Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜೈಲಲ್ಲಿ ರಾಮಾಯಣ ನಾಟಕ: ಸೀತೆ ಹುಡುಕಿ ಬರುವುದಾಗಿ ಹೇಳಿ ಕೈದಿಗಳಿಬ್ಬರು ಪರಾರಿ
ಅಸ್ಸಾಂನಲ್ಲಿ ಜೈಲು ಗೋಡೆ ಹಾರಿ ಐವರು ಕೈದಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಅಲ್ಲಿ ಬೆಡ್ ಶೀಟ್, ಲುಂಗಿಯನ್ನು ಬಳಸಿ ಕೈದಿಗಳು ಮಧ್ಯರಾತ್ರಿ ಯಾರಿಗೂ ತಿಳಿಯದಂತೆ ಪರಾರಿಯಾಗಿದ್ದ ಘಟನೆ ವರದಿಯಾಗಿದೆ. ಆದ್ರೆ ಇಲ್ಲೊಂದು ಮತ್ತೊಂದು ಘಟನೆಯಲ್ಲಿ ಕೈದಿಗಳು ರಾಮಾಯಣ ನಾಟಕ ಆಡುತ್ತಲೇ ಪರಾರಿಯಾಗಿರುವ ವಿಚಿತ್ರ ಪ್ರಸಂಗವೊಂದು ವರದಿಯಾಗಿದೆ.
ಇದೊಂದು ಅಚ್ಚರಿಯ ಘಟನೆಯಾಗಿದ್ದು ಇಬ್ಬರು ಕೈದಿಗಳು ಪರಾರಿಯಾಗಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಜೈಲಿನಲ್ಲಿ ರಾಮಾಯಣ ನಾಟಕ ನಡೆಯುತ್ತಿತ್ತು, ಕೈದಿಗಳೇ ನಟಿಸುತ್ತಿದ್ದ ನಾಟಕವಾಗಿತ್ತು, ಕೈದಿಗಳೇ ಅಲ್ಲಿನ ಪ್ರೇಕ್ಷಕರು ಕೂಡ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿತ್ತು, ಆದರೆ ಇಬ್ಬರು ಕೈದಿಗಳು ನಾಪತ್ತೆಯಾಗಿರುವುದು ವರದಿಯಾಗಿದೆ.

ಯಾರು ಆ ಕೈದಿಗಳು? ಪರಾರಿ ಆಗಿದ್ದು ಹೇಗೆ?
ಪರಾರಿಯಾಗಿರುವ ಇಬ್ಬರು ಕೈದಿಗಳು ಕೊಲೆ ಆರೋಪದಲ್ಲಿ ಜೈಲು ಸೇರಿದ್ದವರು, ಇಬ್ಬರು ಶಿಕ್ಷೆ ಅನುಭವಿಸುತ್ತಿದ್ದರು ಎಂದು ತಿಳಿದುಬಂದಿದೆ. ಇಬ್ಬರನ್ನು ಪಂಕಜ್ ಮತ್ತು ರಾಜ್‌ಕುಮಾರ್ ಎಂದು ಗುರುತಿಸಲಾಗಿದೆ. ಇಲ್ಲಿನ ಹರಿದ್ವಾರದಲ್ಲಿರುವ ರೋಶನಾಬಾದ್ ಜೈಲಿನಲ್ಲಿದ್ದರು. ಇದೇ ಜೈಲಿನಲ್ಲಿ ರಾಮಾಯಣ ನಾಟಕ ಮಾಡಲು ಸಿದ್ಧತೆ ನಡೆದಿತ್ತು, ಇವರಿಬ್ಬರು ನಾಟಕದಲ್ಲಿಯೂ ಬಾಗಿಯಾಗಿದ್ದರು, ಅಲ್ಲದೆ ಜೈಲಿನಿಂದ ಪರಾರಿಯಾಗಲು ಮೊದಲೇ ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಇಬ್ಬರು ನಾವರ ಸೈನ್ಯದ ಪಾತ್ರ ಹಾಕಿದ್ದರು
ರಾಮಾಯಣದಲ್ಲಿ ಸೀತೆಯನ್ನು ಅಪಹರಿಸಿದ್ದ ರಾವಣನ ಮೇಲೆ ಯುದ್ಧ ಸಾರಿದಾಗ ವಾನರ ಸೇನೆಯೂ ಯುದ್ಧದಲ್ಲಿ ಭಾಗಿಯಾಗಿತ್ತು ಎಂಬುದು ನಮಗೆಲ್ಲಾ ತಿಳಿಸಿದೆ. ಹನುಮನು ಲಂಕೆಗೆ ತೆರಳಿ ಸೀತೆಯನ್ನು ಪತ್ತೆ ಮಾಡಿದ ಎಂಬುದು ಕೂಡ ನಮಗೆ ತಿಳಿಸಿದೆ. ಈಗ ಇದೇ ನಾಟಕದಲ್ಲಿ ಇಬ್ಬರು ನಾವರ ಸೇನೆಯಲ್ಲಿರುವ ಹನುಮಂತನ ವೇಷ ಧರಿಸಿದ್ದರು.
ಎಂದಿನಂತೆ ರಾಮಾಯಣ ನಾಟಕ ನಡೆಯುತ್ತಿರುವಾಗಲೇ ಸೀತೆಯನ್ನು ಹುಡುಕುವ ದೃಶ್ಯ ಬರುತ್ತದೆ. ಈ ದೃಶ್ಯದ ಲಾಭ ಪಡೆದ ಇಬ್ಬರು ಸೀತೆಯನ್ನಯ ಹುಡುಕಿಕೊಂಡು ಬರುವುದಾಗಿ ವೇದಿಕೆಯಿಂದ ನಿರ್ಗಮಿಸುತ್ತಾರೆ. ಆದರೆ ನಾಟಕ ಮುಂದುವರೆದರೂ ಇಬ್ಬರು ವಾಪಾಸು ಬರುವುದೇ ಇಲ್ಲ.
ಆದರೆ ಅವರಿಬ್ಬರು ದೊಡ್ಡ ಏಣಿಯನ್ನು ಬಳಸಿ ಗೋಡೆಯನ್ನು ಹಾರಿ ಪರಾರಿಯಾಗಿರುವುದು ಹಲವು ಗಂಟೆಗಳ ಬಳಿಕ ಅಧಿಕಾರಿಗಳಿಗೆ ತಿಳಿದುಬರುತ್ತದೆ. ಅವರಿಬ್ಬರು ವೇಷ ಧರಿಸಿದ್ದ ಕಾರಣ ತಕ್ಷಣಕ್ಕೆ ತಪ್ಪಿಸಿಕೊಂಡಿರುವುದು ಯಾರು ಎಂಬುದು ತಿಳಿದುಬಂದಿರಲಿಲ್ಲ. ಒಬ್ಬರು ಉತ್ತರಾಖಂಡ್ ಮೂಲದವರಾಗಿದ್ದರೆ ಮತ್ತೊಬ್ಬರು ಉತ್ತರ ಪ್ರದೇಶ ಮೂಲದ ಕೈದಿ ಎಂಬುದು ತದನಂತರ ತಿಳಿದುಬಂದಿತು.
ಈ ವಿಚಿತ್ರ ಘಟನೆ ನೋಡಿದ ಅಧಿಕಾರಿಗಳು ಹಾಗೂ ಜನರು ಶಾಕ್ ಆಗಿದ್ದಾರೆ. ಇಬ್ಬರನ್ನು ಹುಡುಕಲು ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಬೆಡ್ ಶೀಟ್ ಲುಂಗಿ ಬಳಸಿ ಐವರು ಪರಾರಿ..!
ಇದೇ ರೀತಿ ಅಸ್ಸಾಂನ ದಿಸ್ಪೂರ್ ಜೈಲಿನಲ್ಲಿದ್ದ ಐವರು ಕೈದಿಗಳು ಬೆಡ್ ಶೀಟ್ ಲುಂಗಿಯನ್ನು ಹಗ್ಗದಂತೆ ಉದ್ದವಾಗಿ ಕಟ್ಟಿ ಜೈಲು ಗೋಡೆ ಹಾರಿ ಪರಾರಿಯಾಗಿರುವ ಘಟನೆ ನಡೆದಿದೆ. ಐವರು ಪೋಕ್ಸೊ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದರು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಹಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಐವರು ಬಹಳ ಕಾಲದಿಂದ ಜೈಲಿನಿಂದ ಪರಾರಿಯಾವಲು ಯೋಜನೆ ರೂಪಿಸಿದ್ದರು. ಆದರೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬೆಡ್‌ಶೀಟ್‌ಗಳನ್ನು ಹರಿದು, ಲುಂಗಿಯನ್ನು ಹಗ್ಗದಂತೆ ಒಂದಕ್ಕೊಂದು ಕಟ್ಟಿ ಜೈಲು ಗೋಡೆಯ ಮೇಲೆ ಹಲ್ಲು ಕಟ್ಟಿ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.



Click it and Unblock the Notifications
