Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
32ನೇ ವರ್ಷಕ್ಕೆ ಕೋಟಿ ಕೋಟಿ ಸಂಪತ್ತು ಗಳಿಸಿದ್ದ ಪೂನಂ ಪಾಂಡೆ..! ಆಕೆ ಆಸ್ತಿ ಎಷ್ಟಿದೆ ಗೊತ್ತಾ?
ಬಾಲಿವುಡ್ ನಟಿ ಪೂನಂ ಪಾಂಡೆ ಮೃತಪಟ್ಟ ಸುದ್ದಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕೇವಲ 32ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವುದು ಹಲವರಿಗೆ ನಂಬಲಸಾಧ್ಯ ಸುದ್ದಿಯಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಪಾರ್ಟಿಯೊಂದರಲ್ಲಿ ಅವರು ಕಾಣಿಸಿಕೊಂಡಿದ್ದರು. ಇದಾಗಿಯೂ ಹಠಾತ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಸುದ್ದಿ ಹೊರಬಿದ್ದಿತು.
ಪೂನಂ ಪಾಂಡೆ ವಿವಾದಗಳಿಂದ ಸುದ್ದಿಯಾಗುತ್ತಿದ್ದರೂ ಆಕೆಯ ಪ್ರಸಿದ್ಧಿ ಮಾತ್ರ ಕಡಿಮೆಯಾಗಿರಲಿಲ್ಲ. ಕನ್ನಡದ ಸಿನಿಮಾಗಳಲ್ಲೂ ಆಕೆ ಕಾಣಿಸಿಕೊಂಡಿದ್ದರು. ಹಳ್ಳಿ ಹೈದ ಪ್ಯಾಟೇಗ್ ಬಂದ ಖ್ಯಾತಿಯ ರಾಜೇಶ್ ನಟನೆಯ ಸಿನಿಮಾ ಒಂದರಲ್ಲಿ ಅವರು ಕಾಣಿಸಿಕೊಂಡಿದ್ದರು.

ಇಷ್ಟೆಲ್ಲಾ ಖ್ಯಾತಿಯ ಬಳಿಕವೂ ಆಕೆಗೆ ಕ್ಯಾನ್ಸರ್ ಕಾಡತೊಡಗಿತ್ತು. ಜೊತೆಗೆ ಆಕೆಯ ವೈಯಕ್ತಿಕ ಜೀವನ ಸಹ ಏರಿಳಿತದಿಂದಲೇ ಕೂಡಿತ್ತು. ಅಲ್ಲದೆ ಆಕೆ ಹುಟ್ಟು ಶ್ರೀಮಂತೆ ಅಲ್ಲದಿದ್ದರೂ ಆಕೆಯ ಒಟ್ಟು ಸಂಪತ್ತು ಎಷ್ಟು ತಿಳಿದರೆ ನಿಮಗೂ ಅಚ್ಚರಿಯಾಗುತ್ತದೆ. ಪೂನಂ ಬಳಿ ಎಷ್ಟು ಸಂಪತ್ತು ಇತ್ತು, ಅದನ್ನು ಗಳಿಸಲು ಏನು ಮಾಡಿದ್ದಾಳೆ ಎಂಬ ಪ್ರಶ್ನೆಗಳು ಎಲ್ಲರ ಮನದಲ್ಲಿ ಮೂಡುತ್ತಿವೆ. ಇದಲ್ಲದೇ ಪೂನಂ ಪಾಂಡೆ ಪ್ರೇಮ ಜೀವನ ಹೇಗಿತ್ತು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಮದುವೆಯಾದ 12 ದಿನಗಳಲ್ಲಿ ಬೇರ್ಪಟ್ಟರು
ಪೂನಂ ತನ್ನ ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆಯನ್ನು 2020 ರಲ್ಲಿ ವಿವಾಹವಾದರು. ಆದರೆ ಅವರು ಹನಿಮೂನ್ ಮುಗಿಸುವ ಹಂತದಲ್ಲೇ ದಾಂಪತ್ಯವೂ ಮುರಿದಿತ್ತು. ಆಕೆ ಮದುವೆಯಾದ 12 ದಿನಗಳಲ್ಲೇ ಆಕೆ ಹಾಗೂ ಸ್ಯಾಮ್ ಬಾಂಬೆ ಬೇರೆಯಾಗುತ್ತಿರುವ ಸುದ್ದಿಯೂ ಬಂದಿತ್ತು.
ಪೂನಂ ಪಾಂಡೆ ಕೋಟ್ಯಂತರ ರೂಪಾಯಿ ಒಡತಿ
ಮಾಧ್ಯಮ ವರದಿಗಳ ಪ್ರಕಾರ ಪೂನಂ ಪಾಂಡೆ ಹೆಸರಿನಲ್ಲಿ ಸುಮಾರು 52 ಕೋಟಿ ರೂಪಾಯಿ ಆಸ್ತಿ ಇದೆ. ಪೂನಂ ಚಿತ್ರಗಳಿಂದಲೂ ಉತ್ತಮ ಮೊತ್ತ ಗಳಿಸಿದ್ದಾರೆ. ನಶಾ, ಲವ್ ಕಿ ಪ್ಯಾಶನ್, ಮಾಲಿನಿ ಅಂಡ್ ಕಂಪನಿ, ಆ ಗಯಾ ಹೀರೋ ಮತ್ತು ದಿ ಜರ್ನಿ ಆಫ್ ಕರ್ಮ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿ ಕೋಟ್ಯಂತರ ರೂಪಾಯಿ ಗಳಿಸಿದರು. ಇದಲ್ಲದೆ, ಅವರು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು. ಟೋಟಲ್ ನಾದನಿಯಾನ್ ಮತ್ತು ಪ್ಯಾರ್ ಮೊಹಬ್ಬತ್ ಸ್ಸಾಶ್‌ನಲ್ ಹಾಗೂ ಲಾಕಪ್ ಕಾರ್ಯಕ್ರಮ ಅವರ ಕೊನೆಯ ವೇದಿಕೆಯಾಗಿತ್ತು.
ದೇಶದ ಅತ್ಯಂತ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಪೂನಂ ಪಾಂಡೆ ಕೂಡ ಭಾಗವಹಿಸಿದ್ದರು ಮತ್ತು ಅದಕ್ಕಾಗಿ ಉತ್ತಮ ಮೊತ್ತವನ್ನು ಪಡೆದರು. ಅವರು ಭೋಜ್‌ಪುರಿ ಚಲನಚಿತ್ರ ಅದಾಲತ್‌ನಲ್ಲಿ ಕೆಲಸ ಮಾಡಿದರು
ಲಾಕಪ್ ರಿಯಾಲಿಟಿ ಶೋನಲ್ಲಿ ಪೂನಂ ಪ್ರತಿ ವಾರ ಸುಮಾರು 3 ಲಕ್ಷ ರೂ. ಸಂಭಾವನೆ ಪಡೆದರು ಎನ್ನಲಾಗಿದೆ. ಪೂನಂ ತನ್ನದೇ ಆದ ಅಪ್ಲಿಕೇಶನ್ ಅನ್ನು ಸಹ ಹೊಂದಿದ್ದಳು, ಇದು ಸುಮಾರು 32 ಲಕ್ಷ ಪಾವತಿಸಿದ ಚಂದಾದಾರರನ್ನು ಹೊಂದಿತ್ತು ಮತ್ತು ಪ್ರಸ್ತುತ ಪೂನಮ್ ಈ ಅಪ್ಲಿಕೇಶನ್‌ನಿಂದ ಹೆಚ್ಚು ಗಳಿಸುತ್ತಿದ್ದರು.
ಪೂನಂ ಐಷಾರಾಮಿ ಜೀವನ ನಡೆಸುತ್ತಿದ್ದರು
ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ 4 ಅಂತಸ್ತಿನ ಕಟ್ಟಡದಲ್ಲಿ ಪೂನಂ ಪಾಂಡೆ ನೆಲೆಸಿದ್ದರು. ಅವರ ಬಳಿ ಬಿಎಂಡಬ್ಲ್ಯು ಕಾರು, ಹಾಗೂ ಐಷಾರಾಮಿ ಕಾರುಗಳು ಸಹ ಇದ್ದವು. ಪೂನಂ ಪಾಂಡೆ ಅವರ ವ್ಯವಹಾರವನ್ನು ನಿರ್ವಹಿಸಲು 27 ಸಿಬ್ಬಂದಿ ಸಹ ಇದ್ದರು. ಇದಲ್ಲದೆ, ಪೂನಂ ಅವರ ಮನೆಯಲ್ಲಿ ಮೂವರು ಬಾಣಸಿಗರು ಅಡುಗೆಗಾಗಿ ನೇಮಕವಾಗಿದ್ದರು. ಒಟ್ಟಾರೆಯಾಗಿ, ಪೂನಂ ಪಾಂಡೆ ಕೋಟಿ ಮೌಲ್ಯದ ಸಂಪತ್ತನ್ನು ಹೊಂದಿದ್ದರು.



Click it and Unblock the Notifications

