Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ತಾಯಿ ಬಳಸಿದ ತಟ್ಟೆ ಪುತ್ರನ ಕಣ್ಣರಳಿಸಿತು..! ಇದು ತಾಯಿ ಪ್ರೀತಿಯ 25 ವರ್ಷದ ಕಥೆ..!
ನಮ್ಮ ಮನೆಯಲ್ಲಿ ಕೆಲವೊಂದು ವಸ್ತುಗಳು ನಮ್ಮ ಭಾವನೆಗಳೊಂದಿಗೆ ಬೆರೆತುಕೊಂಡಿರುತ್ತೆ. ಕೆಲವೊಂದು ನಮ್ಮ ಅಮ್ಮ, ಅಪ್ಪ ಅಣ್ಣ ತಂಗಿ ಬಳಸಿದ ವಸ್ತುಗಳು ನಮಗೆ ಅಮೂಲ್ಯವಾಗಿಬಿಡುತ್ತವೆ. ಅದ್ರಲ್ಲೂ ತಂದೆ ತಾಯಿ ಬಳಸಿದ ವಸ್ತುಗಳು ಅವರು ನಮ್ಮನ್ನು ಬಿಟ್ಟು ಹೋದ ಬಳಿಕ ನಮಗೆ ಅವರೊಂದಿಗೆ ಇನ್ನೂ ಇರುವ ಭಾವನೆ ಮೂಡಿಸುತ್ತವೆ. ಅವರು ಬಳಸಿದ ವಸ್ತುಗಳ ನೋಡಿದಾಗ ಅವರ ನೆನಪುಗಳು ಹಸಿ ಹಸಿಯಾಗಿ ನಮ್ಮ ಮುಂದೆ ಬರುತ್ತವೆ.
ಇದು ಎಲ್ಲರ ಮನೆಯ ಸಾಮಾನ್ಯ ಸಂಗತಿ. ಏಕೆಂದರೆ ಎಲ್ಲರ ಮನೆಯಲ್ಲೂ ಈ ರೀತಿಯ ಕೆಲವೊಂದು ಸಣ್ಣ ಪುಟ್ಟ ವಸ್ತುಗಳು ಹಿರಿಯರು ಬಳಸಿದ ವಸ್ತುಗಳು ಈಗಲು ಇವೆ. ಅದು ಹಳೆಯ ನೆನಪುಗಳ ಹೊತ್ತ ದೊಡ್ಡ ಬುತ್ತಿಗಳು. ಅದನ್ನು ಎಷ್ಟು ಜೋಪಾನ ಮಾಡಿದರೂ ಕಲವರಿಗೆ ಸಾಲದು.

ಇದೇ ರೀತಿ ಇಲ್ಲೊಬ್ಬರು ಹಂಚಿಕೊಂಡಿರುವ ಪೋಸ್ಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಸಾವಿರಾರು ಜನರ ನೆನಪಿನ ಬುತ್ತಿ ತೆರೆದುಕೊಂಡಿದೆ. ಎಕ್ಸ್ ಬಳಕೆದಾರರೊಬ್ಬರು ಒಂದು ತಟ್ಟೆಯ ಫೋಟೋ ಹಂಚಿಕೊಂಡು ಈ ತಟ್ಟೆ ಹಿಂದಿರುವ ಭಾವನಾತ್ಮಕ ಕಥೆ ವಿವರಿಸಿದ್ದಾರೆ. ಈ ಕಥೆ ಕೇಳಿದ ಮಂದಿ ಭಾವುಕರಾಗಿದ್ದಾರೆ.
ವಿಕ್ರಮ್ ಎಂಬುವರು ಒಂದು ತಟ್ಟೆಯ ಫೋಟೋ ಹಂಚಿಕೊಂಡು ಆ ಕುರಿತು ಬರೆದುಕೊಂಡಿದ್ದರು. ಈ ತಟ್ಟೆ ಅವರ ತಾಯಿಯದ್ದಂತೆ. ಅದರಲ್ಲಿಯೇ ಅವರು ಊಟ ಮಾಡುತ್ತಿದ್ದರಂತೆ. ಆದ್ರೆ ಇದಕ್ಕೂ ಮಿಗಿಲಾದ ಒಂದು ಕಥೆ ಈ ತಟ್ಟೆ ಹಿಂದಿದೆ. ವಿಕ್ರಮ್ ಅವರ ತಾಯಿ ಬದುಕಿದ್ದಾಗ ಇದೇ ತಟ್ಟೆಯಲ್ಲಿ ಊಟ, ತಿಂಡಿ ಮಾಡುತ್ತಿದ್ದರಂತೆ. ಈ ತಟ್ಟೆ ಬಿಟ್ಟು ಅವರು ಎಂದಿಗೂ ಊಟ ಮಾಡಿದವರೇ ಅಲ್ಲವಂತೆ.
ಆದ್ರೆ ಈ ತಟ್ಟೆಯನ್ನ ಅವರು ಬೇರೆ ಯಾರಿಗೂ ಊಟ ಮಾಡಲು ನೀಡುತ್ತಿರಲಿಲ್ಲವಂತೆ, ಪುತ್ರ ವಿಕ್ರಮ್ ಹಾಗೂ ವಿಕ್ರಮ್‌ನ ಸೊಸೆಗೆ ಮಾತ್ರ ಈ ತಟ್ಟೆ ಬಳಸಲು ಅನುಮತಿಯಂತೆ. ಬೇರೆ ಯಾರು ಸಹ ಈ ತಟ್ಟೆ ಮುಟ್ಟಬಾರದು ಎಂದು ತಾಯಿ ನಿಯಮ ಮಾಡಿದ್ದರಂತೆ. ಆದ್ರೆ ವಿಕ್ರಮ್ ತಾಯಿ ತೀರಿಕೊಂಡ ಬಳಿಕ ಈ ತಟ್ಟೆಯ ಹಿಂದಿನ ಕಥೆ ಅವರಿಗೆ ತಿಳಿಯಿತ್ತಂತೆ.
ಅಚ್ಚರಿ ಎಂದರೆ ಈ ತಟ್ಟೆಯನ್ನ ಸ್ವತಃ ವಿಕ್ರಮ ಆತ 7ನೇ ತರಗತಿಯಲ್ಲಿ ಸ್ಪರ್ಧೆಯೊಂದರಲ್ಲಿ ಗೆದ್ದ ತಟ್ಟೆಯಾಗಿತ್ತಂತೆ. ಆದ್ರೆ ಈ ಬಗ್ಗೆ ವಿಕ್ರಮ್‌ಗೆ ತಿಳಿದಿರಲಿಲ್ಲ. ಏಕೆಂದರೆ 7ನೇ ತರಗತಿಯಲ್ಲಿ ಗೆದ್ದ ತಟ್ಟೆಯನ್ನ ತಾತಿ ಇಷ್ಟೊಂದು ಜೋಪಾನ ಮಾಡಿ ನಿತ್ಯ ಅದರಲ್ಲೇ ಊಟ ಮಾಡುತ್ತಿರುವುದು ವಿಕ್ರಮ್ ಅರಿವಿಗೆ ಬರಲಿಲ್ಲವಂತೆ. ಈ ವಿಚಾರವನ್ನು ವಿಕ್ರಮ್ ಸಹೋದರಿ ಹೇಳಿದ್ದರಂತೆ. ಆದ್ರೆ ತಾಯಿ ಎಂದಿಗೂ ಈ ತಟ್ಟೆ ನೀವು ಸ್ಪರ್ಧೆಯಲ್ಲಿ ಗೆದ್ದು ಪ್ರಶಸ್ತಿಯಾಗಿ ಬಂದಿದ್ದ ತಟ್ಟೆ ಎಂದು ಹೇಳಲೇ ಇಲ್ಲವಂತೆ.
ಈ ಕುರಿತು ವಿಕ್ರಮ್ ಫೇಸ್‌ಬುಕ್‌ನಲ್ಲಿ ತಟ್ಟೆಯ ಫೋಟೋದೊಂದಿಗೆ ಈ ಕಥೆ ಹಂಚಿಕೊಂಡಿದ್ದಾರೆ. ಇದು ಅಮ್ಮನ ತಟ್ಟೆ.. ಕಳೆದ 2 ದಶಕಗಳಿಂದ ಅವಳು ಇದರಲ್ಲಿ ತಿನ್ನುತ್ತಿದ್ದಳು.. ಇದು ಸಣ್ಣ ತಟ್ಟೆ.. ಅವಳು ತನ್ನನ್ನು ಬಿಟ್ಟು ನನಗೆ ಮತ್ತು ಚುಲ್ಬುಳಿಗೆ (ಶೃತಿ, ನನ್ನ ಸೊಸೆ) ಮಾತ್ರ ತಿನ್ನಲು ಅವಕಾಶ ನೀಡಿದ್ದಳು.. ಅವಳ ನಿಧನದ ನಂತರ ಈ ಪ್ಲೇಟ್ ನನ್ನ 7 ನೇ STD ಯಲ್ಲಿ ಗೆದ್ದ ಬಹುಮಾನ ಎಂದು ನನ್ನ ಸಹೋದರಿಯ ಮೂಲಕ ನನಗೆ ತಿಳಿದಿತ್ತು.. ಅಂದರೆ 1999 ರಲ್ಲಿ. ಈ ಎಲ್ಲಾ 24 ವರ್ಷಗಳಲ್ಲಿ ನಾನು ಗೆದ್ದ ಈ ತಟ್ಟೆಯಿಂದ ಅವಳು ಆಹಾರವನ್ನು ಸೇವಿಸಿದ್ದಳು .. ಮತ್ತು ಅವಳು ನನಗೆ ಇದನ್ನು ಹೇಳಲೇ ಇಲ್ಲ 😭😭😭😭 maaaaaa miss you maa 💔 ಎಂದು ಬರೆದಿದ್ದಾರೆ.
ಈ ಕಥೆ ನೋಡಿದ ಮಂದಿ ನಿಜಕ್ಕೂ ಭಾವುಕರಾಗಿದ್ದಾರೆ. ಮಗನ ಮೇಲಿದ್ದ ತಾಯಿಯ ಪ್ರೀತಿ ಕಂಡು ಮರುಗಿದ್ದಾರೆ. ಬದುಕಿದ್ದಾಗ ಆಕೆ ತನ್ನ ಮಗನನ್ನು ಅದೆಷ್ಟು ಪ್ರೀತಿಸಿರಬಹುದು ಎಂದು ಅಚ್ಚರಿ ಹೊರಹಾಕಿದ್ದಾರೆ. ಇದಕ್ಕೆ ಹೇಳೋದು ತಾಯಿ ಪ್ರೀತಿಗಿಂತ ಮಿಗಿಲಾದ ಮತ್ತೊಂದು ವಸ್ತು ಏನಾದರು ಇದೆಯೇ..?



Click it and Unblock the Notifications