Latest Updates
-
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್ -
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ!
ಲಾಲ್‌ಬಾಗ್ ಹೂವುಗಳ ಪ್ರದರ್ಶನ 2014: ಚಿತ್ರಗಳು
ಹೂವುಗಳು ಯಾರಿಗೆ ತಾನೇ ಇಷ್ಟವಿಲ್ಲ? ದೇವರು ಮಾನವನಿಗೆ ನೀಡಿದ ವರದಾನವೆಂದರೆ ಹೂವುಗಳಾಗಿವೆ. ಹೂವುಗಳ ಚೆಲುವನ್ನು ನೋಡಿದಾಗ ನಮ್ಮ ಮನಸ್ಸಿನ ಎಷ್ಟೋ ನೋವುಗಳ ಒಂದು ಕ್ಷಣಕ್ಕೆ ಮಾಯವಾಗಿಬಿಡುತ್ತದೆ. ಕವಿಗಳು ಹೆಣ್ಣಿನ ಸೊಬಗನ್ನು ಚೆಲುವನ್ನು ಈ ಹೂವುಗಳಿಗೆ ಹೋಲಿಸಿದ್ದಾರೆ. ಸಸ್ಯೋದ್ಯಾನಗಳಲ್ಲಿ ನಮ್ಮ ಮನೆಗಳಲ್ಲಿ ನಾವು ಹಲವಾರು ತರಹದ ಹೂವುಗಳನ್ನು ಬೆಳೆಸುತ್ತೇವೆ. ಇವುಗಳು ಸುತ್ತಲಿನ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ನಮ್ಮನ್ನು ಪ್ರಫುಲ್ಲಗೊಳಿಸುತ್ತವೆ.
ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ವಿಧ ವಿಧದ ಹೂವುಗಳ ಪ್ರದರ್ಶನವನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ. ಭಾರತದಲ್ಲೇ ದೊಡ್ಡದಾದ ಹೂವುಗಳ ಮೇಳ ನಡೆಯುವುದು ಲಾಲ್‌ಬಾಗ್‌ನಲ್ಲಿ. ಅಂತಹ ಹೂಪ್ರದರ್ಶನದ ಕೆಲವು ಝಲಕ್ ಅನ್ನು ನಿಮಗಾಗಿ ನಾವಿಂದು ನೀಡುತ್ತಿದ್ದೇವೆ ಬನ್ನಿ ಆಸ್ವಾದಿಸಿ...

1.ಗುಲಾಬಿ ಹೂವುಗಳು
ಲಾಲ್‌ಬಾಗ್‌ನಲ್ಲಿರುವವಿವಿಧ ತರಹದ ಗುಲಾಬಿ ಹೂವುಗಳು

2.ಹೂವುಗಳ ಪರ್ವತ
ವಿವಿಧ ಬಣ್ಣದ ರೀತಿಯ ಹೂವುಗಳನ್ನು ಬಳಸಿಕೊಂಡು ಹೂವುಗಳ ಪರ್ವತ ರಚನೆ

3.ಬಣ್ಣ ಬಣ್ಣದ ಹೂವುಗಳ ಉತ್ಸವ
ಪ್ರದೇಶದಲ್ಲೆಲ್ಲಾ ಬಣ್ಣ ಬಣ್ಣದ ಹೂವುಗಳ ಉತ್ಸವ ನಡೆಯಿತು.

ಲಾಲ್‌ಬಾಗ್ ನಲ್ಲಿರುವ ಅಲಂಕಾರಿಕ ಗಿಡ
ಲಾಲ್‌ಬಾಗ್ ನ ಸುತ್ತಲಿನ ಪ್ರದೇಶವನ್ನು ಕೆಂಪು ಅಲಂಕಾರಿಕ ಗಿಡಗಳು ಮುತ್ತಿಕೊಂಡಿವೆ.

ಸುಂದರಿಯರ ಸಾಲು
ವಿಧ ವಿಧ ಬಣ್ಣದ ಸುಂದರಿಯರ ಸಾಲು ಅಲಂಕಾರಿಕ ಭಂಗಿಯಲ್ಲಿ

ಹಳದಿ ಮಾರಿಗೋಲ್ಡ್ಸ್
ಸೌಂದರ್ಯವತಿ ಹಳದಿ ಮಾರಿಗೋಲ್ಡ್‌ನ ಕಣ್ಸೆಳೆಯುವ ರೂಪ.

ನಾವೀನ್ಯತೆಯ ಹೊಳಪು
ಹೂಗಳಿಂದಲೇ ಮಾಡಿದ ಹಾಸ್ಯಮಯ ಆಕಾರ. ನಾವೀನ್ಯತೆಯ ಹೊಳಪನ್ನು ತೋರಿಸುವಲ್ಲಿ ಲಾಲ್‌ಬಾಗ್ ಹೂವುಗಳ ಪ್ರದರ್ಶನದ್ದು ಎತ್ತಿದ ಕೈ.

ಅತ್ಯತ್ತಮ ಕೈಚಳಕ
ಲಾಲ್‌ಬಾಗ್ ಹೂವುಗಳ ಮೇಳದಲ್ಲಿ ಕಂಡುಬಂದ ಸುಂದರ ಹೂವುಗಳ ಕಲಾಕೃತಿ.

ಲಾಲ್‌ಬಾಗ್ ಹೂ ಪ್ರದರ್ಶನದಲ್ಲಿ ಸುಂದರಿಯರು
ವಿವಿಧ ಬಣ್ಣದ ಹೂವುಗಳು ಮನ ತಣಿಸಿದವು

ಹೂವುಗಳಿಂದ ಮಾಡಿದ ಅಣಬೆ
ವಿವಿಧ ಬಣ್ಣದ ಹೂವುಗಳನ್ನು ಸೇರಿಸಿ ಮಾಡಿದ ಅಣಬೆ ಕಲಾಕೃತಿ.

ಕ್ರಿಯಾಶೀಲತೆಗೊಂದು ಅತ್ಯುತ್ತಮ ಉದಾಹರಣೆ
ವಿವಿಧ ಬಣ್ಣದ, ಆಕಾರದ ಹೂವುಗಳನ್ನು ಬಳಸಿಕೊಂಡು ಸುಂದರ ಕಲಾಕೃತಿಗಳು ಮೂಡಿಬಂದವು.

ಕೆಂಪು ಗುಲಾಬಿ
ಪ್ರದರ್ಶನದಲ್ಲಿ ಕಂಡುಬಂದ ಕೆಂಪು ಗುಲಾಬಿ

ಹಳದಿ ಬಣ್ಣದ ಸುಂದರತೆ
ಕಣ್ಣುಕೋರೈಸುವ ಹಳದಿ ಗುಲಾಬಿ ಲಾಲ್‌ಬಾಗ್ ನಲ್ಲಿ ಕಂಡುಬಂದಿತು.

ಕಿತ್ತಳೆ ಬಣ್ಣದ ಸ್ಪರ್ಶಕ್ಕೆ ತಲೆಬಾಗಿದ ಗುಲಾಬಿಗಳು
ಕಣ್ಣಿಗೆ ಹಬ್ಬವನ್ನುಂಟು ಮಾಡಿದ ಕಿತ್ತಳೆ ಬಣ್ಣದ ಗುಲಾಬಿಗಳು



Click it and Unblock the Notifications