Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಡೆಹ್ರಡೂನ್ ದೇವಾಲಯದ ಸುತ್ತ ಇಟ್ಟ ಚಪ್ಪಲಿ ಇಟ್ಟವರಿಗೆ ಏನಾಯ್ತು ನೋಡಿ : ವೈರಲ್ ವೀಡಿಯೋ
ಸಂಸ್ಕೃತಿಯನ್ನು ಆಚರಿಸುವುದಕ್ಕಿಂತ ಮೊದಲು ಗೌರವಿಸುವು ಅತೀ ಮುಖ್ಯ. ಆಚರಣೆಯಲ್ಲಿ ತಪ್ಪಾಗಬಹುದು, ಆದರೆ ಅಗೌರವ ನೀಡಿದರೆ ಯಾರು ಸಹಿಸುವುದಿಲ್ಲ. ಹೀಗೆ ಬೆಟ್ಟದ ಮೇಲಿನ ಸುಂದರ ದೇವಸ್ಥಾನದ ಆವರಣದಲ್ಲಿ ಸಂಸ್ಕೃತಿ ಮರೆತ ಜನಕ್ಕೆ ತಕ್ಕ ಪಾಠ ಕಲಿಸಿದ ಘಟನೆ ಉತ್ತರಖಂಡದ ಡೆಹ್ರಡೂನ್‌ನಲ್ಲಿ ನಡೆದಿದೆ.

ಬೆಟ್ಟದ ಮೇಲಿನ ಮಂದಿರ. ನೋಡಲು ದೇವಸ್ಥಾನದ ಜೊತೆಗೆ ಪ್ರಕೃತಿ ಸೌಂದರ್ಯವೂ ಅಷ್ಟೆ ಸುಂದರವಾಗಿದೆ. ಹೀಗಾಗಿ ಇಲ್ಲಿ ಮಂದಿರಕ್ಕೆ ಆಗಮಿಸುವ ಭಕ್ತರು ದೇವಸ್ಥಾನದ ಪ್ರಾಂಗಣದೊಳಗೆ ಚಪ್ಪಲಿಗಳನ್ನು ಬಿಟ್ಟು ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸುತ್ತಿರುವ ಘಟನೆ ಪದೇ ಪದೆ ನಡೆಯುತ್ತಿದೆ. ಹಲವು ಸುತ್ತಿನ ಎಚ್ಚರಿಕೆ, ನಾಮ ಫಲಕಗಳನ್ನು ಹಾಕಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ದೇವಸ್ಥಾನದ ಸಿಬ್ಬಂದಿ, ಪ್ರಾಂಗಣದೊಳಗೆ ಬಿಟ್ಟ ಚಪ್ಪಲಿಗಳನ್ನು ಬೆಟ್ಟದ ಮೇಲಿಂದ ಕೆಳಕ್ಕೆ ಎಸೆದಿದ್ದಾರೆ.
ಇದು ಭಗವಾನ್ ಬಾಲ ಬದ್ರ ದೇವಸ್ಥಾನ. ಹೆಚ್ಚಾಗಿ ಬಾಲರಾಮ ದೇವಸ್ಥಾನ ಎಂದ ಪ್ರಸಿದ್ಧಿಯಾಗಿದೆ. ಉತ್ತರಖಂಡದ ಪ್ರಸಿದ್ಧ ಪ್ರವಾಸಿ ತಾಣ ಮುಸೋರಿಯಿಂದ ಕೇವಲ 12 ಕಿಲೋಮೀಟರ್ ದೂರದಲ್ಲಿದೆ. ಈ ದೇವಸ್ಥಾನದ ಮತ್ತೊಂದು ವಿಶೇಷ ಅಂದರೆ ಪ್ರಕೃತಿ ಸೌಂದರ್ಯದ ನಡುವೆ ಈ ದೇವಸ್ಥಾನ ನೆಲೆ ನಿಂತಿದೆ. ಜೊತೆಗೆ ಬಾಲರಾಮನ ದರ್ಶನ ಪಡೆಯಲು ಸಣ್ಣ ಟ್ರಕ್ಕಿಂಗ್ ಮಾಡಿ ಸಾಗಬೇಕು. ಹೀಗಾಗಿ ಈ ಬೆಟ್ಟ ಹಾಗೂ ದೇವಸ್ಥಾನ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿದೆ.
ದೇವಸ್ಥಾನದ ಅರ್ಚಕರು ಹಾಗೂ ಆಡಳಿತ ಮಂಡಳಿ ಪ್ರಕೃತಿಗೆ ಯಾವುದೇ ಧಕ್ಕೆ ಬರದಂತೆ ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಆಗಮಿಸುವ ಭಕ್ತಾದಿಗಳು ಸೂಚನೆಗಳನ್ನು ಪಾಲಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇಷ್ಟೇ ಅಲ್ಲ ಈ ದೇವಸ್ಥಾನದ ಮುಂಭಾಗದ ತುದಿಯಿಂದ ನೋಡಿದರೆ ಡೂನ್ ಕಣಿವೆಯ ಸುಂದರ ನೋಟ ಕಣ್ತುಂಬಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಈ ಪ್ರಕೃತಿ ಸೌಂದರ್ಯ ವೀಕ್ಷಿಸಲು ಆಗಮಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇದು ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ.
ಕೆಲವರು ಈ ಸ್ಥಳವನ್ನು ಪಾರ್ಕ್, ಪಿಕ್‌ನಿಕ್ ಸ್ಪಾಟ್ ಅನ್ನೋ ರೀತಿ ಬಳಸಿಕೊಳ್ಳುತ್ತಿದ್ದಾರೆ. ಡೂನ್ ಕಣಿವೆ ವಿಹಂಗಮ ನೋಟ ನೋಡಲು ದೇವಸ್ಥಾನ ದಾಟಿ ಬದಿ ಸಾಗಬೇಕು. ಹೀಗಾಗಿ ಇಲ್ಲಿಗೆ ಆಗಮಿಸುವ ಕೆಲವರು ದೇವಸ್ಥಾನ ಪ್ರಾಂಗಣದೊಳಗೆ ಚಪ್ಪಲಿ ಬಿಟ್ಟು ಮುಂದೆ ಸಾಗುತ್ತಾರೆ. ಪ್ಲಾಸ್ಟಿಕ್ ಚೀಲಗಳನ್ನು ಎಸೆಯುತ್ತಿದ್ದಾರೆ.
ಸೂರಜ್ ಡೋಗ್ರಾ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬೆಟ್ಟದ ಮೇಲಿನ ದೇವಸ್ಥಾನದ ಮುಂಭಾಗದಲ್ಲೇ ಚಪ್ಪಲಿಗಳನ್ನು ಬಿಟ್ಟಿದ್ದಾರೆ. ಜೊತೆಗೆ ಅಲ್ಲೆ ಕುಳಿತುಕೊಂಡು ಎಂಜಾಯ್ ಮಾಡುತ್ತಿರುವ ದೃಶ್ಯವಿದೆ. ದೇವಸ್ಥಾನದ ಸಿಬ್ಬಂದಿ, ಬಿಟ್ಟಿರುವ ಚಪ್ಪಳಿಗಳನ್ನು ಬೆಟ್ಟದ ಮೇಲಿಂದ ಎಸೆದಿದ್ದಾರೆ. ಭಕ್ತಾದಿಗಳೇ ನಮ್ಮ ಸಂಸ್ಕೃತಿ ಹಾಗೂ ಪದ್ಧತಿಯನ್ನು ಗೌರವಿಸಿ ಎಂಬ ಸಂದೇಶವನ್ನು ಈ ವಿಡಿಯೋ ಜೊತೆ ಹಂಚಿಕೊಳ್ಳಲಾಗಿದೆ.
ಈ ದೇವಸ್ಥಾನದ ಕೆಳಭಾಗ ಹಾಗೂ ಮೇಲ್ಬಾಗದಲ್ಲಿ ಕೆಲ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಆದರೆ ಪಾಲಿಸುವವರ ಸಂಖ್ಯೆ ಮಾತ್ರ ವಿರಳವಾಗಿದೆ. ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ.
ದೇವಸ್ಥಾನ, ಆಚರಣೆ, ಪೂಜೆ, ಪದ್ಧತಿಗಳನ್ನು ಗೌರವಿಸುವನ್ನು ಮನೆಯಲ್ಲೇ ಕಲಿಸಿಕೊಡಬೇಕು ಎಂದಿದ್ದಾರೆ. ಹಲವರು ಇಲ್ಲಿ ಪ್ಲಾಸ್ಟಿಕ್ ಬ್ಯಾಗ್, ಬಾಟಲಿಗಳನ್ನು ಎಸೆದಿದ್ದಾರೆ. ದೇವಸ್ಥಾನದ ಪಾವಿತ್ರ್ಯತೆ ಜೊತೆಗೆ ಪ್ರಕೃತಿಯನ್ನು ಹಾಳುಮಾಡಬೇಡಿ ಎಂದು ಕೆಲವರು ಸೂಚಿಸಿದ್ದಾರೆ. ಈ ಕುರಿತು ಜಾಗೃತಿ ಮೂಡಬೇಕು, ಜನರು ಸ್ವಯಂ ಪ್ರೇರಿತರಾಗಿ ಪಾವಿತ್ರ್ಯ ಉಳಿಸುವಲ್ಲಿ ಹೆಜ್ಜೆ ಇಡಬೇಕು ಅನ್ನೋ ಮಾತುಗಳು ಕೇಳಿಬಂದಿದೆ.



Click it and Unblock the Notifications
