ಲಿ ನೀವು ಅವರ ಸಂಗಾತಿಯಾಗಿದ್ದರೆ, ಅದು ಸಹ ಜಂಭಕೊಚ್ಚಿಕೊಳ್ಳುವ ಸಂಗತಿಯಾಗಿರಬಹುದು.

ಅವರಿಗೇಕೆ ವೀಡಿಯೋ ಗೇಮ್ ಮತ್ತು ಆಟಗಳು ಇಷ್ಟವಾಗುವುದಿಲ್ಲ?

ಅವರಿಗೇಕೆ ವೀಡಿಯೋ ಗೇಮ್ ಮತ್ತು ಆಟಗಳು ಇಷ್ಟವಾಗುವುದಿಲ್ಲ?

ಅವರಿಗೆ ಗಂಡಸರು ಆಡುವ ವೀಡಿಯೋ ಗೇಮ್ ಮತ್ತು ನೋಡುವ ಕ್ರೀಡೆಗಳು ಇಷ್ಟವಾಗುವುದಿಲ್ಲ. ಏಕೆಂದರೆ ಇವುಗಳಲ್ಲಿ ಅವರು ಇಷ್ಟಪಡುವ ಭಾವನೆಗಳು ಮತ್ತು ಕಣ್ಣೀರು ಇರುವುದಿಲ್ಲ. ಕಷ್ಟಗಳು ಮತ್ತು ಸುಖ ಮತ್ತು ಕಲ್ಪನೆ ಇದ್ದರೆ ಮಾತ್ರ ಅವರು ಇಷ್ಟಪಡುತ್ತಾರೆ. ಸುಮ್ಮನೆ ಕಾಲ ಕಳೆಯಲು ಅವರಿಗೆ ಬೇಕಾದಷ್ಟು ಅಂಶಗಳು ಸಿಗುತ್ತವೆ.

English summary

Things Men Dont Understand About Women

Men and women are not only different physically but their mental and emotional states are different as well. Men are strong in showing their emotions but women very often show their emotions. Thus men often don’t understand this mental difference and just consider women to be a creator from mars. So lets have a look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X