Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಾಜ್ ಮಹಲ್ ನನಗೆ ಸೇರಿದ್ದು: ರಾಜ ಟ್ಯೂಸಿ ನ್ಯಾಯಾಲಯ ಮೊರೆ..! ಯಾರೀತ ಗೊತ್ತಾ?
ತಾಜ್ ಮಹಲ್ ಕಟ್ಟಿಸಿದವರು ಯಾರು ಅಂದರೆ ನಾವು ಸುಲಭವಾಗಿ ಷಹಜಹಾನ್ ಹೆಸರು ಹೇಳುತ್ತೇವೆ. ಮೊಘಲರ ಆಳ್ವಿಕೆಯ ಕಾಲದಲ್ಲಿ ಈ ತನ್ನ ಪತ್ನಿಯ ನೆನಪಿಗಾಗಿ ಷಹಜಹಾನ್ ತಾಜ್ ಮಹಲ್ ನಿರ್ಮಿಸಿದ್ದ. ಈಗ ವಿಶ್ವದ ಅದ್ಭುತದಲ್ಲಿ ಇದು ಕೂಡ ಒಂದಾಗಿರುವುದು ಇತಿಹಾಸದಲ್ಲಿ ನೀವು ನೋಡಬಹುದು. ಹಾಗೆ ಮೊಘಲರ ಕೊನೆಯ ರಾಜ ಬಹದ್ದೂರ್ ಶಾ ಜಾಫರ್ ಅವರ ಬಳಿಕ ಯಾರು ಕೂಡ ಅಧಿಕಾರ ಮಾಡಲಿಲ್ಲ. ಆದ್ರೆ ಅವರ ವಂಶಜರು ಇನ್ನು ಇದ್ದಾರೆ ಎಂದು ಹೇಳಲಾಗಿದೆ.
ಅದರಲ್ಲೂ ಬಹದ್ದೂರ್ ಶಾ ಜಾಫರ್ ಅವರ 6ನೆ ತಲೆಮಾರಿನ ಉತ್ತರಾಧಿಕಾರಿ ಎಂದು ಯಾಕುಬ್ ಹಬೀಬುದ್ದೀನ್ ಟ್ಯೂಸಿ ಎಂಬಾತರೊಬ್ಬರು ಹೇಳಿಕೊಂಡಿದ್ದಾರೆ. ರಾಜಕುಮಾರ ಟ್ಯೂಸಿ ತನ್ನನ್ನು ಮೊಘಲರ ವಂಶಾವಳಿ ಎಂದು ಹೇಗೆ ಹೇಳಿಕೊಂಡಿದ್ದಾನೆ. ಹಾಗೆ ಇದನ್ನು ಸಾಬೀತು ಪಡಿಸಲು ಕೋರ್ಟ್‌ನಲ್ಲಿ ತನ್ನ ಡಿಎನ್‌ಎ ವರದಿಯನ್ನು ಕೂಡ ಆತ ಸಲ್ಲಿಸಿದ್ದಾನೆ.

ಅವನ ಪ್ರಕರಣವನ್ನು ಪ್ರತ್ಯೇಕಿಸುವ ಅಂಶವೆಂದರೆ ಅವನು ತನ್ನ ಹಕ್ಕನ್ನು ಬೆಂಬಲಿಸಲು ನ್ಯಾಯಾಲಯದಲ್ಲಿ ಡಿಎನ್ಎ ವರದಿಯನ್ನು ಸಹ ಸಲ್ಲಿಸಿದ್ದಾನೆ. ಹಾಗೆ ತಾಜ್ ಮಹಲ್ ತನಗೆ ಸೇರಬೇಕು ಎಂದು ಅವರು ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ನೆಲೆಸಿರುವ ಅವರು ಮುತವಾಲಿ ಮತ್ತು ಔರಂಗಜೇಬನ ಸಮಾಧಿಯ ಉಸ್ತುವಾರಿ ವಹಿಸಿದ್ದಾರೆ. ಅದರೆ ಜೊತೆಗೆ ತಾಜ್ ಮಹಲ್‌ನ ಮಾಲೀಕ ಎಂದು ಹೇಳಿಕೊಂಡಿದ್ದಾರೆ, ಏಕೆಂದರೆ ಅವರ ಕುಟುಂಬದಿಂದ ಉಳಿದಿರುವ ಕೊನೆಯ ವ್ಯಕ್ತಿ ನಾನು ಎಂದಿದ್ದಾರೆ.
2019ರಲ್ಲಿ ತಾಜ್ ಮಹಲ್‌ಗೆ ಸಂಬಂಧಿಸಿದ ಆಸ್ತಿ ಪತ್ರಗಳು ನನ್ನ ಬಳಿ ಇವೆ ಎಂದು ಹೇಳಿಕೊಂಡಿದ್ದ ರಾಜಸ್ಥಾನದ ರಾಜಕುಮಾರಿ ದಿಯಾ ಕುಮಾರಿ ಅವರಿಗೆ ನಿಮ್ಮಲ್ಲಿ ರಜಪೂತರ ರಕ್ತ ಸ್ವಲ್ಪವಾದರೂ ಇದ್ದರೆ ಆ ದಾಖಲೆಗಳನ್ನು ಸಾರ್ವಜನಿಕವಾಗಿ ತೋರಿಸಿ ಎಂದು ರಾಜ ಸವಾಲು ಹಾಕಿದ್ದರು. ಆದರೆ ರಾಜಸ್ಥಾನದ ರಜಪೂತ ಮನೆತನಕ್ಕೆ ಸೇರಿದ್ದ ದಿಯಾ ಕುಮಾರಿ ಈ ಸವಾಲು ಸ್ವೀಕರಿಸಲಿಲ್ಲ. ಬದಲಿಗೆ ಸಮಯ ಬಂದಾಗ ನಿಜ ತಿಳಿಯಲಿದೆ ಎಂದಿದ್ದರು. ಹಾಗೆ ತಾಜ್‌ಮಹಲ್‌ನ ಆಸ್ತಿ ಪತ್ರಗಳು ನಮ್ಮ ಬಳಿ ಇವೆ ಎಂದು ಪುನರುಚ್ಚರಿಸಿದ್ದರು.
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಔರಂಗಜೇಬನ ಸಮಾಧಿಯ ವಿವಾಹ ಭುಗಿಲೆದ್ದ ಸಮಯದಲ್ಲಿ ಇವರು ಈ ಸಮಾಧಿಯ ರಕ್ಷಣೆ ಕೋರಿ ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಿದ್ದರು. ರಾಜ್ಯ ಸರ್ಕಾರಕ್ಕೆ ಈ ಸಮಾಧಿಯ ರಕ್ಷಣೆಗೆ ನಿರ್ಧೇಶನ ಕೋರಿ ಅರ್ಜಿ ಸಲ್ಲಿಸಿದ್ದರು. ಹಾಗೆ ರಾಮಮಂದಿರ ಕುರಿತಾಗಿ ವಿವಾದ ಎದ್ದಾಗಲು ಅವರು ಸುದ್ದಿಯಾಗಿದ್ದರು. ಅಯೋಧ್ಯೆಯಲ್ಲಿ ಮಂದಿರ ಆಗುತ್ತಿರುವುದಕ್ಕೆ ನನ್ನ ಬೆಂಬಲವು ಇದೆ. ಬಾಬರಿ ಮಸೀದಿ ವಕ್ಫ್ ಆಸ್ತಿ ಆಗಿರಲಿಲ್ಲ. ನಮ್ಮ ಆಸ್ತಿ ಅಲ್ಲಿ ರಾಮಮಂದಿರ ನಿರ್ಮಿಸುವುದಾದರೆ ನಮಗೇನು ಸಮಸ್ಯೆ ಇಲ್ಲ. ಮಂದಿರಕ್ಕೆ ನಾನು ಚಿನ್ನದ ಇಟ್ಟಿಗೆ ಮಾತ್ರ ನೀಡುವುದಲ್ಲ ಬದಲಿಗೆ ಇಡೀ ಭೂಮಿಯನ್ನೇ ಹಸ್ತಾಂತರಿಸುತ್ತೇನೆ ಎಂದಿದ್ದರು.
1828 ರಲ್ಲಿ, ಅ೦ದಿನ ಗವರ್ನರ್ ಜನರಲ್ ಆಗಿದ್ದ, ಲಾರ್ಡ್ ವಿಲಿಯ೦ ಬೆ೦ಟಿಕ್‌ನು ಹಿಂದೊಮ್ಮೆ ಈ ತಾಜ್ ಮಹಲ್ ಅನ್ನು ಹರಾಜು ಹಾಕಲು ಮುಂದಾಗಿದ್ದ. ಇದಕ್ಕಾಗಿ ಟೆಂಡರ್ ಸಹ ಕರೆಯಲಾಗಿತ್ತು. ಈ ನಡುವೆ ಮಥುರಾದ ಉದ್ಯಮಿಯೊಬ್ಬರು ತಾಜ್ ಮಹಲ್ ಅನ್ನು ಸುಮಾರು 7 ಲಕ್ಷ ರೂಪಾಯಿಗೆ ಖರೀದಿಸಲು ಮುಂದಾದರು, ಆದ್ರೆ ಅಂತಿಮ ಹಂತದಲ್ಲಿ ಈ ಟೆಂಡರ್ ಮುರಿದು ಬಿದ್ದಿತ್ತು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಮತ್ತೊಂದು ಕಡೆ ಒಮ್ಮೆ ಬ್ರಿಟಿಷರು ಈಗಿರುವ ತಾಜ್ ಮಹಲ್ ಅನ್ನು ಕೆಡವಲು ಮುಂದಾಗಿದ್ದರಂತೆ. ಈ ಸಂಬಂಧ ಲಂಡನ್ ಪಾರ್ಲಿಮೆಂಟ್‌ನಲ್ಲೂ ಚರ್ಚೆಯಾಗಿತ್ತು. ಆದರೆ ಬ್ರಿಟಿಷ್ ಅಧಿಕಾರಿಗಳಿಂದಲೇ ಇದಕ್ಕೆ ಅಪಸ್ವರ ಕೇಳಿಬಂದ ಕಾರಣಕ್ಕೆ ಈ ನಿರ್ಧಾರವನ್ನು ಕೈ ಬಿಡಲಾಗಿತ್ತು ಎಂದು ತಿಳಿದುಬಂದಿದೆ.



Click it and Unblock the Notifications