For Quick Alerts
ALLOW NOTIFICATIONS  
For Daily Alerts

ವೈದ್ಯಕೀಯ ಸಂಶೋಧನೆಗಳ ವಿಚಿತ್ರ ಸತ್ಯ.

By Poornima Heggade
|

ಕುತೂಹಲ ಹುಟ್ಟಿಸುವ, ಅಚ್ಚರಿ ಮೂಡಿಸುವ, ನಿಮ್ಮನ್ನು ಬೆಕ್ಕಸ ಬೆರಗಾಗಿಸುವ ವಿಷಯಗಳನ್ನು ಹುಡುಕುತ್ತಾ ಹೋದರೆ ವೈದ್ಯಕೀಯ ಕ್ಷೇತ್ರದಲ್ಲಿ ಇರುವಷ್ಟು ವಿಷಯಗಳು ಮತ್ತೆಲ್ಲೂ ಸಿಗವು. ಏನೋ ಮಾಡಲು ಹೋಗಿ ಮತ್ತೇನೋ ಆದ ಆದ ಜನರಿಗೆ ಬಹಳವೇ ಉಪಕಾರಿಯಾದ ಅದೇಷ್ಟೊ ಸಂಶೋಧನೆಗಳು ನಡೆದಿವೆ ನಡೆಯುತ್ತಿವೆ ನಡೆಯುತ್ತಲೇ ಇರುತ್ತವೆ.

ಏನೋ ಸಂಶೋಧನೆ ಮಾಡುವಾಗ ಅದರ ಉಪ ಉತ್ಪನ್ನವಾಗಿ ಮತ್ತೇನೋ ಹೊಸತು ಅಚ್ಚರಿ ಮುಡಿಸುತ್ತಾ ಮುಂದೆ ಬರುತ್ತದೆ. ಇದು ಅಪ್ಪಟ ಆಶ್ಚರ್ಯಜನಕ ವಿಷಯಗಳಾಗಿರುತ್ತವೆ. ಸಂಶೋಧನೆ ಮಾಡುವವನಿಗೂ ಇದು ಹೊಸತಾಗಿರುತ್ತದೆ. ಇಂತಹ ಎಷ್ಟೋ ಉಪ ಉತ್ಪನ್ನಗಳು ಮಾನವ ಕುಲವನ್ನೇ ಬದಲಾಯಿಸುವಷ್ಟು ಶಕ್ತಿಯುತವಾಗಿವೆ. ಪ್ರತಿ ವರ್ಷ ಇಂತಹ ಆಶ್ಚರ್ಯಜನಕ ಘಟನೆಗಳು ನಡೆಯುತ್ತಲೇ ಇರುತ್ತವೆ.

ಪುರುಷರಲ್ಲಿ ನಿರ್ವೀರ್ಯತೆಯನ್ನು ನಿಲ್ಲಿಸುವ ವಯಾಗ್ರದ ಸಂಶೋಧನೆಯ ಹಿಂದೆಯೂ ಇಂತಹುದೇ ಒಂದು ಅಚ್ಚರಿ ಮೂಡಿಸುವ ಕಥೆಯಿದೆ. ವಯಾಗ್ರವನ್ನೇ ಸಂಶೋಧನೆ ಮಾಡುವ ಕೆಲಸ ನಡೆಯುತ್ತಿತ್ತು ಆದರೆ ಇದರ ಉದ್ದೇಶ ನಿರ್ವೀರ್ಯತೆಯನ್ನು ತಡೆಯುವುದಾಗಿರಲಿಲ್ಲ. ಪೈಜ಼ರ್ ಎಂಬ ಔಷಧೀಯ ಕಂಪನಿಯು ಗಂಟಲೂತ ಇರುವವರಲ್ಲಿ ರಕ್ತನಾಳಗಳನ್ನು ವಿಶ್ರಾಂತಿಯಲ್ಲಿಡುವ ಉದ್ದೇಶದಿಂದ ಸಂಶೋಧನೆಯಲ್ಲಿ ತೊಡಗಿತ್ತು. ಆ ಸಂದರ್ಭದಲ್ಲಿ ಇದರ ಅಡ್ಡ ಪರಿಣಾಮದಿಂದ ಪುರುಷರ ಜನನಾಂಗ ಹಿಗ್ಗಲು ಆರಂಭವಾಯಿತು. ಇತರ ಮುಖ್ಯ ಇಂತಹ ಸಂಶೋಧನೆಗಳೆಂದರೆ ಶಾರ್ಕ್ ಗಳಲ್ಲಿ ಕಂಡುಬರುವ ವೈರಸ್ ಅನ್ನು ನಾಶಪಡಿಸುವ ಅಂಶ, ಸಂಬಾರ ಪದಾರ್ಥಗಳಲ್ಲಿ ಇರುವ ಕ್ಯಾನ್ಸರ್ ನಿವಾರಕ ಗುಣಗಳು, ಇರಿಟೇಬಲ್ ಬೊವೆಲ್ ಸಿಂಡ್ರೋಮ್ ಗೆ ಇರುವ ಸ್ಮಾರ್ಟ್ ಪಿಲ್ ಇತ್ಯಾದಿ. ಇವುಗಳಲ್ಲಿ ಹೆಚ್ಚಿನವುಗಳನ್ನು ಸಂಶೋಧನೆಯ ಬಳಿಕ ಬೌದ್ಧಿಕ ಹಕ್ಕು ಕಾಯ್ದೆಯಡಿ ನೋಂದಾವಣೆ ಮಾಡಿ ಬಹಳಷ್ಟು ಮಂದಿ ಶ್ರೀಮಂತರಾಗಿದ್ದಾರೆ.

Weird medical inventions that work

ಇಂತಹ ಕೆಲವು ವೈದ್ಯಕೀಯ ಸಂಶೋಧನೆಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ.

1. ಒಡೊರೆಂಟ್ ಅನ್ನು ಪುರುಷರ ನಿರ್ವೀರ್ಯತೆಯನ್ನು ನಿವಾರಣೆಗೆ ಬಳಸಿದ್ದು
: ಆಲನ್ ಆರ್ ಹಿರ್ಕ್ಸ್ ವಯಾಗ್ರಕ್ಕೆ ಒಂದು ಪರ್ಯಾಯ ಅನ್ನು ಹುಡುಕಿ ಅದರ ಪೇಟೆಂಟ್ ಅನ್ನು ಪಡೆದಿದ್ದಾನೆ ಈ ಔಷಧದಲ್ಲಿ ಕೇವಲ ವಾಸನೆ ನೋಡಿದರೆ ಸಾಕು. ಈ ಸಂಶೊಧಕನ ಪ್ರಕಾರ ಅತೀ ಹೆಚ್ಚು ಪರಿಣಾಮಕಾರಿ ವಸ್ತುಗಳೆಂದರೆ ಮಲ್ಲಿಗೆ ಹಾಗೂ ಕುಂಬಳಕಾಯಿ ಕಡುಬು, ಡಗ್ ಹಂಟ್ ಮತ್ತು ಲೈಕೋರೈಸ್, ಕುಂಬಳಕಾಯಿ ಕಡುಬು ಹಾಗೂ ಡಂಗ್ ಹಂಟ್.

2. ಕೇಂದ್ರಾಪಿಗಾಮಿ ಬಲದ ಸಹಾಯದಿಂದ ಮಗುವಿನ ಜನ್ಮಕ್ಕೆ ನೆರವಾಗುವ ಒಂದು ಉಪಕರಣ: ಜಾರ್ಜ್ ಮತ್ತು ಚಾರ್ಲೋಟ್ ಬ್ಲಾನ್ಸ್ಕಿ 1965 ರಲ್ಲಿ ಕೇಂದ್ರಾಪಿಗಾಮಿ ಬಲವನ್ನು ಬಳಸಿ ಮಗುವಿನ ಜನ್ಮಕ್ಕೆ ಸಹಾಯ ಮಾಡುವ ಮೇಜಿಗೆ ಪೇಟೆಂಟ್ ಹಕ್ಕು ಹೊಂದಿದ್ದಾರೆ.

3. ಹಣೆಗೆ ಬಲ ನೀಡುವ ಉಪಕರಣ
: ಎರಿಕ್ ಡಿ ಎಂಬಾತ ಸ್ನಾನ ಮಾಡುವಾಗ, ಟಾಯ್ಲೆಟ್ ನಲ್ಲಿ ಕೂತಾಗ, ಮೂತ್ರ ವಿಸರ್ಜನೆ ಮಾಡುವಾಗ ಹಣೆಗೆ ಬಲ ನೀಡುವ ಒಂದು ಉಪಕರಣಕ್ಕೆ ಪೇಟೆಂಟ್ ಹೊಂದಿದ್ದಾನೆ.

4. ಜನನಾಂಗ ಹಿಗ್ಗಲು ವಯಾಗ್ರ
: ಗಂಟಲೂತವನ್ನು ನಿವಾರಿಸಲು ಔಷಧ ಹುಡುಕಲು ಹೊರಟಾಗ ಒಂದು ಔಷಧ ಇದಾಗಿದೆ. ರಕ್ತ ನಾಳಗಳನ್ನು ಶಾಂತವಾಗಿಡುವ ಔಷಧದ ಹುಡುಕಾಟ ಈ ಅತ್ಯಂತ ಹೆಚ್ಚು ಮಾರಾಟ ಆಗುವ ಈ ಔಷಧವನ್ನು ತಯಾರಿಸುವಂತೆ ಮಾಡಿತು.

5. ರಿಮೈಂಡರ್ ಮತ್ತು ಎನ್ಫೋರ್ಸರ್ ಉಪಕರಣ
: ರುಪರ್ಟ್ ಡಬ್ಲ್ಯು ಅವರಿಂದ ಪೇಟೆಂಟ್ ಪಡೆಯಲಾದ ಈ ಉಪಕರಣ ಮಕ್ಕಳ ಕಟ್ಟುಪಟ್ಟಿಗಳನ್ನು ತೊಡಲು ನೆನೆಪಾಗುವಂತೆ ಮಾಡುತ್ತದೆ. ಇದರಲ್ಲಿ ಅಲಾರಾಂ ಕೂಡ ಆಗುತ್ತದೆ ಹಾಗೂ ಇದರಲ್ಲಿರುವ ಅಯಸ್ಕಾಂತ ಅಲಾರ್ಮ್ ಅನ್ನು ನಿಲ್ಲಿಸುತ್ತದೆ.

6. ಒಸಡು ವ್ಯಾಯಾಮ ಉಪಕರಣ
: ಚಾರ್ಲ್ಸ್ ಜಿ ಪರ್ಡಿ ಪೇಟೆಂಟ್ ಹೊಂದಿರುವ ಈ ಉಪಕರಣ ಬಾಯಿಯ ವ್ಯಾಯಾಮಕ್ಕೆ ಮಾಡಿದುದ್ದಾಗಿದೆ. ಇದನ್ನು ಬಳಕೆದಾರನ ಬಾಯಿ ಮತ್ತು ಸ್ಪ್ರಿಂಗ್ ಗೆ ಸಂಪರ್ಕಿಸಲಾಗುತ್ತದೆ. ಇದನ್ನು ಒಂದು ಗೋಡೆ ಅಥವಾ ಗಟ್ಟಿಯಾದ ವಸ್ತುವಿಗೆ ಕಟ್ಟಲಾಗುತ್ತದೆ. ತಲೆಯ ಚಲನೆಯಿಂದ ಸಣ್ಣ ಸೆಳೆತ ಮತ್ತು ಪ್ರಚೋದನೆಗಳು ಇರುತ್ತವೆ.

7. ಆಹಾರ ಸೇವನಾ ವಿರುದ್ಧ ಮುಖವಾಡ
: ಇದು ಡಯಟಿಂಗ್ ಮಾಡುವವರ ಪಾಲಿನ ಮೆಚ್ಚಿನ ಉಪಕರಣ. ಇದು ನಿಮ್ಮ ಬಾಯಿಯನ್ನು ಮುಚ್ಚುತ್ತದೆ. ಇದನ್ನು ಹುಕ್ಸ್, ವಯರ್ ಗಳು, ಲಾಕ್ ಗಳು ಮತ್ತು ಮೌಥ್ ಗಾರ್ಡ್ ನಿಂದ ಮಾಡಲಾಗಿರುತ್ತದೆ. ಇದನ್ನು ಡಯಟಿಂಗ್ ಮಾಡುವವರಿಗಿಂತ ಪ್ರಾಣಿಗಳಿಗೆ ಇದು ಬಹಳ ಪ್ರಯೋಜಕ. ಇದು ತಿನ್ನುವುದನ್ನು ಕಡಿಮೆ ಮಾಡುವುದಲ್ಲದೇ ಮುಖವನ್ನೂ ಮುಚ್ಚುತ್ತದೆ.

English summary

Weird medical inventions that work

There are not many stories that are more intriguing than the medical inventions that are weird and yet work wonders. These inventions might have been bi-product of another invention or purely accidental in nature.
X
Desktop Bottom Promotion