Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ರಾಮಾಯಣದ ಹೆಗ್ಗುರುತು ಲೇಪಾಕ್ಷಿ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ..! ವಿಶೇಷ ಏನು ಗೊತ್ತಾ?
ಪ್ರಧಾನಿ ನರೇಂದ್ರ ಮೋದಿಯವರು ಇಂದು ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಾಲಯಕ್ಕೆ ಭೇಟಿ ನೀಡಿದರು. ಅಯೋಧ್ಯೆಯಲ್ಲಿ ಇಂದಿನಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಈ ನಡುವೆ ಪ್ರಧಾನಿ ಮೋದಿ ಈ ದೇವಾಲಯಕ್ಕೆ ಭೇಟಿ ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ದೇವಾಲಯಕ್ಕೂ ರಾಮಾಯಣಕ್ಕೂ ಇನ್ನಿಲ್ಲದ ನಂಟಿದೆ.
ಆ೦ಧ್ರಪ್ರದೇಶದ ಅನ೦ತಪುರ ಜಿಲ್ಲೆಯಲ್ಲಿರುವ ಹಿ೦ದೂಪುರ್ ನಿ೦ದ 15 ಕಿ.ಮೀ ದೂರದಲ್ಲಿರುವ ಈ ದೇವಾಲಯವು ರಾಮಾಯಣದ ಕಥೆಯನ್ನು ತನ್ನೊಳಗೆ ಇಟ್ಟಿಕೊಂಡಿದೆ. ರಾವಣನಿಂದ ಬಾಣದ ಏಟು ತಿಂದ ಜಟಾಯು ಪಕ್ಷಿ ಇದೇ ಸ್ಥಳದಲ್ಲಿ ಕೊನೆಯುಸಿರೆಳೆದಿದೆ ಎಂದು ನಂಬಲಾಗಿದೆ.
ರಾವಣನಿಂದ ಸೀತಾದೇವಿಯನ್ನು ಅಪಹರಿಸಿದ ನಂತರ ಜಟಾಯು, ದೈತ್ಯ ಹದ್ದು, ಸೀತಾದೇವಿಯನ್ನು ಹಿಂಬಾಲಿಸಿದ ಸ್ಥಳ ಲೇಪಾಕ್ಷಿ ಎಂದು ನಂಬಲಾಗಿದೆ. ಸಾಯುತ್ತಿರುವ ಜಟಾಯು, ಸೀತಾ ದೇವಿಯ ಸೆರೆಯಲ್ಲಿರುವ ಬಗ್ಗೆ ಕೊನೆಯ ಮಾಹಿತಿಯನ್ನು ರಾಮನಿಗೆ ತಿಳಿಸಿದ ನಂತರ, ಲೇಪಾಕ್ಷಿಯಲ್ಲಿ ಭಗವಾನ್ ರಾಮನಿಂದ ದಿವ್ಯ ಮೋಕ್ಷ ಪಡೆಯಿತು ಎಂಬ ಕಥೆ ಇದೆ.

ಸಾಯುವ ಹಂತದಲ್ಲಿ ಇಲ್ಲಿ ಬಿದ್ದ ಜಟಾಯುವನ್ನು ನೋಡಿದ ರಾಮ, ಸ್ಥಳೀಯ ಭಾಷೆಯಲ್ಲಿ ಎದ್ದೇಳು ಪಕ್ಷಿಯೇ ಎನ್ನಲು 'ಲೇ ಪಕ್ಷಿ' ಎಂದಿದ್ದನಂತೆ. ನಂತರದ ದಿನಗಳಲ್ಲಿ ಇದೇ 'ಲೇಪಾಕ್ಷಿ' ಎಂಬ ಹೆಸರು ಬರಲು ಕಾರಣವಾಯಿತು ಎಂದು ನಂಬಲಾಗಿದೆ. ಅಲ್ಲಿಗೆ ಭೇಟಿ ನೀಡಿದ ರಾಮನಿಗೆ ಸೀತೆಯನ್ನು ರಾವಣನು ದಕ್ಷಿಣಕ್ಕೆ ಕರೆದೊಯ್ದನೆಂದು ಹೇಳಿ ಜಟಾಯುವು ಇದೇ ಜಾಗದಲ್ಲಿ ಮೋಕ್ಷವನ್ನು ಪಡೆಯಿತಂತೆ.
ಇನ್ನು ಇಲ್ಲಿ 8 ಅಡಿ ಉದ್ದದ ಪಾದದ ಗುರುತೊಂದನ್ನು ಕಾಣಬಹುದಾಗಿದ್ದು, ಇದು ಸೀತಾ ಮಾತೆಯ ಪಾದದ ಗುರುತು ಎಂದು ನಂಬಲಾಗಿದೆ. ಈ ಪಾದದ ಬಳಿ ಎಲ್ಲಾ ಋತುಗಳಲ್ಲೂ ನೀರು ಹರಿಯುತ್ತದೆ. ಈ ನೀರು ಇಂಗುವುದೇ ಇಲ್ಲವಂತೆ. ಇದೇ ಲೇಪಾಕ್ಷಿ ವೀರಭದ್ರಸ್ವಾಮಿ ದೇವಾಲಯದಲ್ಲಿ ಶಿವ ಪಾರ್ವತಿ ವಿವಾಹಕ್ಕಾಗಿ ನಿರ್ಮಿಸಿದ ಕಲ್ಯಾಣ ಮಂಟಪವನ್ನೂ ಕಾಣಬಹುದು. ಇಲ್ಲಿರುವ ಏಳು ಹೆಡೆಯ ನಾಗವು ಶಿವಲಿಂಗಕ್ಕೆ ಸುತ್ತಿರುವಂಥ ನಾಗಲಿಂಗ ಶಿಲ್ಪವು ಜನಪ್ರಿಯವಾಗಿದೆ. ಇಷ್ಟೇ ಅಲ್ಲ ದೇಶದಲ್ಲೇ ಅತಿ ದೊಡ್ಡ ನಂದಿ ವಿಗ್ರಹವನ್ನು ಕೂಡಾ ಇಲ್ಲಿದೆ.
ದೇವಾಲಯದ ಒಳಭಾಗದಲ್ಲಿ ಶಿವನ ಉಗ್ರ ಅವತಾರವಾದ ವೀರಭದ್ರನು ನೆಲೆಸಿದ್ದಾನೆ. ಪ್ರಮುಖವಾದ ಆಕರ್ಷಣೆ ಎಂದರೆ ಯಾವುದೇ ಆಧಾರವಿಲ್ಲದೇ, ದೈತ್ಯ ಸ್ತಂಭವೊಂದು ನೇತಾಡುತ್ತಿದೆ.
ರಾವಣನ ಹಿಂಬಾಲಿಸಿದ್ದ ಜಟಾಯು
ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಿರುವಾಗ ಸೀತೆ ಕಾಪಾಡುವಂತೆ ಕೂಗಿಕೊಂಡಿದ್ದಳು. ಆದರೆ ಆಕೆಯ ಕೂಗು ಮೊದಲು ಕೇಳಿದ್ದು ಇದೇ ಜಟಾಯುವಿಗೆ. ಪರ್ವತದ ಬಳಿ ಕುಳಿತಿದ್ದ ಜಟಾಯು ಪಕ್ಷಿಗೆ ಸೀತೆಯ ಆಕ್ರಂದನ ಕೇಳಿಸುತ್ತದೆ. ತಡಮಾಡದೆ ರಾವಣನ ಎದುರಾಗುತ್ತದೆ. ಜಟಾಯು ಸೀತೆಯನ್ನು ರಾವಣನಿಂದ ಬಿಡಿಸಲು ಹೋರಾಡುತ್ತದೆ. ಆದರೆ ರಾವಣ ಸೀತೆಯನ್ನು ಪುಷ್ಪಕ ವಿಮಾನಕ್ಕೆ ಕಟ್ಟಿ ಜಟಾಯು ಮೇಲೆ ಬಾಣ ಪ್ರಯೋಗಕ್ಕೆ ಮುಂದಾಗುತ್ತಾನೆ. ಈ ವೇಳೆ ಬಾಣವೊಂದು ಜಟಾಯುವಿನ ರೆಕ್ಕೆ ಕತ್ತರಿಸಿ ಎದೆಗೆ ಬಡಿಯುತ್ತದೆ. ಈ ವೇಳೆ ಜಟಾಯು ಹಾರಲಾಗದೆ ನೆಲಕ್ಕೆ ಬೀಳುತ್ತದೆ.
ಆಕಾಶದಲ್ಲಿ ಇದೆಲ್ಲಾ ಘಟನೆ ನಡೆದಿರುವುದನ್ನು ಕಂಡ ರಾಮ ಲಕ್ಷ್ಮಣರು ಜಟಾಯುವನ್ನು ಹಿಂಬಾಲಿಸುತ್ತಾರೆ. ಜಟಾಯು ಈಗಿರುವ ಲೇಪಾಕ್ಷಿಯಲ್ಲಿ ಬಂದು ಬೀಳುತ್ತದೆ ಎನ್ನಲಾಗಿದೆ. ಈ ವೇಳೆ ರಾಮನಿಗೆ ರಾವಣ ಯಾವ ಕಡೆ ಪ್ರಯಾಣಿಸಿದ ಎಂಬ ಕುರಿತು ಮಾಹಿತಿ ನೀಡಿ ಮೋಕ್ಷ ಹೊಂದುತ್ತದೆ ಎಂಬ ಪುರಾತನ ಕಥೆ ಇದೆ.



Click it and Unblock the Notifications

