Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ 5 ವಿಚಾರಗಳೇ ಸುಂದರ ದಾಂಪತ್ಯದ ಗುಟ್ಟುಗಳು!
ಯಶಸ್ವಿ ದಾಂಪತ್ಯ ನಡೆಸಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತೆ. ಯಶಸ್ವಿ ದಾಂಪತ್ಯದಲ್ಲಿ ಹಲವಾರು ಆಯಾಮಗಳಿದೆ. ಆ ಎಲ್ಲಾ ಆಯಾಮಗಳನ್ನು ದಾಟಿ ಯಾವ ಜೋಡಿಗಳು ಮುಂದೆ ಸಾಗುತ್ತೋ ಅದನ್ನೇ ಯಶಸ್ವಿ ದಾಂಪತ್ಯ ಎಂದು ಕರೆಯಲಾಗುತ್ತದೆ.
ಆದರೆ ಈ ಆಧುನಿಕ ಯುಗದಲ್ಲಿ ಯಶಸ್ವಿ ದಾಂಪತ್ಯ ನಡೆಸುವವರ ಸಂಖ್ಯೆ ತುಂಬಾನೇ ಕಡಿಮೆ. ಮದುವೆಯಾಗಿ ಕೆಲವೇ ತಿಂಗಳುಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕುವವರನ್ನೂ ನಾವು ನೋಡಿರ್ತೀವಿ. ಈ ಪರಿಸ್ಥಿತಿಯ ಮಧ್ಯೆ ಸಂತೋಷವಾಗಿದ್ದು ಯಶಸ್ವಿ ದಾಂಪತ್ಯವನ್ನು ನಡೆಸೋದು ಹೇಗೆ? ಯಶಸ್ವಿ ದಾಂಪತ್ಯ ನಡೆಸೋದಕ್ಕೆ ಯಾವ ಯಾವ ರೀತಿ ಅಡಿಪಾಯ ಹಾಕಬೇಕು ಅನ್ನೋದನ್ನು ತಿಳಿಯೋಣ.

1. ಸಂವಹನ
ದಂಪತಿಗಳ ಮಧ್ಯೆ ಸಂವಹನ ಉತ್ತಮವಾಗಿರಬೇಕು. ಸಂವಹನ ಚೆನ್ನಾಗಿದ್ದಾಗ ಮಾತ್ರ ಆ ದಾಂಪತ್ಯ ಯಶಸ್ವಿಯಾಗೋದಕ್ಕೆ ಸಾಧ್ಯ. ಕೆಲವು ಜೋಡಿಗಳು ಮಧ್ಯೆ ಮಾತುಕತೆ ಇರುತ್ತದೆ. ಆದರೆ ಅದು ಪ್ರೀತಿ ಮಾತುಕತೆಯಲ್ಲ. ಮನೆ, ಮಕ್ಕಳು ಹಾಗೂ ಅವರ ವಿದ್ಯಾಭ್ಯಾಸದ ಬಗ್ಗೆ ಚರ್ಚೆ ನಡೆಸುತ್ತಾರೆ.
ಸಂವಹನ ಅಂದರೆ ಈ ರೀತಿಯಲ್ಲ. ಇದು ಮನೆಯಲ್ಲಿ ದಂಪತಿಗಳು ಆಡುವ ಸಾಮಾನ್ಯ ಸಂಭಾಷಣೆಯಾಗಿದೆ. ಜೋಡಿಗಳಿಬ್ಬರು ಜೊತೆಯಾಗಿ ಕುಳಿತು ಪ್ರೀತಿ ಮಾತುಗಳನ್ನು ಆಡಬೇಕು, ಒಬ್ಬರ ಮೇಲೆ ಮತ್ತೊಬ್ಬರು ಅಕ್ಕರೆ, ಪ್ರೀತಿಯನ್ನು ತೋರಬೇಕು. ಇದುವೇ ನಿಜವಾದ ಪ್ರೀತಿ ಸಂಭಾಷಣೆ.
2. ಪ್ರಾಮಾಣಿಕತೆ
ಪ್ರತಿಯೊಬ್ಬ ಮನುಷ್ಯನಲ್ಲಿಯೂ ಪ್ರಾಮಾಣಿಕತೆ ಅನ್ನೋದು ಮುಖ್ಯವಾಗಿ ಇರಬೇಕಾಗುತ್ತದೆ. ಅದ್ರಲ್ಲೂ ದಾಂಪತ್ಯದಲ್ಲಿ ಅಪ್ರಾಮಾಣಿಕತೆ ತೋರಿದರೆ ಅಂತಹ ದಾಂಪತ್ಯ ಖಂಡಿತ ಚೆನ್ನಾಗಿ ಇರೋದಿಲ್ಲ. ನಿಮ್ಮ ಮನಸ್ಸಿನ ಭಾವನೆಗಳನ್ನು ನಿಮ್ಮನ್ನು ಪ್ರೀತಿಸುವವರ ಜೊತೆಗೆ ಮುಕ್ತವಾಗಿ ಹೇಳಿಕೊಳ್ಳಿ. ಯಾವುದೇ ರೀತಿ ಮುಚ್ಚು ಮರೆ ಮಾಡಬೇಡಿ.
ಇನ್ನೂ ನೀವು ನಿಮ್ಮ ಸಂಗಾತಿಯ ಪ್ರೀತಿಗೆ ಮಾತ್ರ ಬದ್ಧವಾಗಿ ಇರಬೇಕೇ ಹೊರತು ಬೇರೆ ಯಾರದ್ದೋ ಪ್ರೀತಿಯ ಬಲೆಯಲ್ಲಿ ಬೀಳೋದಕ್ಕೆ ಹೋಗಬೇಡಿ. ಆಗ ನಿಮ್ಮ ದಾಂಪತ್ಯ ಹಾಳಾಗುತ್ತದೆ. ಹೀಗಾಗಿ ದಾಂಪತ್ಯವನ್ನು ಗಟ್ಟಿಯಾಗಿಸೋ ಮತ್ತೊಂದು ಬಂಧವೆಂದರೆ ಅದು ದಾಂಪತ್ಯ ಮಾತ್ರ.
3. ಪ್ರೀತಿ
ದಾಂಪತ್ಯದ ಮತ್ತೊಂದು ಅಡಿಪಾಯ ಎಂದರೆ ಅದು ಪ್ರೀತಿ ಮಾತ್ರ. ನೀವು ಮದುವೆಯಾಗಿರುವ ವ್ಯಕ್ತಿಯನ್ನು ನೀವು ಪ್ರೀತಿಸಬೇಕು. ಹಾಗೂ ನೀವು ಅವರಿಗಾಗಿ ಏನನ್ನು ಮಾಡೋದಕ್ಕೂ ಸಿದ್ಧವಾಗಿ ಇರಬೇಕು. ದಾಂಪತ್ಯದಲ್ಲಿ ಪ್ರೀತಿ ತುಂಬಿದ್ದಾಗ ಇಬ್ಬರ ಮಾನಸಿಕ ಆರೋಗ್ಯವು ಕೂಡ ಅಷ್ಟೇ ಚೆನ್ನಾಗಿ ಇರುತ್ತದೆ.
ಕೆಲವೊಂದು ಸಲ ಜೋಡಿಗಳಿಬ್ಬರು ಮದುವೆಯಾಗಿದ್ದರೂ ಕೂಡ ಅವರ ಮಧ್ಯೆ ಪ್ರೀತಿ ಅನ್ನೋದೇ ಇರೋದಿಲ್ಲ. ಹೆಸರಿಗಷ್ಟೇ ಆ ಜೋಡಿ ದಾಂಪತ್ಯ ನಡೆಸುತ್ತಿರುತ್ತಾರೆ ಅಷ್ಟೇ. ಹೀಗಾಗೋದಕ್ಕೆ ಯಾವತ್ತಿಗೂ ಅವಕಾಶ ಕೊಡದಿರಿ.
4. ನಂಬಿಕೆ
ನಂಬಿಕೆಯೂ ಕೂಡ ದಾಂಪತ್ಯ ಜೀವನದ ಗಟ್ಟಿಯಾದ ಪಿಲ್ಲರ್ ಇದ್ದ ಹಾಗೆ. ಗಂಡಾಗಲಿ ಅಥವಾ ಹೆಣ್ಣಾಗಲಿ ಒಬ್ಬರ ಮೇಲೆ ಮತ್ತೊಬ್ಬರು ನಂಬಿಕೆ ಇಡೋದು ತುಂಬಾನೇ ಮುಖ್ಯವಾಗುತ್ತದೆ. ಅಷ್ಟೇ ಅಲ್ಲ, ಆ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ಕೂಡ ನಮ್ಮ ಮೇಲಿದೆ. ಯಾವುದೇ ಕಾರಣಕ್ಕೂ ಆ ನಂಬಿಕೆಯನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ನಂಬಿಕೆಗೆ ದ್ರೋಹ ಮಾಡಿದಾಗ ಮಾತ್ರ ಆ ಪ್ರೀತಿ ಮುರಿದು ಬೀಳುತ್ತದೆ.
5. ಗೌರವ
ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಗೌರವ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ದಂಪತಿಗಳು ಕೂಡ ಒಬ್ಬರಿಗೆ ಮತ್ತೊಬ್ಬರು ಗೌರವ ಕೊಡೋದು ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ಸಂಗಾತಿ ಉತ್ತಮ ಕೆಲಸದಲ್ಲಿ ಇಲ್ಲದಿದ್ದರೂ, ಅವರ ಖ್ಯಾತಿ ಗಳಿಸಿದಿದ್ದರೂ, ಅವರಲ್ಲಿ ಬೇಕಾದಷ್ಟು ದುಡ್ಡಿಲ್ಲದಿದ್ದರೂ ನೀವು ನಿಮ್ಮ ಸಂಗಾತಿಗೆ ಗೌರವ ಕೊಡುವುದು ತುಂಬಾನೇ ಮುಖ್ಯವಾಗುತ್ತದೆ. ಯಾವುದೇ ಕಾರಣಕ್ಕೆ ಅವರನ್ನು ಕೀಳಾಗಿ ಕಾಣಬೇಡಿ.
ದಾಂಪತ್ಯ ಅನ್ನೋದು ತುಂಬಾನೇ ಸೂಕ್ಷ್ಮವಾದ ವಿಚಾರ. ದಾಂಪತ್ಯ ಜೀವನದಲ್ಲಿ ಯಾವುದೇ ರೀತಿ ತೊಂದರೆಗಳು ಬಾರದಂತೆ ನೋಡಿಕೊಳ್ಳುವುದು ದಂಪತಿಗಳಿಬ್ಬರ ಕರ್ತವ್ಯ. ಈ 5 ಅಂಶಗಳು ನಿಮ್ಮ ದಾಂಪತ್ಯದಲ್ಲಿ ಇದ್ದರೆ ನಿಮ್ಮ ದಾಂಪತ್ಯ ಮುರಿದು ಬೀಳೋದಕ್ಕೆ ಸಾಧ್ಯವೇ ಇಲ್ಲ.



Click it and Unblock the Notifications


