ಜನಪ್ರಿಯ ಆಧ್ಯಾತ್ಮಿಕ ಉಲ್ಲೇಖಗಳು

By Poornima Heggade

ಸಾಮಾನ್ಯವಾಗಿ ಮನಸ್ಸಿನ ಶಾಂತಿಗೋಸ್ಕರ, ಆತ್ಮ ವಿಶ್ವಾಸ ಹಾಗೂ ಸ್ಫೂರ್ತಿಗೋಸ್ಕರ ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸುವವರು ಹಲವರಿದ್ದಾರೆ. ಶಾಂತಿ ಮತ್ತು ಸಂತೋಷಕ್ಕೆ ಪ್ರಾಮುಖ್ಯತೆ ನೀಡುವ ಅನೇಕ ಆಧ್ಯಾತ್ಮಿಕ ಉಲ್ಲೇಖಗಳೂ ಇವೆ. ಆಧ್ಯಾತ್ಮಿಕ ಉಲ್ಲೇಖಗಳು ಸಾಮಾನ್ಯವಾಗಿ ಸಣ್ಣ ವಾಕ್ಯಗಳಾಗಿರುತ್ತವೆ.

ವಾಕ್ಯಗಳು ಚಿಕ್ಕದಾಗಿದ್ದರೂ ಅದು ನೀಡುವ ಅರ್ಥಗಳು ಮಾತ್ರ ವ್ಯಾಪಕ! ಮೂಲಭೂತವಾಗಿ ಪ್ರತಿ ಉಲ್ಲೇಖಗಳು ಪ್ರತಿ ವ್ಯಕ್ತಿಯ ಪರಿಕಲ್ಪನೆ ಮತ್ತು ಅವುಗಳ ಮೇಲ್ನೋಟಕ್ಕೆ ಅನುಸರಿಸಿ ಹಲವು ಅರ್ಥಗಳನ್ನು ಹೊಂದಿರುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಓಂಕಾರದಿಂದ ಹೆಚ್ಚಿಸಿಕೊಳ್ಳಿ ಆರೋಗ್ಯ

ಇಂತಹ ಜನಪ್ರಿಯ ಆಧ್ಯಾತ್ಮಿಕ ಉಲ್ಲೇಖಗಳು ನಮ್ಮ ಜೀವನದಲ್ಲಿ ಅನುಸರಿಸಲು ಯೋಗ್ಯವಾಗಿರುತ್ತವೆ. ಇಂತಹ ಆಧ್ಯಾತ್ಮಿಕ ಮಾತುಗಳು ನಾವು ನಮ್ಮ ಸುತ್ತಲಿನ ಜಗತ್ತನ್ನು ನೋಡುವ ಪರಿಯನ್ನೇ ಬದಲಾಯಿಸಲು ಸಹಾಯ ಮಾಡುತ್ತವೆ. ಜನಪ್ರಿಯ ಆಧ್ಯಾತ್ಮಿಕ ಉಲ್ಲೇಖಗಳು ಹೆಚ್ಚಿನ ಯಾವುದೇ ಧಾರ್ಮಿಕ ನಂಬಿಕೆಗಳನ್ನೂ ಮೀರಿ ನಮಗೆ ಸ್ಫೂರ್ತಿಯನ್ನು ನೀಡುತ್ತವೆ. ಅವರು ದಪ್ಪ ಪುಸ್ತಕಗಳಲ್ಲಿಯೂ ಸಿಗಲಾಗದಂತಹ ಸಾವಿರ ಅರ್ಥಗಳನ್ನು ನೀಡುವ ಅದ್ಭುತ ಶಕ್ತಿಯನ್ನು ಹೊಂದಿವೆ.

The Most Popular Spiritual Quotes

ನೀವು ಪ್ರಸಿದ್ಧ ಆಧ್ಯಾತ್ಮಿಕ ಉಲ್ಲೇಖಗಳು ನಿಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂದು ತಿಳಿಯಲು ಪ್ರಯತ್ನಿಸಿದರೆ ನೀವು ಆಗಾಗ ನೋಡಬಹುದಾದ ಸ್ಥಳಗಳಲ್ಲಿ ಇಂತಹ ಉಲ್ಲೇಖಗಳನ್ನು ಬರೆದಿಡಿ. ಇದು ನಿಮ್ಮ ಮೊಬೈಲ್ ಸ್ಕ್ರೀನ್ ಸೇವರ್ , ಡೆಸ್ಕ್ಟಾಪ್ ಅಥವಾ ಲ್ಯಾಪ್ಟಾಪ್ ನ ಪರದೆಯ ಮೇಲೆ, ವಾಲ್ಪೇಪರ್ ಅಥವಾ ಯಾವುದೇ ರೀತಿಯ ನಿಮ್ಮ ಗೋಡೆಯ ಮೇಲೆ ಉಂಟಿಸಬಹುದಾದಂತಹ ಕಾಗದ ಸ್ಟಿಕರ್ ಕೂಡಾ ಆಗಿರಬಹುದು.

ನೀವು ಪ್ರತಿ ದಿನ ಏಳುವಾಗ ನಿಮ್ಮ ಕಣ್ಮುಂದೆ ಈ ಉಲ್ಲೇಖಗಳು ಕಾಣುವಂತೆ ವ್ಯವಸ್ಥೆ ಮಾಡಿಕೊಂಡಿದ್ದರೆ ಕೆಲವೇ ದಿನಗಳಲ್ಲಿ ನಿಮ್ಮ ಜೀವನದಲ್ಲಾಗುವ ಬೃಹತ್ ಬದಲಾವಣೆಯನ್ನು ನೀವೇ ಗಮನಿಸಬಹುದು. ಇಲ್ಲಿ, ನಿಮಗೆ ಸ್ಫೂರ್ತಿ ನೀಡುವಂತಹ ಕೆಲವು ಜನಪ್ರಿಯ ಆಧ್ಯಾತ್ಮಿಕ ಉಲ್ಲೇಖಗಳನ್ನು ನೀಡಲಾಗಿದೆ:

"ದೇವಾಲಯಗಳ ಅವಶ್ಯಕತೆಯಿಲ್ಲ, ಸಂಕೀರ್ಣ ತತ್ವಗಳ ಅವಶ್ಯಕತೆ ಇಲ್ಲ. ನನ್ನ ಮೆದುಳು ಮತ್ತು ನನ್ನ ಹೃದಯ ನನ್ನ ದೇವಾಲಯಗಳು; ನನ್ನ ತತ್ವಶಾಸ್ತ್ರವು ದಯೆ/ ಕರುಣೆಯಾಗಿದೆ."

ನೀವು ಅತ್ಯಂತ ಜನಪ್ರಿಯ ಆಧ್ಯಾತ್ಮಿಕ ಉಲ್ಲೇಖಗಳ ಅಗ್ರ ಪಟ್ಟಿಯನ್ನು ನೋಡಿದಾಗಲೂ, ನೀವು ಖಂಡಿತವಾಗಿಯೂ ಈ ಉಲ್ಲೇಖವನ್ನು ಕಾಣುತ್ತೀರಿ. ಈ ಸಾಲುಗಳು 14ನೇ ದಲೈ ಲಾಮಾ ( ಮತ್ತು ಪ್ರಸ್ತುತ) ಅವರು ಹೇಳಿದ್ದು. ಈ ವಾಕ್ಯವು ಪ್ರೀತಿ, ವಿಶ್ವಾಸದಿಂದಿರಬೇಕು (/ ಏನನ್ನಾದರೂ ಸಾಧಿಸಬೇಕು) ಎಂಬ ನಮ್ಮ ಅಂತಃಸತ್ವಕ್ಕೆ ಪ್ರಾಮುಖ್ಯ ನೀಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ದೇವತೆಗಳ ಈ ವಾಹನಗಳ ಸಂಕೇತವೇನು?

"ಶಾಂತಿ ಒಳಗಿನಿಂದಲೇ ಬರುತ್ತದೆ. ಇದು ಇಲ್ಲದೇ ಕಲಿಯಲು ಸಾಧ್ಯವಿಲ್ಲ. "

ಈ ಬುದ್ಧನು ಹೇಳಿರುವ ಜನಪ್ರಿಯ ಆಧ್ಯಾತ್ಮಿಕ ಉಲ್ಲೇಖಗಳಲ್ಲಿ ಒಂದಾಗಿದೆ. ಈ ವಾಕ್ಯದ ಅರ್ಥವೆಂದರೆ; ನಾವು ನಮ್ಮ ಒಳ್ಳೆಯ ಕಾರ್ಯಗಳಿಂದ ಶಾಂತಿಯನ್ನು ಕಂಡುಕೊಳ್ಳಬೇಕು. ನಮ್ಮ ಸುತ್ತಲಿನ ಪ್ರಪಂಚದಲ್ಲಿ ಸಂತೋಷವನ್ನು ಅನ್ವೇಷಿಸುವ ಬದಲಿಗೆ, ನಾವು ನಮ್ಮ ಸಂತೋಷಕ್ಕಾಗಿ ಕೆಲಸವನ್ನು ಮಾಡಬೇಕು .

"ಆಧ್ಯಾತ್ಮದ ಅತ್ಯಂತ ಮುಖ್ಯ ಉದ್ದೇಶ ಮನೋನಿಗ್ರಹ ಮಾಡುವುದು. ಇತರರನ್ನು ಟೀಕಿಸುವ ಬದಲಿಗೆ, ನಾವು ನಮ್ಮನ್ನೇ ಮೌಲ್ಯಮಾಪನ ಮಾಡಿಕೊಳ್ಳಬೇಕು. "

ಇದು 14ನೇ ದಲೈ ಲಾಮಾ ( ಮತ್ತು ಪ್ರಸ್ತುತ) ಅವರ ಪ್ರಸಿದ್ಧ ಆಧ್ಯಾತ್ಮಿಕ ಉಲ್ಲೇಖಗಳಲ್ಲಿ ಒಂದಾಗಿದೆ. ಇದು ಆತ್ಮ/ಮನಸ್ಸಿನ ಶಿಸ್ತಿನ ಪ್ರಾಮುಖ್ಯತೆಯ ಬಗ್ಗೆ ಪರಿಕಲ್ಪನೆಯನ್ನು ನೀಡುವ ಸಾಕಷ್ಟು ಪ್ರಬಲ ಉಲ್ಲೇಖವಾಗಿದೆ. ಇದು ಜನಪ್ರಿಯ ಆಧ್ಯಾತ್ಮಿಕ ಉಲ್ಲೇಖಗಳ ಪಟ್ಟಿಯಲ್ಲಿ ಮೊದಲಿನ ಸಾಲಿಗೆ ಸೇರುವಂತಹ ಅದ್ಭುತ ಉಲ್ಲೇಖ.

"ನನ್ನ ಕಾಳಜಿ ದೇವರು ನಮ್ಮ ಕಡೆ ಇದ್ದಾನೆಯೇ ಎಂಬುದಲ್ಲ ಅಲ್ಲ; ನನ್ನ ಅತ್ಯಂತ ಕಾಳಜಿ ದೇವರು ಯಾವಾಗಲೂ ನಾವು ದೇವರ ಕಡೆ ಇರುವುದು, ಏಕೆಂದರೆ ದೇವರು ಯಾವಾಗಲೂ ಸರಿ. "
ಇದು ಅಬ್ರಾಹಾಂ ಲಿಂಕನ್ ಅವರು ಮಾನವಕುಲಕ್ಕೆ ನೀಡಿದ ಅತ್ಯಂತ ಪ್ರಸಿದ್ಧ ಆಧ್ಯಾತ್ಮಿಕ ಉಲ್ಲೇಖಗಳಲ್ಲಿ ಒಂದಾಗಿದೆ. ಉಲ್ಲೇಖ ಸ್ಪಷ್ಟವಾಗಿ ಹೇಳುವುದೆಂದರೆ, ಯಾವಾಗಲೂ ಎಲ್ಲಿ ಸರಿ ಇರುತ್ತದೆಯೋ ಅಲ್ಲಿ ಸದಾ ದೇವರ ಅಸ್ತಿತ್ವವಿರುತ್ತದೆ. ದೇವರ ಕಡೆಗೆ ಹೋಗುವುದೆಂದರೆ ಸರಿಯಾದುದನ್ನೇ ಮಾಡುವುದು.

"ದಿನಗಳ ಅತ್ಯಂತ ವ್ಯರ್ಥ ಗಳಿಗೆ ಎಂದರೆ ದಿನವಿಡೀ ನಗದೇ ಇರುವುದು. "
ಇದು ಜನಪ್ರಿಯ ಆಧ್ಯಾತ್ಮಿಕ ಉಲ್ಲೇಖಗಳಲ್ಲಿ ಒಂದಾಗಿದೆ. ಇದು ಪ್ರಸಿದ್ಧ ಅಮೆರಿಕನ್ ಕವಿ ಮತ್ತು ಚಿತ್ರಕಾರರಾದ ಎಡ್ವರ್ಡ್ ಈಸ್ಟಲಿನ್ ಕಮಿಂಗ್ಸ್ ಅವರು ಹೇಳಿರುವ ಆಧ್ಯಾತ್ಮಿಕ ಉಲ್ಲೇಖವಾಗಿದೆ. ಇದು ಜನರಿಗೆ ಸಂತೋಷದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಸುವ ಪ್ರಸಿದ್ಧ ಆಧ್ಯಾತ್ಮಿಕ ಉಲ್ಲೇಖವಾಗಿದೆ.

" ನಮ್ಮ ಸೃಷ್ಟಿಕರ್ತ ಭಗವಂತ, ನಮ್ಮ ಮನಸ್ಸನ್ನು ಮತ್ತು ವ್ಯಕ್ತಿತ್ವದ ಒಳಗೆ ಅಡಗಿದ್ದಾನೆ. ಆತ ನಮ್ಮ ಮಹಾನ್ ಸಂಭಾವ್ಯ ಶಕ್ತಿ ಮತ್ತು ಸಾಮರ್ಥ್ಯವಾಗಿದ್ದಾನೆ. ದೇವರ ಸ್ಮರಣೆ / ಪ್ರಾರ್ಥನೆ ನಮಗೆ ಈ ಶಕ್ತಿಯನ್ನು ಅಭಿವೃದ್ಧಿಪಡಿಸಲು ನೆರವಾಗುತ್ತದೆ."

ಡಾ ಎ.ಪಿ.ಜೆ. ಅಬ್ದುಲ್ ಕಲಾಂ ಯಾವಾಗಲೂ ಪದಗಳ ಶಕ್ತಿಯನ್ನೆ ಬಳಸಿಕೊಂಡೆ ಗೆದ್ದುಬಂದಿದ್ದಾರೆ. ಇವರ ಪ್ರಸಿದ್ಧ ಆಧ್ಯಾತ್ಮಿಕ ಉಲ್ಲೇಖಗಳಲ್ಲಿ ಇದು ಜನಪ್ರಿಯವಾಗಿರುವ ಉಲ್ಲೇಖ. ಈ ಉಲ್ಲೇಖ ಹೇಳುವಂತೆ, ನಮ್ಮೊಳಗಿನ ಶಕ್ತಿಯೇ ದೇವರು

"ಕಳೆದಿದ್ದರ ಬಗ್ಗೆ ಚಿಂತಿಸಬೇಡ, ಭವಿಷ್ಯದ ಬಗ್ಗೆ ಕನಸು ಕಾಣಬೇಡ, ಈ ಕ್ಷಣದ ಬಗ್ಗೆ ಮಾತ್ರ ಗವನವಹಿಸು."
ಭಗವಾನ್ ಬುದ್ಧನ ಪ್ರಸಿದ್ಧ ಆಧ್ಯಾತ್ಮಿಕ ಉಲ್ಲೇಖಗಳಲ್ಲಿ ಇದೂ ಒಂದಾಗಿದೆ. ನಿಮ್ಮ ಜೀವನದಲ್ಲಿ ಈ ಉಲ್ಲೇಖವನ್ನು ಅಳವಡಿಸಿಕೊಂಡರೆ ನೀವು ಪೂರ್ಣವಾಗಿ ನಿಮ್ಮ ಜೀವನವನ್ನು ಆನಂದಿಸಲು ಸಹಾಯವಾಗುತ್ತದೆ. ಈ ವಾಕ್ಯವು ನಿಮ್ಮ ಜೀವನದ ಈ ಕ್ಷಣವನ್ನು ಆನಂದವಾಗಿ ಕಳೆಯಲು ಪ್ರೇರೇಪಿಸುತ್ತದೆ.

X
Desktop Bottom Promotion