ಬೇಸರವಾದಾಗ ಮಾಡಬೇಕಾದ 10 ವಿಷಯಗಳು

By Poornima Heggade

ಜೀವನದಲ್ಲಿ ಯಾವಾಗಲೂ ಸಂತೋಷದ ಮತ್ತು ಆನಂದದ ಕ್ಷಣಗಳೇ ಇರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕೆಲಸದ ವೇಳೆ ಮನಸ್ಸು ಸಾಕಷ್ಟು ನಿರುತ್ಸಾಹವನ್ನು ಅನುಭವಿಸಬಹುದು. ಹೀಗಾದಾಗ ನೀವು ಮನಸ್ಸಿಗೆ ಬೇಜಾರು, ನಿರಾಶೆ ಮತ್ತು ನಿರುತ್ಸಾಹವನ್ನು ಎದುರಿಸಬೇಕಾಗುತ್ತದೆ.

ಈ ಸಮಯದಲ್ಲಿ ನೀವು ಜೀವನದಲ್ಲಿ ಉತ್ತಮ ವಿಷಯಗಳ ಕಡೆಗೆ ಗಮನವಹಿಸಬೇಕಾಗುತ್ತದೆ. ಬೇಸರಗೊಳ್ಳುವುದು ಮತ್ತು ಪರಾಭವ ಭಾವನೆಯನ್ನು ಹೊಂದುವ ಬದಲು ನೀವು ಪ್ರೇರಣೆ ಮತ್ತು ಪ್ರೋತ್ಸಾಹ ಪಡೆಯಲು ಯತ್ನಿಸಬೇಕು .

ನೀವು ಅಸಮಾಧಾನಗೊಂಡಿರುವ ಸಮಯದಲ್ಲಿ ಉತ್ತಮ ಮನಸ್ಥಿತಿಯನ್ನು ಪಡೆಯಲು ಸಹಾಯ ಮಾಡುವ ಅನೇಕ ವಿಷಯಗಳಿವೆ. ಮತ್ತೆ ಮತ್ತೆ ನಿಮ್ಮ ಜೀವನದ ಕೆಟ್ಟ ಘಳಿಗೆಗಳನ್ನೇ ಮೆಲಕು ಹಾಕುವ ಬದಲು ಇಷ್ಟಪಡುವ ಕೆಲಸಗಳನ್ನು ಮಾಡುವತ್ತ ನಿಮ್ಮ ಮನಸ್ಸನ್ನು ಬದಲಾಯಿಸಿ.

ಇನ್ನಷ್ಟು ಮಾಹಿತಿಯನ್ನು ಓದಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ಬರ್ಹಿಮುಖಿಗಳ ಕೆಲವೊಂದು ಅನುಕೂಲಗಳು

ವಸ್ತುಗಳ ಮಾಡುವ ಬದಲು ಕೆಟ್ಟ ಹಂತದ ವಿಚಾರ ನಿಮ್ಮ ಮನಸ್ಸು ದಿಕ್ಕು ಪ್ರಯತ್ನಿಸಿ . ನೀವು ಅಸಮಾಧಾನದ ಭಾವನೆಯನ್ನು ಹೊಂದಿದ್ದಾಗ ಮಾಡಬೇಕಾದ ಕೆಲವು ವಿಷಯಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ : -

1.ಸಂಗೀತ

1.ಸಂಗೀತ

ಇಡೀ ವಿಶ್ವದಲ್ಲೇ ಸಂಗೀತದಷ್ಟು ಮನಸ್ಸನ್ನು ಪ್ರಶಾಂತಗೊಳಿಸುವ ಮತ್ತು ಸಡಿಲಗೊಳಿಸುವ ವಿಷಯ ಬೇರೊಂದಿಲ್ಲ. ನಿಮ್ಮ ಮನಸ್ಸು ಬೇಸರದಲ್ಲಿದ್ದಾಗ ಕೆಲವು ಶಾಂತ ಮತ್ತು ಹಿತವಾದ ಸಂಗೀತ ಅಥವಾ ನಿಮ್ಮ ಇಷ್ಟದ ಯಾವುದೇ ಸಂಗೀತವನ್ನು ಆಲಿಸಿ. ಸಂಗೀತ, ನಿಮ್ಮ ಮನಸ್ಸನ್ನು ಬದಲಾಯಿಸಿ ಮತ್ತು ನಿಮ್ಮಲ್ಲಿ ಉತ್ತಮ ಭಾವನೆಯನ್ನು ಮೂಡಿಸುವ ಸಾಮರ್ಥ್ಯವನ್ನು ಹೊಂದಿದೆ. ಸಂಗೀತ ಕೇಳುವ ಸಂದರ್ಭದಲ್ಲಿ "ಒಳ್ಳೆಯ ಭಾವನೆ "ತನ್ನು ಮೂಡಿಸುವ ಹಾರ್ಮೋನುಗಳು ನಮ್ಮಲ್ಲಿ ಬಿಡುಗಡೆಯಾಗುತ್ತವೆ .

2.ಪುಸ್ತಕವನ್ನು ಓದಿ

2.ಪುಸ್ತಕವನ್ನು ಓದಿ

ನಿಮ್ಮ ಮೆಚ್ಚಿನ ಲೇಖಕ ಅಥವಾ ಕಾದಂಬರಿಕಾರ ಪುಸ್ತಕ ಓದುವಿಕೆ ಸಹ ನಿಮ್ಮನ್ನು ಹುರಿದುಂಬಿಸಲು ಉತ್ತಮ ಮಾರ್ಗವಾಗಿದೆ. ಯಾವಾಗ ನೀವು ಬೇಸರದ ಮೂಡ್ ನಲ್ಲಿರುತ್ತೀರೋ ಆ ಸಮಯದಲ್ಲಿ ನಿಮ್ಮನ್ನು ಪ್ರೇರೇಪಿಸುವ ಮತ್ತು ಪ್ರೋತ್ಸಾಹಿಸುವಂತಹ ಪುಸ್ತಕಗಳನ್ನು ಓದಿ. ಧನಾತ್ಮಕ ಉಲ್ಲೇಖಗಳು ಅಥವಾ ಒಂದು ಸುಖಾಂತ್ಯ ಕಥೆಯನ್ನು ಹೊಂದಿರುವ ಪುಸ್ತಕ ನಿಮ್ಮ ಮನಸ್ಥಿತಿ ಬದಲಾಯಿಸುವಲ್ಲಿ ಪರಿಣಾಮಕಾರಿ.

3.ವಾಕ್ / ವಿಹಾರಕ್ಕೆ ಹೋಗಿ

3.ವಾಕ್ / ವಿಹಾರಕ್ಕೆ ಹೋಗಿ

ನೀವು ಮನಸ್ಸಿನ ನೆಮ್ಮದಿ ಕಳೆದುಕೊಂಡಿದ್ದರೆ ನಿಮ್ಮ ಮನೆಯಿಂದ ತುಸು ದೂರ ವಿಹಾರ / ವಾಕ್ ಹೋಗಿ ಅಲ್ಲಿ ಸ್ವಲ್ಪ ಸಮಯವನ್ನು ಕಳೆಯಿರಿ. ಹತ್ತಿರದಲ್ಲಿರುವ ಹೂದೋಟ, ಉದ್ಯಾನಗಳಿಗೆ ಹೋಗಿ ಅಲ್ಲಿರುವ ಸಂತೋಷದಿಂದ ಆಟವಾಡುತ್ತಿರುವ ಮಕ್ಕಳು ಮತ್ತು ಸುಂದರ ದಂಪತಿಗಳನ್ನು ನೋಡಿ ನಿಮ್ಮ ಮನಸ್ಸು ಉಲ್ಲಾಸಗೊಳ್ಳಬಹುದು. ಜೊತೆಗೆ ನಿಮ್ಮ ಜೀವನದಲ್ಲಿ ಆತಂಕಗಳಿಂದ ವಿರಾಮ ಪಡೆಯಬಹುದು!

4.ಚಲನಚಿತ್ರ

4.ಚಲನಚಿತ್ರ

ಒಂದು ಲಘು ಹಾಸ್ಯವನ್ನು ಹೊಂದಿರುವ ಚಿತ್ರ, ನಿಮ್ಮ ಎಲ್ಲಾ ಚಿಂತೆಗಳನ್ನೂ ಮರೆಸಿ ನೀವು ಶಾಂತ ಮನಸ್ಥಿತಿಯನ್ನು ಹೊಂದಲು ಸಹಾಯ ಮಾಡಬಹುದು. ನಿಮಗೆ ಇನ್ನಷ್ಟು ತೊಂದರೆಯನ್ನು ಕೊಡುವ ಗಂಭೀರ ವಿಷಯವನ್ನು ಆಧರಿಸಿರುವ ಸಿನಿಮಾವನ್ನು ಖಂಡಿತವಾಗಿ ನೋಡಬೇಡಿ. ನಿಮ್ಮಲ್ಲಿ ಉತ್ತಮ ಭಾವನೆಯನ್ನು ಮೂಡಿಸಲು ಹಾಸ್ಯ, ಪ್ರಣಯ ಮತ್ತು ಅನಿಮೇಟೆಡ್ ಚಲನಚಿತ್ರಗಳನ್ನು ವೀಕ್ಷಿಸಿದರೆ ಒಳ್ಳೆಯದು.

5.ರಜಾ ದಿನಗಳು

5.ರಜಾ ದಿನಗಳು

ನೀವು ನಿಮ್ಮ ದೈನಂದಿನ ಜೀವನದಲ್ಲಿ ದಿನನಿತ್ಯವೂ ಕೆಲಸದಿಂದಾಗಿ, ಮಾಡಿದ್ದನ್ನೇ ಮಾಡಿ ಬೇಸರಗೊಂಡಿದ್ದರೆ ನಿಮ್ಮ ಕೆಲಸದಿಂದ ತುಸು ವಿರಾಮವನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯ. ವಿರಾಮ ಅಥವಾ ಒಂದು ರಜೆ ನಿಮ್ಮ ಮನಸ್ಸು ಹಸನಾಗಿಸಿ ನಿಮ್ಮಲ್ಲಿ ಉತ್ತಮ ಭಾವನೆಯನ್ನು ಮೂಡಿಸಲು ಸಹಾಯ ಮಾಡುತ್ತದೆ. ನಿಮ್ಮ ಮನಸ್ಸನ್ನು ಕದಡಿದ ವಿಷಯವನ್ನು ಮರೆಸಲು ರಜೆಯನ್ನು ತೆಗೆದುಕೊಂಡು ಸುಂದರವಾದ ಸ್ಥಳಕ್ಕೆ ಭೇಟಿ ನೀಡಿ.

6.ಮಾತನಾಡುವುದು

6.ಮಾತನಾಡುವುದು

ನೀವು ಬೇಸರಗೊಂಡಿದ್ದಾಗ ನಿಮ ಮನಸ್ಸಿನಲ್ಲಿರುವ ಎಲ್ಲಾ ವಿಷಯಗಳನ್ನು ಮಾತುಗಳ ಮೂಲಕ ಹೊರಹಾಕುವುದು ಅತ್ಯಂತ ಒಳ್ಳೆಯದು. ನಿಮಗೆ ಹತ್ತಿರದವರೊಂದಿಗೆ ಮಾತನಾಡಿ ನಿಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳಿ. ಇದು ನಿಮ್ಮಲ್ಲಿ ಆನಂದದ ಭಾವನೆಯನ್ನು ಮೂಡಿಸಲು ಸಹಾಯ ಮಾಡುತ್ತದೆ.

7.ಸದಾ ಕಾರ್ಯಶೀಲರಾಗಿ (ವಿಶ್ರಾಂತಿ ಮುಕ್ತ ಜೀವನ)

7.ಸದಾ ಕಾರ್ಯಶೀಲರಾಗಿ (ವಿಶ್ರಾಂತಿ ಮುಕ್ತ ಜೀವನ)

ನಿಮ್ಮ ಮನಸ್ಸಿಗೆ ತೋಚಿದ ಯಾವುದೇ ಕೆಲಸವನ್ನು ಮಾಡಿ. ದೂರದ ಪ್ರಯಾಣ, ಈ ಕ್ಷಣದಲ್ಲಿ ಐಸ್ ಕ್ರೀಮ್ ತಿನ್ನುವುದು ಹೀಗೆ ನಿಮ್ಮ ಮನಸ್ಸಿಗೆ ಅನ್ನಿಸಿದ್ದನ್ನು ಕೂಡಲೇ ಮಾಡಿ. ಇದರಿಂದ ವಿಶ್ರಾಂತಿಯಿಲ್ಲದೆ ಆಗಾಗ ನಿಮಗೆ ಇಷ್ಟವಾದ ಕೆಲಸಗಳನ್ನು ಮಾಡುತ್ತಿದ್ದರೆ, ನಿಮ್ಮ ಮನಸ್ಸಿಗೂ ನೆಮ್ಮದಿ ಸಿಗುತ್ತದೆ.

8.ಪಾರ್ಟಿ/ ಸಮಾರಂಭ

8.ಪಾರ್ಟಿ/ ಸಮಾರಂಭ

ಸಮಾರಂಭದಲ್ಲಿ ಪಾಲ್ಗೋಳ್ಳುವುದು, ಅಲ್ಲಿನ ಹಾಡು ಕುಣಿತ ನಿಮ್ಮ ಮನಸ್ಸನ್ನು ಹರುಗವಾಗಿಸಲು ಅತ್ಯುತ್ತಮ ಮಾರ್ಗ! ಇದು ನಿಮ್ಮ ಚಿಂತೆ, ಒತ್ತಡವನ್ನು ನಿವಾರಿಸಿ, ನಿಮ್ಮ ಮನಸ್ಸು ಉಲ್ಲಾಸಗೊಳ್ಳುವಂತೆ ಮಾಡುತ್ತದೆ.

9.ಬರೆಯುವುದು

9.ಬರೆಯುವುದು

ನಿಮ್ಮ ಎಲ್ಲಾ ಭಾವನೆಗಳನ್ನು ಮತ್ತು ಸಮಸ್ಯೆಗಳನ್ನು ಬರವಣಿಗೆ ಮೂಲಕ ಹೊರಹಾಕುವುದೂ ಕೂಡ ನಿಮ್ಮ ಅಸಮಾಧಾನದ ಭಾವನೆಯನ್ನು ಹೋಗಲಾಡಿಸಲು ಸಹಾಯ ಮಾಡಬಲ್ಲದು. ಇದು ನಿಮ್ಮ ತಲೆಯಲ್ಲಿರುವ ಎಲ್ಲಾ ಚಿಂತೆಗಳನ್ನೂ ಓಡಿಸುವುದರಲ್ಲಿ ಸಂಶಯವಿಲ್ಲ!

10.ಕುಟುಂಬ

10.ಕುಟುಂಬ

ನಿಮ್ಮ ಬೇಸರ, ಅಸಾಮಾಧಾನದ ಭಾವನೆಯನ್ನು ಹೋಗಲಾಡಿಸಲು ನಿಮ್ಮ ಪ್ರೀತಿಪಾತ್ರರ ಮತ್ತು ಕುಟುಂಬದ ಬೆಂಬಲ ತೆಗೆದುಕೊಳ್ಳಿ.

ಜೀವನದಲ್ಲಿ ಎದುರಾಗುವ ಸಾವಿರ ಸಮಸ್ಯೆಗಳಿಗೆ ಜಗ್ಗದೇ ಅದನ್ನು ನಿವಾರಿಸಿ ನಮ್ಮ ಜೀವನದಲ್ಲಿ ನಾವೇ ಸಂತೋಷವನ್ನು ಕಂಡುಕೊಳ್ಳಬೇಕು. ತಮಗಾದ ಘಟನೆಯನ್ನೇ ಮತ್ತೆ ಮತ್ತೆ ನೆನೆಸಿಕೊಂಡು ಜೀವನ ವ್ಯರ್ಥ ಮಾಡುವುದು ಅಕ್ಷರಶಃ ಸರಿಯಲ್ಲ ಹೌದು ತಾನೇ?

X
Desktop Bottom Promotion