Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಆರೋಗ್ಯಕ್ಕೆ ಲಾಭದಾಯಕವಾಗಿರುವ 7 ಭಾರತೀಯ ಸಂಪ್ರದಾಯಗಳು
ಇಂದಿನ ತಲೆಮಾರಿಗೆ ಸೇರಿದವರಾದ ನಾವು, ಅದೇಕೋ ನಮ್ಮ ಸಂಪ್ರದಾಯ, ಆಚರಣೆ, ಮತ್ತು ಕಟ್ಟುಕಟ್ಟಳೆಗಳ ಕುರಿತು ಒಂದು ಬಗೆಯ ತಾತ್ಸಾರದ ಮನೋಭಾವವನ್ನು ಬೆಳೆಸಿಕೊoಡಿದ್ದೇವೆ. ಆದರೆ, ನಮ್ಮ ಆಚರಣೆ, ಪದ್ಧತಿಗಳ ಹಿಂದೆ ಆಳವಾಗಿ ಬೇರೂರಿರುವ ವೈಜ್ಞಾನಿಕ ಕಾರಣಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಾವು ಎಡವಿದ್ದೇವೆ.
ಸೂರ್ಯನಿಗೂ ಮತ್ತು ಭೂಮಿಗೂ ನಡುವೆ ಕರಾರುವಕ್ಕಾದ ಅಂತರವನ್ನು ನಮ್ಮ ವೈಜ್ಞಾನಿಕ ಸಮೂಹವು ಲೆಕ್ಕ ಹಾಕಿ ಸ್ಪಷ್ಟ ಪಡಿಸುವುದಕ್ಕಿಂತ ಸುಮಾರು 200 ವರ್ಷಗಳಿಗೂ ಮೊದಲೇ, ಹನುಮಾನ್ ಚಾಲಿಸಾದಲ್ಲಿ ಇದರ ಕುರಿತಾದ ಅತೀ ನಿಖರವಾದ ಮಾಹಿತಿಯು ಉಲ್ಲೇಖಿಸಲ್ಪಟ್ಟಿತ್ತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನೀವು ಕಾರ್ಯವ್ಯಸನಿ ಎಂದು ಸಾರುವ ಎಂಟು ಲಕ್ಷಣಗಳು

ಅಡುಗೆಯ ಪರಿಕರಗಳಲ್ಲಿ ಬೆಳ್ಳಿಯ ಉಪಯೋಗದ ಮಹತ್ವ:
ಬೆಳ್ಳಿಯು ಸೋಂಕುನಾಶಕ, ವೈರಾಣು ಪ್ರತಿಭಂದಕ, ಮತ್ತು ಬ್ಯಾಕ್ಟೀರಿಯಾ ನಿರ್ಭಂದಕ ಗುಣಲಕ್ಷಣಗಳನ್ನು ಅಂತರ್ಗತವಾಗಿ ಹೊಂದಿರುವ ಒಂದು ಲೋಹವಾಗಿದ್ದು, ಸಹಜವಾಗಿಯೇ ಇಂತಹ ಪಾತ್ರೆಗಳಲ್ಲಿ ಶೇಖರಿಸಿರುವ ಆಹಾರ ವಸ್ತುಗಳು ಸುರಕ್ಷಿತವಾಗಿರುತ್ತವೆ. "ಬೆಳ್ಳಿಯ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡೇ ಜನಿಸಿದ" ಎಂಬ ಮಾತು ವ್ಯಕ್ತಿಯೋರ್ವನ ಅಂತಸ್ತಿನ ಅಥವಾ ಆರ್ಥಿಕ ಸ್ಥಿತಿಗತಿಯ ಮಾಪನಕ್ಕಿಂತಲೂ ಮಿಗಿಲಾಗಿ, ಶೈಶವಾಸ್ಥೆಯ ದಿನಗಳಲ್ಲಿ ಆತನೋ ಅಥವಾ ಆಕೆಯೋ ಅದೆಷ್ಟು ಆರೊಗ್ಯಪೂರ್ಣವಾಗಿ ಬೆಳೆಸಲ್ಪಟ್ಟರು ಎಂಬುದರ ಸೂಚಕವೂ ಹೌದು.
ಪ್ಯಾಶ್ಚರೀಕರಣ ಎಂಬ ಶಬ್ದವು ಕಂಡು ಕೇಳರಿಯದ ಆ ದಿನಗಳಲ್ಲಿ, ಹಾಲನ್ನು ಸುರಕ್ಷಿತವಾಗಿ ಹಲವು ದಿನಗಳವರೆಗೆ ಸಂರಕ್ಷಿಸಿಡಲು ಬೆಳ್ಳಿಯ ನಾಣ್ಯಗಳನ್ನು ಉಪಯೋಗಿಸಲಾಗುತ್ತಿತ್ತು.

ಬಾವಿ ಅಥವಾ ನದಿಗಳಲ್ಲಿ ನಾಣ್ಯಗಳನ್ನು ಹಾಕಿ ಹರಕೆ ಹೊತ್ತುಕೊಳ್ಳುವುದರ ಬಗ್ಗೆ:
ಬಾವಿ ಅಥವಾ ಕೆರೆ ಅಥವಾ ನದಿಗಳಲ್ಲಿ ಅದೇಕೆ ನಾಣ್ಯಗಳನ್ನು ಹಾಕಿ ಹರಕೆ ಹೊತ್ತುಕೊಳ್ಳುತ್ತಾರೆ ಎಂಬುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ ?! ಪುರೋಹಿತರು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಈ ಪದ್ಧತಿಯನ್ನು ಆಚರಣೆಗೆ ತಂದದ್ದಲ್ಲ.
ಈ ಪದ್ಧತಿಗೆ ಕಾರಣವೇನೆಂದರೆ, ಪ್ರಾಚೀನ ಭಾರತದಲ್ಲಿ ನಾಣ್ಯಗಳನ್ನು ತಾಮ್ರದಿಂದ ತಯಾರಿಸಲಾಗುತ್ತಿತ್ತು ಹಾಗೂ ಬಾವಿಗಳು ಮತ್ತು ಕೆರೆ, ಕುಂಟೆ ಹಾಗೂ ನದಿಗಳು ಪಟ್ಟಣಗಳ ಅಥವಾ ಗ್ರಾಮಗಳ ದೈನಂದಿನ ಅವಶ್ಯಕತೆಗಳನ್ನು ಪೂರೈಸುವ ಪ್ರಮುಖ ಜಲಾಶಯಗಳಾಗಿದ್ದವು. ನಮ್ಮ ಶರೀರದ ನರವ್ಯೂಹದ ಸುಸ್ಥಿತಿಗೆ, ಕಿಣ್ವಗಳ ಚಟುವಟಿಕೆಗಳಿಗೆ, ಮತ್ತು RCB ಸಂಶ್ಲೇಷಣೆಯoತಹ ಮಹತ್ತರ ಜೈವಿಕ ಕ್ರಿಯೆಗಳಿಗೆ ತಾಮ್ರವು ಒಂದು ಅತೀ ಅವಶ್ಯಕ ಸೂಕ್ಷ್ಮ ರೂಪದ ಪೋಷಕಾoಶವಾಗಿದೆ.

ರಂಗೋಲಿಯನ್ನು ಹಾಕುವುದರ ಕುರಿತು:
ಇಂದಿಗೂ ಸಹ ಗ್ರಾಮೀಣ ಹಾಗೂ ಪಟ್ಟಣ ಭಾಗಗಳಲ್ಲಿ ಮನೆಯ ಮುಂಭಾಗದಲ್ಲಿ ರಂಗೋಲಿಯನ್ನು ಬಿಡಿಸುವ ಪದ್ಧತಿಯು ಜಾರಿಯಲ್ಲಿದೆ. ಇದರ ಉದ್ದೇಶ ಕೇವಲ ಮನೆಯ ಅಂಗಳದ ಅಲಂಕಾರಕ್ಕಾಗಿ ಅಥವಾ ಅಂದಕ್ಕಾಗಿ ಮಾತ್ರವಲ್ಲ. ರಂಗೋಲಿಯ ಮೂಲ ಆಶಯವು ಸಂಪ್ರದಾಯಪ್ರೇರಿತವಾಗಿದ್ದರೂ ಕೂಡ ವಿಷಯವು ಅಷ್ಟಕ್ಕೇ ಸೀಮಿತವಾಗಿಲ್ಲ.
ಹಿಂದಿನ ದಿನಗಳಲ್ಲಿ ರಂಗೋಲಿಯನ್ನು ದೊರಗಾದ ಅಕ್ಕಿಯಹಿಟ್ಟು ಮತ್ತು ಪ್ರಾಕೃತಿಕವಾದ ವರ್ಣಗಳನ್ನೊಳಗೊಂಡ ಬಣ್ಣದ ಪುಡಿಯ ಮಿಶ್ರಣವನ್ನು ಬಳಸಿ ಮನೆಯ ಅಂಗಳದಲ್ಲಿ ಹಾಕುತ್ತಿದ್ದರು. ಇಂದಿನಂತೆ ಅಸ್ತಮಾ ರೋಗಕ್ಕೆ ಕಾರಣವಾಗಬಹುದಾದ ಮೃತ್ಯು ಪುಡಿಯನ್ನು ಹಿಂದಿನವರು ರಂಗೋಲಿಯಲ್ಲಿ ಬಳಸುತ್ತಿರಲಿಲ್ಲ. ಇದೊಂದು ಕೀಟ ನಿಯಂತ್ರಕ ಉಪಾಯವಾಗಿದ್ದು, ಕೀಟಗಳು ಮತ್ತು ಹಕ್ಕಿಗಳನ್ನು ಮನೆಯೊಳಗೆ ಬರದಂತೆ ನಿಯತ್ರಿಸುವ ಒಂದು ವಿಧಾನವಾಗಿದೆ. ಹೇಗೆಂದರೆ, ಇವುಗಳಿಗೆ ಅಗತ್ಯವಿರುವ ಆಹಾರವನ್ನು ಅಕ್ಕಿಹಿಟ್ಟಿನ ರೂಪದಲ್ಲಿ ನೀವು ಈಗಾಗಲೇ ಮನೆಯ ವರಾಂಡದಲ್ಲಿ ಹರಡಿರುವುದರಿಂದ ಅವು ಮನೆಯೊಳಗೆ ಪ್ರವೇಶಿಸುವುದಿಲ್ಲ. ಇಷ್ಟು ಮಾತ್ರವಲ್ಲದೇ, ರಂಗೋಲಿಯ ರಚನೆಯು ಮಹಿಳೆಯರಲ್ಲಿ ಸಾಮಾಜಿಕ ಮತ್ತು ಕಲಿಕಾ ಕೌಶಲ್ಯಗಳನ್ನು ವೃದ್ಧಿಸುತ್ತದೆ ಹಾಗೂ ಮುಂಜಾನೆಯ ವೇಳೆ ಒಂದು ಬಗೆಯ ಆಹ್ಲಾದಕರ ವಾತಾವರಣವನ್ನು ಉಂಟುಮಾಡುತ್ತದೆ.

ಕಿವಿಗಳಿಗೆ ಓಲೆಗಳನ್ನು ಚುಚ್ಚುವುದರ ಬಗ್ಗೆ:
ಹೆಣ್ಣು ಮಕ್ಕಳಿಗೆ ಅವರ ಚಿಕ್ಕ ವಯಸ್ಸಿನಲ್ಲಿಯೇ ಕಿವಿಗಳನ್ನು ಚುಚ್ಚುವುದು ಮತ್ತು ಕರ್ಣಾಭರಣಗಳನ್ನು ತೊಡಿಸುವುದು ಭಾರತದಲ್ಲಿ ಸರ್ವೇಸಾಮಾನ್ಯ. ಮಹಿಳೆಯರ ಕುರಿತಾಗಿರುವ ಸಂಪ್ರದಾಯವೊಂದನ್ನು ನಿರೂಪಿಸಿವುದಷ್ಟೇ ಇದರ ಉದ್ದೇಶವಲ್ಲ. ಈ ಆಚರಣೆ ಅಥವಾ ಪದ್ಧತಿಯ ಹಿಂದಿನ ಕಾರಣವು accupunture ಎಂದು ಕರೆಯಲ್ಪಡುವ ಒಂದು ವೈದ್ಯಕೀಯ ಪದ್ಧತಿಯಲ್ಲಿ ಬೇರೂರಿದೆ. ಕಿವಿಯೋಲೆ ಮತ್ತು ಮೂಗುತಿಗಳನ್ನು ಚುಚ್ಚಿಸಿಕೊಂಡು ಧರಿಸುವುದರಿಂದ, ಧಾರಕರಲ್ಲಿ ಒಂದು ಬಗೆಯ ಯೌಗಿಕ ಶಾಂತಿ ಮತ್ತು ಪಾವಿತ್ರ್ಯತೆಯ ಭಾವವು ಉಂಟಾಗುತ್ತದೆ. ಆದರೆ, ದಯವಿಟ್ಟು ಶರೀರದ ಅತಾರ್ಕಿಕವಾದ ಜಾಗಗಳಲ್ಲಿ ಕೈಗೊಳ್ಳುವ ಚುಚ್ಚುವಿಕೆಯ ಬಗ್ಗೆ ಎಚ್ಚರವಿರಲಿ.

ಭಾರತೀಯ ಆಹಾರ ಸೇವನೆಯ ಹಿಂದಿರುವ ಆಚಾರಗಳ ಕುರಿತು:
ಊಟದ ತಟ್ಟೆಯ ಸುತ್ತಲೂ ಮೂರು ಬಾರಿ ಪರಿಶಿoಚನವನ್ನು ಮಾಡುವುದು ಹೆಚ್ಚು ಕಡಿಮೆ ಎಲ್ಲರಿಗೂ ತಿಳಿದ ವಿಷಯವೇ. ನಮಗೆ ಅಹಾರವಿತ್ತು ಸಲಹುವ ದೇವತೆಗಳಿಗೆ ಕೃತಜ್ಞತೆಯನ್ನು ಸಲ್ಲಿಸಿ ಅವರ ಆಶೀರ್ವಾದವನ್ನು ಬೇಡುವ ವಿಧಾನವಿದು ಎಂಬುದು ಕೆಲವರ ಅಭಿಪ್ರಾಯವಾಗಿದ್ದರೂ ಕೂಡ, ನಮ್ಮ ಊಟದ ತಟ್ಟೆಗೆ ಕ್ರಿಮಿಕೀಟಾದಿಗಳು ಪ್ರವೇಶಿಸದಂತೆ ತಡೆಯುವುದು ಇದರ ಹಿಂದಿನ ಉದ್ದೇಶವಾಗಿದೆ.
ಬೆರಳುಗಳನ್ನುಪಯೋಗಿಸಿ ಆಹಾರವನ್ನು ಸವಿಯುವುದರಲ್ಲಿ ನಮ್ಮ ಭಾರತೀಯರು ನಿಷ್ಣಾತರು. ಇದರ ಹಿಂದಿನ ತತ್ವವೇನೆಂದರೆ, ಬೆರಳುಗಳನ್ನು ಅದ್ದುವುದರ ಮೂಲಕ ಆಹಾರ ಪದಾರ್ಥಗಳ ಉಷ್ಣತೆಯನ್ನು ಅರಿಯಬಹುದು ಮತ್ತು ತನ್ಮೂಲಕ ಹುಣ್ಣಾಗುವುದರ ಅಥವಾ ನಾಲಿಗೆ ಸುಟ್ಟುಹೋಗುವುದರ ಸಾಧ್ಯತೆಯನ್ನು ತಡೆಗಟ್ಟಬಹುದು. ಊಟದ ಮೇಜಿನ ಮೇಲೆ ಕುಳಿತು ಉಣ್ಣುವುದಕ್ಕಿಂತಲೂ ನೆಲದ ಮೇಲೆ ಕುಳಿತು ಊಟ ಮಾಡುವುದು ಹೆಚ್ಚು ಪ್ರಶಸ್ತ. ಏಕೆಂದರೆ, ನೆಲದ ಮೇಲೆ ಕುಳಿತು ಊಟ ಮಾಡುವಾಗ, ಪದೇ ಪದೇ ಬಗ್ಗಬೇಕಾಗಿ ಬರುವುದರಿಂದ, ಇದು ರಕ್ತಪರಿಚಲನೆಯನ್ನು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಆಹಾರವು ಬಟ್ಟೆಯ ಮೇಲೆ ಬಿದ್ದು ಕೊಳಕಾಗುವುದು ತಪ್ಪುತ್ತದೆ.

ತುಪ್ಪವು ಶರೀರದಲ್ಲಿರುವ ಕೊಲೆಸ್ಟರಾಲ್‌ನನ್ನು ಕಡಿಮೆ ಮಾಡುತ್ತದೆ:
ತುಪ್ಪವು ಒಂದು ಪರ್ಯಾಪ್ತ ಕೊಬ್ಬು ಆಗಿದೆ. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ, ತುಪ್ಪವನ್ನು ಕಾಯಿಸಿದಾಗ ಅದು ಪೆರಾಕ್ಸೈಡ್ ಗಳು ಅಥವಾ ಮುಕ್ತ radical ಗಳಂತಹ ಹಾನಿಕಾರ ವಸ್ತುವಾಗಿ ಮಾರ್ಪಡುವುದಿಲ್ಲ. ವಾಸ್ತವವಾಗಿ, ತುಪ್ಪವು ಶರೀರದಲ್ಲಿರುವ ಕೊಲೆಸ್ಟರಾಲ್ ನ ಮಟ್ಟವನ್ನು ಕಡಿಮೆ ಮಾಡುತ್ತದೆ. ನಿಮ್ಮ ಜೀರ್ಣಾಂಗ ಪಥದಗುಂಟ ಸಂರಕ್ಷಕ ಗುರಾಣಿಯಂತೆ ಕಾರ್ಯವೆಸಗುವ ತುಪ್ಪವು ಕ್ಯಾನ್ಸರ್ ನ ಸಾಧ್ಯತೆಯನ್ನೂ ಕೂಡ ಕಡಿಮೆ ಮಾಡುತ್ತದೆ ಹಾಗೂ ತನ್ಮೂಲಕ ನಾವೆಂದಿಗೂ ನಿರೀಕ್ಷಿಸದಿರುವ ಹಲವಾರು ಆಹಾರರೂಪೀ ಹಾಗೂ ಆಯುರ್ವೇದೀಯ ಪ್ರಯೋಜನಗಳನ್ನು ಹೊಂದಿದೆ.

ಉಪವಾಸದ ಪ್ರಯೋಜನಗಳು:
ಭಾರತ ದೇಶವು ವೈವಿಧ್ಯಗಳ ಆಗರ ಎಂಬುದನ್ನು ಗಮನದಲ್ಲಿರಿಸಿಕೊಂಡು ಹೇಳುವುದಾದರೆ, "ಥಾಲಿ" ಮತ್ತು "ಉಪವಾಸ" ಎಂಬೆರಡು ಕಲ್ಪನೆಗಳು ಒಂದೇ ಸಂಸ್ಕೃತಿಯಿಂದ ಹುಟ್ಟಿದವು ಎಂಬುದರ ಬಗ್ಗೆ ಚಕಿತಗೊಳ್ಳುವoತಿಲ್ಲ. "ಥಾಲಿ" ಎಂಬುದು ಬಗೆಬಗೆಯ ಪೌಷ್ಟಿಕಾಂಶಗಳುಳ್ಳ ಆಹಾರವಸ್ತುಗಳ ಒಂದು ಪರಿಪೂರ್ಣ ಅಹಾರವಾದರೆ, "ಉಪವಾಸ" ಗಳು ವರ್ಷದ ಕೆಲವು ನಿರ್ಧಿಷ್ಟ ದಿನಗಳಂದು ನೀವು ನಿರಾಹಾರಿಯಾಗಿರುವಂತೆ ನಿರ್ದೇಶಿಸುತ್ತವೆ. "ಉಪವಾಸ"ಗಳು ನಿಮ್ಮ ಜೀರ್ಣಕ್ರಿಯೆಗೆ ವಿರಾಮವನ್ನು ಮತ್ತು ನಿಮ್ಮ ಶರೀರವನ್ನು ವಿಷಹರವನ್ನಾಗಿಸಲು ಇರುವ ಸಾಧನಗಳು.
ಮಾಂಸಾಹಾರವನ್ನು ನಿಷೇಧಿಸುವ ಆಚರಣೆಗಳುಳ್ಳ ಶ್ರಾವಣ ಮಾಸವು ಮಾಂಸಾಹಾರಿಗಳ ಪಾಲಿಗೆ ಕುಖ್ಯಾತ ಮಾಸವಾಗಿದೆ. ಆದರೆ, ಇಲ್ಲೊಂದು ಸಂಗತಿಯಿದೆ. ಶ್ರಾವಣ ಮಾಸದಲ್ಲಿ ಉಪವಾಸವು ಔಚಿತ್ಯಪೂರ್ಣವಾದುದೇ ಆಗಿದೆ. ಏಕೆಂದರೆ, ಶ್ರಾವಣ ಮಾಸವು ಸಾಮಾನ್ಯವಾಗಿ ಮಳೆಗಾಲದ ಅವಧಿಗೆ ಸೇರಿದ್ದು, ಈ ಸಮಯದಲ್ಲಿ ಮಾಂಸಾಹಾರವು ಚಳಿಗಾಲ ಅಥವಾ ಬೇಸಿಗೆ ಕಾಲಕ್ಕಿಂತಲೂ ಸಹ ಬಹು ಬೇಗನೆ ಕೆಡುವ ಸಾಧ್ಯತೆಗಳಿವೆ ಹಾಗೂ ಅಂದಿನ ದಿನಗಳಲ್ಲಿ ರೆಫ್ರಿಜಿರೇಟರ್ ಎಲ್ಲರಿಗೂ ಕೈಗೆಟುಕುವoತಹದ್ದಾಗಿರಲಿಲ್ಲ. ಸಮುದ್ರವುಕ್ಕುವುದು ಮಳೆಗಾಲದಲ್ಲಿ ಸಾಮಾನ್ಯವಾಗಿದ್ದು, ಮೀನು ಹಿಡಿಯುವ ಬೆಸ್ತರ ಪಾಲಿಗೆ ಅವು ಅಪಾಯದ ದಿನಗಳಾಗಿವೆ. ಅನೇಕ ಜಲಸಂಬಂಧೀ ರೋಗಗಳನ್ನು ತಡೆಗಟ್ಟಲು ಉಪವಾಸವು ರಾಮಬಾಣವಾಗಿದೆ. ನೋಡಿ, ಮತ್ತೊಮ್ಮೆ, ಮೂಢನಂಬಿಕೆಯ ಹಿಂದೆ ಅಡಗಿರುವ ಕಾರಣವೊಂದನ್ನು ತಿಳಿದಂತಾಯಿತು.



Click it and Unblock the Notifications









