For Quick Alerts
ALLOW NOTIFICATIONS  
For Daily Alerts

ಕಪ್ಪು ಮಚ್ಚೆಗಳ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು

By Super
|

ಕಲೆಗಳು ಮತ್ತು ಮಚ್ಚೆಗಳು ಕೆಲವೊಮ್ಮೆ ಸಹಜ ಸೌಂದರ್ಯವನ್ನು ಕುಂದಿಸುತ್ತವೆ. ಕೆಲವೊಮ್ಮೆ ಮುಖದ ಮೇಲೆ ಹಾಗೂ ಕುತ್ತಿಗೆ ಕೈಗಳ ಮೇಲಿರುವ ದೊಡ್ಡ ಮಚ್ಚೆಗಳು ಕೀಳರಿಮೆ ಉಂಟುಮಾಡುತ್ತವೆ. ಇವುಗಳನ್ನು ನಿವಾರಿಸುವ ಬಗ್ಗೆ ಮನ ತುಡಿಯುತ್ತಿರುತ್ತದೆ.

ಸೇಬಿನ ಹುಳಿರಸ (Sour Apple Juice)

ಸೇಬಿನ ಹುಳಿರಸ (Sour Apple Juice)

ಒಂದು ವೇಳೆ ಶಿರ್ಕಾದ ಹುಳಿವಾಸನೆ ನಿಮಗೆ ವಾಕರಿಕೆ ಬರಿಸಿದರೆ ಶಿರ್ಕಾದ ಬದಲು ಸೇಬಿನ ಹುಳಿರಸವನ್ನೂ ಬಳಸಬಹುದು. ಇದರಲ್ಲಿಯೂ ಶಿರ್ಕಾದಲ್ಲಿರುವ ರಾಸಾಯನಿಕಗಳಿರುವುದರಿಂದ ಅದೇ ಪರಿಣಾಮವನ್ನು ಪಡೆಯಬಹುದು. ಆದರೆ ಕೊಂಚ ನಿಧಾನವಾಗಬಹುದು.

ಅನಾನಸ್ ರಸ

ಅನಾನಸ್ ರಸ

ತಿನ್ನಲು ಉತ್ತಮವಾದ ಅನನಾಸ್ ರಸ ಮಚ್ಚೆಗಳ ನಿವಾರಣೆಗೂ ಉಪಯುಕ್ತವಾಗಿದೆ. ಇದರಲ್ಲಿರುವ ಹಲವು ಪೋಷಕಾಂಶಗಳು ಮಚ್ಚೆಗಳನ್ನು ಶೀಘ್ರ ನಿವಾರಿಸುತ್ತವೆ. ಇದಕ್ಕಾಗಿ ಕೇವಲ ತಾಜಾ ಹಣ್ಣನ್ನು ಕತ್ತರಿಸಿ ರಸವನ್ನು ಹಿಂಡಿ ತೆಗೆದು ಹಚ್ಚಬೇಕು. ಸಂಸ್ಕರಿಸಿದ ಅಥವಾ ಡಬ್ಬಿಯಲ್ಲಿ ಪ್ಯಾಕ್ ಮಾಡಿದ್ದ ರಸದಿಂದ ಪ್ರಯೋಜನವಿಲ್ಲ.

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆಯನ್ನು ಸುಲಿದ ಬಳಿಕ ಸಿಪ್ಪೆಯ ಒಳಭಾಗದಲ್ಲಿ ದಾರದಂತಿರುವ ಎಳೆಗಳಿವೆ. ವಾಸ್ತವವಾಗಿ ಇವೂ ಸಹಾ ಹಣ್ಣಿನ ಭಾಗವೇ. ಆದರೆ ಇದರ ರುಚಿ ಕೊಂಚ ಒಗರಾಗಿರುವುದರಿಂದ ನಾವು ಸೇವಿಸುವುದಿಲ್ಲ. ಆದರೆ ಇದು ನಮ್ಮ ಹೊಟ್ಟೆಗೆ ಅತ್ಯುತ್ತಮವಾದ ಕರಗದ ನಾರು ಆಗಿದೆ. ಆಫ್ರಿಕಾದ ಕೆಲವು ಬುಡಕಟ್ಟು ಜನಾಂಗದವರು ಈ ನಾರುಗಳನ್ನು ಕೆರೆದು ತೆಗೆದು ತಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಂಡಿದ್ದಾರೆ.

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆ

ಇದರಲ್ಲಿ ಉತ್ತಮ ಪ್ರಮಾಣದ Polyphenols, carotenoids, the phytochemicals ಎಂಬ ಆಂಟಿ ಆಕ್ಸಿಡೆಂಟುಗಳು ಸಹಾ ಇರುವುದರಿಂದ ಆರೋಗ್ಯಕ್ಕೂ ಉತ್ತಮವಾಗಿದೆ. ಈ ನಾರನ್ನು ಉಪಯೋಗಿಸಿ ಮಚ್ಚೆಯನ್ನು ಸಹಾ ಕರಗಿಸಬಹುದು. ಇದಕ್ಕಾಗಿ ಕೊಂಚವೇ ಹಣ್ಣಾಗಿರುವ (ಅಂದರೆ ಇನ್ನೂ ಬಹುತೇಕ ಕಾಯಾಗಿಯೇ ಇರುವ) ಬಾಳೆಹಣ್ಣಿನ ಸಿಪ್ಪೆಯನ್ನು ಸುಲಿದು ಒಳಗಿನ ನಾರನ್ನು ಸಂಗ್ರಹಿಸಿ ಕಿವುಚಿ ತೆಗೆದ ರಸವನ್ನು ಬಳಸಿ.

ಈರುಳ್ಳಿ ರಸ

ಈರುಳ್ಳಿ ರಸ

ಬೆಳ್ಳುಳ್ಳಿಯಂತೆಯೂ ಹಸಿ ಈರುಳ್ಳಿಯ ರಸವನ್ನು ಮಚ್ಚೆಗಳ ನಿವಾರಣೆಗೆ ಬಳಸಬಹುದು. ಇದಕ್ಕಾಗಿ ಈರುಳ್ಳಿಯ ಹೊರಗಿನ ಭಾಗಕ್ಕಿಂತ ಕೇಂದ್ರಭಾಗದ ಎಸಳುಗಳನ್ನು ಆರಿಸಿಕೊಳ್ಳಿ.

ಅಯೋಡಿನ್

ಅಯೋಡಿನ್

ನಮ್ಮ ಆಹಾರದಲ್ಲಿ ಅಯೋಡಿನ್ ಇರುವುದು ಅವಶ್ಯ. ಇದರ ಕೊರತೆಯನ್ನು ಉಪ್ಪಿನಲ್ಲಿ ಸೇರಿಸುವ ಮೂಲಕ ನಿವಾರಿಸಲಾಗುತ್ತಿದೆ. ಕೊಂಚ ಗಡುಸಾದ ಅಯೋಡಿನ್ ಅನ್ನು ಟಿಂಕ್ಚರ್ ರೂಪದಲ್ಲಿ ಗಾಯಗಳಿಂದ ರಕ್ತ ಒಸರುವುದನ್ನು ನಿಲ್ಲಿಸಲು ನೀಡಲಾಗುತ್ತದೆ. ಐಯೋಡಿನ್ ನಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಕೂಡಲೇ ಬೆರೆಯುವುದೇ ಇದಕ್ಕೆ ಕಾರಣ. ಮಚ್ಚೆಗಳನ್ನು ನಿವಾರಿಸಲೂ ಅಯೋಡಿನ್ ಉಪಯುಕ್ತವಾಗಿದೆ.

ಚಕ್ಕೋತ ಹಣ್ಣಿನ ಬೀಜದ ರಸ

ಚಕ್ಕೋತ ಹಣ್ಣಿನ ಬೀಜದ ರಸ

ಚಕ್ಕೋತಹಣ್ಣಿನಲ್ಲಿ ಕಿತ್ತಳೆಯಂತೆಯೇ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದೆ. ಇದರ ಬೀಜ, ಒಳಗಿನ ನಾರು ಮತ್ತು ಬಿಳಿಯ ಭಾಗದಲ್ಲಿ ಇನ್ನೂ ಹಲವಾರು ಪೋಷಕಾಂಶಗಳಿವೆ. ಇವು ಮಚ್ಚೆಗಳ ನಿವಾರಣೆಗೂ ನೆರವಾಗುತ್ತವೆ. ಚಕ್ಕೋತದ ಬೀಜ, ನಾರು ಮತ್ತು ಸಿಪ್ಪೆಯ ಒಳಭಾಗದ ಬಿಳಿಯ ಭಾಗಗಳನ್ನು ಚೆನ್ನಾಗಿ ಮಿಕ್ಸಿಯಲ್ಲಿ ಗೊಟಾಯಿಸಿ ಹಿಂಡಿ ತೆಗೆದ ರಸವನ್ನು ಮಚ್ಚೆಯ ನಿವಾರಣೆಗೆ ಬಳಸಬಹುದು.

English summary

Effective Home Remedies for Moles

Moles (nevi) can be defined as pigmented cells that are small, usually dark brown spots. Moles, however, can develop in any color ranging from red to brown to even black. if there is no such symptom and you just have the harmless moles on your face or body, follow these home remedies to get rid of moles.
X
Desktop Bottom Promotion