Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಪದ್ಮಿನಿ ಏಕಾದಶಿ 2023: ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮ ಹೇಗಿರಲಿದೆ?
ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸ ಜುಲೈ 18ರಿಂದ ಪ್ರಾರಂಭವಾಗಿದೆ. ಶ್ರಾವಣ ಮಾಸಕ್ಕೆ ಹಿಂದೂ ಧರ್ಮದಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಒಂದು ವರ್ಷದಲ್ಲಿ ಬರುವ 24 ಏಕಾದಶಿಗಳಲ್ಲಿ ಶ್ರಾವಣ ಮಾಸದಲ್ಲಿ ಬರುವ ಈ ವಿಶೇಷ ಪದ್ಮಿನಿ ಏಕಾದಶಿಯು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ.
ಜ್ಯೋತಿಷ್ಯದ ಪ್ರಕಾರ ಪದ್ಮಿನಿ ಏಕಾದಶಿಯು ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯವಾದುದಾಗಿದೆ. ಆದ್ದರಿಂದ ಎಲ್ಲಾ ಭಕ್ತರು ಈ ಏಕಾದಶಿಯಂದು ಸಂಪೂರ್ಣ ಭಕ್ತಿ ಮತ್ತು ಶ್ರದ್ಧೆಯಿಂದ ಉಪವಾಸವನ್ನು ಮಾಡಬೇಕು. ಪದ್ಮಿನಿ ಏಕಾದಶಿಯನ್ನು ಜುಲೈ 29 ರಂದು ಆಚರಣೆ ಮಾಡಲಾಗ್ತಿದ್ದು, ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೆ ಹೇಗಿರಲಿದೆ ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಪದ್ಮಿನಿ ಏಕಾದಶಿಯು ಉತ್ತಮ ಫಲವನ್ನು ನೀಡಲಿದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಬಡ್ತಿ ಪಡೆಯಬಹುದು. ಉಳಿತಾಯ ಯೋಜನೆಗಳಲ್ಲಿ ಉತ್ತಮ ಹಣವನ್ನು ಹೂಡಿಕೆ ಮಾಡುತ್ತಾರೆ. ಸೇವಿಸುವ ಆಹಾರ ಮತ್ತು ಪಾನೀಯದ ಬಗ್ಗೆ ಸಂಪೂರ್ಣ ಗಮನ ಕೊಡಿ. ನಿಮ್ಮ ಮನೆಗೆ ಅತಿಥಿಗಳು ಆಗಮಿಸುವ ಸಾಧ್ಯತೆಯಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಪದ್ಮಿನಿ ಏಕಾದಶಿಯು ಶುಭ ಸುದ್ದಿಗಳನ್ನು ತರಲಿದೆ. ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಬಹುದು. ನೀವು ನಿಮ್ಮ ಮಕ್ಕಳ ವೃತ್ತಿಜೀವನದತ್ತ ಗಮನ ಹರಿಸಬೇಕು. ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗುತ್ತವೆ. ನಿಮ್ಮ ಕೆಲವು ಹಳೆಯ ಕೆಲಸಗಳು ದೀರ್ಘಕಾಲದವರೆಗೆ ಹಾಗೆಯೇ ಉಳಿದುಕೊಳ್ಳಬಹುದು.
ಮಿಥುನ ರಾಶಿ
ಮಿಥುನ ರಾಶಿಯವರು ಪದ್ಮಿನಿ ಏಕಾದಶಿಯ ದಿನದಂದು ತಮ್ಮ ಆದಾಯ ಮತ್ತು ಖರ್ಚಿನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ನಂತರ ತೊಂದರೆ ಎದುರಿಸಬೇಕಾಗುತ್ತದೆ. ವಿದೇಶದಲ್ಲಿ ನೆಲೆಸಿರುವ ಸಂಬಂಧಿಕರಿಂದ ಒಳ್ಳೆಯ ಸುದ್ದಿಯನ್ನು ಕೇಳಬಹುದು. ನೀವು ಯಾವುದೇ ಕಾನೂನು ವಿಷಯದಲ್ಲಿ ಮುಂದುವರಿದರೆ ಅದು ನಿಮಗೆ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ದಾರಿ ಮಾಡಿಕೊಡುತ್ತದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಪದ್ಮಿನಿ ಏಕಾದಶಿಯಿಂದ ಒಳ್ಳೆಯದಾಗಲಿದೆ. ನೀವು ನಿಮ್ಮ ಕೆಲಸದ ಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತೀರಿ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ನೀವು ಸಾಲವನ್ನು ನೀಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ತೊಂದರೆ ಉಂಟಾಗಬಹುದು.
ಸಿಂಹ ರಾಶಿ
ಪದ್ಮಿನಿ ಏಕಾದಶಿಯು ಸಿಂಹ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ಹೊತ್ತು ತರಲಿದೆ. ನೀವು ವಿವಿಧ ಕ್ಷೇತ್ರಗಳಲ್ಲಿ ಪ್ರಭಾವಶಾಲಿಯಾಗುತ್ತೀರಿ. ಮತ್ತು ಪ್ರಮುಖ ಪ್ರಸ್ತಾಪಗಳಿಗೆ ಬೆಂಬಲ ಸಿಗುತ್ತದೆ. ನೀವು ಯಾವುದೇ ಕೆಲಸದಲ್ಲಿ ಆಲಸ್ಯ ಮಾಡಿದರೆ ಭವಿಷ್ಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ದೊಡ್ಡ ಗುರಿಯತ್ತ ಕೇಂದ್ರೀಕರಿಸಿ ಮತ್ತು ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಸಿಗುತ್ತದೆ.
ಕನ್ಯಾರಾಶಿ
ಕನ್ಯಾ ರಾಶಿಯವರಿಗೆ ಪದ್ಮಿನಿ ಏಕಾದಶಿಯು ಶುಭ ಫಲಿತಾಂಶಗಳನ್ನು ನೀಡಲಿದೆ. ಈ ಸಮಯದಲ್ಲಿ ಹೊಸ ವಾಹನವನ್ನು ಸಹ ಖರೀದಿಸುವ ಸಾಧ್ಯತೆಯಿದೆ. ಈ ಸಮಯದಲ್ಲಿ ನೀವು ಎಲ್ಲರೊಂದಿಗೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗುತ್ತೀರಿ. ಕುಟುಂಬದ ಸದಸ್ಯರಿಂದ ನೀವು ಕೆಲವು ಉತ್ತಮ ಮಾಹಿತಿಯನ್ನು ಪಡೆಯಬಹುದು. ದಾಂಪತ್ಯ ಜೀವನದಲ್ಲಿ ಇದ್ದ ಅಡೆ-ತಡೆಗಳು ದೂರವಾಗುತ್ತದೆ.
ತುಲಾ ರಾಶಿ
ಪದ್ಮಿನಿ ಏಕಾದಶಿಯ ದಿನದಂದು ತುಲಾ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ನೀವು ನಿಮ್ಮ ಆಹಾರದ ಬಗ್ಗೆ ಗಮನ ಹರಿಸಬೇಕು ಮತ್ತು ಶುದ್ಧ ಆಹಾರವನ್ನು ಸೇವಿಸಬೇಕು. ಭಾವನಾತ್ಮಕ ವಿಷಯಗಳಲ್ಲಿ ಆತುರಪಡಬೇಡಿ. ಅಪರಿಚಿತರನ್ನು ಭೇಟಿಯಾಗುವ ಸಾಧ್ಯತೆಯಿದೆ. ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ನೀವು ಬುದ್ಧಿವಂತಿಕೆಯಿಂದ ಮುಂದುವರಿದರೆ ಅದು ನಿಮಗೆ ಉತ್ತಮವಾಗಿರುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಪದ್ಮಿನಿ ಏಕಾದಶಿಯೂ ಶುಭ ಫಲವನ್ನು ನೀಡಲಿದೆ. ನಿಮ್ಮ ಮನಸ್ಸಿನ ಸಂಬಂಧಗಳು ಬಲವಾಗಿರುತ್ತವೆ. ಮತ್ತು ವೈಯಕ್ತಿಕ ಜೀವನವು ಸಂತೋಷವಾಗಿರುತ್ತದೆ. ವ್ಯಾಪಾರದ ದೃಷ್ಟಿಯಿಂದ ಉತ್ತಮವಾಗಿರಲಿದೆ. ನೀವು ದೊಡ್ಡ ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಸ್ನೇಹಿತರ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಬಹುದು. ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ತಯಾರಿಯಲ್ಲಿ ಗಂಭೀರವಾಗಿ ನಿರತರಾಗಬೇಕು. ಆಗ ಮಾತ್ರ ಅವರು ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ.
ಧನು ರಾಶಿ
ಪದ್ಮಿನಿ ಏಕಾದಶಿಯ ದಿನವು ಧನು ರಾಶಿಯವರಿಗೆ ಉತ್ತಮ ಆರ್ಥಿಕ ಲಾಭವನ್ನು ತಂದುಕೊಡುತ್ತದೆ. ನೀವು ಹೊಸ ಆಸ್ತಿಯನ್ನು ಹೊಂದುತ್ತೀರಿ. ಮತ್ತು ನಿಮ್ಮ ದಿನಚರಿಯನ್ನು ನೀವು ನಿರ್ವಹಿಸಬೇಕು. ಮನೆ ಮತ್ತು ಕುಟುಂಬದ ಜವಾಬ್ದಾರಿಯಿಂದ ಹಿಂದೆ ಸರಿದರೆ ನಿಮಗೆ ನಷ್ಟವಾಗಬಹುದು. ನಿಮ್ಮ ಕೆಲವು ಸ್ಪರ್ಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾರೆ. ಅದನ್ನು ನೀವು ನಿರ್ಲಕ್ಷಿಸಬೇಡಿ. ಈ ಸಮಯದಲ್ಲಿ ಮೈಯೆಲ್ಲಾ ಕಣ್ಣಾಗಿದ್ದರೆ ಒಳ್ಳೆಯದು.
ಮಕರ ಸಂಕ್ರಾಂತಿ
ಮಕರ ರಾಶಿಯವರಿಗೆ ಪದ್ಮಿನಿ ಏಕಾದಶಿ ಶುಭಕರವಾಗಿರಲಿದೆ. ನೀವು ಸಣ್ಣ ಲಾಭದ ಅವಕಾಶಗಳನ್ನು ಗುರುತಿಸಬೇಕು ಮತ್ತು ಅದನ್ನು ಕಾರ್ಯಗತಗೊಳಿಸಬೇಕು. ನೀವು ಸ್ನೇಹಿತರೊಂದಿಗೆ ಕೆಲವು ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ನಿಮ್ಮ ಶಕ್ತಿಯನ್ನು ಸರಿಯಾದ ಕೆಲಸದಲ್ಲಿ ತೊಡಗಿಸಿದರೆ ಅದು ನಿಮಗೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಕೆಲವು ದೊಡ್ಡ ಗುರಿಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ನೀವು ಒಂದರ ನಂತರ ಒಂದರಂತೆ ಒಳ್ಳೆಯ ಸುದ್ದಿಗಳನ್ನು ಕೇಳುತ್ತಲೇ ಇರುತ್ತೀರಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಪದ್ಮಿನಿ ಏಕಾದಶಿಯು ಸಂತೋಷ ಮತ್ತು ಸೌಕರ್ಯಗಳನ್ನು ಹೆಚ್ಚಿಸಲಿದೆ. ಮತ್ತು ನೀವು ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ. ನಿಮ್ಮ ಯಾವುದೇ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತೀರಿ. ವ್ಯವಹಾರದ ಕಾರ್ಯಚಟುವಟಿಕೆಗೆ ಸಂಬಂಧಿಸಿದಂತೆ ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನೀವು ಅನುಭವಿ ವ್ಯಕ್ತಿಯೊಂದಿಗೆ ಮಾತನಾಡುವುದು ಉತ್ತಮ. ನಿಮ್ಮ ಯಾವುದೇ ಪ್ರಮುಖ ಮಾಹಿತಿಯನ್ನು ಸೋರಿಕೆ ಮಾಡಲು ಬಿಡಬೇಡಿ. ಇಲ್ಲದಿದ್ದರೆ ಯಾರಾದರೂ ಅದರ ಲಾಭವನ್ನು ಪಡೆಯಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಪದ್ಮಿನಿ ಏಕಾದಶಿಯ ದಿನ ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದರೆ ಒಳ್ಳೆಯದಾಗಲಿದೆ. ವೈಯಕ್ತಿಕ ವಿಷಯಗಳಲ್ಲಿ ನೀವು ಎಚ್ಚರಿಕೆಯಿಂದ ಮುಂದುವರಿಯಿರಿ. ಇದರಿಂದ ನಿಮ್ಮ ಧೈರ್ಯವು ಹೆಚ್ಚಾಗಬಹುದು. ಆತ್ಮವಿಶ್ವಾಸ ವೃದ್ಧಿಯಾಗಲಿದೆ. ದೂರದಲ್ಲಿರುವ ಸಂಬಂಧಿಕರಿಂದ ನೀವು ಕೆಲವು ಉತ್ತಮ ಮಾಹಿತಿಯನ್ನು ಕೇಳುವ ಸಾಧ್ಯತೆಯಿದೆ.



Click it and Unblock the Notifications











