Latest Updates
-
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ -
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ -
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು!
ನಿಮ್ಮ ಬೇಸರ ಕಳೆಯುವ ಟಾಪ್ 10 ಸಲಹೆಗಳು!
ಒಬ್ಬಂಟಿಯಾಗಿ ಬದುಕನ್ನು ನಡೆಸುವುದು ಅತ್ಯಂತ ಕಷ್ಟ. ಯಾವಾಗಲಾದರೂ ಒಮ್ಮೆ ಏಕಾಂತ ಬೇಕೆನಿಸಿದರೂ ಸದಾ ಒಬ್ಬರೇ ಇರುವುದು ಅಸಾಧ್ಯ. ಅದರಲ್ಲೂ ಮೊದಲ ಬಾರಿಗೆ ಒಂಟಿಯಾಗಿರುವ ಸಂದರ್ಭಬಂದರಂತೂ ಇದು ನಿಮ್ಮಲ್ಲಿ ಭಯವನ್ನು ಹುಟ್ಟುಹಾಕಬಹುದು.
ಅನೇಕರು ಏಕಾಂಗಿಯಾಗಿರುವವವರ ಜೀವನ ಮನಮೋಹಕ ಅಥವಾ ಅಪೇಕ್ಷಣೀಯವಾದ ಜೀವನಶೈಲಿ ನಡೆಸುತ್ತಾರೆ ಎಂದು ಪರಿಗಣಿಸುತ್ತಾರೆ, ಆದರೆ ವಾಸ್ತವದಲ್ಲಿ ಮಾತ್ರ ಹೀಗೆ ವಾಸಿಸುವುದು ಅತ್ಯಂತ ಕಷ್ಟದಾಯಕವಾದುದು! ಸದಾ ಪೋಷಕರ ಜೊತೆಯಲ್ಲಿಯೇ ಇದ್ದು, ಒಮ್ಮೆಲೆ ಒಬ್ಬಂಟಿಯಾಗಿ ಬದುಕಬೇಕಾದ ಸಂದರ್ಭ ಬಂದರೆ ಅದನ್ನು ಅನುಭವಿಸಿದ ನಂತರವಷ್ಟೇ ಒಂಟಿತನದ ನೋವು ಅರ್ಥವಾಗುವುದು!
ಪ್ರತಿಯೊಬ್ಬರೂ ತಾವು ಸ್ವತಂತ್ರವಾಗಿರಬೇಕು ಎಂದೇ ಬಯಸುತ್ತಾರೆ. ಆದರೆ ನೀವು ನಿಮ್ಮ ಈ ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದಂತೆ ಹೇಳಿದಷ್ಟು ಸುಲಭವಾಗಿ ಒಬ್ಬಂಟಿಯಾಗಿ ಇರಲು ಸಾಧ್ಯವಾಗದು ಎಂಬುದು ನಿಮ್ಮ ಅರಿವಿಗೆ ಬರುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಂಬಂಧಗಳಲ್ಲಿ ವಂಚನೆಯಾದರೆ ನಿಭಾಯಿಸುವುದು ಹೇಗೆ?
ಏಕಾಂಗಿಯಾಗಿ ವಾಸಿಸುತ್ತಿರುವ ಮಹಿಳೆಯರು ನಿಮ್ಮ ದೈನಂದಿನ ಜೀವನದಲ್ಲಿ ಸುರಕ್ಷಿತ ಮತ್ತು ರಕ್ಷಣೆಯನ್ನು ಕಂಡುಕೊಳ್ಳಲು ಮೊದಲು ಸುರಕ್ಷತಾ ಕ್ರಮಗಳ ಬಗ್ಗೆ ಗಮನವಹಿಸಬೇಕು. ವೈಯಕ್ತಿಕ ಸುರಕ್ಷತೆ ವಿಶೇಷವಾಗಿ ಮಹಿಳೆಯರಿಗೆ ಅತ್ಯಂತ ಮಹತ್ವದ್ದಾಗಿದೆ.
ನೀವು ನಿಮ್ಮ ಸ್ವಂತ ಅಡುಗೆ ಮಾಡಿಕೊಳ್ಳುವುದು, ಲಾಂಡ್ರಿ ಮಾಡುವುದು ಮತ್ತು ಮನೆಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ನಿಮ್ಮಲ್ಲಿ ಬೇಸರದ ಮತ್ತು ಏಕತಾನತೆಯ ಭಾವನೆಯನ್ನು ಉಂಟುಮಾಡಬಹುದು .

ಮನೆಯ ಹೊರಗೆ ಸುರಕ್ಷತೆ ಕಾಯ್ದುಕೊಳ್ಳುವುದು
ನೀವು ಒಂದು ಮನೆ ಅಥವಾ ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುತ್ತಿದ್ದರೆ, ಅದರಲ್ಲೂ ನೀವು ಏಕಾಂಗಿಯಾಗಿ ವಾಸಿಸುತ್ತಿದ್ದರೆ ಹೊರಾಂಗಣ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಕಾಂಗಿಯಾಗಿ ವಾಸಿಸುವವರಿಗೆ ಉತ್ತಮ ಸಲಹೆಗಳಲ್ಲಿ ಒಂದೆಂದರೆ ಉತ್ತಮ ಎಚ್ಚರಿಕೆಯ ವ್ಯವಸ್ಥೆಯನ್ನು ಕಂಡುಕೊಳ್ಳುವುದು. ತುರ್ತು ಪರಿಸ್ಥಿತಿಯಲ್ಲಿ ನೆರೆಹೊರೆಯವರೂ ಸ್ವಂಧಿಸುವಂತಿರಬೇಕು.

ಬೀಗ ಹಾಕಿ ಭದ್ರಪಡಿಸುವಿಕೆ
ನೀವು ಮನೆಯ ಹೊರಗೆ ಹೋಗುವಾಗ ಅಥವಾ ಮನೆಯಲ್ಲಿಯೇ ಇರುವಾಗ ನಿಮ್ಮ ಸ್ವಂತ ಸುರಕ್ಷತಾ ಮುನ್ನೆಚ್ಚರಿಕೆಯ ಕ್ರಮವಾಗಿ ನಿಮ್ಮ ಬಾಗಿಲುಗಳನ್ನು ಹಾಕಿಟ್ಟುಕೊಳ್ಳುವುದು ಉತ್ತಮ .

ಅಲಂಕಾರ
ನಿಮ್ಮ ಮನೆಗೆ ಅಲಂಕಾರ ಮಾಡುವುದು ಅತ್ಯಂತ ಸುಂದರ ಅನುಭವವನ್ನು ನೀಡುವುದು. ಜೊತೆಗೆ ನಿಮ್ಮ ಏಕಾಂತವನ್ನು ಕಳೆದು ಮೋಜು ಮಾಡಬಹುದು. ಉದಾಹರಣೆಗೆ ನಿಮ್ಮ ಡೈನಿಂಗ್ ಟೇಬಲ್ ನೋಟವನ್ನು ಪೂರ್ಣಗೊಳಿಸಲು ಉತ್ತಮ ಊಟದ ಟೇಬಲ್ ಮತ್ತು ಗೃಹೋಪಯೋಗಿ ವಸ್ತುಗಳನ್ನು ಕೊಂಡುಕೊಳ್ಳಿ. ನೀವು ಊಟಕ್ಕೆ ಸ್ನೇಹಿತರನ್ನು ಕರೆಯಲು ಬಯಸಿದರೆ ಚಾಕುಕತ್ತರಿಗಳು, ನಾನ್ ಸ್ಟಿಕ್ ಪಾನ್ ಗಳು ಅತ್ಯಂತ ಮುಖ್ಯ. ಏಕಾಂಗಿಯಾಗಿ ವಾಸಿಸುತ್ತಿರುವವರು ತಮ್ಮ ಕೋಣೆಯನ್ನು ಸುಂದರ ಮತ್ತು ಸೊಗಸಾದ ಪೀಠೋಪಕರಣಗಳ ಮೂಲಕ ಅಲಂಕರಿಸಬಹುದು. ಜೊತೆಗೆ ಸುಂದರವಾದ ಟೇಬಲ್ ಲ್ಯಾಂಪ್ ಗಳನ್ನೂ ಕೂಡ ಕೊಂಡುಕೊಳ್ಳುವುದು ಉತ್ತಮ.

ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕ
ನಿಮ್ಮ ಸುರಕ್ಷತೆಗಾಗಿ ನೀವು ಇರುವ ಸ್ಥಳ ಅಥವಾ ದೈನಂದಿನ ಚಟುವಟಿಕೆಗಳ ಬಗ್ಗೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕವನ್ನಿಟ್ಟುಕೊಂಡು ಅವರಿಗೆ ತಿಳಿಸಿ. ಇದರಿಂದ ನಿಮ್ಮ ಬಗ್ಗೆ ನಿಮ್ಮ ಕುಟುಂಬದವರು ಅನ್ಯತಾ ಭಾವಿಸದೆ ಸರ್ರಿಯಾಗಿ ತಿಳಿದುಕೊಳ್ಳಲೂ ಸಾಧ್ಯ.

ಪ್ರಯಾಣ
ನಿಮ್ಮ ಕುಟುಂಬದವರು ನಿಮ್ಮ ಹತ್ತಿರದಲ್ಲಿರದಿದ್ದರೆ ಒಂದು ಸ್ಥಳದಲ್ಲಿ ಅವರನ್ನು ಭೇಟಿ ಮಾಡುವ ಯೋಜನೆಯನ್ನು ಮಾಡಬಹುದು. ಇದರಿಂದ ಎಲ್ಲರೂ ಸಂತೋಷವಾಗಿ ಪ್ರಯಾಣ ಮಾಡಿ ಪರಸ್ಪರ ಭೇಟಿ ಮಾಡಲು ಸಾಧ್ಯ.

ಸಾಮಾಜಿಕ ಮಾಧ್ಯಮ
ಏಕಾಂಗಿಯಾಗಿ ವಾಸಿಸುತ್ತಿರುವ ನೀವು ಅನುಸರಿಸಲೇಬೇಕಾದ ಪ್ರಮುಖ ಸಲಹೆಗಳೆಂದರೆ, ನಿಮ್ಮ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಬಹಿರಂಗಪಡಿಸದಿರಿ. ಇದರಿಂದ ನೀವು ಮನೆಯಲ್ಲಿ ಏಕಾಂಗಿಯಾಗಿರುವಾಗ ಹಾಗೂ ನಿಮ್ಮ ದಿನಚರಿಯ ಬಗ್ಗೆ ತುಂಬಾ ಮಾಹಿತಿಯನ್ನು ಇತರರಿಗೆ ನೀಡಿದಂತಾಗುತ್ತದೆ. ಇದರಿಂದ ಅನಾಹುತಗಳು ಸಂಭವಿಸಬಹುದು.

ನೆರೆಹೊರೆಯವರ ಬಗ್ಗೆ ತಿಳಿದುಕೊಳ್ಳಿ
ಏಕಾಂಗಿಯಾಗಿ ವಾಸಿಸುತ್ತಿರುವ ನೀವು ಪ್ರಮುಖವಾಗಿ ಮಾಡಬೇಕಾದದ್ದೆಂದರೆ, ನಿಮ್ಮ ನೆರೆಹೊರೆಯವರೊಂದಿಗೆ ನೀವೇ ಪರಿಚಯಿಸಿಕೊಳ್ಳಲು ಹಿಂಜರಿಯದಿರಿ. ನಿಮ್ಮ ನೆರೆಹೊರೆಯವರೊಂದಿಗೆ ಪರಿಚಯವಿಟ್ಟುಕೊಳ್ಳುವುದರಿಂದ ನಿಮಗೆ ಪರಿಚಯವಿಲ್ಲದವರು ನಿಮ್ಮ ಮನೆಯ ಸುತ್ತ ತಿರುಗಾಡಿದರೆ ಅನುಮಾನಾಸ್ಪದವಾಗಿ ನಡೆದುಕೊಂಡರೆ ಕೂಡಲೆ ಮುನ್ನೆಚ್ಚರಿಕೆಯನ್ನು ಕಂಡುಕೊಳ್ಳಬಹುದು. ಅಲ್ಲದೇ ನಿಮ್ಮ ನೆರೆಹೊರೆಯವರು ಜೋರಾಗಿ ಮಾತನಾಡುವವರಾದರೂ ಸಹ ನಿಮಗೆ ಇತರರಿಂದ ಉಂಟಾಗುವ ತೊಂದರೆಗಳೂ ಕಡಿಮೆಯಾಗಬಹುದು!

ಅಂತರ್ಜಾಲ ಅಥವಾ ಸ್ಮಾರ್ಟ್ ಫೋನ್‌ಗಳು
ಹಲವಾರು ಕಂಪನಿಗಳು ಇಂಟರ್ನೆಟ್ ಅಥವಾ ಮೊಬೈಲ್ ಫೋನ್ ಗಳ ಮೂಲಕ ನಿಮ್ಮ ಬಗ್ಗೆ ನೀವೆ ಎಚ್ಚರಿಕೆಯನ್ನುವಹಿಸಬಹುದು. ಇದು ನಿಮ್ಮ ಸುರಕ್ಷತೆಯ ಬಗ್ಗೆ ಸಹಾಯಕವಾಗುವ ಅತ್ಯಂತ ಆಸಕ್ತಿದಾಯಕ ಸಲಹೆಗಳಲ್ಲಿ ಒಂದಾಗಿದೆ.

ನಿಮಗೆ ನೀವೆ ನೀಡಿ ಆತಿಥ್ಯ:
ಮನೆಯಿಂದ ಒಬ್ಬಂಟಿಯಾಗಿ ಹೊರಗೆ ಹೋಗಿ ಆಹಾರ ಸೇವಿಸುವುದೆಂದರೆ, ಸಾಮಾನ್ಯವಾಗಿ ಮಹಿಳೆಯರಿಗೆ ಭಯ. ಆಅದ್ರೆ ನಿಮ್ಮ ಏಕಾಂಗಿತನವನ್ನು ಕಳೆಯಲು ಒಮ್ಮೊಮ್ಮೆ ಹೊರಗಡೆ ಆಹಾರ ಸೇವಿಸುವುದು ಉತ್ತಮ ಸಲಹೆಯೇ. ಸ್ಥಳೀಯ ಹೋಟೆಲ್ ಗಳಲ್ಲಿ ಯಾವಾಗಲಾದರೂ ಒಮ್ಮೆ ನಿಮಗಿಷ್ಟವಾದ ಆಹಾರವನ್ನು ಸೇವಿಸಿ ನಿಮ್ಮ ಒಂಟಿತನವನ್ನು ಕಳೆಯಬಹುದು.



Click it and Unblock the Notifications











