Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಛೀ..ಥೂ ಅನ್ನಬೇಡಿ..! ಇದೇ ಹೊಸ ಫ್ಯಾಷನ್..! ಮೂತ್ರದ ಕಲೆ ಡಿಸೈನ್ ಪ್ಯಾಂಟ್ ಬೆಲೆ ಎಷ್ಟು ಗೊತ್ತಾ?
20ನೇ ಶತಮಾನ ಅಂದ್ರೆ ಅದೊಂದು ಫ್ಯಾಷನ್ ಯುಗ, ಈಗ ಏನೆ ಮಾಡಿದ್ರು ಅದು ಫ್ಯಾಷನ್. ಸಿನಿಮಾ ನಟ ನಟಿಯರು, ಸೀರಿಯಟ್ ಆರ್ಟಿಸ್ಟ್‌ಗಳು, ಮಾಡಲ್‌ಗಳು ಹೀಗೆ ಜನರ ಮೇಲೆ ಇವರ ಪ್ರಭಾವ ತುಸು ಹೆಚ್ಚು, ಅವರು ಏನೇ ಮಾಡಿದ್ರು ಅದನ್ನು ಫಾಲೋ ಮಾಡೊ ಒಂದಿಷ್ಟು ಮಂದಿ ಇದ್ದಾರೆ.
ಅದರಲ್ಲೂ ಫ್ಯಾಷನ್ ಎಂದರೆ ಕೇಳೋದೇ ಬೇಡ. ಅಲ್ಲಿ ಒಂದಕ್ಕಿಂತ ಒಂದು ವಿಚಿತ್ರ ಫ್ಯಾಷನ್ ಕಣ್ಣ ಮುಂದೆ ಬರುತ್ತೆ. ಆದ್ರೆ ಇಲ್ಲೊಂದು ಬಟ್ಟೆ ಈಗ ಫ್ಯಾಷನ್ ಲೋಕದಲ್ಲಿ ಭಾರೀ ಸದ್ದು ಮಾಡುತ್ತಿದ್ದು ಎಲ್ಲರ ಅಚ್ಚರಿಗೂ ಕಾರಣವಾಗಿದೆ. ಅದೇನಂದರೆ ಈ ಮೂತ್ರ ಮಾಡಿಕೊಂಡ ಕಲೆಯಂತಿರುವ ಜೀನ್ಸ್.

ಹೌದು ಜೀನ್ಸ್ ಪ್ಯಾಂಟ್ ಮೇಲೆ ಆಕಸ್ಮಿಕವಾಗಿ ನೀರು ಬಿದ್ದರೆ ನಾವು ಅದನ್ನು ಹಾಕಿಕೊಳ್ಳಲು ಹಿಂದೇಟು ಹಾಕುತ್ತೇವೆ. ಏಕೆಂದರೆ ನೋಡಿದವರು ತಪ್ಪು ತಿಳಿಯುತ್ತಾರೇನೋ ಎಂಬ ಅಂಜಿಕೆ ನಮ್ಮಲ್ಲಿರುತ್ತದೆ. ಆದರೆ ಇಲ್ಲೊಂದು ಬ್ರಾಂಡ್ ಜನ ತಪ್ಪು ತಿಳಿಯಲಿ ಅನ್ನೋ ಉದ್ದೇಶದಿಂದಲೇ ಈ ಡಿಸೈನ್‌ನ ಪ್ಯಾಂಟ್ ಮಾರುಕಟ್ಟೆಗೆ ತಂದಂತ್ತಿದೆ.
ಈ ಪ್ಯಾಂಟ್ ಮುಂಭಾಗ ಮೂತ್ರ ಮಾಡಿಕೊಂಡಂತೆ ಡಿಸೈನ್ ಮಾಡಲಾಗಿದ್ದು, ನೋಡುಗರಿಗೆ ಒಮ್ಮೆ ಅಸಹ್ಯದ ಜೊತೆ ಅಚ್ಚರಿಯೂ ಮೂಡಬಹುದು. ಏಕೆಂದರೆ ಯಾರಾದರು ಈ ರೀತಿ ಕಲೆಯಾಗಿರುವ, ಮೂತ್ರದ ಡಿಸೈನ್ ಇರುವ ಪ್ಯಾಂಟ್ ಉದ್ದೇಶ ಪೂರ್ವಕವಾಗಿ ಹಾಕಿಕೊಂಡು ಸಾರ್ವಜನಿಕವಾಗಿ ಓಡಾಡುತ್ತಾರೆಯೇ ಎಂಬ ದೊಡ್ಡ ಪ್ರಶ್ನೆ ಎದ್ದಿದೆ.
ಇದರ ಜೊತೆ ಈ ಡಿಸೈನ್ ಪ್ಯಾಂಟ್ ಬೆಲೆ ಕೇಳಿದರೆ ನಿಮಗೂ ಅಚ್ಚರಿಯಾಗಬಹುದು. ಇಂಗ್ಲೆಂಡ್ ಡೆನಿಮ್ ಕಂಪನಿ ಈ ಜೀನ್ಸ್ ಅನ್ನು ಮಾರುಕಟ್ಟೆಗೆ ತಂದಿದ್ದು, ಇದರ ಬೆಲೆ ಬರೋಬ್ಬರಿ 811 ಡಾಲರ್‌ಗಳು, ಭಾರತೀಯ ರೂಪಾಯಿಗೆ ಹೋಲಿಸಿದರೆ ಇದು 67,600 ರೂಪಾಯಿಯಾಗುತ್ತದೆ.
ಈ ದರ ಕೇಳಿ ನಿಮಗೂ ಶಾಕ್ ಆಗಿರಬಹುದು. ಅದೆಷ್ಟೋ ಜನರು ಈ ಹಣವನ್ನು ನೀಡಬೇಕಾದರೆ ಹಲವು ದಿನಗಳೇ ದುಡಿಯಬೇಕಿದೆ. ಆದರೆ ಈ ಮೂತ್ರದ ಡಿಸೈನ್ ಪ್ಯಾಂಟ್‌ಗೆ ಇಷ್ಟು ದರ ನಿಗದಿಯಾಗಿದೆ. ಬ್ರಿಟಿಷ್ ಇಟಾಲಿಯನ್ ಬ್ರಾಂಡ್ ಡಿಸೈನರ್‌ಗಳಾದ ಜೋರ್ಡಾನ್ ಬೋವೆನ್ ಮತ್ತು ಲುಕಾ ಮಾರ್ಚೆಟ್ಟೊ ಈ ಪ್ಯಾಂಟ್ ಅನ್ನು ಡಿಸೈನ್ ಮಾಡಿದ್ದಾರಂತೆ.
ಸದ್ಯಕ್ಕೆ ಈ ಡಿಸೈನ್ ಜೀನ್ಸ್ ಪ್ಯಾಂಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದನ್ನು ಕಂಡ ಜನ ಅಚ್ಚರಿಯಲ್ಲಿ ಹುಬ್ಬೇರಿಸಿದ್ದಾರೆ. ಇನ್ನು ಮುಂದೆ ಯಾರಾದರು ಇಂತಹ ಕಲೆಯೊಂದಿಗೆ ಪ್ಯಾಂಟ್ ಹಾಕಿಕೊಂಡಿದ್ದರು ಅದನ್ನು ಗಮನವಿಟ್ಟು ಎರಡೆರಡು ಬಾರಿ ನೋಡಿ ಇದು ನಿಜವೋ ಅಥವಾ ಡಿಸೈನ್ ಇರುವುದು ಹೀಗೆಯೋ ಎಂಬುದನ್ನು ನಾವು ನಿರ್ಧರಿಸಬೇಕಾಗುತ್ತದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೂ ಮೊದಲು ಗೋಣಿ ಚೀಲದ ಕುರ್ತಾ ಪೈಜಾಮ ವೈರಲ್
ರಂಜಾನ್ ಹಬ್ಬದ ಸಮಯದಲ್ಲಿ ಈ ಗೋಣಿ ಚೀಲದ ಕುರ್ತಾ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಂಗಡಿಯಲ್ಲಿ ಒಬ್ಬ ಗೋಣಿ ಚೀಲದಿಂದ ಮಾಡಿದ್ದ ಕುರ್ತಾ ಧರಿಸಿ ಪೋಟೋಗೆ ಫೋಸ್ ಕೊಟ್ಟಿದ್ದ. ಇನ್ಸ್‌ಸ್ಟಾಗ್ರಾಮ್ ಪೇಜ್‌ನಲ್ಲಿ ತಮ್ಮ ಹೊಸ ಉತ್ಪನ್ನ ಎಂದು ಈ ಗೋಣಿ ಚೀಲದ ಕುರ್ತಾವನ್ನು ಹಂಚಿಕೊಳ್ಳಲಾಗಿತ್ತು, ಕುರ್ತಾ ಹಾಗೂ ಪ್ಯಾಂಟ್ ಸಹ ಗೋಣಿ ಚೀಲದಿಂದಲೇ ಮಾಡಲಾಗಿತ್ತು.
ಆ ಯುವಕ ಈ ಹೊಸ ಫ್ಯಾಷನ್ ಬಟ್ಟೆ ಧರಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತಲ್ಲದೆ ಇನ್ನೂ ಯಾವ ಯಾವ ರೀತಿ ಫ್ಯಾಷನ್ ಬರಲಿದೆ ಎಂದು ಜನ ಅಚ್ಚರಿಗೆ ಒಳಗಾಗಿದ್ರು. ಈಗ ಈ ರೀತಿ ಮೂತ್ರದ ಕಲೆ ಇರುವ ಜೀನ್ಸ್ ಪ್ಯಾಂಟ್ ಮಾರುಕಟ್ಟೆಗೆ ಬಂದಿರುವುದು ಮತ್ತಷ್ಟು ಅಚ್ಚರಿಗಳಿಗೆ ಕಾರಣವಾಗಿದೆ.



Click it and Unblock the Notifications
