Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪರಿವರ್ತನಿ ಏಕಾದಶಿಯಂದು ವಾಮನ ರೂಪವನ್ನು ಏಕೆ ಆರಾಧಿಸಲಾಗುವುದು?
ಭಾದ್ರಪದ ಮಾಸವೆಂದರೆ ಗಣೇಶ ಹಬ್ಬದ ಸಂಭ್ರಮ... ಅನಂತ ಚತುರ್ದಶಿಯವರೆಗೆ ಗಣೇಶ ಹಬ್ಬವನ್ನು ಬಹು ಅದ್ಧೂರಿಯಿಂದ ಆಚರಣೆ ಮಾಡಲಾಗುವುದು. ಈ ಹಬ್ಬದ ಸಂಭ್ರಮದ ನಡುವೆಯೇ ಪರಿವರ್ತನಿ ಏಕಾದಶಿ ಬಂದಿದೆ. ಭಾದ್ರಪದ ಮಾಸದ ಶುಕ್ಲಪಕ್ಷದ ಏಕಾದಶಿಯಂದು ಪರಿವರ್ತನಿ ಏಕಾದಶಿ ಅಥವಾ ಪದ್ಮ ಏಕಾದಶಿಯನ್ನು ಆಚರಿಸಲಾಗುವುದು.

ಈ ವರ್ಷ ಪರಿವರ್ತಿನಿ ಏಕಾದಶಿ ಯಾವಾಗ , ಈ ಪರಿವರ್ತನಿ ಏಕಾದಶಿಯ ವಿಶೇಷತೆಯೇನು ಎಂದು ನೋಡೋಣ ಬನ್ನಿ:
ಈ ವರ್ಷ ಪರಿವರ್ತಿನಿ ಏಕಾದಶಿಯನ್ನು ಸೆಪ್ಟೆಂಬರ್ 26ರಂದು ಆಚರಿಸಲಾಗುವುದು.
ಏಕಾದಶಿ ತಿಥಿ ಆರಂಭ: ಸೆಪ್ಟೆಂಬರ್ 25 ಬೆಳಗ್ಗೆ 07:55ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಸೆಪ್ಟೆಂಬರ್ 26 ಬೆಳಗ್ಗೆ 05 ಗಂಟೆಗೆ
ಪರಿವರ್ತಿನಿ ಏಕಾದಶಿಯ ಮಹತ್ವವೇನು?
ಧಾರ್ಮಿಕ ನಂಬಿಕೆಗಳ ಪ್ರಕಾತ ಪರಿವರ್ತಿನಿ ಏಕಾದಶಿಯಂದು ಶ್ರೀ ವಿಷ್ಣುವಿನ ಆರಾಧನೆ ಮಾಡುವುದರಿಂದ ಲಕ್ಷ್ಮಿಯ ಕೃಪೆ ಪಾತ್ರರಾಗುತ್ತೇವೆ. ಜೀವನದಲ್ಲಿ ಹಣದ ಕೊರತೆಯೇ ಉಂಟಾಗುವುದಿಲ್ಲ ಎಂದು ಹೇಳಲಾಗಿದೆ.
ಹಿಂದೂ ಪುರಾಣದ ಪ್ರಕಾರ ಯೋಗ ನಿದ್ರೆಯಲ್ಲಿರುವ ವಿಷ್ಣು ಪರಿವರ್ತಿನಿ ಏಕಾದಶಿಯಂದು ಬದಿಗೆ ಬದಲಾಗುತ್ತಾನೆ, ಇದರಿಂದ ವಿಷ್ಣುವಿನ ಸ್ಥಾನ ಬದಲಾಗಲಿದೆ ಎಂದು ಹೇಳಲಾಗುವುದು.
ಆದ್ದರಿಂದ ಈ ದಿನ ಮಾಡುವ ಉಪವಾಸಕ್ಕೆ ತುಂಬಾನೇ ಮಹತ್ವವಿದೆ. ಯಾರು ಭಕ್ತಿಯಿಂದ ಈ ಉಪವಾಸವನ್ನು ಮಾಡುತ್ತಾರೋ ಅವರು ಎಲ್ಲಾ ಪಾಪಗಳಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆಯಿದೆ.
ಧಾರ್ಮಿಕ ಮಹತ್ವ
ಧಾರ್ಮಿಕ ನಂಬಿಕೆಯ ಪ್ರಕಾರ ಈ ದಿನ ವಿಷ್ಣುವಿನ ವಾಮನ ರೂಪವನ್ನು ಆಚರಿಸಲಾಗುವುದು. ವಿಷ್ಣುವು ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನಾಂಕದಂದು ಮಲಗುವ ಸ್ಥಿತಿಯನ್ನು ಬದಲಾಯಿಸುತ್ತಾನೆ. ಇದರಿಂದ ಅನೇಕ ಬದಲಾವಣೆಗಳಾಗುತ್ತವೆ, ಆದ್ದರಿಂದ ಈ ಏಕಾದಶಿಯನ್ನು ಪರಿವರ್ತಿನಿ ಏಕಾದಶಿಯಂದು ಕರೆಯಲಾಗುವುದು. ಈ ಸಮಯದಲ್ಲಿ ವಿಷ್ಣು ವಾಮನನ ರೂಪದಲ್ಲಿರುತ್ತಾನೆ ಎಂದು ಅವನ ವಾಮನ ಮೂರ್ತಿಯನ್ನು ಆರಾಧಿಸಲಾಗುವುದು.
ವ್ರತ ಕತೆ
ಬಲಿ ಚಕ್ರವರ್ತಿ ತುಂಬಾ ಕ್ರೂರಿಯಾಗಿದ್ದ, ಆದರೆ ವಿಷ್ಣುವಿನ ಮಹಾಭಕ್ತನಾಗಿದ್ದ. ಪ್ರತಿದಿನ ಶ್ರೀವಿಷ್ಣುವಿಗೆ ಯಜ್ಞ ಮಾಡುತ್ತಾನೆ. ಆದರೆ ಈತನ ದುಷ್ಟತನಕ್ಕೆ ಬುದ್ಧಿ ಕಲಿಸುವಂತೆ ಬೃಹಸ್ಪತಿ ಸೇರಿ ಎಲ್ಲಾ ದೇವತೆಗಳು ಶ್ರೀ ವಿಷ್ಣುವಿನ ಮೊರೆ ಹೋಗುತ್ತಾರೆ. ದೇವತೆಗಳ ಮೊರೆಯನ್ನು ಕೇಳಿ ಶ್ರೀ ವಿಷ್ಣು ವಾಮನನ ಅವತಾರವನ್ನು ತಾಳಿ ಬಲಿ ಚಕ್ರವರ್ತಿ ಬಳಿ ಬರುತ್ತಾನೆ. ಬಲಿ ಚಕ್ರವರ್ತಿ ದಾನ ಶೂರನಾಗಿದ್ದ, ವಾಮನನ ಬಳಿ ನಿನಗೆ ಏನು ದಾನವಾಗಿ ಕೇಳು ಎಂದು ಅಹಂಕಾರದಿಂದ ಕೇಳುತ್ತಾನೆ. ವಾಮನ ಮೂರ್ತಿ 3 ಅಡಿ ಜಾಗವನ್ನು ಕೇಳುತ್ತಾನೆ. ಆದರೆ ವಾಮನ ಮೂರ್ತಿ ಬೃಹದಾಕಾರವಾಗಿ ಬೆಳೆಯಲಾರಂಭಿಸುತ್ತಾನೆ. ಒಂದು ಹೆಜ್ಜೆ ಇಡೀ ಭೂ ಲೋಕವನ್ನು ಆವರಿಸುತ್ತದೆ, ಮತ್ತೊಂದು ಹೆಜ್ಜೆ ಪಾತಾಳ ಲೋಕವನ್ನು ಆವರಿಸುತ್ತದೆ. ಆವಾಗ ಬಲಿ ಚಕ್ರವರ್ತಿಗೆ ತನ್ನ ತಪ್ಪಿನ ಅರಿವಾಗುವುದು, ಮತ್ತೊಂದು ಹೆಜ್ಜೆ ತನ್ನ ತಲೆ ಮೇಲೆ ಇಡುವಂತೆ ಕೇಳಿಕೊಳ್ಳುತ್ತಾನೆ. ಹೀಗೆ ಬಲಿಚಕ್ರವರ್ತಿಯ ಅಹಂಕಾರ ಮುರಿಯುತ್ತಾನೆ.
ಪರಿವರ್ತನಿ ಏಕಾದಶಿ ಉಪವಾಸದ ನಿಯಮಗಳೇನು?
* ಬೆಳಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛ ಮಾಡಿ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ
* ದೇವರ ಕೋಣೆಯನ್ನು ಗಂಗಾಜಲ ಚಿಮುಕಿಸಿ ಶುದ್ಧ ಮಾಡಿ
* ದೇವರ ದೀಪ ಹಚ್ಚಿ
* ದೇವರಿಗೆ ಆರತಿ ಮಾಡುವ ಮೂಲಕ ಉಪವಾಸವನ್ನು ಪ್ರಾರಂಭಿಸಿ
* ವಿಷ್ಣು ಮಂತ್ರಗಳನ್ನು ಪಠಿಸಿ
* ದ್ವಾದಶಿ ತಿಥಿಗೆ ಉಪವಾಸವನ್ನು ಮುರಿಯಿರಿ
* ಬಡವರಿಗೆ ಆಹಾರವನ್ನು ದಾನ ಮಾಡಿ.



Click it and Unblock the Notifications
