Latest Updates
-
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್?
ಪೂನಂ ಪಾಂಡೆ ಸಾವು ನಾಟಕ..! ವಿಡಿಯೋ ಮೂಲಕ ನಟಿ ಪ್ರತ್ಯಕ್ಷ
ನಟಿ ಮತ್ತು ರಿಯಾಲಿಟಿ ಟಿವಿ ತಾರೆ ಪೂನಂ ಪಾಂಡೆ ಗುರುವಾರ ರಾತ್ರಿ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಮ್ಯಾನೇಜರ್ ಶುಕ್ರವಾರ ಹೇಳಿದ್ದರು. ಆದರೆ ಆಕೆಯ ಸಾವಿನ ಕುರಿತು ಹಲವು ಅನುಮಾನಗಳು ಎದ್ದಿದ್ದವು. ಆಕೆಯ ಶವವೂ ಎಲ್ಲಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಜೊತೆಗೆ ಆಕೆಯ ಕುಟುಂಬವೂ ಈ ಕುರಿತು ಏನನ್ನೂ ಹೇಳಿರಲಿಲ್ಲ.
ಆದರೆ ಈಗ ಆಕೆಯ ಸಾವಿನ ಸುದ್ದಿ ಸುಳ್ಳು ಎಂದು ತಿಳಿದುಬಂದಿದೆ. ಈ ಕುರಿತು ಖುದ್ದು ಆಕೆಯೇ ಖಚಿತಪಡಿಸಿದ್ದಾಳೆ. ಹಾಗಾದರೆ ಆಕೆ ಸಾವಿನ ನಾಟಕ ಮಾಡಿದ್ದೇಕೆ.? ಇದರ ಹಿಂದಿನ ಅಸಲಿ ಸತ್ಯವೇನು ಅನ್ನೋದನ್ನು ತಿಳಿದುಕೊಳ್ಳೋಣ.

ಆಕೆ ಖುದ್ದು ನಾನು ಮೃತಪಟ್ಟಿಲ್ಲ ಎಂದು ತನ್ನ ಇನ್ಸ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋಗಳ ಹಂಚಿಕೊಂಡಿದ್ದಾಳೆ. ನಿಮ್ಮೆಲ್ಲರೊಂದಿಗೆ ಮಹತ್ವದ ವಿಷಯವನ್ನು ಹಂಚಿಕೊಳ್ಳಲು ನಾನು ಬಯಸಿದ್ದೇನೆ - ನಾನು ಇಲ್ಲಿದ್ದೇನೆ, ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ನನಗೆ ಇರಲಿಲ್ಲ, ಎಂದು ಪೂನಂ ಪಾಂಡೆ ಪೋಸ್ಟ್ ಮಾಡಿದ್ದಾರೆ, ಆಕೆಯ ಸಾವಿನ ಸುದ್ದಿ ಹರಿದಾಡಿದ ಬಳಿಕ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮಾತನಾಡುತ್ತಾ, ಪೂನಂ ಪಾಂಡೆ ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, "ಇದು ಈ ರೋಗವನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಜ್ಞಾನದ ಕೊರತೆಯಿಂದ ಉದ್ಭವಿಸಿದ ಸಾವಿರಾರು ಮಹಿಳೆಯರ ಜೀವವನ್ನು ಬಲಿ ತೆಗೆದುಕೊಂಡಿದೆ. ಇತರ ಕೆಲವು ಕ್ಯಾನ್ಸರ್‌ಗಳಿಗಿಂತ ಭಿನ್ನವಾಗಿ, ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಬಲ್ಲದು. HPV ಲಸಿಕೆ ಮತ್ತು ಆರಂಭಿಕ ಪತ್ತೆ ಪರೀಕ್ಷೆಗಳಲ್ಲಿ ಪ್ರಮುಖವಾಗಿದೆ'' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
"ಈ ಕಾಯಿಲೆಯಿಂದ ಯಾರೂ ತಮ್ಮ ಜೀವನವನ್ನು ಕಳೆದುಕೊಳ್ಳದಂತೆ ಮಾಡಲು ನಮ್ಮಲ್ಲಿ ಮಾರ್ಗಗಳಿವೆ. ನಿರ್ಣಾಯಕ ಅರಿವಿನೊಂದಿಗೆ ಒಬ್ಬರಿಗೊಬ್ಬರು ಅಧಿಕಾರ ನೀಡೋಣ ಮತ್ತು ಪ್ರತಿ ಮಹಿಳೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳೋಣ. ಏನು ಮಾಡಬಹುದೆಂಬುದನ್ನು ಆಳವಾಗಿ ಪರಿಶೀಲಿಸಲು ಬಯೋದಲ್ಲಿನ ಲಿಂಕ್‌ಗೆ ಭೇಟಿ ನೀಡಿ. ಒಟ್ಟಾಗಿ, ರೋಗದ ವಿನಾಶಕಾರಿ ಪರಿಣಾಮವನ್ನು ಕೊನೆಗೊಳಿಸಲು ಮತ್ತು ತರಲು ಶ್ರಮಿಸೋಣ" ಎಂದು ಪೂನಂ ಪಾಂಡೆ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ.
ಕ್ಯಾನ್ಸರ್ ಕುರಿತ ಎಚ್ಚರಿಕೆಗಾಗಿ ಸಾವಿನ ನಾಟಕವಾಡಿದ ಪೂನಂ
ಗಭಕಂಠ ಕ್ಯಾನ್ಸರ್ ಕುರಿತಂತೆ ಜಾಗೃತಿ ಮೂಡಿಸಲು ಆಕೆ ಸಾವಿನ ನಾಟಕವಾಡಿರುವುದು ದೃಢವಾಗಿದೆ. ಈ ಮೂಲಕ ಜನರ ಗಮನ ಸೆಳೆದು ಕ್ಯಾನ್ಸರ್ ಕುರಿತು ಜನರಲ್ಲಿ ಅರಿವು ಮೂಡಿಸಲು ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ ನಿನ್ನೆ ಮಂಡಿಸಲಾದ ಕೇಂದ್ರ ಬಜೆಟ್ 2024 ರ ಭಾಗವಾಗಿ 9 ರಿಂದ 14 ವರ್ಷ ವಯಸ್ಸಿನ ಹುಡುಗಿಯರಿಗೆ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಲಸಿಕೆಯನ್ನು ಕೇಂದ್ರೀಕರಿಸುವ ಸರ್ಕಾರದ ಯೋಜನೆಗಳನ್ನು ಘೋಷಿಸಿದರು. ಇದಾದ ಬಳಿಕ ಪೂನಂ ಪಾಂಡೆಯ ಸಾವಿನ ಸುದ್ದಿ ಹೊರಬಿದ್ದಿತ್ತು.
ಆದರೆ ಆಕೆ ಕೇವಲ ಜಾಗೃತಿ ಮೂಡಿಸುವ ಸಲುವಾಗಿ ಈ ರೀತಿ ಮಾಡಿರುವುದು ತಿಳಿದುಬಂದಿದೆ. ಆದರೆ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಅವರ ಕಾರ್ಯ ಮೆಚ್ಚುವಂತಹದ್ದಾಗಿದ್ದು, ಅದಕ್ಕಾಗಿ ಸಾವಿನ ನಾಟಕವಾಡಿರುವುದು ಅನೇಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಶುಕ್ರವಾರ, ಪೂನಂ ಪಾಂಡೆ ಸಾವಿನ ಸುದ್ದಿಯ ಹೊರಬಿದ್ದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಜೊತೆಗೆ ಆಘಾತ ಹುಟ್ಟುಹಾಕಿತ್ತು. ಹಲವರು ಅಂದಿನಿಂದಲೇ ಇದು ಸುಳ್ಳು ಸುದ್ದಿ ಎನ್ನುತ್ತಿದ್ದರು. ಅಲ್ಲದೆ ಆಕೆಯ ಖಾತೆಯಲ್ಲೂ ಹಿಂದಿನ ದಿನ ಪಾರ್ಟಿಯಲ್ಲಿ ಭಾಗಿಯಾಗಿದ್ದ ವಿಡಿಯೋ ಸಹ ಇತ್ತು. ಹೀಗಾಗಿ ಆಕೆಯ ಸಾವನ್ನು ಯಾರು ನಂಬುವಂತೆ ಇರಲಿಲ್ಲ. ಆದರೆ ಇಂದು ಈ ಎಲ್ಲಾ ಪ್ರಶ್ನೆಗಳಿಗೂ ಕೊನೆಗೂ ಅವರೇ ಉತ್ತರ ನೀಡಿದ್ದು ನಾನು ಮೃತಪಟ್ಟಿಲ್ಲ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.



Click it and Unblock the Notifications

