Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಸ್‌ನಲ್ಲಿ ಹಣ ಕಳೆದುಕೊಂಡು ಗೋಳಾಡಿದ ಅಜ್ಜಿ: ಪ್ರಯಾಣಿಕರು ಒಟ್ಟು ಮಾಡಿದ್ರು ಹಣ
ಈಗ ಮೊಬೈಲ್, ಟಿವಿ ಎಲ್ಲ ಬಂದ ಮೇಲೆ ಜನ ಮನುಷ್ಯರ ಜೊತೆ ಬೆರೆಯುವುದನ್ನೇ ಮರೆತುಬಿಟ್ಟಿದ್ದಾರೆ. ಅವರು ಮೊಬೈಲ್ ಲೋಕದಲ್ಲಿ ಮುಳುಗಿರುತ್ತಾರೆ. ಜೊತೆಗೆ ಮಾನವೀಯತೆ ಅನ್ನೋದನ್ನೇ ಮರೆತಿರುತ್ತಾರೆ. ಯಾಕಂದ್ರೆ ಯಾರಾದ್ರು ಕಷ್ಟದಲ್ಲಿದ್ದಾಗ ಅವರ ಕಷ್ಟಕ್ಕೆ ಸ್ಪಂದಿಸಬೇಕು ಎಂಬ ಮನೋಭಾವ ಈಗ ಬಹುತೇಕರಲ್ಲಿ ಇಲ್ಲವೇ ಇಲ್ಲ. ಇದಕ್ಕೆ ಉದಾಹರಣೆ ಎಂಬಂತೆ ನಾವು ಹತ್ತಾರು ಘಟನೆಗಳನ್ನ ನೋಡುತ್ತಲೇ ಇರುತ್ತೇವೆ.
ಯಾರಾದ್ರು ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದರೆ ಅಂತವರ ಮಾತನಾಡಿಸುವ ಗೋಜಿಗೂ ನಾವು ಹೋಗುವುದಿಲ್ಲ. ಅವರಿಗೆ ಏನಾಗಿದೆ ಆಸ್ಪತ್ರೆಗೆ ಸಾಗಿಸಬೇಕು ಎಂಬುದಿರುವುದಿಲ್ಲ. ಬದಲಿಗೆ ಮೊಬೈಲ್ ತೆಗೆದು ವಿಡಿಯೋ ಫೋಟೊ ತಗೆದುಕೊಳ್ಳುತ್ತಾರೆ. ಇಂತಹ ಕಾಲದಲ್ಲಿ ಇದಕ್ಕೆ ವಿರುದ್ಧವಾದ ಕೆಲವೊಂದು ಘಟನೆಗಳು ನಡೆದಾಗ ಮಾನವೀಯತೆ ಇನ್ನೂ ಉಳಿದಿದೆ ಎನಿಸುತ್ತದೆ.

ಯಾರಾದ್ರು ಕಷ್ಟದಲ್ಲಿದ್ದರೆ ಅವರ ಪಾಡಿಗೆ ಅವರ ಬಿಟ್ಟು ಬೇರೆಯವರ ಸಹವಾಸ ನಮಗ್ಯಾಕೆ ಅಂದುಕೊಂಡು ಮುಂದೆ ಸಾಗುವವರೆ ಹೆಚ್ಚು. ಆದ್ರೆ ಇಲ್ಲೊಂದು ಘಟನೆ ಮಾತ್ರ ಮಾನವೀಯ ಮೌಲ್ಯ ಇನ್ನೂ ಮಾನವರಲ್ಲಿ ಉಳಿದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಹೌದು ಹಾವೇರಿ ಧರ್ಮಸ್ಥಳ ಮಾರ್ಗವಾಗಿ ಹೋಗುತ್ತಿದ್ದ ಬಸ್‌ನಲ್ಲಿ ಹಣ ಕಳೆದುಕೊಂಡು ಅಜ್ಜಿಯೊಬ್ಬರು ಗೋಲಾಡುತ್ತಿದ್ದರು ಆದರೆ ಬಸ್‌ನಲ್ಲಿದ್ದ ಪ್ರಯಾಣಿಕರು ಸೇರಿ ಹಣ ಒಟ್ಟು ಮಾಡಿ ಕೊಟ್ಟು ಆಕೆಗೆ ನೆರವಾಗಿದ್ದು ಮಾತ್ರವಲ್ಲ ಮಾನವೀಯತೆ ಇನ್ನೂ ಉಳಿದಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ.
ಹಾವೇರಿ-ಧರ್ಮಸ್ಥಳ ಮಾರ್ಗವಾಗಿ ಚಲಿಸುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಅಜ್ಜಿಯೊಬ್ಬರು ಗೋಳಾಡುತ್ತಿದ್ದಾರೆ, ಅವರ ಬ್ಯಾಗ್‌ನಲ್ಲಿದ್ದ 5 ಸಾವಿರ ರೂಪಾಯಿ ಕಳೆದುಕೊಂಡಿರುವುದಾಗಿ ಅವರು ಕಣ್ಣೀರಿಡುತ್ತಿದ್ದಾರೆ. ಆದರೆ ಆಕೆಯ ನೋವು ಕಂಡ ಪ್ರಯಾಣಿಕರು ಒಮ್ಮತದಿಂದ ತಮ್ಮ ಬಳಿ ಇದ್ದ ಕೈಲಾದಷ್ಟು ಹಣವನ್ನು ಒಟ್ಟು ಸೇರಿಸಿ ಸುಮಾರು 4 ಸಾವಿರ ರೂಪಾಯಿ ಮಾಡಿ ಆಕೆಗೆ ನೀಡಿದ್ದಾರೆ. ಹನಿ ಹನಿ ಕೂಡಿದರೆ ಹಳ್ಳ ಎಂಬ ಮಾತನ್ನು ಮತ್ತೆ ಮತ್ತೆ ಅವರೆಲ್ಲ ಸೇರಿ ನಿಜ ಮಾಡಿದ್ದಾರೆ. ಬಸ್‌ನಲ್ಲಿ ಅಜ್ಜಿಗೆ 4 ಸಾವಿರ ನೀಡಿ ಮಾನವೀಯತೆ ಮೆರೆದಿದ್ದಾರೆ.
ಈ ಘಟನೆಯ ವಿಡಿಯೋವೊಂದು ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಷ್ಟ ಪಟ್ಟು ದುಡಿದು ಒಟ್ಟು ಮಾಡಿಟ್ಟ ಹಣ ಕಳೆದುಕೊಂಡ ಅಜ್ಜಿಯ ನೆರವಿಗೆ ಬಂದ ಪ್ರಯಾಣಿಕರ ಕಾರ್ಯಕ್ಕೆ ಭಾರಿ ಮೆಚ್ಚುಗೆ ಕೇಳಿಬಂದಿದೆ. ಪ್ರಯಾಣಿಕರು ಎಲ್ಲರು ಸೇರಿ ಒಟ್ಟು ಮಾಡಿದ ಹಣವನ್ನು ಅಜ್ಜಿಯ ಕೈಗಿಟ್ಟಾಗ ಆಕೆಯ ಕಣ್ಣಲ್ಲಿ ಸಂತೋಷ ಕಣ್ಣೀರು ಕಂಡು ಜನರು ಸಹ ಭಾವುಕರಾಗಿದ್ದಾರೆ.
ಈ ಕಾಲದಲ್ಲಿ 5 ಸಾವಿರ ರೂಪಾಯಿ ಆಕೆಗೆ ಎಷ್ಟು ಅಗತ್ಯವಿತ್ತೋ ಆದರೆ ಆ ಹಣ ಯಾರು ಕದ್ದಿರುತ್ತಾನೋ ಆತನಿಗೆ ಒಳಿತಾಗುವುದಿಲ್ಲ ಎಂದು ಶಾಪ ಹಾಕಿದ್ದಾರೆ. ಆಕೆಗೆ ಯಾವ ಅನಿವಾರ್ಯದ ಕೆಲಸವಿತ್ತೋ ಗೊತ್ತಿಲ್ಲ ಆದರೆ ಅಜ್ಜಿ ಕಣ್ಣಿನಲ್ಲಿ ಸಹಾಯ ಮಾಡಿದ ಎಲ್ಲರೂ ಈಗ ದೇವರಾಗಿದ್ದಾರೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಈ ರೀತಿಯ ಮತ್ತಷ್ಟು ಕಾರ್ಯಗಳು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತೆ. ಜೊತೆಗೆ ಒಂದಿಷ್ಟು ಮಂದಿಯ ಮನ ಪರಿವರ್ತನೆಗೂ ಕಾರಣವಾಗುತ್ತೆ. ಒಗ್ಗಟ್ಟು ಅನ್ನೋದು ಇದ್ದರೆ ಎಂತಹ ಕೆಲಸವೂ ಕಷ್ಟವಾಗುವುದಿಲ್ಲ ಎಂಬುದನ್ನು ಇದು ತೋರಿಸುತ್ತೆ. ಜೊತೆಗೆ ಒಂದು ಹಿರಿಯ ಜೀವಕ್ಕೆ ಮತ್ತೆ ಜೀವದಾನ ಮಾಡಿದಷ್ಟೇ ಪುಣ್ಯ ಸಿಗುತ್ತೆ. ಹೀಗಾಗಿ ಈ ವಿಡಿಯೋಗೆ ಭಾರೀ ಮೆಚ್ಚುಗೆ ಕೇಳಿಬಂದಿದೆ. ಪ್ರಯಾಣಿಕರ ಕಾರ್ಯಕ್ಕೆ ಜನರು ಜೈಕಾರ ಹಾಕಿದ್ದಾರೆ. ಈ ವಿಡಿಯೋ ಇಷ್ಟ ಪಟ್ಟ ಮಂದಿ ಹಂಚಿಕೊಂಡಿದ್ದು, ಇಂತಹ ಕಾರ್ಯಗಳ ಸಮಾಜದ ಬದಲಾವಣೆಗೆ ಕಾರಣವಾಗುತ್ತೆ ಎನ್ನುತ್ತಿದ್ದಾರೆ.



Click it and Unblock the Notifications
