Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ಈ ಸಂಖ್ಯೆಗಳು ಅದೃಷ್ಟಕರವಲ್ಲ ಎಂಬ ನಂಬಿಕೆಯಿದೆ, ಈ ಸಂಖ್ಯೆಗಳನ್ನು ಬಳಸಲು ಭಯಪಡುತ್ತಾರೆ
ಅದು ಶುಭವಲ್ಲ, ಈ ಸಂಖ್ಯೆ ಅದೃಷ್ಟವಲ್ಲ ಎಂಬೆಲ್ಲಾ ನಂಬಿಕೆಗಳು ಅಲ್ಲಲ್ಲ ಮೂಢ ನಂಬಿಕೆಗಳು ನಮ್ಮಲ್ಲಿ ಮಾತ್ರ ಇರುವುದಿಲ್ಲ. ಇತರ ದೇಶಗಳಲ್ಲಿಯೂ ಇದೆ, ಕೆಲವೊಂದು ದೇಶಗಳಲ್ಲಿ ನಮಗಿಂತ ಹೆಚ್ಚಾಗಿಯೇ ಇದೆ. ಕೆಲವೊಂದು ದೇಶಗಳಲ್ಲಿ ಕೆಲವೊಂದು ಸಂಖ್ಯೆಯನ್ನು ಶುಭವಲ್ಲ ಎಂದು ಹೇಳಲಾಗುವುದು, ಯಾವೆಲ್ಲಾ ದೇಶಗಳಲ್ಲಿ ಯಾವ ಸಂಖ್ಯೆ ಅದೃಷ್ಟಕರವಲ್ಲ ಎಂಬ ನಂಬಿಕೆಯಿದೆ ಎಂದು ನೋಡೋಣ ಬನ್ನಿ:

ಚೀನಾದವರಿಗೆ ಸಂಖ್ಯೆ 4 ಅದೃಷ್ಟಕರವಲ್ಲ
ಚೀನಾ ದೇಶದಲ್ಲಿ ಸಂಖ್ಯೆ 4ನ್ನು ಅದೃಷ್ಟಕರವಲ್ಲ ಎಂದು ಹೇಳಲಾಗುವುದು. ಆದ್ದರಿಂದ ಚೀನಾದವರು ಈ ಸಂಖ್ಯೆಯನ್ನು ಮನೆ, ಗಾಡಿ, ಬೀದಿಗಳಲ್ಲಿ ಬಳಸುವುದಿಲ್ಲ. 4 ಸಂಖ್ಯೆಯಿಂದ ಯಾವುದೇ ಶುಭ ಉಂಟಾಗುವುದಿಲ್ಲ ಎಂದು ಹೇಳಲಾಗುವುದು.
13
ಬೈಬಲ್‌ನಲ್ಲಿ 13ನ್ನು ಶುಭ ಎಂದು ಪರಿಗಣಿಸುವುದಿಲ್ಲ, 13 ಸರದಿಯಲ್ಲಿ ಬರುವ ಸಂಖ್ಯೆ ಊಟದ ವೇಳೆ ಕೊನೆಯಲ್ಲಿ ಕೂರಬೇಕು ಎಂದು ಹೇಳಲಾಗುವುದು. ಹೆಸರಿನಲ್ಲಿ 13 ಪದಗಳಿದ್ದರೆ ಅವರು ಜೀವನದಲ್ಲಿ ತುಂಬಾ ಕಷ್ಟಪಡುತ್ತಾರೆ ಎಂದು ಹೇಳಲಾಗುವುದು. ಇನ್ನು ಕೆಲವು ಹೋಟೆಲ್‌ಗಳಲ್ಲಿ 13ನೇ ಫ್ಲೋರ್ ಇರಲ್ಲ, ಕೆಲವರು 13 ಶುಕ್ರವಾರದಂದು ಬಂದರೆ ದೂರ ಪ್ರಯಾಣ ಮಾಡುವುದಿಲ್ಲ. ಆದ್ದರಿಂದ 13 ಶುಭವಲ್ಲ ಎಂಬ ನಂಬಿಕೆ ಬಲವಾಗಿದೆಯೇ ಇದೆ, 13ನೇ ತಾರೀಕು ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ.
8
ಸಂಖ್ಯೆಯನ್ನು 8ನ್ನು ಕೂಡ ಶುಭ ಎಂದು ಪರಿಗಣಿಸುವುದಿಲ್ಲ, ಏಕೆಂದರೆ 8 ಶನಿಯ ಸಂಖ್ಯೆ ಎಂದು ನಂಬಲಾಗಿದೆ. ಕಾಶ್ಮೀರದಲ್ಲಿ ಭೂಕಂಪ ಅಕ್ಟೋಬರ್ 8, 2005ರಲ್ಲಿ ಸಂಭವಿಸಿತ್ತು, ಮುಂಬೈನಲ್ಲಿ ಪ್ರವಾಹ 1005 ಜುಲೈ 26ಕ್ಕೆ ಸಂಭವಿಸಿತ್ತು 2+8 ಅಂದರೆ ಸಂಖ್ಯೆ 8, ಈ 8 ಸಂಖ್ಯೆ ಶುಭವಲ್ಲ ಎಂಬ ನಂಬಿಕೆಯಿದೆ. ಶನಿಯು ತನ್ನ ಕ್ರೂರ ದೃಷ್ಟಿ ಬೀರಿದರೆ ಅದರಿಂದ ಯಾರೂ ತಪ್ಪಿಸಲು ಸಾಧ್ಯವಿಲ್ಲ, ಆದರೆ ಶನಿಯ ಕೃಪೆಯಿದ್ದರೆ ಆ ವ್ಯಕ್ತಿ ತುಂಬಾ ಯಶಸ್ವಿಯಾಗುತ್ತಾನೆ, ಶನಿ ಕರ್ಮಕ್ಕೆ ತಕ್ಕ ಫಲ ನೀಡುವ ಗ್ರಹವಾಗಿದೆ.
9
ಜಪಾನ್‌ನಲ್ಲಿ ಸಂಖ್ಯೆ 9ನ್ನು ಶುಭವೆಂದು ಪರಿಗಣಿಸುವುದಿಲ್ಲ. ಈ ಸಂಖ್ಯೆ ಆಪತ್ತು ತರುತ್ತದೆ, ತುಂಬಾ ಕಷ್ಟಗಳನ್ನು ತರುತ್ತದೆ ಎಂದು ನಂಬಲಾಗಿದೆ.



Click it and Unblock the Notifications