Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಿತೃಪಕ್ಷ 2025: ನಿಮ್ಮ ರಾಶಿಯ ಪ್ರಕಾರ ಏನು ದಾನ ಮಾಡಬೇಕು? ಪಿತೃ ದೋಷ ನಿವಾರಣೆಗೆ ಹೀಗೆ ಮಾಡಿ
ಪಿತೃಪಕ್ಷದಲ್ಲಿ ನಿಮ್ಮ ರಾಶಿಯ ಪ್ರಕಾರ ದಾನ ಮಾಡಿ, ಪಿತೃಗಳ ಆಶೀರ್ವಾದ ಪಡೆಯಿರಿ. ಈ ವಸ್ತು ದಾನ ಮಾಡಿದರೆ ಅದೃಷ್ಟದ ಬಾಗಿಲು ತೆರೆಯಲಿದೆ. ಪಿತೃಪಕ್ಷವು (Pitru Paksha 2025) ನಮ್ಮ ಪೂರ್ವಜರ ಸ್ಮರಣೆಗೆ ಮೀಸಲಾದ ಪವಿತ್ರ ಸಮಯ. ಈ ಕಾಲಘಟ್ಟ ಪಿಂಡ ದಾನ, ತರ್ಪಣ, ಶ್ರಾದ್ಧ ಇತ್ಯಾದಿ ವಿಧಿಗಳನ್ನು ಮಾಡಲಾಗುವುದು. ಇದರಿಂದ ಪಿತೃಗಳ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಧಾರ್ಮಿಕ ಗ್ರಂಥಗಳು ಹೇಳುತ್ತವೆ. ನಮ್ಮ ಪೂರ್ವಜರೊಂದಿಗೆ ನಮ್ಮ ಸಂಬಂಧವು ಸದಾಕಾಲ ಇರುತ್ತದೆ. ಅವರ ಅನುಗ್ರಹವೇ ನಮ್ಮ ಜೀವನದ ಸಮೃದ್ಧಿ ಹಾಗೂ ಶ್ರೇಯಸ್ಸಿಗೆ ಕಾರಣ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪಿತೃಪಕ್ಷದಲ್ಲಿ ರಾಶಿ ಅನುಸಾರ ದಾನ (Pitru Paksha Daan) ಮಾಡಿದರೆ, ಅದು ದ್ವಿಗುಣ ಫಲ ನೀಡುತ್ತದೆ. ಇದರಿಂದ ಪಿತೃಗಳಿಗೂ ಶಾಂತಿ ದೊರೆತು, ನಮ್ಮ ಜೀವನದಲ್ಲೂ ಅಡ್ಡಿ-ಅವಘಡಗಳು ದೂರವಾಗಿ, ಆರ್ಥಿಕ-ಮಾನಸಿಕ ಸಮೃದ್ಧಿ ಲಭಿಸುತ್ತದೆ. ಮೇಷದಿಂದ ಮೀನ ರಾಶಿಯವರು ಪಿತ್ರಪಕ್ಷದಲ್ಲಿ ಯಾವ ದಾನ ಮಾಡಬೇಕು (Pitru Paksha Daan According To Zodiac Sign) ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ದಾನದ ಮಹತ್ವ ಗೊತ್ತಾ?
ವಿಷ್ಣು ಪುರಾಣದಲ್ಲೂ ಪಿತೃಪಕ್ಷದಲ್ಲಿ ದಾನ ಮಾಡುವ ಮಹತ್ವವನ್ನು ವಿಶೇಷವಾಗಿ ವಿವರಿಸಲಾಗಿದೆ. ಪಿತ್ರಪಕ್ಷದ ಸಮಯದಲ್ಲಿ ದಕ್ಷಿಣ ದಿಕ್ಕಿನಲ್ಲಿ ಮುಖಮಾಡಿ ದಾನ ಮಾಡಿದರೆ ಪಿತೃದೋಷ ನಿವಾರಣೆಯಾಗುತ್ತದೆ. ತಿಳಿಯದೆ ಅಥವಾ ಮರೆತು ತಮ್ಮ ಪಿತೃಗಳಿಗೆ ತರ್ಪಣ, ಶ್ರಾದ್ಧ, ದಾನ ಮುಂತಾದವುಗಳನ್ನು ಮಾಡದಿದ್ದರೆ, ಅವರಿಂದ ಶಾಪ ಬರುವ ಸಾಧ್ಯತೆ ಇದೆ. ಆದ್ದರಿಂದ, ಶ್ರದ್ಧೆಯಿಂದ ಮಾಡುವ ಪ್ರತಿಯೊಂದು ಕರ್ಮವು ಪಿತೃಗಳಿಗೆ ಸದುಗತಿಯನ್ನೂ, ನಮಗೆ ಕಲ್ಯಾಣವನ್ನೂ ತರುತ್ತದೆ. ಹೀಗಾಗಿ, ಪೂರ್ವಜರ ನೆನಪಿನಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು, ಅವರ ಹೆಸರಿನಲ್ಲಿ ಶ್ರಾದ್ಧ, ತರ್ಪಣ ದಾನ ಇತ್ಯಾದಿಗಳನ್ನು ಮಾಡಬೇಕು.
ರಾಶಿ ಪ್ರಕಾರ ಮಾಡಬೇಕಾದ ದಾನ
• ಮೇಷ ರಾಶಿ: ಭೂಮಿ ದಾನ ಅಥವಾ ಸಂಕಲ್ಪ, ದಕ್ಷಿಣೆಯೊಂದಿಗೆ ಮಣ್ಣಿನ ಹೆಂಟೆಗಳ ದಾನ. ಇಲ್ಲವೇ ಕೆಂಪು ವಸ್ತುಗಳ ದಾನ, ತಾಮ್ರ ದಾನ ಮಾಡಬೇಕು.
• ವೃಷಭ ರಾಶಿ: ಬಿಳಿ ಹಸುವಿನ ದಾನ ಅಥವಾ ಹೆಣ್ಣು ಮಗುವಿಗೆ ಖೀರ್ ತಿನ್ನಿಸಬೇಕು.
• ಮಿಥುನ ರಾಶಿ: ನೆಲ್ಲಿಕಾಯಿ, ದ್ರಾಕ್ಷಿ, ಹವಳದ ದಾನ, ಹೆಸರುಬೇಳೆ ದಾನ ಮಾಡಬೇಕು.
• ಕರ್ಕಾಟಕ ರಾಶಿ: ತೆಂಗಿನಕಾಯಿ, ಬಾರ್ಲಿ, ಹಾಲು, ಮೊಸರು, ಬೆಳ್ಳಿಯ ದಾನ ಮಾಡಬೇಕು.
• ಸಿಂಹ ರಾಶಿ: ಚಿನ್ನದ ದಾನ, ಖರ್ಜೂರದ ದಾನ, ಅನ್ನದಾನ ಮಾಡಬೇಕು.
• ಕನ್ಯಾ ರಾಶಿ: ಬೆಲ್ಲದ ದಾನ, ನೆಲ್ಲಿಕಾಯಿ, ದ್ರಾಕ್ಷಿ, ಹವಳದ ದಾನ, ಹೆಸರುಬೇಳೆ ದಾನ ಮಾಡಬೇಕು.
• ತುಲಾ ರಾಶಿ: ಖೀರ್ ದಾನ, ಹಾಲಿನಿಂದ ತಯಾರಿಸಿದ ವಸ್ತುಗಳ ದಾನ ಮಾಡಬೇಕು.
• ವೃಶ್ಚಿಕ ರಾಶಿ: ಭೂಮಿ ದಾನ, ಅಥವಾ ಸಂಕಲ್ಪ ಮತ್ತು ದಕ್ಷಿಣೆಯೊಂದಿಗೆ ಮಣ್ಣಿನ ಹೆಂಟೆಗಳ ದಾನ ಮಾಡಬೇಕು.
• ಧನು ರಾಶಿ: ರಾಮನಾಮ ಬರೆದ ವಸ್ತ್ರ, ಅಗೋಂಚಾ ದಾನ ಮಾಡಬೇಕು.
• ಮಕರ ರಾಶಿ: ಎಳ್ಳೆಣ್ಣೆ ದಾನ, ಎಳ್ಳು ದಾನ ಮಾಡಬೇಕು.
• ಕುಂಭ ರಾಶಿ: ಎಳ್ಳು ದಾನ, ಎಣ್ಣೆಯಿಂದ ತಯಾರಿಸಿದ ವಸ್ತುಗಳ ದಾನ ಮಾಡಬೇಕು.
• ಮೀನ ರಾಶಿ: ಧಾರ್ಮಿಕ ಪುಸ್ತಕಗಳಾದ ಭಗವದ್ಗೀತೆ ಇತ್ಯಾದಿಗಳ ದಾನ ಮಾಡಬೇಕು.
ಗ್ರಹಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿದ ದಾನವು ಅನಿಷ್ಟ ಗ್ರಹಗಳಿಂದ ಮುಕ್ತಿ ನೀಡುತ್ತದೆ. ಆದ್ದರಿಂದ, ಪಿತೃಪಕ್ಷದಲ್ಲಿ ರಾಶಿ ಅಥವಾ ಲಗ್ನದ ಪ್ರಕಾರ ಮಾಡಿದ ದಾನ ಎಂದಿಗೂ ವ್ಯರ್ಥವಾಗುವುದಿಲ್ಲ. ಯಾವುದೇ ವ್ಯಕ್ತಿಗೆ ತನ್ನ ದಿವಂಗತ ಪೂರ್ವಜರ ತಿಥಿ ನೆನಪಿಲ್ಲದಿದ್ದರೆ, ಅಮಾವಾಸ್ಯೆಯ ದಿನ ರಾಶಿ ಅನುಗುಣವಾಗಿ ದಾನ ಮಾಡಿ ಶ್ರಾದ್ಧ ಮತ್ತು ತರ್ಪಣವನ್ನು ಮಾಡಬೇಕು. ಇದರಿಂದ ಜೀವನದಲ್ಲಿ ಆಧ್ಯಾತ್ಮಿಕ ಶಾಂತಿ, ಆರ್ಥಿಕ ಸುಧಾರಣೆ ಮತ್ತು ಕುಟುಂಬದಲ್ಲಿ ಸಮೃದ್ಧಿ ದೊರಕುತ್ತದೆ. ಪೂರ್ವಜರ ಅನುಗ್ರಹದಿಂದ ಎಲ್ಲಾ ಅಡ್ಡಿ ಆತಂಕಗಳು ನಿವಾರಣೆಯಾಗುತ್ತವೆ.



Click it and Unblock the Notifications










