Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ಮಾರ್ಟ್‌ಪೋನ್ ಬಿಟ್ಟು ಸಾಂಪ್ರದಾಯಿಕ ಫೋನ್‌ನತ್ತ ಮುಖಮಾಡಿದ ಜನ..! ಮಾರಾಟ ಏರಿಕೆ..! ಏಕೆ?
ಆಧುನಿಕ ಜಗತ್ತಿನ ಪ್ರತಿಯೊಬ್ಬರ ಕೈ ಬೆರಳ ಆಟಿಕೆಯಾಗಿರುವ ಸ್ಮಾರ್ಟ್‌ಫೋನ್ ಈಗ ಇಡೀ ಜಗತ್ತಿನ ಚಿತ್ರಣ ಬದಲಿಸಿದೆ. ಕುಳಿತಲ್ಲೇ ಎಲ್ಲಾ ಕೆಲಸಗಳ ಮಾಡಿಕೊಡುವ ಅತ್ಯವಶ್ಯಕ ತಂತ್ರಜ್ಞಾನ ಇದಾಗಿದೆ. ಮುಂದುವರೆದ ದೇಶದಿಂದ ತೀರಾ ಬಡರಾಷ್ಟ್ರಗಳು ಸಹ ಇಂದು ಈ ಸ್ಮಾರ್ಟ್ ಫೋನ್ ಅಲೆಗೆ ಸಿಲುಕಿವೆ.
ಜಗತ್ತಿನಲ್ಲಿ ನೂರಾರು ಕಂಪನಿಗಳು ಇಂದು ಈ ಸ್ಮಾರ್ಟ್ ಫೋನ್ ಫೋನ್ ತಯಾರಿಕೆ ಮಾಡುತ್ತಿವೆ. ವರ್ಷದಿಂದ ವರ್ಷಕ್ಕೆ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಸಹ ಏರಿಕೆಯಾಗುತ್ತಲೇ ಇದೆ. ಸ್ಮಾರ್ಟ್ ಫೋನ್ ಬಳಸದೆ 10 ನಿಮಿಷ ಸಹ ಇರಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಏಕೆಂದರೆ ನಮ್ಮ ದೈನಂದಿನ ಜೀವನದ ಪ್ರಮುಖ ಅಂಶವಾಗಿ ಅದು ಹಿಡಿತ ಸಾಧಿಸಿಬಿಟ್ಟಿದೆ.

ನೀವು ಮನೆಯಲ್ಲಿಯೇ ಹಣ ಮರೆತು ಹೋದರು ನಡೆಯುತ್ತದೆ. ಆದರೆ ಮೊಬೈಲ್ ಫೋನ್ ಮರೆತು ಹೋದರೆ ಇಡೀ ದಿನ ಹಾಳಾಗುತ್ತದೆ. ಹಾಗಾಗಿ ಫೋನ್ ಯಾವಾಗಲು ಜನ ಕೈಯಲ್ಲೇ ಹಿಡಿದಿರುತ್ತಾರೆ. ಈ ಸ್ಮಾರ್ಟ್‌ಫೋನ್‌ಗಳಿಂದ ಎಷ್ಟು ಲಾಭವಿದೆಯೋ ಅಷ್ಟೇ ಹಾನಿಯೂ ಇದೇ ಎಂಬುದು ತಿಳಿದಿದೆ.
ಅದರಲ್ಲೂ ಸೋಶಿಯಲ್ ಮೀಡಿಯಾದಿಂದಾಗಿ ಇಂದು ಎಲ್ಲರಿಗೂ ಸಮಸ್ಯೆಗಳು ಕಾಡಲು ಆರಂಭಿಸಿವೆ. ಆದರೆ ಈಗ ಹೊಸದಂದು ವರದಿಯ ಪ್ರಕಾರ ಸ್ಮಾರ್ಟ್‌ಫೋನ್ ಬಳಕೆಯ ಬದಲು 90ರ ದಶಕದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದ್ದ ಹಳೆಯ ಕಾಲದ ಕೀಪ್ಯಾಡ್ ಮೊಬೈಲ್ ಫೋನ್‌ಗಳ ಬಳಕೆಯಲ್ಲಿ ಏರಿಕೆ ಕಂಡು ಬಂದಿದೆಯಂತೆ. ಜರನರು ನಿಧಾನವಾಗಿ ಸ್ಮಾರ್ಟ್ ಫೋನ್ ಬದಲಿಗೆ ಈ ರೀತಿಯ ಸಾಮಾನ್ಯ ಫೋನ್‌ಗಳ ಬಳಕೆಯತ್ತ ತಮ್ಮ ಒಲವು ತೋರಿಸುತ್ತಿದ್ದಾರಂತೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಇತ್ತೀಚಿನ ಅಧ್ಯಯನವು ಸಾಮಾಜಿಕ ಜಾಲತಾಣಗಳನ್ನು ಬಳಸುವುದರಿಂದ ಮೆದುಳಿನ ಅದೇ ಭಾಗವು ವ್ಯಸನಕಾರಿ ವಸ್ತುವನ್ನು ಸೇವಿಸಿದಾಗ ಸಕ್ರಿಯಗೊಳ್ಳುತ್ತದೆ ಎಂದು ಬಹಿರಂಗಪಡಿಸಿದೆ. ಹೀಗಾಗಿ ಜನ ಈ ಸೋಶಿಯಲ್ ಮೀಡಿಯಾ ಗೀಳಿನಿಂದ ಹೊರಬರುವ ಉದ್ದೇಶದಿಂದಾಗಿ ಸ್ಮಾರ್ಟ್‌ಫೋನ್ ಬಳಕೆ ಕಡಿಮೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿನ ಪೀಳಿಗೆಯು ಸ್ಮಾರ್ಟ್‌ಫೋನ್ ಬಳಕೆಯ ಅತ್ಯಂತ ಹೆಚ್ಚಿನ ದುಷ್ಪರಿಣಾಮಕ್ಕೆ ಒಳಗಾಗಿದೆ. ನಿದ್ರಾಹೀನತೆ, ಖಿನ್ನತೆ, ದೃಷ್ಟಿ ದೋಷ ಸೇರಿ ಹಲವು ರೀತಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಈಗ ಅಮೆರಿಕದಲ್ಲಿ ಸಾಮಾನ್ಯ ಫೋನ್‌ಗಳ ಖರೀದಿಯಲ್ಲಿ ಏರಿಕೆ ಕಂಡು ಬಂದಿದೆಯಂತೆ. ಈ ಫೋನ್‌ಗಳಲ್ಲಿ ಸೋಶಿಯಲ್ ಮೀಡಿಯಾ ಖಾತೆಗಳಿರುವುದಿಲ್ಲ ಬದಲಾಗಿದೆ ಕರೆ, ಸಂದೇಶ ಸೇರಿ ಕೆಲವೇ ಕೆಲವು ಕಾರ್ಯಗಳನ್ನು ಮಾಡಬಹುದು.
ಡಂಬ್‌ಫೋನ್‌ಗಳು ಸ್ಮಾರ್ಟ್‌ಫೋನ್‌ನ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರದ ಸೆಲ್ ಫೋನ್‌ನ ಮೂಲ ಮಾದರಿಗಳಾಗಿವೆ. 2000 ರ ದಶಕದ ಆರಂಭದಲ್ಲಿ ಬಳಸಲಾದ ಈ ಫೋನ್‌ಗಳು ಹೈಟೆಕ್ ಕಾರ್ಯತಂತ್ರಗಳ ಒಳಗೊಂಡಿಲ್ಲ. ಆದರೆ ಈಗ ಅಮೆರಿಕದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಈ ಸಾಮಾನ್ಯ ಫೋನ್‌ಗಳ ಬೇಡಿಕೆಯಲ್ಲಿ ಹಠಾತ್ ಏರಿಕೆ ಕಂಡು ಬಂದಿದೆಯಂತೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಇತ್ತೀಚಿನ ಅಧ್ಯಯನವು ಸಾಮಾಜಿಕ ಜಾಲತಾಣಗಳನ್ನು ಬಳಸುವುದರಿಂದ ಮೆದುಳಿನ ಅದೇ ಭಾಗವು ವ್ಯಸನಕಾರಿ ವಸ್ತುವನ್ನು ಸೇವಿಸಿದಾಗ ಸಕ್ರಿಯಗೊಳ್ಳುತ್ತದೆ ಎಂದು ಬಹಿರಂಗಪಡಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ಜೊತೆಗೆ ಸ್ಮಾರ್ಟ್‌ಫೋನ್ ಇದ್ದವರು ಸರಿ ಸುಮಾರು 4ರಿಂದ 5 ಗಂಟೆಗಳ ಕಾಲ ಸ್ಕ್ರೀನ್ ಟೈಮ್ ಹೊಂದಿರುತ್ತಾರಂತೆ, ಆದರೆ ಈ ಡಂಬ್‌ಫೋನ್ ಬಳಕೆಯ ಸಮಯ ಕೇವಲ 20 ನಿಮಿಷ ಮಾತ್ರವಂತೆ.
ಸದ್ಯ ಈ ಸ್ಮಾರ್ಟ್ ಫೋನ್ ಬಳಕೆ ಎಷ್ಟು ಅಪಾಯಕಾರಿ ಎನ್ನುವುದು ನಿಧಾನವಾಗಿ ಜನರಿಗೆ ಮನವರಿಕೆಯಾಗುತ್ತಿದ್ದು, ಹಳೆಯ ಸಾಂಪ್ರದಾಯಿಕ ಫೋನ್‌ಗಳತ್ತ ಮತ್ತೆ ಹಿಂದಿರುಗುವಂತಾಗಿದೆ. ಈ ಬೆಳವಣಿಗೆಯಿಂದ ಸ್ಮಾರ್ಟ್‌ಫೋನ್ ಬಳಕೆ ಕಡಿಮೆಯ ಪ್ರಮಾಣ ನಿಧಾನವಾಗಿ ಕಡಿಮೆಯಾಗಬಹುದು. ಆದರೆ ಫೋನ್ ಬಳಕೆಯ ಪರಿಣಾಮಗಳ ಕಡಿಮೆ ಮಾಡುವುದು ಕಷ್ಟವಾಗಲಿದೆ.



Click it and Unblock the Notifications
