Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತೇನೆ ಎಂದಿದ್ದ ಪೂನಂ ಪಾಂಡೆ..! ಸುದ್ದು ಮಾಡಿತ್ತು ಈ 6 ವಿವಾದ
ಪೂನಂ ಪಾಂಡೆ, ಬಾಲಿವುಡ್ ನಟಿ, ರೂಪದರ್ಶಿ ಕೇವಲ 32ನೇ ವಯಸ್ಸಿನಲ್ಲೇ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಶುಕ್ರವಾರ ಮೃತಪಟ್ಟಿರುವುದಾಗಿ ಆಕೆಯ ಮ್ಯಾನೇಜರ್ ಮಾಹಿತಿ ಹಂಚಿಕೊಂಡಿದ್ದಾರೆ. ಆಕೆ ಬಾಲಿವುಡ್‌ನಲ್ಲಿ ಹತ್ತಾರು ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದಲ್ಲೂ ಒಂದೆರಡು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಆದರೆ ಆಕೆ ಬದುಕಿದ್ದಾಗ ನಟನೆಗಿಂತಲೂ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದರು. ಹೌದು ಆಕೆ ಹೋದಲ್ಲಿ ಬಂದಲ್ಲಿ ವಿವಾದ ಮಾಡಿಕೊಳ್ಳುತ್ತಲೇ ಇದ್ದರು. ಅದರಲ್ಲೂ ಕೆಲವೊಂದು ಇಡೀ ದೇಶದಲ್ಲಿ ಸದ್ದು ಮಾಡಿತ್ತು. ಅಂತಹ ಕೆಲವು ವಿವಾದಗಳನ್ನು ಇಲ್ಲಿ ನೀಡಿದ್ದೇವೆ ನೋಡಿ.

'ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುವೆ'
2011ರ ಕ್ರಿಕೆಟ್ ವಿಶ್ವಕಪ್ ಫೈನಲ್‌ಗೆ ಮುನ್ನ ವೀಡಿಯೊ ಸಂದೇಶದಲ್ಲಿ ಭಾರತವು ಫೈನಲ್ ಪಂದ್ಯವನ್ನು ಗೆದ್ದರೆ ತಾನು ಬೆತ್ತಲಾಗುತ್ತೇನೆ ಎಂದು ಹೇಳಿಕೆ ನೀಡಿ ವಿವಾಸ ಎಬ್ಬಿಸಿದ್ದರು. ಆಕೆಯ ದಿಟ್ಟ ಮಾತು ಎಲ್ಲರ ಗಮನ ಸೆಳೆಯಿತು. ಈ ವಿಶ್ವಕಪ್‌ನಲ್ಲಿ ಭಾರತ ಸಹ ಗೆದ್ದು ಇತಿಹಾಸ ಬರೆದಿತ್ತು. ಆದರೆ ಬಿಸಿಸಿಐ ಆಕೆ ಬೆತ್ತಲಾಗಲು ಅವಕಾಶ ನೀಡಲಿಲ್ಲ. ಈ ಘಟನೆ ಬಳಿಕ ಆಕೆ ದೇಶದಲ್ಲಿ ಫೇಮಸ್ ಆಗಿದ್ದರು.
ಬಾತ್ ರೂಮ್ ವಿಡಿಯೋ ಲೀಕ್
ಪೂನಂ ಪಾಂಡೆ ತನ್ನ ಬೋಲ್ಡ್ ಲುಕ್‌ನಿಂದಲೇ ಸಾಕಷ್ಟು ಹೆಸರು ಮಾಡಿದ್ದರು. ಆದ್ರೆ ಒಮ್ಮೆ ಆಕೆಯ ಬಾತ್‌ರೂಮ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿ ಭಾರೀ ಚರ್ಚೆ ಹುಟ್ಟುಹಾಕಿತ್ತು. ಆಕೆ ಸ್ನಾನ ಮಾಡುವಾಗ ಡ್ಯಾನ್ಸ್ ಮಾಡುತ್ತಿದ್ದ ವಿಡಿಯೋ ಅದಾಗಿತ್ತು. ಬಳಿಕ ಈ ವಿಡಿಯೋವನ್ನು ಯೂಟ್ಯೂಬ್ ಸೇರಿ ಹಲವು ಮಾಧ್ಯಮಗಳು ನಿರ್ಬಂಧಿಸಿದವು.
ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಂಧನ
ಕೊರೊನಾ ಸಮಯದಲ್ಲಿ ಸ್ವಯಂಪ್ರೇರಿತ ಲಾಕ್‌ಡೌನ್ ಜಾರಿಯಲ್ಲಿದ್ದಾಗ ಪೂನಂ ಪಾಂಡೆ ನಿಯಮ ಮುರಿದಿದ್ದರು. ರಾತ್ರೋರಾತ್ರಿ ಪತಿಯ ಜೊತೆ ವಾಕಿಂಗ್ ಹೊರಟು ಚರ್ಚೆಗೆ ಕಾರಣರಾಗಿದ್ದಲ್ಲದೆ, ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾದರು.
ಗಂಡನ ಮೇಲೆ ಹಲ್ಲೆ ಪ್ರಕರಣ
ಪೂನಂ ಪಾಂಡೆ ಸೆಪ್ಟೆಂಬರ್ 2020ರಲ್ಲಿ ಸ್ಯಾಮ್ ಬಾಂಬೆ ಅವರನ್ನು ವಿವಾಹವಾದರು. ಆದರೆ ಕೆಲವೇ ದಿನಗಳಲ್ಲಿ ಅವರು ಕಿರುಕುಳದ ಆರೋಪ ಮಾಡುವ ಮೂಲಕ ಎಲ್ಲರಿಗೂ ಆಘಾತ ನೀಡಿದರು. ಆಗಿನ್ನು ದಂಪತಿಗಳು ಹನಿಮೂನ್‌ಗಾಗಿ ಗೋವಾದಲ್ಲಿದ್ದರು, ಪೂನಂ ಸ್ಯಾಮ್ ವಿರುದ್ಧ ಎಫ್‌ಐಆರ್ ದಾಖಲಿಸಿದರು ಮತ್ತು ತನಗೆ ಕಿರುಕುಳ, ಬೆದರಿಕೆ ಮತ್ತು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
'ಪಾಂಡೆ ಆಪ್' ಪ್ರಾರಂಭಿಸಿದ ನಟಿ
2017ರಲ್ಲಿ, ಪೂನಂ ಪಾಂಡೆ ತಮ್ಮದೇ ಆದ ಅಪ್ಲಿಕೇಶನ್, 'ಪಾಂಡೆ' ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು. ವರದಿಯ ಪ್ರಕಾರ, ಮಾಡೆಲ್ ತನ್ನ ಬೋಲ್ಡ್ ಚಿತ್ರಗಳನ್ನು ಈ ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಮಾಡುತ್ತಿದ್ದರು. ಆದರೆ, ಆ್ಯಪ್ ಅನ್ನು ಕೇವಲ ಒಂದು ಗಂಟೆಯಲ್ಲಿ ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿತ್ತು.
ಸೊಸೈಟಿಯಿಂದ ಹೊರಹಾಕಿದ್ದ ಜನ
ತನ್ನ ಕುಟುಂಬದ ಜೊತೆ ಸೊಸೈಟಿಯಲ್ಲಿ ವಾಸವಿದ್ದ ಆಕೆಯನ್ನು ಆಡಳಿತ ಮಂಡಳಿ ಕುಟುಂಬ ಸಮೇತ ಹೊರಹಾಕಿತ್ತು. ಆಕೆ ಈಗಿನ್ನು ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಳು, ಆದರೆ ಆಕೆಯ ಬೋಲ್ಡ್ ಫೋಟೋಗಳು, ವಿಡಿಯೋಗಳ ಕಾರಣದಿಂದಾಗಿ ಸೊಸೈಟಿಯಿಂದ ಆಕೆಯನ್ನು ಹೊರಹಾಕಲಾಗಿತ್ತು. ಈ ಕುರಿತು ಆಕೆ ಲಾಕ್‌ಅಪ್ ಎಂಬ ರಿಯಾಲಿಟಿ ಶೋನಲ್ಲಿ ಹೇಳಿಕೊಂಡಿದ್ದರು.



Click it and Unblock the Notifications

