Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
Viral Video: ನಮ್ಮ ಮೆಟ್ರೋ ಈ ರೀತಿಯಾದರೆ ಅಪಾಯ ತಪ್ಪಿದ್ದಲ್ಲ, ಪ್ರಯಾಣಿಕರೇ ಹುಷಾರ್!
ಬೆಂಗಳೂರಿಗೆ ಮೆಟ್ರೋ ಬಂದಾಗ ಇನ್ನಾದರೂ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಸಿಗಬಹುದು ಎಂದು ಎಲ್ಲರೂ ಭಾವಿಸಿದ್ದರು, ಆದರೆ ಟ್ರಾಫಿಕ್ ಅದೇ ರೀತಿ ಇದೆ, ಜಾಸ್ತಿಯೇ ಆಗಿದೆ, ಮೆಟ್ರೋ ಕೂಡ ತುಂಬಿ ತುಳುಕುವ ದೃಶ್ಯ ನಿತ್ಯವೂ ಕಾಣಬಹುದು. ಮೆಟ್ರೋದಲ್ಲಿ ಪೀಕ್ ಅವರ್‌ನಲ್ಲಿ ಅಂದರೆ ಬೆಳಗ್ಗೆ 8-10 ಗಂಟೆಯವರೆಗೆ ಮೆಟ್ರೋ ಸ್ಟೇಷನ್‌ನಲ್ಲಿ ಜನವೋ ಜನ... ಮೆಟ್ರೋದಲ್ಲಿ ಸೀಟ್ ಹೋಗಲಿ ಸರಿಯಾಗಿ ನಿಲ್ಲಲೂ ಸಾಧ್ಯವಿಲ್ಲ, 5 ನಿಮಿಷಕ್ಕೊಮ್ಮೆ ಮೆಟ್ರೋ ಇದ್ದರೂ ನೂಕು ನುಗ್ಗಲು.... ಜನರಿಂದ ತುಂಬಿ ತುಳುಕುತ್ತಿರುವ ಮೆಟ್ರೋ ವೀಡಿಯೋ ವೈರಲ್ ಆಗಿದೆ.

ಮೆಟ್ರೋದಲ್ಲಿ ಈ ರೀತಿ ರಶ್ ಇದ್ದರೂ ಅದನ್ನು ಮೆಟ್ರೋ ಸಿಬ್ಬಂದಿ ಸರಿಯಾಗಿ ಮ್ಯಾನೇಜ್ ಮಾಡುತ್ತಿಲ್ಲ ಎಂದು ಈ ವೀಡಿಯೋ ನೋಡಿದವರು ಕಮೆಂಟ್ ಮಾಡುತ್ತಿದ್ದಾರೆ. ಆ ವೀಡಿಯೋ ನೋಡಿದಾಗ ಮೆಟ್ರೋ ಪಯಣ ತುಂಬಾ ರಿಸ್ಕಿಯಾಗಿ ಕಾಣುತ್ತಿದೆ. ಮಹಿಳೆಯರು ಡೋರ್ ಬಳಿ ನಿಂತಿದ್ದಾರೆ, ಅವರ ಒಳಗಡೆ ಹೋಗಲು ಸ್ಥಳವೇ ಇಲ್ಲ, ಡೋರ್ ಕ್ಲೋಸ್ ಆಗುವಾಗ ಕೂಡ ಮಹಿಳೆಯರು ಹತ್ತಲು ಪ್ರಯತ್ನಿಸುತ್ತಿರುವ ದೃಶ್ಯ ಇದಾಗಿದೆ.
ಆಫೀಸ್‌ಗೆ ಸರಿಯಾಗಿ ಸಮಯಕ್ಕೆ ತಲುಪಬೇಕೆಂಬ ಧಾವಂತ ಜನರಿಗೆ, ಆದರೆ ಈ ರೀತಿ ತುಂಬಿ ತುಳುಕುತ್ತಿರುವ ಟ್ರೈನ್‌ನೊಳಗೆ ನುಗ್ಗಲು ಪ್ರಯತ್ನಿಸುತ್ತಿರುವುದು ಪ್ರಾಣಕ್ಕೆ ಅಪಾಯ ತರಬಹುದು, ಡೋರ್ ಕ್ಲೋಸ್ ಆಗುವ ಸಮಯದಲ್ಲಿ ಮೆಟ್ರೋದೊಳಗಡೆ ಹೋಗಲು ಪ್ರಯತ್ನಿಸಲೇಬಾರದು. ಇದು ತುಂಬಾನೇ ರಿಸ್ಕ್, ಅಲ್ಲದೆ ನೂಕು ನುಗ್ಗುಲಿನಲ್ಲಿ ಸ್ವಲ್ಪ ಸ್ಲಿಪ್ ಆದರೆ ರೈಲು ಹಳಿಗೆ ಬೀಳುವ ಅಪಾಯವೂ ಇದೆ.
ಏನಾದರೂ ಅವಘಡ ಸಂಭವಿಸಿ ಎಚ್ಚೆತ್ತುಕೊಳ್ಳುವ ಬದಲಿಗೆ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ
ಏನಾದರೂ ಅನಾಹುತ ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ಮೆಟ್ರೋ ಸಿಬ್ಬಂದಿ ಈಗಲೇ ಎಚ್ಚೆತ್ತುಕೊಳ್ಳಬೇಕು. ಜನರು ಕೂಡ ಅಷ್ಟೇ 5 ನಿಮಿಷಕ್ಕೊಮ್ಮೆ ಮೆಟ್ರೋ ಬರುತ್ತಲೇ ಇರುತ್ತದೆ, ಮನೆಯಿಂದ 20 ನಿಮಿಷ ಬೇಗ ಬಿಡಿ, ಆವಾಗ ಸರದಿಯಲ್ಲಿ ನಿಂತು ಹತ್ತಿಕೊಂಡು ಹೋಗಬಹುದು.
ಡೋರ್‌ನಲ್ಲಿ ನೇತಾಡುವುದು, ಡೋರ್ ಕ್ಲೋಸ್ ಆಗುವ ಸಮಯದಲ್ಲಿ ಓಡಿ ಹೋಗಿ ಹತ್ತುವುದು ಈ ರೀತಿಯ ಅಪಾಯಗಳನ್ನು ತೆಗೆದುಕೊಳ್ಳಲೇಬೇಡಿ.
Morning rush-hour scenes with Bangalore Metro.
Poor headway management. ಎಂಬ ಕ್ಯಾಪ್ಷನ್ ನೀಡಿ
Mugdha Variyar ಎಂಬವರು ಟ್ವೀಟ್ ಮಾಡಿರುವುದು ತುಂಬಾನೇ ಗಮನ ಸೆಳೆದಿದೆ.
Morning rush-hour scenes with Bangalore Metro.
— Mugdha Variyar (@Mugdha_Variyar) October 26, 2023
Poor headway management. pic.twitter.com/HWHc4XWlAr
ಮುಂಬೈಯಂತಾಗುತ್ತಿದೆ ಬೆಂಗಳೂರು
ಜನರು ಬೆಂಗಳೂರನ್ನು ಮುಂಬೈಗೆ ಹೋಲಿಕೆ ಮಾಡುತ್ತಿದ್ದಾರೆ. ಮುಂಬೈನಲ್ಲಿ ಇದ್ದವರಿಗೆ ಅಥವಾ ಮುಂಬೈ ಹೋದವರಿಗೆ ಅಲ್ಲಿಯ ರೈಲ್ವೆಸ್ಟೇಷನ್ ಹೇಗಿರುತ್ತದೆ ಎಂದು ಗೊತ್ತಿರುತ್ತದೆ. ಒಂದು ರೈಲು ಬಂದು ನಿಲ್ಲುತ್ತಿದ್ದಂತೆ ಜನಸಾಗರವೇ ಇಳಿಯುತ್ತಾರೆ, ಹತ್ತುತ್ತಾರೆ, ಬೆಂಗಳೂರು ಕೂಡ ಅದೇ ರೀತಿಯಾಗುತ್ತಿದೆ.
ಸರದಿ ಸಾಲಿನಲ್ಲಿಯೇ ನಿಂತು ಹತ್ತಿ
ನಿಲ್ಲುವಾಗ ಎಲ್ಲರು ಸಾಲಿನಲ್ಲಿಯೇ ನಿಂತಿರುತ್ತಾರೆ, ಆದರೆ ಹತ್ತುವಾಗ ಎಲ್ಲರೂ ಡೋರ್ ಬಳಿ ಓಡುತ್ತಾರೆ, ಹೀಗೆ ಮಾಡಿದರೆ ಸಿಬ್ಬಂದಿಗೂ ನಿಯಂತ್ರಿಸುವುದು ಕಷ್ಟವಾಗುವುದು. ಆದ್ದರಿಂದ ಜನರೇ ಮೆಟ್ರೋ ನಿಯಮಗಳೊಂದಿಗೆ ಸಹಕರಿಸಿ.
ಡೋರ್‌ನಲ್ಲಿ ನೇತಾಡುವಷ್ಟು ಜನ ಇದ್ದರೆ ಆ ಟ್ರೈನ್ ಹತ್ತಿ ನಿಮಗೆ ನೀವೇ ರಿಸ್ಕ್ ತೆಗೆದುಕೊಳ್ಳದಿರಿ....
ನೀವು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದರೆ ಈ ಕುರಿತು ನಿಮ್ಮ ಅಭಿಪ್ರಾಯವೇನು, ಕಮೆಂಟ್ ಮಾಡಿ



Click it and Unblock the Notifications