Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಸಹೋದರರಿಗಾಗಿ 26 ಬಗೆಯ ರಾಖಿಗಳು!
ರಕ್ಷಾಬಂಧನ ಒಂದು ಸುಂದರವಾದ ಆಚರಣೆ. ಅಣ್ಣ ತಂಗಿಯ ಸಂಬಂಧವನ್ನು ಗಟ್ಟಿಮಾಡುವ 'ರಾಖಿ' ದಾರ, ರಕ್ಷಾ ಬಂಧನದಂದು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಈ ದಿನ ಅಣ್ಣಂದಿರು ತಮ್ಮ ತಂಗಿಯರು ಪ್ರೀತಿಯಿಂದ ಕೈಗೆ ಕಟ್ಟುವ ರಾಖಿಗಾಗಿ ಕಾಯುತ್ತಾರೆ. ರಕ್ಷಾಬಂಧನ ಒಡಹುಟ್ಟಿದವರು ಬಹಳ ಸಂತೋಷದಿಂದ ಆಚರಿಸುವ ಸಂಭ್ರಮದ ಹಬ್ಬ! ಈ ಸುದಿನ, ತಂಗಿ ಅಣ್ಣನಿಗೆ ರಾಖಿಕಟ್ಟುವುದರ ಮೂಲಕ ಅಣ್ಣ ತಂಗಿಗೆ ಸದಾ ಶ್ರೀರಕ್ಷೆ ಎಂಬುದನ್ನು ಸಾದರಪಡಿಸುತ್ತಾಳೆ.
ರಾಖಿ ದಾರ, ರಕ್ಷೆ ಹಾಗೂ ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡುವ ಒಂದು ಪವಿತ್ರ ದಾರ. ಆದ್ದರಿಂದ ರಾಖಿ ಹಬ್ಬ ಸಮೀಪಿಸುತ್ತಿದ್ದಂತೆ ಸಹೋದರಿಯರು ತಮ್ಮ ಪ್ರೀತಿಯ ಸಹೋದರರಿಗಾಗಿ ವಿವಿಧ ಬಗೆಯ ರಾಖಿಯನ್ನು ಖರೀದಿಸುತ್ತಾರೆ.
ರಕ್ಷಾಬಂಧನದಲ್ಲಿ ಅಡಗಿದೆ ಹಲವಾರು ಪುರಾಣ ಕಥೆಗಳು
ಈ ಹಿಂದೆ ಅಲಂಕಾರಿಕ ರಾಖಿ ದಾರಗಳು ಕೇವಲ ಸಾಂಪ್ರದಾಯಿಕವಾಗಿತ್ತು. ಆದರೆ ಈಗ ನೀವು ರಾಖಿಯನ್ನು ಖರೀದಿಸಲು ಹೋದರೆ ರಾಖಿಯ ವಿವಿಧ ಗೊಂಚಲುಗಳನ್ನು ನೋಡಿ ಯಾವುದನ್ನು ಕೊಳ್ಳಬೇಕು ಎಂದು ಗೊಂದಲವುಂಟಾಗಬಹುದು. ಇಂದಿನ ಈ ಆಧುನಿಕ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಕೇವಲ ಸಾಂಪ್ರದಾಯಿಕ ರಾಖಿಗಳು ದೊರೆಯುವುದು ಕಷ್ಟ. ಆದರೆ ಆಧುನಿಕ ಹಾಗೂ ಸಾಂಪ್ರದಾಯಿಕ ಎರಡೂ ಶೈಲಿಯ ಮಿಶ್ರಣ ಹೊಂದಿರುವ ಹಲವಾರು ಬಗೆಯ ರಾಖಿ ದಾರಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದು.
ಆದ್ದರಿಂದ ಇಲ್ಲಿ ನಿಮ್ಮ ನೆಚ್ಚಿನ ಅಣ್ಣನಿಗಾಗಿ ಕೊಳ್ಳಬಹುದಾದ, ಮಾರುಕಟ್ಟೆಯಲ್ಲಿ ದೊರೆಯುವ 26 ವಿವಿಧ ಬಗೆಯ ರಾಖಿಯ ಬಗ್ಗೆ ಹೇಳಲಾಗಿದೆ. ರಕ್ಷಾ ಬಂಧನದಂದು ನಿಮ್ಮ ಸಹೋದರನಿಗೆ ಕಟ್ಟಲು ಈ ರಾಖಿಗಳನ್ನೇ ಆಯ್ದುಕೊಳ್ಳಿ!

ನೀಲಿ ಮಣಿಯ ರಾಖಿ
ಈ ರಕ್ಷಾ ಬಂಧನದಿನದಂದು ನಿಮ್ಮ ಸಹೋದರರಿಗೆ ನೀಲಿ ಬಣ್ಣದ ಮಣಿಯಿಂದ ಅಲಂಕೃತವಾದ ರಾಖಿಯನ್ನು ಕೊಡುಗೆ ನೀಡಿ. ಸುವರ್ಣ ಬಣ್ಣದ ಲೇಪನ ಹಾಗೂ ಅದರ ಅಕ್ಕ-ಪಕ್ಕದಲ್ಲಿರುವ ಈ ಎರಡು ಮಣಿಗಳು ನಿಮ್ಮ ಹಾಗೂ ನಿಮ್ಮ ಸಹೋದರನ ಸಂಬಂಧವನ್ನು ಪ್ರತಿನಿಧಿಸುತ್ತವೆ.

ಕಿತ್ತಳೆ ಬಣ್ಣದ ಮುತ್ತಿನ ರಾಖಿ
ಮುತ್ತುಗಳು ಯಾವುದೇ ವಿಶೇಷ ಸಂದರ್ಭದಲ್ಲಿ ಅದರಲ್ಲೂ ರಕ್ಷಾ ಬಂಧನದಂದು ಸುಂದರವಾಗಿ ಕಾಣುತ್ತವೆ. ನಿಮ್ಮ ಸಹೋದರನ ಹೊಳಪಿನ ನಗುವನ್ನು ಕಾಣಲು ರಕ್ಷಾ ಬಂಧನದಂದು ಗಾಢವಾದ ಕಿತ್ತಳೆ ಬಣ್ಣದ ಮುತ್ತಿನಿಂದ ಮಾಡಲಾದ ರಾಖಿಯನ್ನು ಕಟ್ಟಿ!

ಗುಲಾಬಿ ರಾಖಿ
ಗುಲಾಬಿ ಪ್ರೀತಿಯ ಸಂಕೇತ. ಈ ರಾಖಿ ನಿಮ್ಮ ಸಹೋದರನ ಮೇಲಿರುವ ಅತೀಯಾದ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಈ ರಾಖಿಯನ್ನು ನಿಮ್ಮ ಸಹೋದರನಿಗೆ ಕಟ್ಟಿ ಮತ್ತು ನಿಮ್ಮ ಅಮೂಲ್ಯವಾದ ಪ್ರೀತಿಯನ್ನು ವ್ಯಕ್ತಪಡಿಸಿ.

ಶ್ರೀಗಂಧದ ರಾಖಿ
ಈ ತರಹದ ರಾಖಿ ಸಾಂಪ್ರದಾಯಿಕ ಹಾಗೂ ಕಲಾತ್ಮಕವಾಗಿ ಕಾಣುತ್ತದೆ. ಶ್ರೀಗಂಧದ ರಾಖಿ ಬೇರೆ ಬೇರೆ ಆಕೃತಿಯಲ್ಲಿ ಹಾಗೂ ಬೇರೆ ಬೇರೆ ಗಾತ್ರಗಳಲ್ಲಿ ಲಭ್ಯ. ಶ್ರೀಗಂಧದ ರಾಖಿಯನ್ನು 'ಚಂದನ ರಾಖಿ" ಎಂದೂ ಕರೆಯುತ್ತಾರೆ.

ಬಣ್ಣಗಳೊಂದಿಗೆ ಆಟ
ರಕ್ಷಾ ಬಂಧನದ ದಿನದಂದು ನಿಮ್ಮ ಸಹೋದರರಿಗೆ ಬೇರೆ ಬೇರೆ ಬಣ್ಣದ ರಾಖಿಗಳನ್ನು ಕಟ್ಟುವುದು ಆಧುನಿಕ ಶೈಲಿ ಮತ್ತು ಕಾಣಲು ಸುಂದರವಾಗಿರುತ್ತದೆ. ಈ ವರ್ಷದ ರಕ್ಷಾ ಬಂಧನದಂದು ವರ್ಣವಯವಾದ ರಾಖಿಯನ್ನು ತಂದು ನಿಮ್ಮ ಸಹೋದರನಿಗೆ ಕಟ್ಟಿ. ನಿಮ್ಮ ರಕ್ಷಾ ಬಂಧನದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿ.

ಹೂವಿನ ಅಲಂಕಾರದ ರಾಖಿ
ಈ ಬಗೆಯ ರಾಖಿ ಭಾರತದಲ್ಲಿ ಹೆಚ್ಚು ಪ್ರಸಿದ್ಧ. ಈ ತರಹದ ರಾಖಿ, ಹೂವಿನ ಆಕೃತಿಯನ್ನು ಹೊಂದಿರುತ್ತದೆ. ಇದು ಹೊಳೆಯುವ/ಮಿನುಗುವ ಕಲಾತ್ಮಕ ದಾರದಿಂದ ಅಲಂಕೃತಗೊಂಡಿರುತ್ತದೆ.

ರುದ್ರಾಕ್ಷ ರಾಖಿ
ಭಾರತೀಯ ಪರಂಪರೆಯ ಪ್ರಕಾರ, ರುದ್ರಾಕ್ಷಿ ವೈದಿಕ ಹಾಗೂ ಭೂಮಿಯ ಮೇಲೆ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಇದನ್ನು ಧರಿಸಿದಾತನಿಗೆ ಯಾವುದೇ ನಕಾರಾತ್ಮಕ ಶಕ್ತಿಗಳೂ ತೊಂದರೆ ಮಾಡಲಾರವು. ಕೆಲವು ರದ್ರಾಕ್ಷಿ ರಾಖಿಗಳು ವರ್ಣರಂಜಿತ ಮಣಿ ಹಾಗೂ ಗಾಜಿನ ಮಣಿಗಳಿಂದ ಅಲಂಕೃತವಾಗಿರುತ್ತವೆ.

ಮುತ್ತಿನ ರಾಖಿ
ಈ ರಾಖಿಗಳು ಸಾಮಾನ್ಯವಾಗಿ ಆಕರ್ಷಕ ಮುತ್ತುಗಳಿಂದ ಅಲಂಕೃತವಾಗಿವೆ.

ಮೂಲಿ/ಮೌಲಿ ರಾಖಿ
ಈ ರಾಖಿಯನ್ನು ಹಿಂದೂ ಧರ್ಮದಲ್ಲಿ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಬಣ್ಣ ಮತ್ತು ಸೌಂದರ್ಯಾತ್ಮಕ ಕಲಾಕೃತಿ ಈ ವಿಧದ ರಾಖಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇಂತಹ ರಾಖಿಗಳು ಸಾಂಪ್ರದಾಯಿಕ ಮತ್ತು ವೈವಿಧ್ಯಮಯವಾಗಿದ್ದು ಆರಾಮದಾಯಕವಾಗಿರುತ್ತವೆ.

ಕಮಲದ ರಾಖಿ
ಕಮಲದ ರಾಖಿಗಳು ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ. ಸಹೋದರ- ಸಹೋದರಿಯರ ನಡುವಿನ ಬಾಂಧವ್ಯದ ಸೌಂದರ್ಯವನ್ನು ಇದು ಎತ್ತಿ ತೋರಿಸುತ್ತದೆ. ಇದು ನಿಮ್ಮ ಸಹೋದರರಿಗೆ ಕಟ್ಟಬಹುದಾದ, ಹೆಚ್ಚು ಬಳಕೆಯಲ್ಲಿರುವ ರಾಖಿ

ಕಲರ್ಡ್ ಬೆಲ್ಸ್ (ವರ್ಣಮಯ ಗಂಟೆ) ರಾಖಿ
ವರ್ಣಮಯ ಘಂಟಾ ರಾಖಿ ಮತ್ತು ಶ್ರೀಗಂಧದ ರಾಖಿ ಇವೆರಡೂ ನಕಾರಾತ್ಮಕ ಆಲೋಚನೆಗಳನ್ನು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿವೆ.

ರೇಶಮ್ ಬರ್ಡ್ ರಾಖಿ
ರೇಶಮ್ ರಾಖಿಗಳು ಅಥವಾ ರೇಶಮಿ ರಾಖಿಗಳು ರೇಷ್ಮೇ ದಾರದಿಂದ ಮಾಡಲ್ಪಟ್ಟ ರಾಖಿಗಳು. ಈ ರಾಖಿಗಳು ಅತ್ಯಂತ ಮೃದುವಾಗಿರುತ್ತವೆ ಜೊತೆಗೆ ಹೊಳಪಿನಿಂದ ಕೂಡಿರುತ್ತವೆ.

ಮ್ಯೂಸಿಕಲ್ ಪಿಕೋಕ್ ರಾಖಿ (ಸಂಗೀತದ ರಾಖಿ)
ಮ್ಯೂಸಿಕಲ್ ರಾಖಿಗಳು, ಮುಟ್ಟಿದಾಗ ಸಂಗೀತವನ್ನು ಹೊರಡಿಸುತ್ತವೆ. ಸಂವೇದನೆಯ ಈ ರಾಖಿಗಳು ನಿಮ್ಮ ಸಹೋದರನ ಕೈಗೆ ಕಟ್ಟಿದಾಗ ಅದರಿಂದ ಹೊರಡುವ ಇಂಪಾದ ಸಂಗೀತ ಕೇಳಿ ನಿಮ್ಮ ಸಹೋದರನಿಗೆ ಆಶ್ವರ್ಯವಾಗುವುದರಲ್ಲಿ ಸಂಶಯವಿಲ್ಲ!

ಕಾರ್ಟೂನ್ ರಾಖಿ
ರಾಖಿಗಳ ಮೇಲೆ ಅತ್ಯಂತ ಜನಪ್ರಿಯ ಕಾರ್ಟೂನ್ ಪಾತ್ರಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಇವುಗಳಲ್ಲಿ ಕೆಲವು ರಾಖಿಗಳು ಟ್ವೀಟಿ, ಡೊನಾಲ್ಡ್ ಡಕ್ ಮತ್ತು ಮಿಕ್ಕಿ ಮೌಸ್ ಮೊದಲಾದ ಪಾತ್ರಗಳನ್ನು ಹೊಂದಿರುತ್ತವೆ.

ಸ್ವಸ್ತಿಕ್ ರಾಖಿ
ಯುವ ಜನತೆಯಲ್ಲಿ ಈ ರಾಖಿ ಅತ್ಯಂತ ಜನಪ್ರಿಯ. ಈ ತರಹದ ರಾಖಿಗಳನ್ನು ಬೆಳ್ಳಿ ಅಥವಾ ಹಿತ್ತಾಳೆ ಲೋಹದಿಂದ ಮಾಡಲಾಗಿರುತ್ತದೆ. ಯುವ ಸಹೋದರರು ಸಾಂಪ್ರದಾಯಿಕ ಉಡುಗೆಗಳೊಂದಿಗೆ ಈ ರಾಖಿಯನ್ನು ಧರಿಸುತ್ತಾರೆ.

ಸಾಮಾನ್ಯ ರಾಖಿ
ಈ ತರಹದ ರಾಖಿಗಳನ್ನು ರೇಷ್ಮೇ ಎಳೆಗಳು, ಪ್ಲಾಸ್ಟಿಕ್ ದಾರಗಳಿಂದ ಮಾಡಲಾಗುತ್ತದೆ. ಇದು ರಕ್ಷಾ ಬಂಧನದ ದಿನದಂದು ಭಾರತರ ಮೂಲೆ ಮೂಲೆಗಳಲ್ಲಿಯೂ ದೊರೆಯುತ್ತದೆ.

ಲುಂಬಾ ರಾಖಿ
ಲಿಂಬಾ ರಾಖಿ ಅತ್ತಿಗೆಗಾಗಿ ತಯಾರು ಮಾಡಲಾಗುತ್ತದೆ! ಇದು ಅತ್ತಿಗೆ ಮತ್ತು ಗಂಡನ ಅಕ್ಕ (ಅತ್ತಿಗೆ) ನಡುವಿನ ಸಂಬಂಧವನ್ನು ಪ್ರತಿನಿಧಿಸುತ್ತದೆ.

ಝರಿ ರಾಖಿ
ಹೆಸರೇ ಸೂಚಿಸುವಂತೆ ಈ ರಾಖಿಗಳು ಹೊಳೆಯುವ ಝರಿಗಳಿಂದ ಅಲಂಕೃತಗೊಂಡಿರುತ್ತವೆ. ಸುವರ್ಣ ಬಣ್ಣದ ಮತ್ತು ಬೆಳ್ಳಿ ಝರಿಗಳನ್ನು ಇದಕ್ಕೆ ಹೆಚ್ಚಾಗಿ ಬಳಸಲಾಗುತ್ತದೆ. ಈ ರಾಖಿಯ ಸೌಂದರ್ಯವು ಬಳಸ್ಪಡುವ ಮಣಿಗಳು, ಕಲ್ಲುಗಳು ಮತ್ತು ಪ್ರಕಾಶಮಾನವಾದ ಹೊಳೆಯುವ ಕಲಾಕೃತಿಯಿಂದ ವರ್ಧಿಸಿದೆ.

ವಜ್ರದ ರಾಖಿ (ಡೈಮಂಡ್ ರಾಖಿ)
ನೀವು ಹಾಗೂ ನಿಮ್ಮ ಸಹೋದರ ನಡುವಿನ ಬಂಧದಂತೆ ವಜ್ರವೂ ಶಾಶ್ವತ. ನೀವು ರಕ್ಷಾಬಂಧನದಂದು ವಜ್ರದ ರಾಖಿಯನ್ನು ನಿಮ್ಮ ಸಹೋದರನಿಗೆ ಕಟ್ಟಿ ನೀವು ಅವರನ್ನು ಎಷ್ಟು ಕಾಳಜಿ ಮಾಡುತ್ತೀರಿ ಎಂಬುದನ್ನು ತೋರಿಸಿ.

ಬೆಳ್ಳಿ ರಾಖಿ
ಬೆಳ್ಳಿ ಲೇಪನವಿರುವ ರಾಖಿ, ಭಾರತೀಯ ದೇವ-ದೇವತೆಗಳ ಚಿತ್ರವನ್ನು ಹೊಂದಿರುತ್ತವೆ. ಬೆಳ್ಳಿರಾಖಿಗಳು ದೇಹಕ್ಕೆ ಒಳ್ಳೆಯದು ಹಾಗೂ ಇದನ್ನು ಧರಿಸಿದವರಿಗೆ ಸಾಕಷ್ಟು ಯಶಸ್ಸು ಸಿಗುತ್ತದೆ ಎಂಬ ಕಾರಣಕ್ಕೆ ಅತ್ಯಂತ ವಿಶೇಷತೆಯನ್ನು ಪಡೆದಿದೆ.

ಚಿನ್ನದ ರಾಖಿ
ಚಿನ್ನದ ರಾಖಿಗಳು ನೀವೂ ನಿಮ್ಮ ಸಹೋದರನಿಗೆ ರಕ್ಷಾ ಬಂಧನದ ಸಮಯದಲ್ಲಿ ನೀಡಬಹುದಾದ ಅತ್ಯುತ್ತಮ ಉಡುಗೂರೆ.

ಲೋಹದ ರಾಖಿ
ಈ ಲೋಹದ ರಾಖಿಗಳು ಕಪ್ಪು ಬೆಳ್ಳಿ ಮತ್ತು ತಾಮ್ರದಿಂದ ಮಿಶ್ರಣಗೊಂಡಿದ್ದರೆ ಅತ್ಯಂತ ಸುಂದರವಾಗಿರುತ್ತವೆ. ಈ ರಾಖಿಗಳು ದುಬಾರಿಯಲ್ಲದ ಹಾಗೂ ನಮ್ಮ ಸಮಾಜದಲ್ಲಿ ವಿನೂತನವಾದ ಶೈಲಿಯ ರಾಖಿಗಳಾಗಿವೆ.

ರಾಮ್ ರಾಖಿ
ನಿಮ್ಮ ಸಹೋದರ ಸಾತ್ವಿಕ/ ಸಂತ ಗುಣದವನಾಗಿದ್ದರೆ ಸರಳವಾದ ರೇಷ್ಮೇ ಎಳೆಯ ರಾಮ್ ರಾಖಿಯನ್ನು ಕಟ್ಟಿ. ನಿಮ್ಮ ಸಹೋದರನ ಮುಖದಲ್ಲಿ ಅರಳುವ ಮುನಿ ಗಾಂಭೀರ್ಯದ ನಗುವನ್ನು ನೀವೇ ಗಮನಿಸಿ!

ಹರಳಿನ ರಾಖಿ
ಅಮೂಲ್ಯವಾದ ಮತ್ತು ಅರೆ ಕಲ್ಲಿನ ರಾಖಿಗಳು ಸ್ವಲ್ಪ ದುಬಾರಿ. ನೀವು ನಿಮ್ಮ ಸಹೋದರನಿಗೆ ಅವರು ನಿಮಗೆ ಮಾಡಿದ ಒಳಿತಿನ ಪ್ರತಿಯಾಗಿ ಅತ್ಯಂತ ದುಬಾರಿಯ ಉಡುಗೊರೆಯನ್ನು ಕೊಡಲು ಬಯಸಿದರೆ, ಈ ರಾಖಿ ಸೂಕ್ತ ಆಯ್ಕೆ.

ಕರೆನ್ಸಿ (ನಾಣ್ಯದ) ರಾಖಿ
ಇದು ನಾಣ್ಯಗಳು ಮತ್ತು ರೂಪಾಯಿ, ವಿವಿಧ ಧರ್ಮೀಯ ಚಲಾವಣಾ ನೋಟುಗಳನ್ನು ಅಥವಾ ಡಾಲರ್ ಗಳನ್ನು ಲಗತ್ತಿಸಲಾದ ರಾಖಿಗಳನ್ನು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಈ ತರಹದ ರಾಖಿಗಳನ್ನು ಪ್ಲಾಸ್ಟಿಕ್ ನಿಂದ ತಯಾರಿಸಲಾಗುತ್ತದೆ ಅಥವಾ ನಿಜವಾದ ನೋಟುಗಳಿಂದಲೂ ಮಾಡಬಹುದು.

ಈ-ರಾಖಿಗಳು
ಈ-ರಾಖಿಗಳು ಇಂದು ದೇಶದಾದ್ಯಂತ ಅತ್ಯಂತ ಪ್ರಚಲಿತದಲ್ಲಿರುವ ರಾಖಿ. ಇವು ಹೊರದೇಶಗಳಲ್ಲಿರುವ ಸಹೋದರರಿಗೆ ತಲುಪಿಸಲು ಇದು ಅತ್ಯಂತ ವೇಗದ ಹಾಗೂ ಹೆಚ್ಚು ಅನುಕೂಲಕರವಾಗಿರುವ ರಾಖಿಗಳು!
ಹೀಗೆ ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ಬಗೆಯ ರಾಖಿಗಳನ್ನು ಖರೀದಿಸಿ ರಕ್ಷಾ ಬಂಧನದ ದಿನದಂದು ನಿಮ್ಮ ಸಹೋದರರಿಗೆ ಕಟ್ಟಿ. ಸಹೋದರ-ಸಹೋದರಿಯರ ಬಂಧ ಈ ಮೂಲಕ ಇನ್ನಷ್ಟು ಗಟ್ಟಿಯಾಗಲಿ!



Click it and Unblock the Notifications